BAN vs AFG, ICC World Cup: ವಿಶ್ವಕಪ್​ನಲ್ಲಿಂದು ಮೊದಲ ಡಬಲ್ ಹೆಡ್ಡರ್: ಬಾಂಗ್ಲಾ-ಅಫ್ಘಾನ್, ಆಫ್ರಿಕಾ-ಲಂಕಾ ಕದನ

South Africa vs Sri Lanka, ICC World Cup: ಏಕದಿನ ವಿಶ್ವಕಪ್​ನಲ್ಲಿಂದು ಮೊದಲ ಡಬ್ಬಲ್ ಹೆಡ್ಡರ್ ಪಂದ್ಯಗಳು ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ಮುಖಾಮುಖಿ ಆಗಲಿದೆ. ಮಧ್ಯಾಹ್ನ 2 ಗಂಟೆಗೆ ದಕ್ಷಿಣ ಆಫ್ರಿಕಾ ಹಾಗೂ ದಸುನ್ ಶನಕಾ ಅವರ ಶ್ರೀಲಂಕಾ ತಂಡಗಳು ಸೆಣೆಸಾಟ ನಡೆಸಲಿದೆ.

BAN vs AFG, ICC World Cup: ವಿಶ್ವಕಪ್​ನಲ್ಲಿಂದು ಮೊದಲ ಡಬಲ್ ಹೆಡ್ಡರ್: ಬಾಂಗ್ಲಾ-ಅಫ್ಘಾನ್, ಆಫ್ರಿಕಾ-ಲಂಕಾ ಕದನ
ICC World Cup Double Header
Follow us
Vinay Bhat
|

Updated on: Oct 07, 2023 | 7:15 AM

ಐಸಿಸಿ ಏಕದಿನ ವಿಶ್ವಕಪ್​ನಲ್ಲಿಂದು (ICC World Cup) ಎರಡು ಪಂದ್ಯಗಳು ನಡೆಯಲಿದೆ. ಧರ್ಮಶಾಲದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಬೆಳಗ್ಗೆ 10 ಗಂಟೆಗೆ ಶುರುವಾಗಲಿರುವ ಪಂದ್ಯದಲ್ಲಿ ಶಕಿಬ್ ಅಲ್ ಹಸನ್ ನಾಯಕತ್ವದ ಬಾಂಗ್ಲಾದೇಶ ಹಾಗೂ ಹಶ್ಮತುಲ್ಲ ಶಾಹಿದಿ ಅವರ ಅಫ್ಘಾನಿಸ್ತಾನ ಮುಖಾಮುಖಿ ಆಗಲಿದೆ. ಬಳಿಕ ಮಧ್ಯಾಹ್ನ 2 ಗಂಟೆಗೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ಹಾಗೂ ದಸುನ್ ಶನಕಾ ಅವರ ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿದೆ.

ಬಾಂಗ್ಲಾ-ಅಫ್ಘಾನ್:

ಬಾಂಗ್ಲಾದೇಶ ತಂಡಕ್ಕೆ ತಮಿಮ್ ಇಖ್ಬಾಲ್ ಅಲಭ್ಯತೆ ಎದ್ದು ಕಾಣುವುದು ಖಚಿತ. ಶಕೀಬ್ ಅಲ್ ಹಸನ್ ಮೇಲೆ ಸಾಕಷ್ಟು ಒತ್ತಡವಿದೆ. ಅನುಭವಿ ಬೌಲರ್ ಮುಸ್ತಾಫಿಜುರ್ ರಹಮಾನ್ ಏಷ್ಯಾ ಕಪ್‌ನಾದ್ಯಂತ ಬೆಂಚ್ ಕಾದಿದ್ದರಿಂದ ಇವರ ಮೇಲೂ ಒತ್ತಡವಿದೆ. ತಸ್ಕಿನ್ ಅಹ್ಮದ್ ಬೌಲಿಂಗ್​ನಲ್ಲಿ ಮಾರಕವಾಗಬಹುದು. ತಂಝಿದ್ ತಮೀಮ್ ಅಭ್ಯಾಸ ಪಂದ್ಯಗಳಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು. ಲಿಟ್ಟನ್ ದಾಸ್ ಕೂಡ ಫಾರ್ಮ್​ನಲ್ಲಿದ್ದಾರೆ.

ಇತ್ತ ಆಲ್ರೌಂಡರ್​ಗಳ ಪಡೆಯನ್ನೇ ಹೊಂದಿರುವ ಅಫ್ಘಾನಿಸ್ತಾನ ಉತ್ತಮ ಫಾರ್ಮ್​ನಲ್ಲಿದೆ. ಕಳೆದ ತಿಂಗಳು ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಸೋಲು ಅನುಭವಿಸಿದ ಕಾರಣ ಇದೊಂದು ಸೇಡಿನ ಪಂದ್ಯ ಕೂಡ ಹೌದು. ಅಫ್ಘಾನ್ ತಂಡವು ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶದ ವಿರುದ್ಧ 2-1 ಸರಣಿ ಜಯ ಗಳಿಸಿತ್ತು. ನವೀನ್-ಉಲ್-ಹಕ್ ಎರಡು ವರ್ಷಗಳ ಅಂತರದ ನಂತರ ODIಗಳಿಗೆ ಮರಳಿದ್ದಾರೆ. ರಶೀದ್ ಖಾನ್, ಮೊಹಮ್ಮದ್ ನಬಿ ಮತ್ತು ಮುಜೀಬ್-ಉರ್-ರಹಮಾನ್ ಮೂವರು ಸ್ಪಿನ್ನರ್​ಗಳು ಇಂದು ಕಣಕ್ಕಿಳಿಯುವ ಸಾಧ್ಯತೆ ಇದೆ.

