AUS vs BAN, Highlights, T20 World Cup 2021: ಜಂಪಾ ದಾಳಿಗೆ ಬಾಂಗ್ಲಾ ತತ್ತರ; ಕಾಂಗರೂಗಳಿಗೆ ಸುಲಭ ಜಯ
Australia vs Bangladesh Live Score In kannada: ದುಬೈನ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ T20 ವಿಶ್ವಕಪ್ 2021 ರಲ್ಲಿ ಆರೋನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ಸೂಪರ್ 12 ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಪುಟಿದೇಳಲು ನೋಡುತ್ತಿದೆ.
ಐಸಿಸಿ ಟಿ20 ವಿಶ್ವಕಪ್ 2021 ರಲ್ಲಿ ಆಸ್ಟ್ರೇಲಿಯಾ ತನ್ನ ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಸೆಮಿಫೈನಲ್‌ಗೆ ಹೋಗಲು ದಕ್ಷಿಣ ಆಫ್ರಿಕಾದೊಂದಿಗೆ ಪೈಪೋಟಿ ನಡೆಸುತ್ತಿದ್ದ ಆಸ್ಟ್ರೇಲಿಯ ತಂಡವು ಈ ಪಂದ್ಯದಲ್ಲಿ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿತ್ತು ಮತ್ತು ತಂಡದ ಲೆಗ್ ಸ್ಪಿನ್ನರ್ ಆಡಮ್ ಝಂಪಾ (5/19) ಅದಕ್ಕೆ ಅಡಿಪಾಯ ಹಾಕಿದರು ಮತ್ತು ಬಂಡಲ್ ಔಟ್ ಮಾಡಿದರು. ಇದರ ಫಲವಾಗಿ ಬಾಂಗ್ಲಾದೇಶ ಕೇವಲ 73 ರನ್‌ಗಳಿಗೆ ಸರ್ವಪತನಗೊಂಡಿತು. ಇದಾದ ಬಳಿಕ ನಾಯಕ ಆ್ಯರೋನ್ ಫಿಂಚ್ (40 ರನ್, 20 ಎಸೆತ) ಅವರ ಬಿರುಸಿನ ಇನ್ನಿಂಗ್ಸ್‌ನಿಂದಾಗಿ ಆಸ್ಟ್ರೇಲಿಯಾ ಕೇವಲ 38 ಎಸೆತಗಳಲ್ಲಿ (6.2 ಓವರ್) ಈ ಗುರಿಯನ್ನು ಸುಲಭವಾಗಿ ಸಾಧಿಸಿತು. ಈ ದೊಡ್ಡ ಗೆಲುವಿನೊಂದಿಗೆ ಆಸ್ಟ್ರೇಲಿಯಾ 2 ಅಂಕಗಳನ್ನು ಪಡೆಯುವ ಮೂಲಕ ದಕ್ಷಿಣ ಆಫ್ರಿಕಾವನ್ನು ಸರಿಗಟ್ಟಿತು, ಆದರೆ ನಿವ್ವಳ ರನ್ ರೇಟ್‌ನಲ್ಲಿ ಅದ್ಭುತ ಸುಧಾರಣೆಯನ್ನು ಮಾಡಿತು. ಆಫ್ರಿಕಾ ತಂಡವನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆಯಿತು. ಮತ್ತೊಂದೆಡೆ, ಸೂಪರ್-12 ಸುತ್ತಿನಲ್ಲಿ ಸತತ 5 ಸೋಲುಗಳೊಂದಿಗೆ ಬಾಂಗ್ಲಾದೇಶದ ಪ್ರಯಾಣವು ನಿರಾಶಾದಾಯಕ ರೀತಿಯಲ್ಲಿ ಕೊನೆಗೊಂಡಿತು.
