AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲು ಬಾಲ್​ ಬಾಯ್, ಈಗ ಕ್ರಿಕೆಟ್ ಲೋಕದ ಸೂಪರ್​ಸ್ಟಾರ್; 28ನೇ ವಸಂತಕ್ಕೆ ಕಾಲಿಟ್ಟ ಪಾಕ್ ನಾಯಕ

Babar AZAM Birthday: ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ಬಾಲ್ ಬಾಯ್ ಆಗಿ ಕ್ರಿಕೆಟ್ ಅನ್ನು ಹತ್ತಿರದಿಂದ ವೀಕ್ಷಿಸಿದ್ದ ಬಾಬರ್, 2010 ಮತ್ತು 2012ರ ಅಂಡರ್-19 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು.

ಮೊದಲು ಬಾಲ್​ ಬಾಯ್, ಈಗ ಕ್ರಿಕೆಟ್ ಲೋಕದ ಸೂಪರ್​ಸ್ಟಾರ್; 28ನೇ ವಸಂತಕ್ಕೆ ಕಾಲಿಟ್ಟ ಪಾಕ್ ನಾಯಕ
Image Credit source: insidesport
TV9 Web
| Updated By: ಪೃಥ್ವಿಶಂಕರ|

Updated on:Oct 15, 2022 | 10:39 AM

Share

ದಶಕಗಳಿಂದ ಕ್ರಿಕೆಟ್​ ಲೋಕಕ್ಕೆ ಹಲವು ಮಾರಕ ವೇಗಿಗಳನ್ನು ನೀಡಿದ ಹೆಗ್ಗಳಿಕೆ ಪಾಕಿಸ್ತಾನ ಕ್ರಿಕೆಟ್​ನದ್ದು. ಹಾಗೆಯೇ ಅನೇಕ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು ಸಹ ಈ ಮಂಡಳಿ ವಿಶ್ವಕ್ಕೆ ನೀಡಿದೆ. ಅವರಲ್ಲಿ ಹನೀಫ್ ಮೊಹಮ್ಮದ್, ಜಹೀರ್ ಅಬ್ಬಾಸ್, ಜಾವೇದ್ ಮಿಯಾಂದಾದ್, ಇಂಜಮಲ್-ಉಲ್-ಹಕ್, ಸಯೀದ್ ಅನ್ವರ್ ಮತ್ತು ಯೂನಸ್ ಖಾನ್​ರಂತಹ ಲೆಜೆಂಡ್​ಗಳು ಸೇರಿದ್ದಾರೆ. ಈಗ ಇಂತಹ ಸ್ಟಾರ್​ ಕ್ರಿಕೆಟಿಗರ ಪಟ್ಟಿಗೆ ತಂಡದ ಹಾಲಿ ನಾಯಕ ಬಾಬರ್ ಅಜಮ್ (Babar Azam) ಹೆಸರು ಸಹ ಸೇರ್ಪಡೆಗೊಂಡಿದೆ. ತನ್ನ ಅದ್ಭುತ ಬ್ಯಾಟಿಂಗ್​ನಿಂದ ವಿಶ್ವಕ್ರಿಕೆಟ್​ನಲ್ಲಿ ರನ್ ಸಾಮ್ರಾಟನಾಗಿ ಮೆರೆಯುತ್ತಿರುವ ಬಾಬರ್ ಅಜಮ್​ಗೆ ಇಂದು 28ನೇ ವರ್ಷದ ಜನ್ಮದಿನ.

ಪಾಕಿಸ್ತಾನಿ ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ವಿಶ್ವ ಕ್ರಿಕೆಟ್‌ನಲ್ಲಿ ಸಾಕಷ್ಟು ಹೆಸರು ಮಾಡಿರುವ ಆಟಗಾರರಲ್ಲಿ ಬಾಬರ್‌ನ ಹೆಸರು ಸೇರಿದೆ. 1994 ರಲ್ಲಿ ಲಾಹೋರ್‌ನಲ್ಲಿ ಜನಿಸಿದ ಬಾಬರ್ ಇಂದು ಪಾಕಿಸ್ತಾನ ತಂಡದ ಟ್ರಂಪ್​ಕಾರ್ಡ್​.

ಬಾಲ್ ಬಾಯ್‌ನಿಂದ ವೃತ್ತಿ ಆರಂಭ

ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ಬಾಲ್ ಬಾಯ್ ಆಗಿ ಕ್ರಿಕೆಟ್ ಅನ್ನು ಹತ್ತಿರದಿಂದ ವೀಕ್ಷಿಸಿದ್ದ ಬಾಬರ್, 2010 ಮತ್ತು 2012ರ ಅಂಡರ್-19 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು. ಈ ಎರಡು ಆವೃತ್ತಿಗಳಲ್ಲಿ ಪಾಕ್ ತಂಡದ ಅತ್ಯುತ್ತಮ ಬ್ಯಾಟ್ಸ್‌ಮನ್ ಕೂಡ ಆಗಿದ್ದರು. 3 ವರ್ಷಗಳ ನಂತರ 2015 ರಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಬಾಬರ್ ಅಂದಿನಿಂದ ಹಿಂತಿರುಗಿ ನೋಡಿದ್ದೆ ಇಲ್ಲ.