ಇದನ್ನೂ ಓದಿ
Image
ಆಸೀಸ್ ವಿರುದ್ಧ ಗಿಲ್ ಕಣಕ್ಕೆ? ಕೋಚ್ ದ್ರಾವಿಡ್ ಹೇಳಿದ್ದಿದು
Image
ಚಿನ್ನಕ್ಕಾಗಿ ಭಾರತ- ಅಫ್ಘಾನ್ ನಡುವೆ ಫೈನಲ್ ಫೈಟ್
Image
ಬಲಿಷ್ಠ ಪಾಕ್ ಬೌಲರ್​ಗಳ ಎದುರು ಗೆಲುವಿಗಾಗಿ ಹೋರಾಡಿ ಸೋತ ಡಚ್ಚರು..!
Image
ವಿಶ್ವಕಪ್​ನಲ್ಲಿ ಡಬಲ್ ಧಮಾಕ; ಒಂದೇ ದಿನ ಎರಡೆರಡು ಪಂದ್ಯ

ಮೊದಲ ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಬಂದವರೆಷ್ಟು? ವಿಶ್ವಕಪ್ ಇತಿಹಾಸದಲ್ಲೇ ಇದು ದಾಖಲೆ

ಅಫ್ಘಾನಿಸ್ತಾನ ತಂಡ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ರಶೀದ್ ಖಾನ್, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್, ಅಜ್ಮತುಲ್ಲಾ ಒಮರ್ಜಾಯ್, ಫಜಲ್ಹಕ್ ಹಾಸನ, ಅಬ್ದುಲ್ ರಹಮಾನ್, ಇಕ್ರಂ ಅಲಿಖಿಲ್.

ಬಾಂಗ್ಲಾದೇಶ ತಂಡ: ತಂಝಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್(ನಾಯಕ), ಮುಶ್ಫಿಕರ್ ರಹೀಮ್, ಮಹ್ಮುದುಲ್ಲಾ, ತೌಹಿದ್ ಹೃದಯ್, ಮೆಹಿದಿ ಹಸನ್ ಮಿರಾಜ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರಹಮಾನ್, ನಸುಮ್ ಅಹ್ಮದ್, ನಸುಮ್ ಅಹ್ಮದ್ ಶೋರಿಫುಲ್ ಇಸ್ಲಾಂ, ತಂಝಿಮ್ ಹಸನ್ ಸಾಕಿಬ್.

ಆಫ್ರಿಕಾ-ಶ್ರೀಲಂಕಾ:

ಟೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್, ಹೆನ್ರಿಕ್ ಕ್ಲಾಸೆನ್ ಅವರನ್ನು ಒಳಗೊಂಡ ಆಫ್ರಿಕಾ ಬಲಿಷ್ಠವಾಗಿದೆ. ಡೇವಿಡ್ ಮಿಲ್ಲರ್ ಕೂಡ ಪರಿಣಾಮಕಾರಿ ಆಗಲಿದ್ದಾರೆ. ಕೇಶವ ಮಹಾರಾಜ್ ಆಡಲಿದ್ದಾರೆ ಎಂದು ತೆಂಬಾ ಬವುಮಾ ಶುಕ್ರವಾರ ಹೇಳಿದ್ದಾರೆ. ದಕ್ಷಿಣ ಆಫ್ರಿಕಾವು ಉತ್ತಮ ಬ್ಯಾಟಿಂಗ್ ಲೈನ್-ಅಪ್ ಅನ್ನು ಹೊಂದಿರುವ ಕಾರಣ ಲಂಕಾ ಬೌಲರ್​ಗಳು ಯೋಜನೆ ರೂಪಿಸಬೇಕಿದೆ. ಕೆಲ ಸ್ಟಾರ್ ಆಟಗಾರರ ಅಲಭ್ಯತೆಯಲ್ಲಿ ಲಂಕಾ ಯಾವ ರೀತಿ ಪ್ರದರ್ಶನ ನೀಡುತ್ತೆ ಎಂಬುದು ನೋಡಬೇಕಿದೆ.

ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಕುಸಾಲ್ ಪೆರೇರಾ, ಧನಂಜಯ ಡಿ ಸಿಲ್ವಾ, ದಸುನ್ ಶನಕ(ನಾಯಕ), ಕಸುನ್ ರಜಿತ, ಲಹಿರು ಕುಮಾರ, ದುನಿತ್ ವೆಲ್ಲಲಾಗೆ, ದುಶನ್ ಹೇಮಂತ, ದಿಲ್ಶಾನ್ ಮದುಶಾಂಕ, ಮಥೀಶ ಪತಿರಣ, ಮಹೇಶ ತೀಕ್ಷಣ.

ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಆಂಡಿಲ್ ಫೆಹ್ಲುಕ್ವಾಯೊ, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಎನ್ ಮಹಾರಾಜ್, ಲುಂಗಿಯಾದ್ ಮಹಾರಾಜ್ ವಿಲಿಯಮ್ಸ್, ಕಗಿಸೊ ರಬಾಡ, ತಬ್ರೈಜ್ ಶಮ್ಸಿ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