ಸೂಪರ್-12 ಸುತ್ತಿನ ಪಂದ್ಯಗಳು ಪ್ರಾರಂಭ; ಯಾವ ಗುಂಪಿನಲ್ಲಿ ಯಾವ ತಂಡವಿದೆ? ಇಲ್ಲಿದೆ ವಿವರ
T20 World Cup 2022: ಅರ್ಹತಾ ಸುತ್ತಿನಿಂದ ನಾಲ್ಕು ತಂಡಗಳು ಸೂಪರ್-12 ಸುತ್ತಿಗೆ ಲಗ್ಗೆ ಇಟ್ಟಿದ್ದು, ಯಾವ ತಂಡ ಯಾವ ಗುಂಪಿನಲ್ಲಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಟಿ20 ವಿಶ್ವಕಪ್‌ನ (T20 World Cup 2022) ಅರ್ಹತಾ ಸುತ್ತಿನ ಪಂದ್ಯಗಳು ಮುಗಿದಿದ್ದು, ಈ ಸುತ್ತಿನಲ್ಲಿ ಬಹಳ ರೋಚಕ ಮತ್ತು ಆಘಾತಕಾರಿ ಫಲಿತಾಂಶಗಳು ಹೊರಬಿದ್ದಿವೆ. ಟೂರ್ನಿಯ ಮೊದಲ ಸುತ್ತಿನ ಎಲ್ಲಾ 16 ಪಂದ್ಯಗಳು ನಡೆದಿದ್ದು, ಈ ಸುತ್ತಿನಲ್ಲಿ ಮೂರು ಪಂದ್ಯಗಳಲ್ಲಿ ಹೊರಬಿದ್ದ ಪಲಿತಾಂಶ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಇದರ ಸೈಡ್ ಎಫೆಕ್ಟ್ ಎಂಬಂತೆ ಎರಡು ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ (West Indies) ತಂಡ ಪಂದ್ಯಾವಳಿಯಿಂದ ಹೊರಗುಳಿಯಬೇಕಾಯಿತು. ಇದರೊಂದಿಗೆ ಅರ್ಹತಾ ಸುತ್ತಿನಿಂದ ನಾಲ್ಕು ತಂಡಗಳು ಸೂಪರ್-12 ಸುತ್ತಿಗೆ (Super-12 round) ಲಗ್ಗೆ ಇಟ್ಟಿದ್ದು, ಯಾವ ತಂಡ ಯಾವ ಗುಂಪಿನಲ್ಲಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಮೊದಲ ಸುತ್ತಿನ ಕೊನೆಯ ಎರಡು ಪಂದ್ಯಗಳನ್ನು ಶುಕ್ರವಾರ ಅಕ್ಟೋಬರ್ 21 ರಂದು ಆಡಲಾಯಿತು. ಇದರಲ್ಲಿ ಐರ್ಲೆಂಡ್ ತಂಡ ವೆಸ್ಟ್ ಇಂಡೀಸ್ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿತು. ಈ ಮೂಲಕ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಟೂರ್ನಿಯ ಮೊದಲ ಸುತ್ತಿನಿಂದಲೇ ಹೊರಬಿದ್ದಿದ್ದು, ಐರ್ಲೆಂಡ್ ತಂಡ ಸೂಪರ್ 12 ಸುತ್ತಿನಲ್ಲಿ ಸ್ಥಾನ ಪಡೆದುಕೊಂಡಿದೆ. ಹಾಗೆಯೇ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ 5 ವಿಕೆಟ್‌ಗಳಿಂದ ಸ್ಕಾಟ್ಲೆಂಡ್ ತಂಡವನ್ನು ಸೋಲಿಸಿ, ಮೊದಲ ಬಾರಿಗೆ ಟಿ20 ವಿಶ್ವಕಪ್‌ನ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದೆ.
