AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hockey World Cup 2023: ಹಾಕಿ ವಿಶ್ವಕಪ್​ 2023: ಬಲಿಷ್ಠ ಭಾರತ ತಂಡ ಪ್ರಕಟ

Hockey Men's World Cup 2023: ಹಾಕಿ ವಿಶ್ವಕಪ್‌ನಲ್ಲಿ ಭಾರತ ತಂಡವು ಮೂರು ಬಾರಿ ಪದಕಗಳನ್ನು ಗೆದ್ದುಕೊಂಡಿದೆ. 1971 ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡವು, 1973 ರಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿತ್ತು.

Hockey World Cup 2023: ಹಾಕಿ ವಿಶ್ವಕಪ್​ 2023: ಬಲಿಷ್ಠ ಭಾರತ ತಂಡ ಪ್ರಕಟ
Indian Team
TV9 Web
| Edited By: |

Updated on: Dec 28, 2022 | 9:01 PM

Share

Hockey World Cup 2023: ಭಾರತದಲ್ಲಿ ಜನವರಿ 13 ರಿಂದ ಆರಂಭವಾಗಲಿರುವ ಎಫ್‌ಐಎಚ್‌ ಪುರುಷರ ಹಾಕಿ ವಿಶ್ವಕಪ್‌ಗಾಗಿ 18 ಸದಸ್ಯರ ಟೀಮ್ ಇಂಡಿಯಾವನ್ನು (India Squad) ಪ್ರಕಟಿಸಲಾಗಿದೆ. ಈ ತಂಡವನ್ನು ರಕ್ಷಣಾತ್ಮಕ ಆಟಗಾರ ಹರ್ಮನ್‌ಪ್ರೀತ್ ಸಿಂಗ್ ಮುನ್ನಡೆಸಲಿದ್ದು, ಉಪನಾಯಕರಾಗಿ ಅಮಿತ್ ರೋಹಿದಾಸ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡವನ್ನು ಮಿಡ್‌ಫೀಲ್ಡರ್ ಆಟಗಾರ ಮನ್‌ಪ್ರೀತ್ ಸಿಂಗ್ ಮುನ್ನಡೆಸಿದ್ದರು. ಇದೀಗ ನಾಯಕತ್ವ ಬದಲಾವಣೆಯೊಂದಿಗೆ ಭಾರತ ತಂಡ ವಿಶ್ವಕಪ್​ನಲ್ಲಿ ಕಣಕ್ಕಿಳಿಯುತ್ತಿರುವುದು ವಿಶೇಷ.

ಇನ್ನು ತಂಡದ ಮುನ್ಪಡೆ ಆಟಗಾರರಾಗಿ ಮನ್​ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಭಿಷೇಕ್ ಹಾಗೂ ಸುಖಜೀತ್ ಆಯ್ಕೆಯಾಗಿದ್ದಾರೆ. ಹಾಗೆಯೇ ಗೋಲ್​ ಕೀಪರ್​ಗಳಾಗಿ ಕೃಷ್ಣ ಬಹದ್ದೂರ್ ಪಾಠಕ್ ಹಾಗೂ ಪಿಆರ್ ಶ್ರೀಜೇಶ್ ತಂಡದಲ್ಲಿದ್ದಾರೆ. ರಕ್ಷಣಾತ್ಮಕ ವಿಭಾಗದಲ್ಲಿ ಭಾರತ ತಂಡವು ಬಲಿಷ್ಠವಾಗಿದ್ದು, ನಾಯಕ ಹರ್ಮನ್ ಪ್ರೀತ್ ಸಿಂಗ್, ಉಪನಾಯಕ ಅಮಿತ್ ರೋಹಿದಾಸ್ ಜೊತೆಗೆ ಜರ್ಮನ್​ಪ್ರೀತ್ ಸಿಂಗ್ ಹಾಗೂ ಸುರೇಂದರ್ ಕುಮಾರ್ ಡಿಫೆಂಡರ್​ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಮಿಡ್​ಫೀಲ್ಡರ್​ಗಳಾಗಿ ಮನಪ್ರೀತ್ ಸಿಂಗ್ ಹಾಗೂ ಹಾರ್ದಿಕ್ ಸಿಂಗ್ ತಂಡದ ಬಲವನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ. ಹೀಗಾಗಿಯೇ ಈ ಬಾರಿ ವಿಶ್ವಕಪ್​ ಗೆಲ್ಲುವ ವಿಶ್ವಾಸದಲ್ಲಿದೆ ಭಾರತ ತಂಡ.

