Women’s T20 World Cup: ಟಿ20 ವಿಶ್ವಕಪ್ಗೆ ಬಲಿಷ್ಠ ಭಾರತ ಮಹಿಳಾ ತಂಡ ಪ್ರಕಟ: ಸ್ಟಾರ್ ಆಟಗಾರ್ತಿ ಕಮ್‌ಬ್ಯಾಕ್
India squad for Women’s T20 World Cup 2023: ಟಿ20 ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಬಲಿಷ್ಠ ಭಾರತ ಮಹಿಳಾ ತಂಡವನ್ನು ಪ್ರಕಟಿಸಿದೆ. ಇದರ ಜೊತೆಗೆ ದಕ್ಷಿಣ ಆಫ್ರಿಕಾದಲ್ಲಿ ಜನವರಿಯಲ್ಲಿ ಪ್ರಾರಂಭವಾಗುವ ಟಿ20 ತ್ರಿಕೋನ ಸರಣಿಗೂ ಭಾರತ ತಂಡವನ್ನು ಬುಧವಾರ ಆಯ್ಕೆ ಮಾಡಿದೆ.
ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ಫೆಬ್ರವರಿ 10 ರಿಂದ ಆರಂಭವಾಗಲಿರುವ ಮಹತ್ವದ ಟಿ20 ವಿಶ್ವಕಪ್ ಟೂರ್ನಿಗೆ (Womens T20 World Cup) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಬಲಿಷ್ಠ ಭಾರತ ಮಹಿಳಾ ತಂಡವನ್ನು ಪ್ರಕಟಿಸಿದೆ. ಇದರ ಜೊತೆಗೆ ದಕ್ಷಿಣ ಆಫ್ರಿಕಾದಲ್ಲಿ ಜನವರಿಯಲ್ಲಿ ಪ್ರಾರಂಭವಾಗುವ ಟಿ20 ತ್ರಿಕೋನ ಸರಣಿಗೂ ಭಾರತ ತಂಡವನ್ನು ಬುಧವಾರ ಆಯ್ಕೆ ಮಾಡಿದೆ. ತ್ರಿಕೋನ ಸರಣಿ ಮತ್ತು 2023ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಭಾರತ ಮಹಿಳಾ ತಂಡವನ್ನು ಮುನ್ನಡೆಸಲಿದ್ದರೆ, ಸ್ಮೃತಿ ಮಂಧಾನ ಉಪನಾಯಕಿಯಾಗಿದ್ದಾರೆ.
ಕೆಲವೊಂದು ಅಚ್ಚರಿಯ ಆಯ್ಕೆ ಕೂಡ ನಡೆದಿದ್ದು 2022ರಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ ಯುವ ಬ್ಯಾಟರ್ ಜೆಮಿಮಾ ರೊಡ್ರಿಗಸ್, ಇದೀಗ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲದೆ ಬಹು ಸಮಯದಿಂದ ಕಡೆಗಣನೆಗೆ ಗುರಿಯಾಗಿದ್ದ ಅನುಭವಿ ವೇಗದ ಬೌಲರ್ ಶಿಖಾ ಪಾಂಡೆ ಕೂಡ ಕಮ್‌ಬ್ಯಾಕ್ ಮಾಡಿದ್ದಾರೆ.
ICC Awards 2022: ಐಸಿಸಿ ಉದಯೋನ್ಮುಖ ಕ್ರಿಕೆಟಿಗ ನಾಮನಿರ್ದೇಶಿತ ಪಟ್ಟಿ ಪ್ರಕಟ: ಟೀಮ್ ಇಂಡಿಯಾ ಆಟಗಾರನಿಗೆ ಸ್ಥಾನ
2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 10ರಿಂದ ಪ್ರಾರಂಭವಾಗಲಿದೆ. ಭಾರತ ಮಹಿಳಾ ತಂಡ ತನ್ನ ಮೊದಲ ಪಂದ್ಯದಲ್ಲೇ ಬದ್ಧವೈರಿ ಪಾಕಿಸ್ತಾನ ವಿರುದ್ದ ಹೋರಾಟ ನಡೆಸಲಿದೆ. ಫೆಬ್ರವರಿ 12ರಂದು ಇಂಡೋ- ಪಾಕ್ ಕದನ ಏರ್ಪಡಿಸಲಾಗಿದೆ. ಬಳಿಕ ಫೆಬ್ರವರಿ 15 ರಂದು ವೆಸ್ಟ್ ಇಂಡೀಸ್ ವಿರುದ್ಧ ಕಾದಾಟ ನಡೆಸಲಿದೆ. ಫೆಬ್ರವರಿ 18 ರಂದು ಇಂಗ್ಲೆಂಡ್ ವಿರುದ್ಧ ಹೋರಾಟ ನಡೆಸಲಿರುವ ಭಾರತ ಮಹಿಳಾ ತಂಡ, ಫೆಬ್ರವರಿ 20 ರಂದು ಐರ್ಲೆಂಡ್ ವಿರುದ್ಧ ಸೆಣೆಸಾಡಲಿದೆ. ಭಾರತ ಮಹಿಳಾ ತಂಡವು ಇಂಗ್ಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ ಮತ್ತು ಐರ್ಲೆಂಡ್‌ನೊಂದಿಗೆ ಗುಂಪು 2ರಲ್ಲಿದೆ. ಗುಂಪು ಹಂತದ ಕೊನೆಯಲ್ಲಿ ಪ್ರತಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೆಮಿಫೈನಲ್‌ನಲ್ಲಿ ಆಡುತ್ತವೆ. ಫೈನಲ್ ಪಂದ್ಯವು 2023ರ ಫೆಬ್ರವರಿ 26ರಂದು ನಡೆಯಲಿದೆ.
