India vs Australia Highlights, WTC Final 2023 Day 4: ಭಾರತಕ್ಕೆ ಕೊಹ್ಲಿ- ರಹಾನೆ ಬಲ; ಕೊನೆಯ ದಿನದಲ್ಲಿ 280 ರನ್ ಬೇಕು
India vs Australia Highlights today WTC Final 2023 Day 4 Match match scorecard in Kannada: ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ರೋಚಕ ಘಟ್ಟದತ್ತ ತಲುಪುತ್ತಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆಲ್ಲಲು ಭಾರತವು ಕೊನೆಯ ದಿನದಲ್ಲಿ 280 ರನ್ ಗಳಿಸಬೇಕಾಗಿದೆ. ನಾಲ್ಕನೇ ದಿನ ಭಾರತಕ್ಕೆ ಆಸ್ಟ್ರೇಲಿಯಾ 444 ರನ್‌ಗಳ ಗುರಿ ನೀಡಿತು. ಇದಕ್ಕೆ ಉತ್ತರವಾಗಿ ಭಾರತ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ. ವಿರಾಟ್ ಕೊಹ್ಲಿ 44 ಮತ್ತು ಅಜಿಂಕ್ಯ ರಹಾನೆ 20 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದಾರೆ. ಶುಭಮನ್ ಗಿಲ್, ರೋಹಿತ್ ಶರ್ಮಾ ಮತ್ತು ಚೇತೇಶ್ವರ ಪೂಜಾರ ರೂಪದಲ್ಲಿ ಭಾರತಕ್ಕೆ 3 ಹಿನ್ನಡೆಯಾಗಿದೆ.
LIVE NEWS & UPDATES
-
India vs Australia Live Score: 280 ರನ್ ಬೇಕು
ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ. ವಿರಾಟ್ ಕೊಹ್ಲಿ 44 ಮತ್ತು ಅಜಿಂಕ್ಯ ರಹಾನೆ 20 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದಾರೆ. ಇಬ್ಬರ ನಡುವೆ ಉತ್ತಮ ಜೊತೆಯಾಟ ನಡೆದಿದೆ. ಭಾರತ ಗೆಲುವಿಗೆ ಇನ್ನೂ 280 ರನ್‌ಗಳ ಕೊರತೆಯಿದೆ
-
India vs Australia Live Score:ಕೊಹ್ಲಿ- ರಹಾನೆ ಜೊತೆಯಾಟ
ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ನಡುವೆ 50 ರನ್ ಜೊತೆಯಾಟವಿದೆ. ಇಬ್ಬರೂ ಬಹಳ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುತ್ತಿದ್ದಾರೆ.
-
-
India vs Australia Live Score: ಭಾರತದ 3ನೇ ವಿಕೆಟ್ ಪತನ
91 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದ್ದ ಭಾರತ, ನಂತರ 92 ರನ್‌ಗಳಿಗೆ ರೋಹಿತ್ ಮತ್ತು 93 ರನ್‌ಗಳಿಗೆ ಚೇತೇಶ್ವರ ಪೂಜಾರ ಅವರನ್ನು ಕಳೆದುಕೊಂಡಿದೆ. ಪೂಜಾರ ಕಮ್ಮಿನ್ಸ್ ಎಸೆತದಲ್ಲಿ ಕ್ಯಾರಿಗೆ ಕ್ಯಾಚ್ ನೀಡಿ ಔಟಾದರು. ಪೂಜಾರ 27 ರನ್ ಗಳಿಸಲಷ್ಟೇ ಶಕ್ತರಾದರು.
-
India vs Australia Live Score: ನಾಯಕ ರೋಹಿತ್ ಔಟ್
ನಾಥನ್ ಲಿಯಾನ್ ಭಾರತಕ್ಕೆ ಬಿಗ್ ಶಾಕ್ ನೀಡಿದ್ದಾರೆ. ರೋಹಿತ್ ಶರ್ಮಾ ಅವರನ್ನು ಎಲ್ಬಿಡಬ್ಲ್ಯು ಔಟ್ ಮಾಡುವ ಲಿಯಾನ್ ಮೂಲಕ ಭಾರತಕ್ಕೆ ಎರಡನೇ ಹೊಡೆತ ನೀಡಿದ್ದಾರೆ. ರೋಹಿತ್ 43 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು
-
India vs Australia Live Score: ಭಾರತದ ಅರ್ಧಶತಕ ಪೂರ್ಣ
ಭಾರತದ ಸ್ಕೋರ್ 50 ರನ್ ದಾಟಿದೆ. ಶುಭಮನ್ ಗಿಲ್ ಔಟಾದ ನಂತರ ರೋಹಿತ್ ಶರ್ಮಾಗೆ ಚೇತೇಶ್ವರ ಪೂಜಾರ ಉತ್ತಮ ಸಾಥ್ ನೀಡುತ್ತಿದ್ದಾರೆ.