LIVE NEWS & UPDATES
-
ಕಾಂಗರೂಗಳಿಗೆ ಸುಲಭ ಜಯ
ಆಸಿಸ್ಗೆ 8 ವಿಕೆಟ್ ಮತ್ತು 82 ಎಸೆತಗಳ ಜಯ
ಆಸ್ಟ್ರೇಲಿಯದ ನಾಯಕ ಫಿಂಚ್ 20 ಎಸೆತಗಳಲ್ಲಿ 40 ರನ್ ಗಳಿಸಿ 82 ಎಸೆತಗಳು ಬಾಕಿ ಇರುವಂತೆಯೇ ಗೆಲುವಿಗೆ 74 ರನ್ ಗಳಿಸಲು ಸಹಾಯ ಮಾಡಿದರು.
ವಾರ್ನರ್ ಕೂಡ 18 ರನ್ ಕೊಡುಗೆಯಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದರು
ಮಿಚ್ ಮಾರ್ಷ್ ಅಮೋಘ ಸಿಕ್ಸರ್ ಮೂಲಕ ಪಂದ್ಯವನ್ನು ಅಂತ್ಯಗೊಳಿಸಿದರು
-
ವಿಕೆಟ್ !
ವಾರ್ನರ್ ವಿಕೆಟ್ ಪತನ ಆದರೆ ಆಸ್ಟ್ರೇಲಿಯಾಕ್ಕೆ ಗೆಲುವಿನ ಹಾದಿ ಬಲು ಸುಲಭವಾಗಿದೆ.
AUS ಗೆಲುವಿಗೆ ಇನ್ನೂ ಐದು ರನ್‌ಗಳ ಅಗತ್ಯವಿದೆ
-
ಸಿಕ್ಸ್
ಪವರ್‌ಪ್ಲೇ ಅಂತ್ಯಕ್ಕೆ ಆಸ್ಟ್ರೇಲಿಯಾ 50 ರನ್. ವಿಶೇಷವಾಗಿ ಫಿಂಚ್ ಅಪಾಯಕಾರಿಯಾಗಿ ಕಾಣಿಸುತ್ತಿದ್ದಾರೆ.
21 ರನ್ ಬಿಟ್ಟುಕೊಟ್ಟ ರೆಹಮಾನ್!
ರನ್ ಚೇಸ್ನ ನಾಲ್ಕನೇ ಓವರ್‌ನಲ್ಲಿ ರೆಹಮಾನ್ 21 ರನ್ ಬಿಟ್ಟುಕೊಟ್ಟರು
ವಾರ್ನರ್ ಮತ್ತು ಫಿಂಚ್ ಈಗ ಪಂದ್ಯವನ್ನು ಬೇಗ ಮುಗಿಸಲು ಬಯಸಿದ್ದಾರೆ
4 ಓವರ್‌ಗಳ ನಂತರ AUS 44/0
ಬೌಂಡರಿ
ವಾರ್ನರ್ ಇದೀಗ ಕಾರ್ಯಪ್ರವೃತ್ತರಾಗಿದ್ದಾರೆ. ರಹಾಮಾನ್ ಓವರ್‌ನಲ್ಲಿ ಡೇವಿಡ್ ಫೋರ್ ಬಾರಿಸಿದರು.
3.1 ಓವರ್ ನಂತರ AUS 27/0
ಫೋರ್
ಆಸಿಸ್ ನಾಯಕ ಫಿಂಚ್, ಟಾಸ್ಕಿನ್ ಎಸೆತಕ್ಕೆ ಬೌಂಡರಿ ಬಾರಿಸಿದರು
3 ಓವರ್‌ಗಳ ನಂತರ AUS 23/0
ಸಿಕ್ಸರ್
ರೆಹಮಾನ್ ಅವರ ನಿಧಾನಗತಿಯ ಬಾಲ್‌ನಲ್ಲಿ ಫಿಂಚ್ ಮಿಡ್-ವಿಕೆಟ್ ಮೇಲೆ ಬೃಹತ್ ಸಿಕ್ಸರ್ ಬಾರಿಸಿದರು
1.5 ಓವರ್‌ಗಳ ನಂತರ AUS 16/0
ಬೌಂಡರಿ
ಫಿಂಚ್ ಬೌಂಡರಿಯೊಂದಿಗೆ ರೆಹಮಾನ್ ಅವರನ್ನು ಸ್ವಾಗತಿಸಿದರು.
