BBL 2021 Video: ಮಾರಕ ಬೀಮರ್ ಎಸೆದ ಬೌಲರ್​ಗೆ ನಿಷೇಧ ಹೇರಿದ ಅಂಪೈರ್..!

BBL 2021 Video: ಮಾರಕ ಬೀಮರ್ ಎಸೆದ ಬೌಲರ್​ಗೆ ನಿಷೇಧ ಹೇರಿದ ಅಂಪೈರ್..!
BBL 2021

BBL 2022 Video: ಅತ್ಯುತ್ತಮ T20 ಬೌಲರ್‌ಗಳಲ್ಲಿ ಒಬ್ಬರಾಗಿರುವ ಆಂಡ್ರ್ಯೂ ಟೈ ಈ ಹಿಂದೆ ಐಪಿಎಲ್​ನಲ್ಲೂ ಕಾಣಿಸಿಕೊಂಡಿದ್ದರು. ಇದಾಗ್ಯೂ ಕಳೆದ ಬಾರಿ ಅವರ ಐಪಿಎಲ್ ಆಡಿರಲಿಲ್ಲ.

TV9kannada Web Team

| Edited By: Zahir PY

Dec 28, 2021 | 4:41 PM

ಬಿಗ್ ಬ್ಯಾಷ್ ಲೀಗ್ 2021-22 ರ (BBL 2021) 24ನೇ ಪಂದ್ಯದಲ್ಲಿ ಪರ್ತ್ ಸ್ಕಾರ್ಚರ್ಸ್ ಹಾಗೂ ಸಿಡ್ನಿ ಥಂಡರ್ ತಂಡಗಳು ಮುಖಾಮುಖಿಯಾಗಿತ್ತು. ರೋಚಕ ಹಣಾಹಣಿಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಪರ್ತ್ ತಂಡದ ವೇಗದ ಬೌಲರ್ ಆಂಡ್ರ್ಯೂ ಟೈಗೆ ಅಂಪೈರ್ ನಿಷೇಧ ಹೇರಿ ಗಮನ ಸೆಳೆದರು. ಸಿಡ್ನಿ ಥಂಡರ್ ವಿರುದ್ಧದ ಪಂದ್ಯದಲ್ಲಿ ಕೇವಲ 9 ಎಸೆತಗಳನ್ನು ಎಸೆದ ನಂತರ ಆಂಡ್ರ್ಯೂ ಟೈ ಅವರ ಓವರ್​ಗೆ ರದ್ದು ಮಾಡಲಾಯಿತು. ಈ ಪಂದ್ಯದಲ್ಲಿ ತಮ್ಮ ಎರಡನೇ ಓವರ್‌ನಲ್ಲಿ ಎರಡು ಬೀಮರ್‌ಗಳನ್ನು ಎಸೆದ ಕಾರಣ ಈ ನಿಷೇಧ ಹೇರಲಾಗಿದೆ. ಐಸಿಸಿ ಬೌಲಿಂಗ್ ನಿಯಮದ ಪ್ರಕಾರ ಮಾರಕ ಎನಿಸುವಂತೆ ಬೌಲಿಂಗ್ ಮಾಡುತ್ತಿದ್ದರೆ, ಆ ಬೌಲರನ್ನು ನಿಷೇಧಿಸುವ ಅಧಿಕಾರ ಅಂಪೈರ್​ಗೆ ಇದೆ. ಅದರಂತೆ ಎರಡು ಬಾರಿ ಅಪಾಯಕಾರಿ ಎಸೆತಗಳನ್ನು ಎಸೆದ ಪರಿಣಾಮ ಅಂಪೈರ್ ಟೈ ಅವರ ಓವರ್​ ನಿಷೇಧಿಸಿದರು. ಅಷ್ಟೇ ಅಲ್ಲದೆ ಆ ಪಂದ್ಯದಲ್ಲಿ ಮತ್ತೆ ಬೌಲಿಂಗ್ ಮಾಡುವ ಅವಕಾಶ ನೀಡಲಾಗುವುದಿಲ್ಲ. ಅದರಂತೆ ಆಂಡ್ರ್ಯೂ ಟೈ ಅವರು ಕೇವಲ 9 ಎಸೆತಗಳನ್ನು ಮಾತ್ರ ಬೌಲ್ ಮಾಡಿದ್ದರು.