ಹಾಕಿ ವಿಶ್ವಕಪ್​​ನಲ್ಲಿ ಭಾರತದ ಸಾಧನೆ:

ಹಾಕಿ ವಿಶ್ವಕಪ್‌ನಲ್ಲಿ ಭಾರತ ತಂಡವು ಮೂರು ಬಾರಿ ಪದಕಗಳನ್ನು ಗೆದ್ದುಕೊಂಡಿದೆ. 1971 ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡವು, 1973 ರಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿತ್ತು. ಹಾಗೆಯೇ 1975 ರಲ್ಲಿ ಜರ್ಮನಿಯಲ್ಲಿ ನಡೆದ ವಿಶ್ವಕಪ್​ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಭಾರತ ತಂಡವು ಆ ಬಳಿಕ ಪ್ರಶಸ್ತಿ ಗೆದ್ದಿಲ್ಲ. ಇದೀಗ ತವರಿನಲ್ಲೇ ಟೂರ್ನಿ ನಡೆಯುತ್ತಿರುವುದರಿಂದ ಭಾರತದ ಮೇಲಿನ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: Team India: ಟೀಮ್ ಇಂಡಿಯಾ ಟಿ20 ತಂಡದಿಂದ 9 ಆಟಗಾರರು ಔಟ್..!

ಭಾರತ ತಂಡದ ವೇಳಾಪಟ್ಟಿ:

ಈ ಬಾರಿಯ ವಿಶ್ವಕಪ್​ನಲ್ಲಿ ಭಾರತ ತಂಡವು ಪೂಲ್ ಡಿ ಯಲ್ಲಿ ಸ್ಥಾನ ಪಡೆದಿದ್ದು, ಇಂಗ್ಲೆಂಡ್, ಸ್ಪೇನ್ ಮತ್ತು ವೇಲ್ಸ್​ ತಂಡಗಳ ವಿರುದ್ಧ ಭಾರತೀಯರು ಕಣಕ್ಕಿಳಿಯಲಿದ್ದಾರೆ.

  • ಜನವರಿ 13: ಭಾರತ vs ಸ್ಪೇನ್ (ರಾತ್ರಿ 7 ಗಂಟೆಗೆ)
  • ಜನವರಿ 15: ಭಾರತ vs ಇಂಗ್ಲೆಂಡ್ (ರಾತ್ರಿ 7 ಗಂಟೆಗೆ)
  • ಜನವರಿ 19: ಭಾರತ vs ವೇಲ್ಸ್ (ಸಂಜೆ 7 ಗಂಟೆಗೆ)

ಭಾರತ ತಂಡ ಹೀಗಿದೆ:

ಗೋಲ್​ ಕೀಪರ್​ಗಳು:-

  • ಕೃಷ್ಣ ಬಹದ್ದೂರ್ ಪಾಠಕ್
  • ಪಿಆರ್ ಶ್ರೀಜೇಶ್

ರಕ್ಷಣಾತ್ಮಕ ಆಟಗಾರರು:-

  • ಜರ್ಮನ್‌ಪ್ರೀತ್ ಸಿಂಗ್
  • ಸುರೇಂದರ್ ಕುಮಾರ್
  • ಹರ್ಮನ್‌ಪ್ರೀತ್ ಸಿಂಗ್ (ನಾಯಕ)
  • ವರುಣ್ ಕುಮಾರ್
  • ಅಮಿತ್ ರೋಹಿದಾಸ್ (ಉಪ ನಾಯಕ)
  • ನಿಲಮ್ ಸಂಜೀಪ್

ಮಿಡ್‌ಫೀಲ್ಡರ್‌ಗಳು:-

  • ಮನಪ್ರೀತ್ ಸಿಂಗ್
  • ಹಾರ್ದಿಕ್ ಸಿಂಗ್
  • ನೀಲಕಂಠ ಶರ್ಮ
  • ಶಂಶೇರ್ ಸಿಂಗ್
  • ವಿವೇಕ್ ಸಾಗರ್ ಪ್ರಸಾದ್
  • ಆಕಾಶದೀಪ್ ಸಿಂಗ್

