AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ತಂಡದಿಂದ ಹೊರಬಿದ್ದ ಬಾಬರ್ ಆಝಂ​ಗೆ ಮತ್ತೊಂದು ಹೊಸ ತಂಡದಲ್ಲಿ ಅವಕಾಶ

Babar Azam Joins Sydney Sixers: ಪಾಕಿಸ್ತಾನ ಕ್ರಿಕೆಟ್ ತಂಡದಿಂದ ಹೊರಗುಳಿದ ಬಾಬರ್ ಆಝಂ, ಬಿಗ್ ಬ್ಯಾಷ್ ಲೀಗ್‌ನ ಸಿಡ್ನಿ ಸಿಕ್ಸರ್ಸ್ ತಂಡ ಸೇರಿದ್ದಾರೆ. ಇದು ಅವರ ಚೊಚ್ಚಲ ಬಿಬಿಎಲ್ ಆವೃತ್ತಿಯಾಗಿದೆ. ತಂಡದ ಯಶಸ್ಸಿಗೆ ಕೊಡುಗೆ ನೀಡಲು ಬಯಸುವುದಾಗಿ ಬಾಬರ್ ಹೇಳಿದ್ದಾರೆ. ಶದಾಬ್ ಖಾನ್, ಮೊಹಮ್ಮದ್ ರಿಜ್ವಾನ್ ಮುಂತಾದ ಇತರ ಪಾಕಿಸ್ತಾನಿ ಆಟಗಾರರೂ ಬಿಬಿಎಲ್‌ನಲ್ಲಿ ಆಡುವ ಸಾಧ್ಯತೆಯಿದೆ.

ಪಾಕ್ ತಂಡದಿಂದ ಹೊರಬಿದ್ದ ಬಾಬರ್ ಆಝಂ​ಗೆ ಮತ್ತೊಂದು ಹೊಸ ತಂಡದಲ್ಲಿ ಅವಕಾಶ
Babar Azam
ಪೃಥ್ವಿಶಂಕರ
|

Updated on:Jun 13, 2025 | 7:04 PM

Share

ಕೆಲವೇ ವರ್ಷಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್​ನ (Pakistan Cricket) ರಾಜನಾಗಿ ಮೆರೆಯುತ್ತಿದ್ದ ಮಾಜಿ ನಾಯಕ ಬಾಬರ್ ಆಝಂಗೆ (Babar Azam) ತಂಡದಲ್ಲೇ ಸ್ಥಾನ ಇಲ್ಲದಂತಾಗಿದೆ. ಕೆಲವು ವರ್ಷಗಳಿಂದ ನಿರಂತರವಾಗಿ ಕಳಪೆ ಪ್ರದರ್ಶನದಿಂದ ಬಳಲುತ್ತಿರುವ ಬಾಬರ್, ಮೊದಲು ನಾಯಕತ್ವದಿಂದ ಕೆಳಗಿಳಿಯಬೇಕಾಯಿತು. ಇದೀಗ ಅವರಿಗೆ ತಂಡದಲ್ಲೂ ಸ್ಥಾನ ಇಲ್ಲದಂತಾಗಿದೆ. ಇದು ಮಾತ್ರವಲ್ಲದೆ ಸ್ವತಃ ಪಾಕ್ ಕ್ರಿಕೆಟ್ ಮಂಡಳಿಯೇ ಬಾಬರ್ ಅವರನ್ನು ತಂಡದಿಂದ ಹೊರಗಿಟ್ಟಿದೆ. ವಾಸ್ತವವಾಗಿ ಪಾಕ್ ಟಿ20 ತಂಡದಿಂದ ಬಾಬರ್ ಆಝಂ ಅವರನ್ನು ಹೊರಗಿಡಲಾಗಿದೆ. ಹೀಗಾಗಿ ಬದಲಾವಣೆಯತ್ತ ಹೆಜ್ಜೆ ಹಾಕಿರುವ ಬಾಬರ್ ಇದೀಗ ವಿದೇಶಿ ಟಿ20 ಲೀಗ್​ನತ್ತ ಮುಖ ಮಾಡಿದ್ದಾರೆ.

ಹೊಸ ತಂಡ ಸೇರಿಕೊಂಡ ಬಾಬರ್

ಬಿಗ್ ಬ್ಯಾಷ್ ಲೀಗ್‌ನ 15 ನೇ ಸೀಸನ್‌ನಲ್ಲಿ ಬಾಬರ್ ಆಝಂ ಹೊಸ ತಂಡದೊಂದಿಗೆ ಆಡುವುದನ್ನು ಕಾಣಬಹುದು. ಮುಂಬರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಬಾಬರ್ ಸಿಡ್ನಿ ಸಿಕ್ಸರ್ಸ್‌ ಪರ ಆಡಲಿದ್ದಾರೆ. ಸಿಡ್ನಿ ಸಿಕ್ಸರ್ಸ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಬಾಬರ್ ಈ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಭಾಗವಹಿಸಲಿದ್ದಾರೆ.