-
-
India vs Australia Live Score: ಗಿಲ್ ಔಟ್
ಶುಭಮನ್ ಗಿಲ್ ಔಟಾಗಿದ್ದಾರೆ. ಅದ್ಭುತ ಡೈವಿಂಗ್ ಮಾಡುವ ಮೂಲಕ ಗ್ರೀನ್ ಅದ್ಭುತ ಕ್ಯಾಚ್ ಪಡೆದರು. ಗಿಲ್ 18 ರನ್ ಗಳಿಸಿ ಪೆವಿಲಿಯನ್ಗೆ ಮರಳಬೇಕಾಯಿತು. ಭಾರತ 41 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿದೆ. ಇದರೊಂದಿಗೆ 2ನೇ ಸೆಷನ್ ಕೂಡ ಮುಗಿದಿದೆ.
-
India vs Australia Live Score: ಭಾರತದ ಇನ್ನಿಂಗ್ಸ್ ಆರಂಭ
ಭಾರತದ ಇನ್ನಿಂಗ್ಸ್ ಶುರುವಾಗಿದೆ ಟೀಂ ಇಂಡಿಯಾಗೆ 444 ರನ್ ಟಾರ್ಗೆಟ್ ಸಿಕ್ಕಿದೆ. ರೋಹಿತ್ ಶರ್ಮಾ ಅವರೊಂದಿಗೆ ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದ್ದಾರೆ.
-
India vs Australia Live Score: ಆಸ್ಟ್ರೇಲಿಯಾದ ಇನ್ನಿಂಗ್ಸ್ ಡಿಕ್ಲೇರ್ಡ್
ಆಸ್ಟ್ರೇಲಿಯಾ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಆಸ್ಟ್ರೇಲಿಯ 2ನೇ ಇನಿಂಗ್ಸ್‌ನಲ್ಲಿ ಎಂಟು ವಿಕೆಟ್ ನಷ್ಟಕ್ಕೆ 270 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಭಾರತಕ್ಕೆ 444 ರನ್‌ಗಳ ಗುರಿ ನೀಡಿದೆ.
-
India vs Australia Live Score: ಮಿಚೆಲ್ ಸ್ಟಾರ್ಕ್ ಔಟ್
ಆಸ್ಟ್ರೇಲಿಯಾದ ಏಳನೇ ವಿಕೆಟ್ ಪತನಗೊಂಡಿದೆ. ಮೊಹಮ್ಮದ್ ಶಮಿ ಎಸೆತದಲ್ಲಿ ಮಿಚೆಲ್ ಸ್ಟಾರ್ಕ್, ಸ್ಲಿಪ್‌ನಲ್ಲಿ ವಿರಾಟ್ ಕೊಹ್ಲಿ ಕ್ಯಾಚಿತ್ತು ಔಟಾದರು.
ಮಿಚೆಲ್ ಸ್ಟಾರ್ಕ್ – 41 ರನ್, 57 ಎಸೆತಗಳು 7×4
-
India vs Australia Live Score: ಕ್ಯಾರಿ ಅರ್ಧಶತಕ
ಅಲೆಕ್ಸ್ ಕ್ಯಾರಿ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಪೂರೈಸಿದ್ದಾರೆ. 77ನೇ ಓವರ್‌ನ ಮೊದಲ ಎಸೆತದಲ್ಲಿ ಸಿಂಗಲ್ ರನ್ ಗಳಿಸುವ ಮೂಲಕ ಕ್ಯಾರಿ ಅರ್ಧಶತಕ ಪೂರೈಸಿದರು.
