ಪಂದ್ಯದ ವೇಳೆ ಹ್ಯಾರಿಸ್ ರೌಫ್​ಗೆ ಕಪಾಳಮೋಕ್ಷ ಮಾಡಿದ ಬಾಬರ್; ವೀಡಿಯೊ ವೈರಲ್

ODI World Cup 2023: ವಾಸ್ತವವಾಗಿ ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ, ಬೌಲಿಂಗ್ ಮಾಡಲು ತಯಾರಿ ನಡೆಸುತ್ತಿದ್ದಾಗ ಬಾಬರ್, ರೌಫ್‌ಗೆ ತಮಾಷೆಯಾಗಿ ಕಪಾಳಮೋಕ್ಷ ಮಾಡಿದ್ದು, ಈ ಘಟನೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಪಂದ್ಯದ ವೇಳೆ ಹ್ಯಾರಿಸ್ ರೌಫ್​ಗೆ ಕಪಾಳಮೋಕ್ಷ ಮಾಡಿದ ಬಾಬರ್; ವೀಡಿಯೊ ವೈರಲ್
ಹ್ಯಾರಿಸ್ ರೌಫ್​ಗೆ ಕಪಾಳಮೋಕ್ಷ ಮಾಡಿದ ಬಾಬರ್
Follow us
ಪೃಥ್ವಿಶಂಕರ
|

Updated on:Oct 07, 2023 | 9:10 AM

7 ವರ್ಷಗಳ ಬಳಿಕ ಭಾರತಕ್ಕೆ ಎಂಟ್ರಿ ಕೊಟ್ಟ ಪಾಕಿಸ್ತಾನ ತಂಡ, ವಿಶ್ವಕಪ್​ನ (ICC Men’s ODI World Cup 2023) ತನ್ನ ಮೊದಲ ಪಂದ್ಯವನ್ನ ಗೆಲುವಿನ ಮೂಲಕ ಆರಂಭಿಸಿದೆ. ಆದ್ರೆ, ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್ ಮತ್ತು ಬೌಲರ್​ಗಳನ್ನ ಹೊಂದಿದ್ರೂ ನೆದರ್​ಲೆಂಡ್ ವಿರುದ್ಧ ಪಾಕ್ (Pakistan vs Netherlands) ಗೆಲುವು ಸುಲಭದ ತುತ್ತಾಗಿರಲಿಲ್ಲ. ಬಲಿಷ್ಠ ಪಾಕ್ ಪಡೆಯನ್ನೇ ನೆದರ್​ಲೆಂಡ್ ಒಂದು ಹಂತದಲ್ಲಿ ನಡುಗಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 49ನೇ ಓವರ್ನಲ್ಲಿ​ ಆಲೌಟ್ ಆಗುವುದರೊಂದಿಗೆ 286 ರನ್ ಕಲೆಹಾಕಿತು. 287 ರನ್ ಗುರಿ ಬೆನ್ನಟ್ಟಿದ ನೆದರ್ಲೆಂಡ್ 205 ರನ್ ಗಳಿಸಲಷ್ಟೇ ಸಫಲವಾಗಿ 81 ರನ್​ಗಳ ಸೋಲನುಭವಿಸಿತು. ಇನ್ನು ಇದೇ ಪಂದ್ಯದಲ್ಲಿ ಪಾಕ್ ತಂಡದ ನಾಯಕ ಬಾಬರ್ ಆಝಂ (Babar Azam), ತಂಡದ ಸಹ ಆಟಗಾರ ವೇಗಿ ಹ್ಯಾರಿಸ್ ರೌಫ್​ಗೆ (Haris Rauf) ಕಪಾಳಮೋಕ್ಷ ಕೂಡ ಮಾಡಿದರು. ಇದೀಗ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ತಮಾಷೆಯಾಗಿ ಕಪಾಳಮೋಕ್ಷ

ವಾಸ್ತವವಾಗಿ ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ, ಬೌಲಿಂಗ್ ಮಾಡಲು ತಯಾರಿ ನಡೆಸುತ್ತಿದ್ದಾಗ ನಾಯಕ ಬಾಬರ್ ಆಝಂ, ವೇಗಿ ಹ್ಯಾರಿಸ್ ರೌಫ್‌ಗೆ ತಮಾಷೆಯಾಗಿ ಕಪಾಳಮೋಕ್ಷ ಮಾಡಿದ್ದು, ಈ ಘಟನೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಒಂದಂಕಿಗೆ ಸುಸ್ತು; ಮತ್ತೊಮ್ಮೆ ಟ್ರೋಲಿಗರಿಗೆ ತುತ್ತಾದ ನಂ.1 ಬ್ಯಾಟರ್ ಬಾಬರ್..!

ಬ್ಯಾಟಿಂಗ್​ನಲ್ಲಿ ಬಾಬರ್ ಫ್ಲಾಪ್

ಇನ್ನು ಈ ಪಂದ್ಯದಲ್ಲಿ ನಾಯಕನಾಗಿ ಬಾಬರ್ ಆಝಂಗೆ ಯಾವುದೇ ರೀತಯ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಬ್ಯಾಟಿಂಗ್​ನಲ್ಲಿ 18 ಎಸೆತಗಳನ್ನು ಎದುರಿಸಿದ ಬಾಬರ್ ಕೇವಲ 5 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಆದರೆ ಬೌಲಿಂಗ್​ನಲ್ಲಿ ಮಿಂಚಿದ ವೇಗಿ ರೌಫ್, ತಮ್ಮ ಖೋಟಾದ ಒಂಬತ್ತು ಓವರ್ ಬೌಲ್ ಮಾಡಿ ಮೂರು ವಿಕೆಟ್‌ಗಳನ್ನು ಪಡೆದರು.

ಬೌಲರ್​ಗಳ ಪ್ರದರ್ಶನ ನನಗೆ ತೃಪ್ತಿ ತಂದಿದೆ

ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಗೆಲುವಿನ ನಂತರ ಮಾತನಾಡಿದ ಬಾಬರ್, ‘ಹೈದರಾಬಾದ್ ನಮ್ಮನ್ನು ಬೆಂಬಲಿಸುವ ರೀತಿ, ನಮಗೆ ತುಂಬಾ ಸಂತೋಷ ತಂದಿದೆ. ನಮ್ಮ ತಂಡವು ಆತಿಥ್ಯವನ್ನು ಆನಂದಿಸುತ್ತಿದೆ. ಈ ಪಂದ್ಯದಲ್ಲಿ ನಮ್ಮ ಬೌಲರ್​ಗಳ ಪ್ರದರ್ಶನ ನನಗೆ ತೃಪ್ತಿ ತಂದಿದೆ. ಆದರೆ ನಾವು ಬ್ಯಾಟಿಂಗ್​ನಲ್ಲಿ ಆರಂಭದಲ್ಲೇ ಮೂರು ವಿಕೆಟ್​ಗಳನ್ನು ಕಳೆದುಕೊಂಡೆವು. ಆದರೆ ರಿಜ್ವಾನ್ ಮತ್ತು ಸೌದ್ ಬ್ಯಾಟಿಂಗ್ ಮಾಡುವ ವಿಧಾನವು ನೆದರ್ಲ್ಯಾಂಡ್ಸ್ ಮೇಲೆ ಒತ್ತಡವನ್ನುಂಟುಮಾಡಿತು. ಇದು ನಮ್ಮ ಗೆಲುವಿಗೆ ಸಹಕಾರಿಯಾಯಿತು ಎಂದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:09 am, Sat, 7 October 23

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