ಅತ್ಯುತ್ತಮ T20 ಬೌಲರ್‌ಗಳಲ್ಲಿ ಒಬ್ಬರಾಗಿರುವ ಆಂಡ್ರ್ಯೂ ಟೈ ಈ ಹಿಂದೆ ಐಪಿಎಲ್​ನಲ್ಲೂ ಕಾಣಿಸಿಕೊಂಡಿದ್ದರು. ಇದಾಗ್ಯೂ ಕಳೆದ ಬಾರಿ ಅವರ ಐಪಿಎಲ್ ಆಡಿರಲಿಲ್ಲ. ಇದೀಗ ಮತ್ತೆ ಬಿಗ್​ ಬ್ಯಾಷ್ ಲೀಗ್ ಮೂಲಕ ಗಮನ ಸೆಳೆಯುತ್ತಿರುವ ಟೈ ಸಿಡ್ನಿ ವಿರುದ್ದ 7ನೇ ಓವರ್‌ನಲ್ಲಿ ಮೊದಲ ಓವರ್ ಬೌಲ್ ಮಾಡಿದ್ದರು. ಆದರೆ ಈ ವೇಳೆ ನೀಡಿದ್ದು 11 ರನ್​ ಬಿಟ್ಟುಕೊಟ್ಟರು.

ಆ ಬಳಿಕ ಡೆತ್ ಓವರ್‌ನಲ್ಲಿ ಬೌಲಿಂಗ್ ಮಾಡಲು ಬಂದ ಟೈ 15ನೇ ಓವರ್‌ನ ನಾಲ್ಕನೇ ಎಸೆತವನ್ನು ಬೀಮರ್‌ನೊಂದಿಗೆ ಬೌಲ್ ಮಾಡಿದರು. ಈ ಚೆಂಡು ಬ್ಯಾಟರ್ ಅಲೆಕ್ಸ್ ರಾಸ್‌ ಅವರ ಸೊಂಟಕ್ಕಿಂತ ಮೇಲಿತ್ತು. ಅಂಪೈರ್ ನೋಬಾಲ್ ತೀರ್ಪು ನೀಡಿದರು. ಇದಾದ ಮುಂದಿನ ಬಾಲ್ ಅನ್ನು ವೈಡ್ ಎಸೆದರು. ಆ ಬಳಿಕ ಮತ್ತೊಮ್ಮೆ ಬೀಮರ್ ಎಸೆತಕ್ಕೆ ಅಲೆಕ್ಸ್ ರಾಸ್ ಬೌಂಡರಿ ಬಾರಿಸಿದರು. ಆದರೆ ಇದಾದ ಬಳಿಕ ಅಂಪೈರ್‌ಗಳು ಟೈ ಬೌಲಿಂಗ್ ಮಾಡದಂತೆ ತಡೆದರು. ಟಿ20ಯಲ್ಲಿ 232 ವಿಕೆಟ್‌ ಪಡೆದ ಬೌಲರ್‌ಗೆ ಅಂಪೈರ್ ನಿರ್ಧಾರವನ್ನು ಅರಗಿಸಿಕೊಳ್ಳುವುದು ಕಷ್ಟಕರವಾಗಿತ್ತು. ಅದಕ್ಕಾಗಿಯೇ ಪರ್ತ್ ಸ್ಕಾರ್ಚರ್ಸ್ ಆಟಗಾರರು ಮೈದಾನದಲ್ಲಿ ಅಂಪೈರ್‌ಗಳೊಂದಿಗೆ ಚರ್ಚಿಸಿದರು. ಇದಾಗ್ಯೂ ಅಂಪೈರ್​ ಮತ್ತೆ ಬೌಲಿಂಗ್​ಗೆ ಅವಕಾಶ ನೀಡಿರಲಿಲ್ಲ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಥಂಡರ್​ ತಂಡವು 20 ಓವರ್​ನಲ್ಲಿ 7 ವಿಕೆಟ್​ 200 ರನ್​ ಕಲೆಹಾಕಿತು.

ಇದನ್ನೂ ಓದಿ:  ಭಾರತವನ್ನು ಗೇಲಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗನ ಕಾಲೆಳೆದ ಆಸ್ಟ್ರೇಲಿಯಾ ಪತ್ರಕರ್ತೆ..!

ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

(bbl 2021: andrew tye taken out of the game after bowling 2 dangerous no balls)

Follow us on

Related Stories

Most Read Stories

Click on your DTH Provider to Add TV9 Kannada