ಇನ್ನು ಆಸೀಸ್ದ್ ವಿರುದ್ಧದ ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಯುವ ವೇಗಿ ಅಂಜಲಿ ಸರವಣಿ ಟಿ20 ವಿಶ್ವಕಪ್‌ಗೂ ಆಯ್ಕೆ ಆಗಿದ್ದಾರೆ. ರೇಣುಕಾ ಸಿಂಗ್ ಮತ್ತು ಪೂಜಾ ವಸ್ತ್ರಕಾರ ತಂಡದಲ್ಲಿರುವ ವೇಗದ ಬೌಲರ್‌ಗಳಾಗಿದ್ದಾರೆ. 2021ರ ಅಕ್ಟೋಬರ್‌ನಲ್ಲಿ ಕೊನೇ ಬಾರಿ ಭಾರತ ಟಿ20 ತಂಡದ ಪರ ಆಡಿದ್ದ ಶಿಖಾ ಪಾಂಡೆ, ಈಗ ವಿಶ್ವಕಪ್ ಟೂರ್ನಿಗೆ ಆಯ್ಕೆ ಆಗಿರುವುದು ಕೊಂಚ ಅಚ್ಚರಿ ತಂದಿದೆ. ತಂಡದ ಬೌಲಿಂಗ್ ವಿಭಾಗದ ಬಲ ಹೆಚ್ಚಿಸಲು ಬಿಸಿಸಿಐ ಅನುಭವಿ ವೇಗಿಗೆ ಮತ್ತ ಮಣೆ ಹಾಕಿದೆ.
ಜನವರಿ 19 ರಿಂದ ಭಾರತ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ತ್ರಿಕೋನ ಟಿ20 ಸರಣಿ ಆರಂಭಗೊಳ್ಳಲಿದೆ. ಇದಕ್ಕೆ ಬಿಸಿಸಿಐ ಪ್ರಕಟಿಸಿರುವ ಭಾರತ ತಂಡ ಇಲ್ಲಿದೆ.
ಹರ್ಮನ್‌ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂದನಾ(ಉಪ ನಾಯಕಿ), ಯಾಸ್ತಿಕಾ ಭಾಟಿಯಾ, ಜೇಮಿಯ ರೋಡ್ರಿಗೆಸ್, ಹರ್ಲೀನ್ ದಿಯೋಲ್, ದೀಪ್ತಿ ಶರ್ಮಾ, ದೇವಿಕಾ ವೈದ್ಯಾ, ರಾಜೇಶ್ವರಿ ಗಾಯಕ್ವಾಡ್, ರಾಧಾ ಯಾದವ್, ರೇಣುಕಾ ಠಾಕೂರ್, ಮೇಘನಾ ಸಿಂಗ್, ಅಂಜಲಿ ಸರ್ವಾನಿ, ಸುಶ್ಮಾ ವರ್ಮಾ, ಅಮನಜೋತ್ ಕೌರ್, ಪೂಜಾ ವಸ್ತ್ರಾರ್ಕರ್, ಶಬ್ಬನೇನಿ ಮೇಘನಾ, ಸ್ನೇಹ ರಾಣ, ಶಿಖಾ ಪಾಂಡೆ.
ಐಸಿಸಿ ಮಹಿಳಾ ಟಿ20 ವಿಶ್ವಕಪ್ಗೆ ಭಾರತ ತಂಡ:
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್) ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರಾಧಾ ಯಾದವ್, ರೇಣುಕಾ ಠಾಕೂರ್, ಅಂಜಲಿ ಸರ್ವಾಣಿ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ.
ಮೀಸಲು: ಸಬ್ಬಿನೇನಿ ಮೇಘನಾ, ಮೇಘನಾ ಸಿಂಗ್, ಸ್ನೇಹ ರಾಣಾ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:08 am, Thu, 29 December 22