NZ vs AUS: ನ್ಯೂಜಿಲೆಂಡ್ ಸ್ಫೋಟಕ ಬ್ಯಾಟಿಂಗ್: ಆಸ್ಟ್ರೇಲಿಯಾಕ್ಕೆ 201 ರನ್​ಗಳ ಬಿಗ್ ಟಾರ್ಗೆಟ್

| Updated By: Vinay Bhat

Updated on: Oct 22, 2022 | 2:46 PM

ICC T20 World Cup 2022: ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಆತಿಥೇಯರಿಗೆ ಗೆಲ್ಲಲು 201 ರನ್​ಗಳ ಕಠಿಣ ಟಾರ್ಗೆಟ್ ನೀಡಿದೆ. ಅಮೋಘ ಆಟ ಪ್ರದರ್ಶಿಸಿದ ಡೆವೋನ್ ಕಾನ್ವೆ ಕೇವಲ 58 ಎಸೆತಗಳಲ್ಲಿ 7 ಫೋರ್, 2 ಸಿಕ್ಸರ್​​ನೊಂದಿಗೆ ಅಜೇಯ 92 ರನ್​ಗಳ ಕೊಡುಗೆ ನೀಡಿದರು.

NZ vs AUS: ನ್ಯೂಜಿಲೆಂಡ್ ಸ್ಫೋಟಕ ಬ್ಯಾಟಿಂಗ್: ಆಸ್ಟ್ರೇಲಿಯಾಕ್ಕೆ 201 ರನ್​ಗಳ ಬಿಗ್ ಟಾರ್ಗೆಟ್
devon conway
Follow us on

ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್​ನ (T20 World Cup) ಸೂಪರ್ 12 ಹಂತದ ಮೊದಲ ಪಂದ್ಯದಲ್ಲೇ ದೊಡ್ಡ ಮೊತ್ತ ದಾಖಲಾಗಿದೆ. ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ (New Zealand vs Australia) ಆತಿಥೇಯರಿಗೆ ಗೆಲ್ಲಲು 201 ರನ್​ಗಳ ಕಠಿಣ ಟಾರ್ಗೆಟ್ ನೀಡಿದೆ. ಅಮೋಘ ಆಟ ಪ್ರದರ್ಶಿಸಿದ ಡೆವೋನ್ ಕಾನ್ವೆ (Devon Conway) ಕೇವಲ 58 ಎಸೆತಗಳಲ್ಲಿ 7 ಫೋರ್, 2 ಸಿಕ್ಸರ್​​ನೊಂದಿಗೆ ಅಜೇಯ 92 ರನ್​ಗಳ ಕೊಡುಗೆ ನೀಡಿದರು. ಅಂತಿಮ ಹಂತದಲ್ಲಿ ಅಬ್ಬರಿಸಿದ ಜೇಮ್ಸ್ ನೀಶಮ್ 13 ಎಸೆತಗಳಲ್ಲಿ ಅಜೇಯ 26 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 200ಕ್ಕೆ ತಂದಿಟ್ಟರು. ಕಿವೀಸ್ ಆರಂಭಿಕ ಫಿನ್ ಅಲೆನ್ ಕೂಡ 16 ಎಸೆತಗಳಲ್ಲಿ 5 ಫೋರ್, 3 ಸಿಕ್ಸರ್ ಸಿಡಿಸಿ 42 ರನ್ ಚಚ್ಚಿದರು.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ನ್ಯೂಜಿಲೆಂಡ್ ಸ್ಫೋಟಕ ಆರಂಭ ಪಡೆದಿಕೊಂಡಿತು. ಓಪನರ್​ಗಳಾದ ಫಿಲ್ ಅಲೆನ್ ಹಾಗೂ ಡೆವೋನ್ ಕಾನ್ವೇ ಪವರ್ ಪ್ಲೇ ಯಲ್ಲಿ ಮನಬಂದಂತೆ ಬ್ಯಾಟ್ ಬೀಸಿದರು. ಅದರಲ್ಲೂ ಅಲೆನ್ ಬಿರುಸಿನ ಆಟಕ್ಕೆ ಆಸೀಸ್ ಬೌಲರ್​ಗಳು ಆರಂಭದಲ್ಲೇ ಸುಸ್ತಾಗಿ ಹೋದರು. 4.1 ಓವರ್​ನಲ್ಲೇ 56 ರನ್ ಸಿಡಿಸಿದ ನ್ಯೂಜಿಲೆಂಡ್ ದೊಡ್ಡ ಮೊತ್ತ ಪೇರಿಸುವ ಸೂಚನೆ ನೀಡಿತು.

