AUS vs NZ: ಟಾಸ್ ಗೆದ್ದ ಆಸ್ಟ್ರೇಲಿಯಾ.. ಗ್ರೀನ್, ಸ್ಮಿತ್ಗೆ ಕೋಕ್; ಉಭಯ ತಂಡಗಳು ಹೀಗಿವೆ
T20 World Cup 2022: ಈ ಎರಡು ತಂಡಗಳ ನಡುವಿನ ಘರ್ಷಣೆಯೊಂದಿಗೆ ಈ ಬಾರಿ ಟೂರ್ನಿ ಆರಂಭವಾಗುತ್ತಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಟಿ20 ವಿಶ್ವಕಪ್‌ನ (T20 World Cup 2022) ಸೂಪರ್ 12 ಸುತ್ತು ಇಂದಿನಿಂದ ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿನ್ ಆಸ್ಟ್ರೇಲಿಯಾ ಮತ್ತು ಕಳೆದ ಬಾರಿಯ ರನ್ನರ್ ಅಪ್ ನ್ಯೂಜಿಲೆಂಡ್ (Australia and New Zealand) ತಂಡಗಳು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಕಣಕ್ಕಿಳಿದಿವೆ. ಈ ಎರಡೂ ತಂಡಗಳು ಕಳೆದ ಟಿ20 ವಿಶ್ವಕಪ್‌ನ ಫೈನಲಿಸ್ಟ್ ತಂಡಗಳಾಗಿದ್ದು, ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಆಗಿತ್ತು. ಈಗ ಈ ಎರಡು ತಂಡಗಳ ನಡುವಿನ ಘರ್ಷಣೆಯೊಂದಿಗೆ ಈ ಬಾರಿ ಟೂರ್ನಿ ಆರಂಭವಾಗುತ್ತಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ (Aaron Finch) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಫರ್ಗುಸನ್ ಎಂಟ್ರಿ
ಗಾಯದ ಕಾರಣ ತವರಿನಲ್ಲಿ ಆಡಿದ ತ್ರಿಕೋನ ಸರಣಿಯಿಂದ ಹೊರಗುಳಿದಿದ್ದ ಲಾಕಿ ಫರ್ಗುಸನ್ ನ್ಯೂಜಿಲೆಂಡ್ ತಂಡಕ್ಕೆ ಮರಳಿದ್ದಾರೆ. ಹಾಗೆಯೇ ಮೈಕಲ್ ಬ್ರೇಸ್‌ವೆಲ್ ಮತ್ತು ಆಡಮ್ ಮಿಲ್ನೆ ಅವರನ್ನು ಆಡುವ ಇಲೆವೆನ್ನಿಂದ ಕೈಬಿಡಲಾಗಿದೆ.
ಇದನ್ನೂ ಓದಿ: IND vs PAK: ಅಭ್ಯಾಸದ ವೇಳೆ ಪಾಕ್ ಆರಂಭಿಕ ಆಟಗಾರನಿಗೆ ಇಂಜುರಿ; ಭಾರತ ವಿರುದ್ಧದ ಪಂದ್ಯಕ್ಕೆ ಅಲಭ್ಯ?
ಕ್ಯಾಮರೂನ್ ಗ್ರೀನ್ಗೆ ಕೋಕ್
ಮತ್ತೊಂದೆಡೆ, ಆಸ್ಟ್ರೇಲಿಯಾ ತಂಡಕ್ಕೆ ಎಂಟ್ರಿಕೊಟ್ಟಿರುವ ಕ್ಯಾಮರೂನ್ ಗ್ರೀನ್ಗೆ ಇಂದಿನ ಪಂದ್ಯದಿಂದ ಕೋಕ್ ನೀಡಲಾಗಿದೆ. ಅವರನ್ನು ಹೊರತುಪಡಿಸಿ ಕೇನ್ ರಿಚರ್ಡ್ಸನ್ ಮತ್ತು ಸ್ಟೀವ್ ಸ್ಮಿತ್ ಅವರಿಗೂ ಈ ಪಂದ್ಯದಲ್ಲಿ ಅವಕಾಶ ಸಿಕ್ಕಿಲ್ಲ.
Toss update ?️
Australia have elected to bowl first! #AUSvNZ | ? Scorecard: https://t.co/ouB6f5wqle pic.twitter.com/jv3tjT0JcO
— ICC (@ICC) October 22, 2022
ಉಭಯ ತಂಡಗಳು ಹೀಗಿವೆ
ನ್ಯೂಜಿಲೆಂಡ್ ತಂಡ ಇಂತಿದೆ:
ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್
Batting first at the @scg! A toss win for Aaron Finch and Australia to start the @T20WorldCup. @glenndominic159 playing his 50th T20I for New Zealand today. Follow play LIVE in NZ with @skysportnz and @SENZ_Radio. #T20WorldCup pic.twitter.com/DdoRMnaAn3
— BLACKCAPS (@BLACKCAPS) October 22, 2022
AUS XI: Aaron Finch (c), David Warner, Mitch Marsh, Glenn Maxwell, Marcus Stoinis, Tim David, Matthew Wade (wk), Pat Cummins, Mitch Starc, Adam Zampa, Josh Hazlewood #T20WorldCup
— cricket.com.au (@cricketcomau) October 22, 2022
ಆಸ್ಟ್ರೇಲಿಯಾ ತಂಡ ಇಂತಿದೆ:
ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್. ಮ್ಯಾಥ್ಯೂ ವೇಡ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಆಡಮ್ ಝಂಪಾ, ಜೋಶ್ ಹ್ಯಾಜಲ್ವುಡ್
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Sat, 22 October 22