1.1 ಓವರ್ ನಂತರ AUS 8/0
ಆಸೀಸ್ ರನ್-ಚೇಸ್ ಪ್ರಾರಂಭ
ಆಸ್ಟ್ರೇಲಿಯದ ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಆರನ್ ಫಿಂಚ್ ಬ್ಯಾಟಿಂಗ್ಗಿಳಿದಿದ್ದಾರೆ.
ವೇಗಿ ತಸ್ಕಿನ್ ಅಹ್ಮದ್ ಅವರು ಬಾಂಗ್ಲಾದೇಶ ಪರ ಬೌಲಿಂಗ್ ಪ್ರಾರಂಭಿಸಿದರು
1 ಓವರ್‌ನ ನಂತರ AUS 4/0
ಎರಡು ತ್ವರಿತ ವಿಕೆಟ್‌ಗಳು – ಬಾಂಗ್ಲಾ 73 ರನ್‌ಗೆ ಆಲ್ ಔಟ್!
AUS ಗೆಲುವಿಗೆ 74 ರನ್‌ಗಳ ಅಗತ್ಯವಿದೆ!
ಇಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳ ವಿರುದ್ಧ ಬಾಂಗ್ಲಾ ಆಘಾತಕ್ಕೊಳಗಾಗಿದೆ.
20 ಓವರ್‌ಗಳಲ್ಲಿ ಆಸ್ಟ್ರೇಲಿಯಾ ಗೆಲ್ಲಲು ಕೇವಲ 74 ರನ್‌ಗಳ ಅಗತ್ಯವಿದೆ. ಝಂಪಾ ಐದು ವಿಕೆಟ್‌ಗಳ ಸಾಧನೆಯೊಂದಿಗೆ ಮಿಂಚಿದರು.
Bangladesh are bowled out for 73 ☝️
Zampa with a five-wicket haul steals the show for Australia ?#T20WorldCup | #AUSvBAN | https://t.co/apDTWI2E8S pic.twitter.com/dTVhwNrGq7
— T20 World Cup (@T20WorldCup) November 4, 2021
ವಿಕೆಟ್ !
ಮತ್ತೆ ಸ್ಟಾರ್ಕ್ ದಾಳಿ, ಬಾಂಗ್ಲಾದೇಶ ಎಂಟನೇ ವಿಕೆಟ್ ಕಳೆದುಕೊಂಡಿತು
12.2 ಓವರ್‌ಗಳ ನಂತರ ಬಾಂಗ್ಲಾ 65/8
ವಿಕೆಟ್ !
ಝಂಪಾ ಅವರ ಮೂರನೇ ಬಲಿ, ಮಹೇದಿ ಹಸನ್ ಮೊದಲ ಎಸೆತದಲ್ಲಿ ಡಕ್‌ಗೆ ಔಟಾದರು.
11 ಓವರ್‌ಗಳ ನಂತರ 62/7
ವಿಕೆಟ್ !
ಝಂಪಾ 18 ಎಸೆತಗಳಲ್ಲಿ 19 ರನ್ ಗಳಿಸಿದ್ದ ಶಮಿಮ್ ಹೊಸೈನ್ ವಿಕೆಟ್ ಪಡೆದರು.
10.5 ಓವರ್‌ಗಳ ನಂತರ ಬಾಂಗ್ಲಾ 62/6
10 ಓವರ್‌ಗಳ ನಂತರ
ಆರಂಭಿಕ ಪ್ರಗತಿಯೊಂದಿಗೆ ಆಸ್ಟ್ರೇಲಿಯಾ ಇಲ್ಲಿ ಸ್ಪಷ್ಟವಾಗಿ ಅಗ್ರಸ್ಥಾನದಲ್ಲಿದೆ
ಬಾಂಗ್ಲಾದೇಶವು ಮುಂದಿನ 10 ಓವರ್‌ಗಳಲ್ಲಿ ಪುಟಿದೇಳಬೇಕಾಗಿದೆ.