ಲೀಗ್ ನಿಯಮಗಳ ಪ್ರಕಾರ, ಎಲ್ಲಾ ಬಿಗ್ ಬ್ಯಾಷ್ ಲೀಗ್ ಫ್ರಾಂಚೈಸಿಗಳು ಡ್ರಾಫ್ಟ್‌ಗೆ ಮೊದಲು ಒಬ್ಬ ಅಂತರರಾಷ್ಟ್ರೀಯ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಆ ಪ್ರಕಾರ ಬಾಬರ್ ಆಝಂ ಹೊರತುಪಡಿಸಿ, ಸ್ಟೀವ್ ಸ್ಮಿತ್, ಜ್ಯಾಕ್ ಎಡ್ವರ್ಡ್ಸ್, ಬೆನ್ ದ್ವಾರಶುಯಿಸ್, ಸೀನ್ ಅಬಾಟ್, ಜೋಯಲ್ ಪ್ಯಾರಿಸ್, ಮೊಯಿಸಸ್ ಹೆನ್ರಿಕ್ಸ್ ಸೇರಿದಂತೆ ಅನೇಕ ಸ್ಟಾರ್ ಆಟಗಾರರು ಮುಂಬರುವ ಸೀಸನ್‌ನಲ್ಲಿ ಆಡುವುದನ್ನು ಕಾಣಬಹುದು.

ಸಿಡ್ನಿ ಸೇರಿದ ನಂತರ ಬಾಬರ್ ಹೇಳಿದ್ದೇನು?

ತಂಡ ಸೇರಿದ ಬಗ್ಗೆ ಸಂತಸ ಹಂಚಿಕೊಂಡಿರುವ ಬಾಬರ್,‘ವಿಶ್ವದ ಅತ್ಯುತ್ತಮ ಟಿ20 ಲೀಗ್‌ಗಳಲ್ಲಿ ಒಂದರಲ್ಲಿ ಆಡಲಿದ್ದೇನೆ ಎಂಬುದು ನನಗೆ ನಿಜವಾಗಿಯೂ ಸಂತೋಷವಾಗಿದೆ. ಇದು ಅತ್ಯಂತ ಯಶಸ್ವಿ ಮತ್ತು ಗೌರವಾನ್ವಿತ ಫ್ರಾಂಚೈಸಿ. ನನ್ನ ತಂಡದ ಯಶಸ್ಸಿಗೆ ನಾನು ಕೊಡುಗೆ ನೀಡಲು ಬಯಸುತ್ತೇನೆ. ನಾನು ಅಭಿಮಾನಿಗಳೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಬಯಸುತ್ತೇನೆ ಮತ್ತು ಈ ಅನುಭವವನ್ನು ಪಾಕಿಸ್ತಾನದಲ್ಲಿರುವ ನನ್ನ ಮನೆ, ಸ್ನೇಹಿತರು, ಕುಟುಂಬ ಮತ್ತು ಬೆಂಬಲಿಗರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ’ ಎಂದಿದ್ದಾರೆ.

ಬಾಬರ್, ರಿಜ್ವಾನ್, ಅಫ್ರಿದಿ ಸೇರಿದಂತೆ ಪಾಕ್ ಕ್ರಿಕೆಟಿಗರ ಇನ್‌ಸ್ಟಾಗ್ರಾಮ್ ಖಾತೆ ಭಾರತದಲ್ಲಿ ಬ್ಯಾನ್

ಬಾಬರ್ ಆಝಂ ಅವರಲ್ಲದೆ, ಶದಾಬ್ ಖಾನ್, ಮೊಹಮ್ಮದ್ ರಿಜ್ವಾನ್, ಶಾಹೀನ್ ಶಾ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಕೂಡ ಮುಂಬರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುವುದನ್ನು ಕಾಣಬಹುದು. ಆದಾಗ್ಯೂ, ಈ ಎಲ್ಲಾ ಆಟಗಾರರ ಹೆಸರುಗಳನ್ನು ಮುಂದಿನ ವಾರ ನಡೆಯಲಿರುವ ವಿದೇಶಿ ಡ್ರಾಫ್ಟ್‌ನಲ್ಲಿ ಸೇರಿಸಲಾಗಿದ್ದು, ಯಾವುದಾದರು ತಂಡ ಅವರನ್ನು ಆಯ್ಕೆ ಮಾಡುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Fri, 13 June 25

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!