ಬಾಂಗ್ಲಾ ಮಾಜಿ ನಾಯಕನಿಗೆ ಹೃದಯಾಘಾತ; ಐಸಿಯುನಿಂದ ಹೊರಬಿತ್ತು ಆಘಾತಕಾರಿ ವಿಡಿಯೋ
Tamim Iqbal Heart Attack: ಬಾಂಗ್ಲಾದೇಶದ ಮಾಜಿ ನಾಯಕ ತಮೀಮ್ ಇಕ್ಬಾಲ್ ಅವರಿಗೆ ಢಾಕಾದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಹೃದಯಾಘಾತವಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರ ಆರೋಗ್ಯದ ಬಗ್ಗೆ ಯುವರಾಜ್ ಸಿಂಗ್ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಡೆದ ಢಾಕಾ ಪ್ರೀಮಿಯರ್ ಡಿವಿಷನ್ ಕ್ರಿಕೆಟ್ ಲೀಗ್ ಪಂದ್ಯದ ವೇಳೆ ಬಾಂಗ್ಲಾದೇಶದ ಮಾಜಿ ನಾಯಕ ತಮೀಮ್ ಇಕ್ಬಾಲ್ಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರಿಗೆ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ನೀಡಲಾಗಿದೆ. ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಮೊಹಮ್ಮದನ್ ಸ್ಪೋರ್ಟಿಂಗ್ ಕ್ಲಬ್ ಮತ್ತು ಶಿನೆಪುಕುರ್ ಕ್ರಿಕೆಟ್ ಕ್ಲಬ್ ನಡುವಿನ 50 ಓವರ್‌ಗಳ ಪಂದ್ಯದ ಸಮಯದಲ್ಲಿ 36 ವರ್ಷದ ತಮೀಮ್ಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ನಂತರ, ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಮೀಮ್ ಇಕ್ಬಾಲ್ ಅಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರಿಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ತಮೀಮ್‌ಗಾಗಿ ಪ್ರಾರ್ಥಿಸಿದ ಯುವರಾಜ್
ತಮೀಮ್ ಅವರ ಆರೋಗ್ಯದ ಬಗ್ಗೆ ಯುವರಾಜ್ ಸಿಂಗ್ ದುಃಖ ವ್ಯಕ್ತಪಡಿಸಿ, ‘ತಮೀಮ್ ಇಕ್ಬಾಲ್ ಮತ್ತು ಅವರ ಕುಟುಂಬದೊಂದಿಗೆ ನನ್ನ ಪ್ರಾರ್ಥನೆ ಮತ್ತು ಆಶೀರ್ವಾದಗಳಿವೆ’. ನೀವು ಬಲಿಷ್ಠ ಎದುರಾಳಿಗಳನ್ನು ಎದುರಿಸಿದ್ದೀರಿ ಮತ್ತು ಬಲಿಷ್ಠವಾಗಿ ಮರಳಿ ಬಂದಿದ್ದೀರಿ, ಇದು ಕೂಡ ಭಿನ್ನವಾಗಿಲ್ಲ. ನೀವು ಬೇಗನೆ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಧೈರ್ಯವಾಗಿರಿ, ಚಾಂಪಿಯನ್ ಎಂದು ಬರೆದುಕೊಂಡಿದ್ದಾರೆ.
Sending my prayers and wishes to Tamim Iqbal and his family. You’ve faced tough opponents before and come out stronger, this will be no different. Wishing you a speedy recovery. Stay strong, champion @TamimOfficial28
— Yuvraj Singh (@YUVSTRONG12) March 24, 2025
ತಮೀಮ್ಗೆ ಚಿಕಿತ್ಸೆ ಯಶಸ್ವಿ
ಹೃದಯಾಘಾತಕ್ಕೊಳಗಾದ ನಂತರ ತಮೀಮ್ ಇಕ್ಬಾಲ್ ಅವರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು. ಆದರೆ ಅವರನ್ನು ಸವಾರ್‌ನ ಬಿಕೆಎಸ್‌ಪಿ ಮೈದಾನದಿಂದ ವಿಮಾನದಲ್ಲಿ ಕರೆದೊಯ್ಯಲು ಸಾಧ್ಯವಾಗಲಿಲ್ಲ. ನಂತರ ಅವರನ್ನು ಫಜಿಲತುನ್ನೆಸ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಅಧಿಕೃತ ವೈದ್ಯಕೀಯ ಬುಲೆಟಿನ್ ಬಿಡುಗಡೆ ಮಾಡಿ, ‘ತಮೀಮ್ ಗಂಭೀರ ಸ್ಥಿತಿಯಲ್ಲಿ ನಮ್ಮ ಬಳಿಗೆ ಬಂದರು.’ ಅವರಿಗೆ ಹೃದಯಾಘಾತವಾಗಿದ್ದು, ನಾವು ಅವರಿಗೆ ಆಂಜಿಯೋಗ್ರಫಿ ಮತ್ತು ಆಂಜಿಯೋಪ್ಲ್ಯಾಸ್ಟಿ ಮಾಡಿಸಿದೆವು. ವೈದ್ಯಕೀಯ ಚಿಕಿತ್ಸೆ ಯಶಸ್ವಿಯಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
🚨 Cricket Shocker!
Tamim Iqbal suffers a heart attack during a Dhaka Premier League match today. Wishing him a speedy recovery! 🙏#TamimIqbal #DPL pic.twitter.com/p6YHPu5Du8
— Cricketik 24×7 (@cricketik247) March 24, 2025
ತಮೀಮ್ ಅವರ ವೃತ್ತಿಜೀವನ
ಈ ವರ್ಷದ ಜನವರಿಯಲ್ಲಿ ತಮೀಮ್ ಎರಡನೇ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಇದಕ್ಕೂ ಮೊದಲು, ಜುಲೈ 2023 ರಲ್ಲಿ, ಅವರು ಪತ್ರಿಕಾಗೋಷ್ಠಿಯಲ್ಲಿ ನಿವೃತ್ತಿ ಘೋಷಿಸಿದ್ದರು. ಆದರೆ ಆಗಿನ ಪ್ರಧಾನಿ ಶೇಖ್ ಹಸೀನಾ ಅವರ ಮಧ್ಯಸ್ಥಿಕೆಯ ನಂತರ 24 ಗಂಟೆಗಳ ಒಳಗೆ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದರು. ತಮೀಮ್ ಬಾಂಗ್ಲಾದೇಶ ಪರ 70 ಟೆಸ್ಟ್ ಪಂದ್ಯಗಳಲ್ಲಿ 5134 ರನ್ ಮತ್ತು 243 ಏಕದಿನ ಪಂದ್ಯಗಳಲ್ಲಿ 8,357 ರನ್ ಬಾರಿಸಿದ್ದಾರೆ. ಇದಲ್ಲದೆ, ಅವರು 78 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 1,758 ರನ್ ಕಲೆಹಾಕಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