10 ಓವರ್‌ಗಳ ನಂತರ ಬಾಂಗ್ಲಾ 58/5
ಬೌಂಡರಿ
ಸ್ಟಾರ್ಕ್ ಎಸೆತದಲ್ಲಿ ಶಮೀಮ್ ಹೊಸೈನ್ ಅವರು ಮಿಡ್ ಆನ್ ಫೀಲ್ಡರ್ ಮೇಲೆ ಹೆಚ್ಚು ಅಗತ್ಯವಿರುವ ಫೋರ್ ಹೊಡೆದರು
7.2 ಓವರ್‌ಗಳ ನಂತರ 44/5
ವಿಕೆಟ್ !
ಆಡಮ್ ಝಂಪಾ ತಮ್ಮ ಮೊದಲ ಎಸೆತದಲ್ಲಿ ಅಫೀಫ್ ಹೊಸೈನ್ ಅವರ ವಿಕೆಟ್ ಪಡೆದರು.
6.1 ಓವರ್‌ಗಳ ನಂತರ 33/5
ಪವರ್‌ಪ್ಲೇ ಅಂತ್ಯ!
ಮೊದಲ ಆರು ಓವರ್‌ಗಳ ಕೊನೆಯಲ್ಲಿ ಬಾಂಗ್ಲಾದೇಶ ತೊಂದರೆಗೆ ಸಿಕ್ಕಿ ಹಾಕಿಕೊಂಡಿದೆ. ಜೊತೆಗೆ ಪವರ್‌ಪ್ಲೇ ಕೊನೆಗೊಳ್ಳುತ್ತದೆ.
6 ಓವರ್‌ಗಳ ನಂತರ 33/4
ವಿಕೆಟ್ !
ಹ್ಯಾಜಲ್‌ವುಡ್ 16 ಎಸೆತಗಳಲ್ಲಿ 17 ರನ್‌ಗಳಿಸಿದ್ದ ನೈಮ್ ಅವರ ವಿಕೆಟ್ ಪಡೆದರು
5.3 ಓವರ್‌ಗಳ ನಂತರ ಬಾಂಗ್ಲಾ 32/4
ಅವಳಿ ಬೌಂಡರಿ
ಸಿಪ್ಪರ್ ಮಹಮ್ಮದುಲ್ಲಾ ಅವರು ಸ್ಟಾರ್ಕ್‌ಗೆ ಎರಡು ಬ್ಯಾಕ್ ಟು ಬ್ಯಾಕ್ ಬೌಂಡರಿಗಳನ್ನು ಬಾರಿಸಿ ಅವರ ತಂಡವನ್ನು ಮುನ್ನಡೆಸಿದರು
5 ಓವರ್‌ಗಳ ನಂತರ 28/3
ಫೋರ್
ಕಮ್ಮಿನ್ಸ್‌ಗೆ ನೈಮ್‌ನಿಂದ ಇನ್ನೊಂದು ಬೌಂಡರಿ
3.4 ಓವರ್‌ಗಳ ನಂತರ 18/3
ಬೌಂಡರಿ
ಕಮ್ಮಿನ್ಸ್ ಎಸೆತಕ್ಕೆ ನೈಮ್ ಬೌಂಡರಿ ಬಾರಿಸಿದರು
3.1 ಓವರ್‌ಗಳ ನಂತರ ಬಾಂಗ್ಲಾದೇಶ 14/3
ವಿಕೆಟ್ !
