AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಉತ್ತಮ ಲಯದಲ್ಲಿರುವ ಭಾರತಕ್ಕೆ ಆಘಾತ; ಯಾರ್ಕರ್​ ಕಿಂಗ್ ಬುಮ್ರಾಗೆ ಇಂಜುರಿ!

IND vs SA: 11 ನೇ ಓವರ್‌ನ ಐದನೇ ಎಸೆತವನ್ನು ಬೌಲಿಂಗ್ ಮಾಡುವಾಗ, ಜಸ್ಪ್ರೀತ್ ಬುಮ್ರಾ ಇಂಜುರಿಗೆ ಒಳಗಾದರು.

IND vs SA: ಉತ್ತಮ ಲಯದಲ್ಲಿರುವ ಭಾರತಕ್ಕೆ ಆಘಾತ; ಯಾರ್ಕರ್​ ಕಿಂಗ್ ಬುಮ್ರಾಗೆ ಇಂಜುರಿ!
ಜಸ್ಪ್ರೀತ್ ಬುಮ್ರಾ
TV9 Web
| Edited By: |

Updated on:Dec 28, 2021 | 5:55 PM

Share

ಸೆಂಚುರಿಯನ್ ಟೆಸ್ಟ್​ನ ಮೂರನೇ ದಿನ ಟೀಂ ಇಂಡಿಯಾ 327 ರನ್ ಗಳಿಗೆ ಕುಸಿಯಿತ್ತು. ಭಾರತದ ಕೊನೆಯ 7 ವಿಕೆಟ್‌ಗಳು ಕೇವಲ 49 ರನ್‌ಗಳಿಗೆ ಪತನಗೊಂಡವು. ಆದರೆ, ಇದಾದ ಬಳಿಕ ಸೆಂಚುರಿಯನ್‌ನ ಉತ್ಸಾಹಭರಿತ ಪಿಚ್‌ನಲ್ಲಿ ಭಾರತದ ಬೌಲರ್‌ಗಳು ದಿಟ್ಟ ಉತ್ತರ ನೀಡಿದರು. ಜಸ್ಪ್ರೀತ್ ಬುಮ್ರಾ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಅವರು ತಮ್ಮ ಮೊದಲ ಓವರ್‌ನ ಐದನೇ ಎಸೆತದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಅವರನ್ನು ಔಟ್ ಮಾಡಿದರು. ಬುಮ್ರಾ ಅವರ ಚೆಂಡು ಎಷ್ಟು ಬಲಿಷ್ಠವಾಗಿತ್ತು ಎಂದರೆ ಎಲ್ಗರ್‌ಗೆ ಕಾಲನ್ನು ಚಲಿಸುವ ಅವಕಾಶ ಸಿಗಲಿಲ್ಲ. ಪಂತ್ ಎಲ್ಗರ್ ಕ್ಯಾಚ್ ಪಡೆದರು. ಆದರೆ, ಭೋಜನ ವಿರಾಮದ ನಂತರ, ಟೀಂ ಇಂಡಿಯಾಗೆ ಆಘಾತ ಎದುರಾಯಿತು

ಜಸ್ಪ್ರೀತ್ ಬುಮ್ರಾ ಅವರ ಆರನೇ ಓವರ್‌ನಲ್ಲಿ ಗಾಯಗೊಂಡರು. 11 ನೇ ಓವರ್‌ನ ಐದನೇ ಎಸೆತವನ್ನು ಬೌಲಿಂಗ್ ಮಾಡುವಾಗ, ಜಸ್ಪ್ರೀತ್ ಬುಮ್ರಾ ಇಂಜುರಿಗೆ ಒಳಗಾದರು. ಜಸ್ಪ್ರೀತ್ ಬುಮ್ರಾ ತುಂಬಾ ನೋವಿನಿಂದ ನೆಲದ ಮೇಲೆ ಮಲಗಿದ್ದರು. ನಂತರ ಬುಮ್ರಾ ನೋವಿನಿಂದ ನರಳಲಾರಂಭಿಸಿದರು. ಬುಮ್ರಾ ನೋವಿನಿಂದ ಬಳಲುತ್ತಿರುವುದನ್ನು ನೋಡಿದ ಭಾರತ ತಂಡದ ಫಿಸಿಯೋ ತಕ್ಷಣವೇ ಮೈದಾನಕ್ಕೆ ತೆರಳಿ ಅವರನ್ನು ಹೊರಗೆ ಕರೆದೊಯ್ದರು.