ಸೂಪರ್-12 ಸುತ್ತಿನ ಎರಡೂ ಗುಂಪುಗಳು
ಹೆಸರೇ ಸೂಚಿಸುವಂತೆ ಸೂಪರ್-12 ಸುತ್ತಿನಲ್ಲಿ ಒಟ್ಟು 12 ತಂಡಗಳಿದ್ದು, ತಲಾ 6 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು-1 ಈಗಾಗಲೇ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನದ ತಂಡಗಳನ್ನು ಹೊಂದಿತ್ತು. ಅರ್ಹತಾ ಸುತ್ತಿನ ಫಲಿತಾಂಶದ ನಂತರ ಇದೀಗ ಎ ಗುಂಪಿನ ವಿಜೇತ ತಂಡ ಶ್ರೀಲಂಕಾ ಮತ್ತು ಬಿ ಗುಂಪಿನ ರನ್ನರ್ ಅಪ್ ಐರ್ಲೆಂಡ್ ತಂಡ ಗುಂಪು 1 ರಲ್ಲಿ ಸ್ಥಾನ ಪಡೆದಿವೆ. ಈ ರೀತಿಯಾಗಿ, ಗುಂಪು-1 ರಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ಅಫ್ಘಾನಿಸ್ತಾನ, ಶ್ರೀಲಂಕಾ ಮತ್ತು ಐರ್ಲೆಂಡ್ ತಂಡಗಳು ಸ್ಥಾನ ಪಡೆದಿವೆ.
ಇದನ್ನೂ ಓದಿ: Rohit Sharma: ‘ನನಗೆ ನಂಬಿಕೆ ಇಲ್ಲ’; ಪಾಕ್ ಪತ್ರಕರ್ತನ ಪ್ರಶ್ನೆಗೆ ಖಡಕ್ ಉತ್ತರ ನೀಡಿದ ರೋಹಿತ್ ಶರ್ಮಾ
ನಾವು ಎರಡನೇ ಗುಂಪಿನ ಬಗ್ಗೆ ಮಾತನಾಡುವುದಾದರೆ, ಅದರಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ನೇರ ಪ್ರವೇಶ ಪಡೆದಿದ್ದವು. ಈಗ ಎ ಗುಂಪಿನ ರನ್ನರ್ ಅಪ್ ತಂಡವಾದ ನೆದರ್ಲ್ಯಾಂಡ್ಸ್ ಹಾಗೂ ಬಿ ಗುಂಪಿನ ವಿಜೇತ ತಂಡವಾದ ಜಿಂಬಾಬ್ವೆ ಗುಂಪು 2 ರಲ್ಲಿ ಸ್ಥಾನ ಪಡೆದಿವೆ. ಈ ರೀತಿಯಾಗಿ ಗುಂಪು-2 ರಲ್ಲಿ ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ನೆದರ್ಲ್ಯಾಂಡ್ಸ್ ಮತ್ತು ಜಿಂಬಾಬ್ವೆ ತಂಡಗಳು ಸ್ಥಾನ ಪಡೆದಿವೆ.
ಸೂಪರ್-12 ಪಂದ್ಯಗಳು ಯಾವಾಗ ಪ್ರಾರಂಭ?
ಸೂಪರ್-12 ಸುತ್ತು ಅಕ್ಟೋಬರ್ 22 ಶನಿವಾರದಿಂದ ಆರಂಭವಾಗಲಿದೆ. ಕಳೆದ ವಿಶ್ವಕಪ್‌ನ ಫೈನಲಿಸ್ಟ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ. ಗುಂಪು-1 ರ ಪಂದ್ಯದಲ್ಲಿ ಚಾಂಪಿಯನ್ ಹಾಗೂ ಆತಿಥೇಯ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಹೋಬರ್ಟ್‌ನಲ್ಲಿ ನಡೆಯಲಿದ್ದು, ಇದರ ನಂತರ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ.
ನಾವು ಗುಂಪು-2 ರ ಬಗ್ಗೆ ಮಾತನಾಡುವುದಾದರೆ, ಅದರ ಮೊದಲ ಪಂದ್ಯವು ಅಕ್ಟೋಬರ್ 23 ಭಾನುವಾರದಂದು ನಡೆಯಲಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಈ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