ಗ್ಲೆನ್ ಮ್ಯಾಕ್ಸ್‌ವೆಲ್ ಮುಶ್ಫಿಕರ್ ರಹೀಮ್ ಅವರನ್ನು 1 ರನ್‌ಗೆ ಹೊರಹಾಕಿದರು.
2.5 ಓವರ್‌ಗಳ ನಂತರ 10/3
ವಿಕೆಟ್ !
ಹ್ಯಾಜಲ್‌ವುಡ್ 8 ಎಸೆತಗಳಲ್ಲಿ ಐದು ರನ್‌ಗಳಿಸಿದ್ದ ಸರ್ಕಾರ್ (ಪ್ಲೇಡ್-ಆನ್) ಅವರನ್ನು ಬಲಿಪಡೆದರು.
2 ಓವರ್‌ಗಳ ನಂತರ ಬಾಂಗ್ಲಾ 6/2
ಬೌಂಡರಿ
ಲೆಗ್ ಸೈಡ್‌ನಲ್ಲಿ ಸೌಮ್ಯ ಸರ್ಕಾರ್, ಹ್ಯಾಜಲ್‌ವುಡ್ ಎಸೆತಕ್ಕೆ ಬೌಂಡರಿ ಬಾರಿಸಿದರು.
1.3 ಓವರ್‌ಗಳ ನಂತರ ಬಾಂಗ್ಲಾ 6/1
ಮೊದಲ ವಿಕೆಟ್ ಪತನ
ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರ ಯಶಸ್ವಿ ಮೊದಲ ಓವರ್ ಅಂತ್ಯ. ಅದರಲ್ಲಿ ಎರಡು ಸಿಂಗಲ್ಸ್ ಮತ್ತು ಒಂದು ವಿಕೆಟ್. ಸೌಮ್ಯ ಸರ್ಕಾರ್ ಅವರು ಮೊಹಮ್ಮದ್ ನಯಿಮ್ ಅವರನ್ನು ಮಧ್ಯದಲ್ಲಿ ಸೇರಿಕೊಂಡಿದ್ದಾರೆ. 1 ಓವರ್‌ನಲ್ಲಿ 2/1 ಸ್ಕೋರ್.
ಬಾಂಗ್ಲಾದೇಶ ಇನ್ನಿಂಗ್ಸ್ ಆರಂಭ!
ಬಾಂಗ್ಲಾದೇಶದ ಆರಂಭಿಕರಾದ ಲಿಟನ್ ದಾಸ್ ಮತ್ತು ಮೊಹಮ್ಮದ್ ನಯಿಮ್ ಬ್ಯಾಟಿಂಗ್ಗಿಳಿದಿದ್ದಾರೆ
ವೇಗಿ ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ ಪರ ಬೌಲಿಂಗ್ ಆರಂಭಿಸಿದ್ದಾರೆ
ಬಾಂಗ್ಲಾದೇಶ ಪ್ಲೇಯಿಂಗ್ XI
ಮೊಹಮ್ಮದ್ ನಯಿಮ್, ಲಿಟನ್ ದಾಸ್, ಸೌಮ್ಯ ಸರ್ಕಾರ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಶಮೀಮ್ ಹೊಸೈನ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್
ಆಸ್ಟ್ರೇಲಿಯಾ ಪ್ಲೇಯಿಂಗ್ XI
ಡೇವಿಡ್ ವಾರ್ನರ್, ಆರನ್ ಫಿಂಚ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಬದಲಾವಣೆಗಳು
ಆಸ್ಟ್ರೇಲಿಯಾ
IN: ಮಿಚ್ ಮಾರ್ಷ್ ಔಟ್: ಆಷ್ಟನ್ ಅಗರ್
ಬಾಂಗ್ಲಾದೇಶ
IN: ಮುಸ್ತಫಿಜುರ್ ರೆಹಮಾನ್ ಔಟ್: ನಸುಮ್
ಟಾಸ್!
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯ ನಾಯಕ ಆರನ್ ಫಿಂಚ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ
Published On - Nov 04,2021 3:14 PM