-
India vs Australia Live Score: ಮೊದಲ ಸೆಷನ್ ಅಂತ್ಯ
ನಾಲ್ಕನೇ ದಿನದ ಮೊದಲ ಸೆಷನ್ ಮುಗಿದಿದೆ. ಈ ಸೆಷನ್ನಲ್ಲಿ ಆಸ್ಟ್ರೇಲಿಯಾ 77 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡಿತು. ಸದ್ಯ ಆಸ್ಟ್ರೇಲಿಯಾ 374 ರನ್‌ಗಳ ಮುನ್ನಡೆ ಸಾಧಿಸಿದೆ.
-
India vs Australia Live Score: ಆಸೀಸ್ 200 ರನ್ ಪೂರ್ಣ
ಅಲೆಕ್ಸ್ ಕ್ಯಾರಿ ರವೀಂದ್ರ ಜಡೇಜಾ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡದ 200 ರನ್ ಪೂರೈಸಿದರು. 69ನೇ ಓವರ್‌ನ ಐದನೇ ಎಸೆತದಲ್ಲಿ ಆಸ್ಟ್ರೇಲಿಯಾ ದ್ವಿಶತಕ ಪೂರೈಸಿತು.
-
India vs Australia Live Score: ಗ್ರೀನ್ ಔಟ್
ಭಾರತ ಎದುರು ನೋಡುತ್ತಿದ್ದ ದೊಡ್ಡ ವಿಕೆಟ್ ಸಿಕ್ಕಿದೆ.ಜಡೇಜಾ ಕ್ಯಾಮರೂನ್ ಗ್ರೀನ್ ಅವರನ್ನು ಔಟ್ ಮಾಡಿದ್ದಾರೆ. 63ನೇ ಓವರ್‌ನ ಕೊನೆಯ ಚೆಂಡು ಗ್ರೀನ್ ಅವರ ಗ್ಲೌಸ್‌ಗೆ ಹೊಡೆದು ಸ್ಟಂಪ್‌ಗೆ ಬಡಿಯಿತು.
-
India vs Australia Live Score:ಆಸ್ಟ್ರೇಲಿಯಾದ 150 ರನ್ ಪೂರ್ಣ
ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 150 ರನ್ ಗಳಿಸಿದೆ. 57ನೇ ಓವರ್‌ನಲ್ಲಿ ಗ್ರೀನ್ ಒಂದು ರನ್ ತೆಗೆದುಕೊಳ್ಳುವ ಮೂಲಕ ತಮ್ಮ ತಂಡದ 150 ರನ್‌ಗಳನ್ನು ಪೂರ್ಣಗೊಳಿಸಿದರು.
-
India vs Australia Live Score: ಲಬುಶೇನ್ ಔಟ್
ಮಾರ್ನಸ್ ಲಬುಶೆನ್ ಔಟಾಗಿದ್ದಾರೆ. ದಿನದ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಉಮೇಶ್ ಯಾದವ್ ಲಬುಶೆನ್ ಅವರನ್ನು ಔಟ್ ಮಾಡಿದರು.
-
India vs Australia Live Score: ದಿನದ ಆಟ ಪ್ರಾರಂಭ
4ನೇ ದಿನದ ಆಟ ಶುರುವಾಗಿದೆ. ಮಾರ್ನಸ್ ಲಬುಶೇನ್ ಮತ್ತು ಕ್ಯಾಮರೂನ್ ಗ್ರೀನ್ ಕ್ರೀಸ್ನಲ್ಲಿದ್ದಾರೆ. ಭಾರತದ ಉಮೇಶ್ ಯಾದವ್ ಮೊದಲ ಓವರ್ ಎಸೆಯುತ್ತಿದ್ದಾರೆ.
-
India vs Australia Live Score: ಕಳೆದ ಮೂರು ದಿನಗಳ ವಿವರ
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್: 469 ಆಲೌಟ್
ಟೀಂ ಇಂಡಿಯಾ ಮೊದಲ ಇನಿಂಗ್ಸ್: 296 ಆಲೌಟ್, ಆಸ್ಟ್ರೇಲಿಯಾ 173 ರನ್ ಮುನ್ನಡೆ.
ಆಸ್ಟ್ರೇಲಿಯಾ 2ನೇ ಇನಿಂಗ್ಸ್: 123-4, 44 ಓವರ್‌ಗಳು, ಒಟ್ಟು 296 ರನ್‌ಗಳ ಮುನ್ನಡೆ.
Published On - Jun 10,2023 2:13 PM