ಬುಮ್ರಾ ಭಾರತದ ದೊಡ್ಡ ಮ್ಯಾಚ್ ವಿನ್ನರ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಜಸ್ಪ್ರೀತ್ ಬುಮ್ರಾ ಭಾರತದ ಅತಿದೊಡ್ಡ ಮ್ಯಾಚ್ ವಿನ್ನರ್‌ಗಳಲ್ಲಿ ಒಬ್ಬರು. ದಕ್ಷಿಣ ಆಫ್ರಿಕಾದ ಪಿಚ್‌ಗಳಲ್ಲಿ ಅವರ ಬೌಲಿಂಗ್ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ಸವಾಲಿನಂತಿದೆ. ಇಂತಹ ಪರಿಸ್ಥಿತಿಯಲ್ಲಿ ಬುಮ್ರಾ ಅವರ ಗಾಯ ಗಂಭೀರವಾದರೆ ಟೀಂ ಇಂಡಿಯಾಗೆ ದೊಡ್ಡ ಹೊಡೆತ ಬೀಳಲಿದೆ. ಬುಮ್ರಾ ಅವರು 3 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾ ಪ್ರವಾಸದಿಂದ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಚೊಚ್ಚಲ ಸರಣಿಯಲ್ಲಿಯೇ 14 ವಿಕೆಟ್‌ಗಳನ್ನು ಪಡೆದರು. ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ಬುಮ್ರಾಗೆ ಸಾಕಷ್ಟು ವಿಶ್ರಾಂತಿ ನೀಡಲಾಗಿತ್ತು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಮತ್ತು ಟಿ20 ಸರಣಿಯಲ್ಲಿ ಅವರು ಆಡಿರಲಿಲ್ಲ. ಬಿಸಿಸಿಐ ಕೂಡ ಜಸ್ಪ್ರೀತ್ ಬುಮ್ರಾ ಗಾಯದ ಬಗ್ಗೆ ಮಾಹಿತಿ ನೀಡಿದೆ.

ಸೆಂಚುರಿಯನ್​ನಲ್ಲಿ ಭಾರತದ ವೇಗದ ಬೌಲರ್​ಗಳ ಅಬ್ಬರ ಸೆಂಚುರಿಯನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್ ಕುರಿತು ಮಾತನಾಡುವುದಾದರೆ, ದಕ್ಷಿಣ ಆಫ್ರಿಕಾದ ಮೊದಲ 4 ವಿಕೆಟ್‌ಗಳು ಕೇವಲ 32 ರನ್‌ಗಳಿಗೆ ಪತನಗೊಂಡವು. ಬುಮ್ರಾ ಹೊರತುಪಡಿಸಿ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಕೂಡ ಅತ್ಯುತ್ತಮ ಬೌಲಿಂಗ್ ಮಾಡಿದರು. ಅತ್ಯುತ್ತಮ ಎಸೆತಗಳಲ್ಲಿ ಕೀಗನ್ ಪೀಟರ್ಸನ್ ಮತ್ತು ಏಡೆನ್ ಮಾರ್ಕ್ರಾಮ್ ಅವರನ್ನು ಶಮಿ ಔಟ್ ಮಾಡಿದರು ಮತ್ತು ಸಿರಾಜ್ ರಾಸಿ ವಾನ್ ಡೆರ್ ದುಸಾನ್ ಅವರ ವಿಕೆಟ್ ಪಡೆದರು.

Published On - 5:54 pm, Tue, 28 December 21

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?