2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸತತ 3 ಏಕದಿನ ಶತಕಗಳನ್ನು ಬಾರಿಸಿದ ಬಾಬರ್ ವಿಶ್ವಕ್ರಿಕೆಟ್​ನಲ್ಲಿ ತನ್ನದೆ ಹವಾ ಸೃಷ್ಟಿಸಿದರು. ಈ ಅತ್ಯುತ್ತಮ ಸಾಧನೆಯ ನಂತರ ಅವರ ಟೆಸ್ಟ್ ವೃತ್ತಿಜೀವನವೂ ಪ್ರಾರಂಭವಾಯಿತು.

ಕಳೆದ 3-4 ವರ್ಷಗಳಲ್ಲಿ ನಿರಂತರವಾಗಿ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಬಾಬರ್ ಅಜಮ್, ಕಿಂಗ್ ಕೊಹ್ಲಿಗೆ ಸರಿಸಮಾನಾಗಿ ಬೆಳೆದು ನಿಂತಿದ್ದಾರೆ. 2022 ರಲ್ಲಿ ಆಡಿದ ಕೇವಲ 9 ಸತತ ಇನ್ನಿಂಗ್ಸ್‌ಗಳಲ್ಲಿ (ಎಲ್ಲಾ ಮೂರು ಸ್ವರೂಪಗಳು) 50 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸಿದ ದಾಖಲೆಯನ್ನು ಬಾಬರ್ ಬರೆದಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್​ನಲ್ಲಿ ಅತಿವೇಗವಾಗಿ 4000 ರನ್‌ಗಳನ್ನು ಪೂರೈಸಿದ ದಾಖಲೆಯಲ್ಲಿ ಬಾಬರ್ ಎರಡನೇ ಸ್ಥಾನದಲ್ಲಿದ್ದಾರೆ.

ಬ್ಯಾಟಿಂಗ್ ಜೊತೆಗೆ ನಾಯಕತ್ವದಲ್ಲೂ ಟ್ರಬಲ್‌ಶೂಟರ್

ದಾಖಲೆ ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ತಂಡಕ್ಕೆ ಟ್ರಬಲ್‌ಶೂಟರ್ ಕೂಡ ಆಗಿದ್ದಾರೆ. ಈ ವರ್ಷದ ಆರಂಭದಲ್ಲಿ, ಬಾಬರ್ ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 196 ರನ್ ಗಳಿಸಿ ಟೆಸ್ಟ್ ಡ್ರಾ ಮಾಡಿಕೊಂಡಿದ್ದರು. ನಂತರ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಅದ್ಭುತ ಶತಕ ಬಾರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಇಷ್ಟೇ ಅಲ್ಲ, ಬಾಬರ್ ತಮ್ಮ ನಾಯಕತ್ವದ ಜೊತೆಗೆ ಬ್ಯಾಟ್‌ನಲ್ಲೂ ಅದ್ಭುತಗಳನ್ನು ಮಾಡಿದ್ದಾರೆ. ಬಾಬರ್ ನಾಯಕತ್ವದಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದಿದೆ. 2021 ರ ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನ, ಟೀಂ ಇಂಡಿಯಾವನ್ನು 10 ವಿಕೆಟ್‌ಗಳಿಂದ ಸೋಲಿಸಿತು, ಇದರಲ್ಲಿ ಬಾಬರ್ ಅಜಮ್ ಅರ್ಧಶತಕ ಗಳಿಸಿದ್ದರು.

ಬಾಬರ್ ದಾಖಲೆ ಪಟ್ಟಿ ಹೀಗಿದೆ

ಬಾಬರ್ ಇದುವರೆಗೆ 42 ಟೆಸ್ಟ್‌ಗಳಲ್ಲಿ 7 ಶತಕಗಳನ್ನು ಒಳಗೊಂಡಂತೆ 3122 ರನ್ (47 ಸರಾಸರಿ) ಗಳಿಸಿದ್ದಾರೆ. ಅದೇ ಸಮಯದಲ್ಲಿ, 92 ಏಕದಿನ ಪಂದ್ಯಗಳಲ್ಲಿ 4664 ರನ್ (59.79 ಸರಾಸರಿ) ಗಳಿಸಿದ್ದು, ಇದರಲ್ಲಿ 17 ಶತಕಗಳು ಸೇರಿವೆ. ಅದೇ ರೀತಿ, ಬಾಬರ್ ಟಿ20ಯಲ್ಲಿಯೂ ಅದ್ಭುತ ಆಟ ಪ್ರದರ್ಶಿಸಿದ್ದು, 92 ಪಂದ್ಯಗಳಲ್ಲಿ 2 ಶತಕ ಮತ್ತು 29 ಅರ್ಧಶತಕಗಳೊಂದಿಗೆ 3231 ರನ್ (43.66 ಸರಾಸರಿ) ಗಳಿಸಿದ್ದಾರೆ. ಅಲ್ಲದೆ, ಅವರು ಎಲ್ಲಾ ಮೂರು ಸ್ವರೂಪಗಳ ಐಸಿಸಿ ಶ್ರೇಯಾಂಕದಲ್ಲಿ ಅಗ್ರ 3 (ODI-1, ಟೆಸ್ಟ್ ಮತ್ತು T20-3) ರಲ್ಲಿ ಸ್ಥಾನ ಪಡೆದಿದ್ದಾರೆ.

Published On - 10:37 am, Sat, 15 October 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?