Rahul Dravid: ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮುಂದಿದೆ 5 ದೊಡ್ಡ ಸವಾಲುಗಳು

Team India: ರಾಹುಲ್ ದ್ರಾವಿಡ್ ಒಂದು ವರ್ಷದೊಳಗೆ ಟಿ20 ವಿಶ್ವಕಪ್‌ಗೆ ತಂಡವನ್ನು ಸಿದ್ಧಪಡಿಸಬೇಕು. ಪ್ರಸ್ತುತ ಕೊರೋನಾ ಪರಿಸ್ಥಿತಿಯಲ್ಲಿ ತಂಡಗಳನ್ನು ಸಿದ್ಧಪಡಿಸುವುದು ಅಂದುಕೊಂಡಷ್ಟು ಸುಲಭವಲ್ಲ.

Rahul Dravid: ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮುಂದಿದೆ 5 ದೊಡ್ಡ ಸವಾಲುಗಳು
Rahul Dravid
Follow us
| Updated By: ಝಾಹಿರ್ ಯೂಸುಫ್

Updated on: Nov 04, 2021 | 5:40 PM

ರಾಹುಲ್ ದ್ರಾವಿಡ್ (Rahul Dravid) ಅವರು ಟೀಮ್ ಇಂಡಿಯಾದ (Team India) ನೂತನ ಕೋಚ್ ಆಗಿ ನೇಮಕಗೊಂಡಿದ್ದಾರೆ. 2021ರ ಟಿ20 ವಿಶ್ವಕಪ್ (T20 World Cup 2021) ಬಳಿಕ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ. ನವೆಂಬರ್ 17 ರಿಂದ ನ್ಯೂಜಿಲೆಂಡ್ ವಿರುದ್ಧ ಪ್ರಾರಂಭವಾಗುವ ಸರಣಿಯೊಂದಿಗೆ ದ್ರಾವಿಡ್ ಅವರು ಹೊಸ ಇನಿಂಗ್ಸ್​ ಆರಂಭಿಸಲಿದ್ದಾರೆ. ಹಾಲಿ ಕೋಚ್ ರವಿಶಾಸ್ತ್ರಿ ಸಾರಥ್ಯದಲ್ಲಿ ಟೀಮ್ ಇಂಡಿಯಾ ವಿದೇಶಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದರೂ, ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ. 2019ರ ಐಸಿಸಿ ವಿಶ್ವಕಪ್‌ನ ಸೆಮಿ-ಫೈನಲ್‌ನಲ್ಲಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ ಸೋತಿತ್ತು. ಅಷ್ಟೇ ಅಲ್ಲದೆ ಈ ಬಾರಿಯ ಟಿ20 ವಿಶ್ವಕಪ್​ನಿಂದಲೂ ಹೊರಬೀಳುವ ಸಾಧ್ಯತೆ ಹೆಚ್ಚಿದೆ. ಅಂದರೆ 2013 ರ ಬಳಿಕ ಟೀಮ್ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಹೀಗಾಗಿ ಟೀಮ್ ಇಂಡಿಯಾ ಮುಂದೆ ಐಸಿಸಿ ಟ್ರೋಫಿ ಗೆಲ್ಲಬೇಕಾದ ದೊಡ್ಡ ಗುರಿಯಿದೆ. ಇದರ ಸಂಪೂರ್ಣ ಜವಾಬ್ದಾರಿ ರಾಹುಲ್ ದ್ರಾವಿಡ್ ಮೇಲಿರಲಿದೆ.

ಏಕೆಂದರೆ ಮುಂದಿನ ಮೂರು ವರ್ಷಗಳಲ್ಲಿ ಮೂರು ಪ್ರಮುಖ ಟೂರ್ನಿಗಳು ನಡೆಯಲಿದೆ. 2022 ರಲ್ಲಿ ಟಿ20 ವಿಶ್ವಕಪ್ ಮತ್ತು 2023 ರಲ್ಲಿ ಏಕದಿನ ವಿಶ್ವಕಪ್ದೆ ಜರುಗಲಿದೆ. ಹಾಗೆಯೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕೂಡ ಇದೇ ಅವಧಿಯಲ್ಲಿ ನಡೆಯಲಿದ್ದು, ಹೀಗಾಗಿ ಈ ಮೂರು ಪ್ರಮುಖ ಟೂರ್ನಿಯಲ್ಲಿ ಭಾರತ ಒಂದು ವಿಶ್ವಕಪ್ ಆದರೂ ಗೆಲ್ಲಲೇಬೇಕು. ಆದರೆ ಇದಕ್ಕಾಗಿ ರಾಹುಲ್ ದ್ರಾವಿಡ್ ತಮ್ಮ ಮುಂದಿರುವ 5 ದೊಡ್ಡ ಸವಾಲುಗಳನ್ನು ಜಯಿಸಬೇಕು.

1- ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಮೂಲಕ ರೋಹಿತ್ ಶರ್ಮಾ ಅವರು ಟೀಮ್ ಇಂಡಿಯಾದ ಹೊಸ ನಾಯಕರಾಗಲಿದ್ದಾರೆ. ಇನ್ನು ಏಕದಿನ ತಂಡಕ್ಕೂ ಅವರಿಗೆ ನಾಯಕತ್ವ ನೀಡುವ ಸಾಧ್ಯತೆಯಿದೆ. ಹೀಗಿರುವಾಗ ತಂಡದಲ್ಲಿ ವಿರಾಟ್ ಕೊಹ್ಲಿ ಪಾತ್ರವೇನು? ಎಂಬುದು ಇಲ್ಲಿ ಚರ್ಚಗೆ ಬರಲಿದೆ. ಏಕೆಂದರೆ ಈ ಹಿಂದೆ ಕೊಹ್ಲಿಗೆ ನಾಯಕನಾಗಿ ಆಟಗಾರರ ಮೇಲೆ ನಂಬಿಕೆ ಇಲ್ಲ ಎಂಬ ವಿಚಾರ ಮುನ್ನೆಲೆಗೆ ಬಂದಿತ್ತು. ಇದರಿಂದಾಗಿ ತಂಡದಲ್ಲಿ ಆಗಾಗ ಬದಲಾವಣೆ ಮಾಡುತ್ತಿದ್ದರು. ಪ್ರಸಕ್ತ ಟಿ20 ವಿಶ್ವಕಪ್‌ನ ಮೊದಲ 2 ಪಂದ್ಯಗಳಲ್ಲೂ ಇದು ಕಂಡುಬಂದಿದೆ. ಅಂತಹ ಪರಿಸ್ಥಿತಿಯಲ್ಲಿ ಎಲ್ಲಾ ಆಟಗಾರರನ್ನು ಒಗ್ಗೂಡಿಸಿ ರಾಹುಲ್​ ದ್ರಾವಿಡ್ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಬೇಕಾಗುತ್ತದೆ.

2- ಟೀಮ್ ಇಂಡಿಯಾದ ಹಿರಿಯ ಆಟಗಾರರು 6 ತಿಂಗಳಿನಿಂದ ಬಯೋ ಬಬಲ್‌ನಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯುವ ಆಟಗಾರರಿಗೆ ನ್ಯೂಜಿಲೆಂಡ್ ಸರಣಿಯಲ್ಲಿ ಅವಕಾಶ ನೀಡಬಹುದು. ಆದರೆ ಈ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರುವುದರಿಂದ ಹಿರಿಯರು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಬೇಕಾಗುತ್ತದೆ. ಇದಕ್ಕಾಗಿ ಹಿರಿಯ ಆಟಗಾರರನ್ನು ಮನವೊಲಿಸುವುದು ಕೂಡ ಅನಿವಾರ್ಯ. ಅಥವಾ ಪರ್ಯಾಯ ಬಲಿಷ್ಠ ತಂಡವನ್ನು ರೂಪಿಸಿಕೊಳ್ಳಬೇಕಿದೆ. ಇನ್ನು ತಮ್ಮ ನೇತೃತ್ವದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಸರಣಿಯಲ್ಲೇ ಹಿನ್ನಡೆ ಅನುಭವಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಕೂಡ ರಾಹುಲ್ ದ್ರಾವಿಡ್ ಮೇಲಿರಲಿದೆ.

3- ಡಿಸೆಂಬರ್-ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಭಾರತ ತಂಡ ತೆರಳಬೇಕಿದೆ. ಅಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಇದರ ಬೆನ್ನಲ್ಲೇ ಫೆಬ್ರವರಿ-ಮಾರ್ಚ್ ನಲ್ಲಿ ಶ್ರೀಲಂಕಾ ವಿರುದ್ಧ ಸರಣಿ ಆಡಬೇಕಿದೆ. ಇದಾದ ನಂತರ ಏಪ್ರಿಲ್​ನಿಂದ ಐಪಿಎಲ್ ಶುರುವಾಗಲಿದೆ. ಐಪಿಎಲ್ ಮುಗಿಯುವಷ್ಟರಲ್ಲಿ ಟಿ20 ವಿಶ್ವಕಪ್‌ ಆರಂಭವಾಗಲಿದೆ. ಇದಕ್ಕಾಗಿ ಈಗಲೇ ತಂಡವನ್ನು ಸಿದ್ಧಗೊಳಿಸಬೇಕಾದ ಅನಿವಾರ್ಯತೆ ಇದೆ. ಅಷ್ಟೇ ಅಲ್ಲದೆ 2023 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗಾಗಿ ಕೂಡ ಬಲಿಷ್ಠ ಒನ್​ಡೇ ಟೀಮ್ ಇಂಡಿಯಾ ಸಿದ್ಧವಾಗಬೇಕಿದೆ. ಹೀಗಾಗಿ ಮುಂದಿನ 1 ವರ್ಷದಲ್ಲಿ ರಾಹುಲ್ ದ್ರಾವಿಡ್ ಬಲಿಷ್ಠ ಪಡೆಯನ್ನು ಸಿದ್ದಗೊಳಿಸಬೇಕಾಗುತ್ತದೆ.