ಇದನ್ನೂ ಓದಿ
India Vs Pakistan Live Streaming: ಮೆಲ್ಬೋರ್ನ್​ನಲ್ಲಿ ಭಾರತ- ಪಾಕ್ ಮುಖಾಮುಖಿ; ಪಂದ್ಯ ಆರಂಭ ಯಾವಾಗ?
AUS vs NZ: ಟಾಸ್ ಗೆದ್ದ ಆಸ್ಟ್ರೇಲಿಯಾ.. ಗ್ರೀನ್, ಸ್ಮಿತ್​ಗೆ ಕೋಕ್; ಉಭಯ ತಂಡಗಳು ಹೀಗಿವೆ
IND vs PAK: ಅಭ್ಯಾಸದ ವೇಳೆ ಪಾಕ್ ಆರಂಭಿಕ ಆಟಗಾರನಿಗೆ ಇಂಜುರಿ; ಭಾರತ ವಿರುದ್ಧದ ಪಂದ್ಯಕ್ಕೆ ಅಲಭ್ಯ?
ಸೂಪರ್-12 ಸುತ್ತಿನ ಪಂದ್ಯಗಳು ಪ್ರಾರಂಭ; ಯಾವ ಗುಂಪಿನಲ್ಲಿ ಯಾವ ತಂಡವಿದೆ? ಇಲ್ಲಿದೆ ವಿವರ

ಫಿನ್ ಅಲೆನ್ 16 ಎಸೆತಗಳಲ್ಲಿ 5 ಫೋರ್ 3 ಸಿಕ್ಸರ್ ಬಾರಿಸಿ 42 ರನ್ ಸಿಡಿಸಿ ಔಟಾದ ಬಳಿಕ ಕಾನ್ವೇ ನಾಯಕ ಕೇನ್ ವಿಲಿಯಮ್ಸನ್ ಜೊತೆಗೂಡಿ ಮತ್ತೊಂದು ಅಮೋಘ ಇನ್ನಿಂಗ್ಸ್ ಕಟ್ಟಿದರು. ಕಾನ್ವೆ ವೇಗದ ಆಟದ ಮೊರೆ ಹೋದರೆ ಕೇನ್ ಇವರಿಗೆ ಉತ್ತಮ ಸಾಥ್ ನೀಡಿದರು. ಆದರೆ, 23 ಎಸೆತಗಳಲ್ಲಿ 23 ರನ್ ಗಳಿಸಿ ಕೇನ್ ಔಟಾದರೆ, ಗ್ಲೆನ್ ಫಿಲಿಪ್ 10 ಎಸೆತಗಳಲ್ಲಿ 12 ರನ್​ಗೆ ಬ್ಯಾಟ್ ಕೆಳಗಿಟ್ಟರು.

 

ಕೊನೆಯ 4 ಓವರ್​ಗಳಿರುವಾಗ ಕಾನ್ವೆ ಜೊತೆಯಾದ ಜೇಮ್ಸ್ ನೀಶಮ್ ತಗ್ಗಿದ ರನ್​ರೇಟ್​ಗೆ ವೇಗ ನೀಡಿದರು. ಅಂತಿಮ 24 ಎಸೆತಗಳಲ್ಲಿ 42 ರನ್ ಮೂಡಿಬಂದವು. ನೀಶಮ್ 13 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ ಅಜೇಯ 26 ರನ್ ಚಚ್ಚಿದರೆ, ಡೆವೋನ್ ಕಾನ್ವೆ ಕೇವಲ 58 ಎಸೆತಗಳಲ್ಲಿ 7 ಫೋರ್, 2 ಸಿಕ್ಸರ್​​ನೊಂದಿಗೆ ಅಜೇಯ 92 ರನ್​ಗಳ ಕೊಡುಗೆ ನೀಡಿದರು. ನ್ಯೂಜಿಲೆಂಡ್ ನಿಗದಿತ 20 ಓವರ್​​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿದೆ. ಆಸ್ಟ್ರೇಲಿಯಾ ಪರ ಜೋಶ್ ಹ್ಯಾಜ್ಲೆವುಡ್ 2 ವಿಕೆಟ್ ಕಿತ್ತರೆ, ಆ್ಯಡಂ ಝಂಪಾ 1 ವಿಕೆಟ್ ಪಡೆದರು. 4 ಓವರ್​ಗೆ 46 ರನ್ ನೀಡಿದ ಪ್ಯಾಟ್ ಕಮಿನ್ಸ್ ದುಬಾರಿ ಬೌಲರ್ ಎನಿಸಿಕೊಂಡರು.

Published On - 2:34 pm, Sat, 22 October 22