4- ಸೀಮಿತ ಓವರ್‌ಗಳು ಮತ್ತು ಟೆಸ್ಟ್‌ಗೆ ವಿಭಿನ್ನ ನಾಯಕರುಗಳು ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಪ್ರತಿಯೊಬ್ಬ ನಾಯಕನಿಗೆ ತನ್ನದೇ ಆದ ಕಾರ್ಯತಂತ್ರ ಮತ್ತು ಪಾತ್ರವಿದೆ. ಇಲ್ಲಿಯವರೆಗೆ ವಿರಾಟ್ ಕೊಹ್ಲಿ ಎಲ್ಲಾ ಮೂರು ಮಾದರಿಗಳ ನಾಯಕತ್ವವನ್ನು ನಿಭಾಯಿಸುತ್ತಿದ್ದರು. ಹೀಗಾಗಿ ರಾಹುಲ್ ದ್ರಾವಿಡ್ ಅವರು ಒಂದೇ ಸಮಯದಲ್ಲಿ ಇಬ್ಬರು ವಿಭಿನ್ನ ನಾಯಕರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ತಂಡದಲ್ಲಿ ಹೊಂದಾಣಿಕೆಯ ಕೊರತೆ ಕಂಡು ಬರಲಿದೆ.

5- ರಾಹುಲ್ ದ್ರಾವಿಡ್ ಒಂದು ವರ್ಷದೊಳಗೆ ಟಿ20 ವಿಶ್ವಕಪ್‌ಗೆ ತಂಡವನ್ನು ಸಿದ್ಧಪಡಿಸಬೇಕು. ಪ್ರಸ್ತುತ ಕೊರೋನಾ ಪರಿಸ್ಥಿತಿಯಲ್ಲಿ ತಂಡಗಳನ್ನು ಸಿದ್ಧಪಡಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಅದರಲ್ಲೂ ಟೀಮ್ ಇಂಡಿಯಾ ಆಟಗಾರರು 3 ತಿಂಗಳುಗಳ ಕಾಲ ಐಪಿಎಲ್​ನಲ್ಲಿ ಆಡಲಿದ್ದಾರೆ. ಹಾಗಾಗಿ ಕೇವಲ 9 ತಿಂಗಳಲ್ಲಿ ಟಿ20 ವಿಶ್ವಕಪ್​ಗಾಗಿ ತಂಡವನ್ನು ರಚಿಸಿಕೊಳ್ಳಬೇಕು. ಏಕೆಂದರೆ ತಂಡ ಸೋತಾಗ ಮತ್ತು ಗೆದ್ದಾಗ ಕೋಚ್‌ಗಳು ಕೂಡ ಗುರಿಯಾಗುತ್ತಾರೆ. ಇದಲ್ಲದೇ ಪ್ರಸ್ತುತ ತಂಡದಲ್ಲಿರುವ ಸ್ಟಾರ್ ಆಟಗಾರರನ್ನು ಪರಿಗಣಿಸಿಯೇ ತಂಡವನ್ನು ರೂಪಿಸಬೇಕು. ಏಕೆಂದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ರಂತಹ ಹಿರಿಯ ಆಟಗಾರರ ಪಾತ್ರವನ್ನೂ ಅವರೇ ನಿರ್ಧರಿಸಬೇಕಾಗುತ್ತದೆ. ಹೀಗಾಗಿ ಉಳಿದ ಆಟಗಾರರನ್ನು ಆಯ್ಕೆ ಮಾಡಿ ಬಲಿಷ್ಠ ತಂಡವನ್ನು ಸಿದ್ಧಪಡಿಬೇಕಾದ ಸವಾಲು ರಾಹುಲ್ ದ್ರಾವಿಡ್ ಮುಂದಿದೆ.

ತಾಜಾ ಸುದ್ದಿ
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್