ಮುನ್ಪಡೆ ಆಟಗಾರರು:-

  • ಮನದೀಪ್ ಸಿಂಗ್
  • ಲಲಿತ್ ಕುಮಾರ್ ಉಪಾಧ್ಯಾಯ
  • ಅಭಿಷೇಕ್
  • ಸುಖಜೀತ್ ಸಿಂಗ್

ಪರ್ಯಾಯ ಆಟಗಾರರು:-

  • ರಾಜಕುಮಾರ್ ಪಾಲ್
  • ಜುಗರಾಜ್ ಸಿಂಗ್.
Follow Us
TV9 Web
TV9 Web

TV9 Kannada

Read More
ಆಸಿಯಾಗೆ ಜೋಡಿ ಆಗುವಾಸೆ, ಪ್ರಶಾಂತ್​​ ಆಸೆಗೆ ಕೊಳ್ಳಿ ಇಟ್ಟ ಕಿಚ್ಚ
ಆಸಿಯಾಗೆ ಜೋಡಿ ಆಗುವಾಸೆ, ಪ್ರಶಾಂತ್​​ ಆಸೆಗೆ ಕೊಳ್ಳಿ ಇಟ್ಟ ಕಿಚ್ಚ
ತಾರಕ್ಕೇರಿದ ಮಾಜಿ ಸಿಎಂ ಜಗನ್-ಸಹೋದರಿ ನಡುವಿನ ಆಸ್ತಿ ವಿವಾದ
ತಾರಕ್ಕೇರಿದ ಮಾಜಿ ಸಿಎಂ ಜಗನ್-ಸಹೋದರಿ ನಡುವಿನ ಆಸ್ತಿ ವಿವಾದ
ನಾವು ಶಿವಭಕ್ತರು, ಶಿವ ದೇವಾಲಯದಲ್ಲಿ ಮದುವೆ: ಐಶ್ವರ್ಯಾ-ಶಿಶಿರ್
ನಾವು ಶಿವಭಕ್ತರು, ಶಿವ ದೇವಾಲಯದಲ್ಲಿ ಮದುವೆ: ಐಶ್ವರ್ಯಾ-ಶಿಶಿರ್
‘ಬಸವ ಮಂಟಪ’ವಿವಾದ: ಲೇಖಕ ರವಿ ಹಂಜ್​​ಗೆ ಶಾಕ್ ಕೊಟ್ಟ ಬೆಳಗಾವಿ ಪೊಲೀಸ್ರು
‘ಬಸವ ಮಂಟಪ’ವಿವಾದ: ಲೇಖಕ ರವಿ ಹಂಜ್​​ಗೆ ಶಾಕ್ ಕೊಟ್ಟ ಬೆಳಗಾವಿ ಪೊಲೀಸ್ರು
ಸರ್ಕಾರಿ ಶಾಲೆಗೆ ಬಿಸಿಯೂಟ ಅಕ್ಕಿ ಪೂರೈಸದ ಪ್ರಕರಣದಲ್ಲಿ ಇಬ್ಬರು ಸಸ್ಪೆಂಡ್
ಸರ್ಕಾರಿ ಶಾಲೆಗೆ ಬಿಸಿಯೂಟ ಅಕ್ಕಿ ಪೂರೈಸದ ಪ್ರಕರಣದಲ್ಲಿ ಇಬ್ಬರು ಸಸ್ಪೆಂಡ್
ಮನವಿ ನೀಡಿದವರ ಬಳಿ ಸಚಿವ ಮಧು ಬಂಗಾರಪ್ಪ ದರ್ಪ: ವಿಡಿಯೋ ವೈರಲ್
ಮನವಿ ನೀಡಿದವರ ಬಳಿ ಸಚಿವ ಮಧು ಬಂಗಾರಪ್ಪ ದರ್ಪ: ವಿಡಿಯೋ ವೈರಲ್
ಬೆಂಗಳೂರು ರೌಡಿ ಶೀಟರ್‌ಗಳಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್
ಬೆಂಗಳೂರು ರೌಡಿ ಶೀಟರ್‌ಗಳಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್
ಚಿನ್ನ ಖರೀದಿಸಬೇಡಿ ಎಂಬ ಕರೆಯನ್ನು ಪಾಲಿಸಿದ ಭಾರತೀಯರಿಗೆ ಮೋದಿ ಮೆಚ್ಚುಗೆ
ಚಿನ್ನ ಖರೀದಿಸಬೇಡಿ ಎಂಬ ಕರೆಯನ್ನು ಪಾಲಿಸಿದ ಭಾರತೀಯರಿಗೆ ಮೋದಿ ಮೆಚ್ಚುಗೆ
ಕೊಚ್ಚಿನ್ ಏರ್​ಪೋರ್ಟ್​ನಲ್ಲಿ ಲೇಖಕ ರವಿ ಹಂಜ್ ವಿಚಾರಣೆ
ಕೊಚ್ಚಿನ್ ಏರ್​ಪೋರ್ಟ್​ನಲ್ಲಿ ಲೇಖಕ ರವಿ ಹಂಜ್ ವಿಚಾರಣೆ
ಬರದಿಂದ ರೈತರು ಸಂಕಷ್ಟದಲ್ಲಿರುವಾಗ ಗದಗ ಡಿಸಿ ನಿವಾಸದಲ್ಲಿ ಮೋಜು-ಮಸ್ತಿ
ಬರದಿಂದ ರೈತರು ಸಂಕಷ್ಟದಲ್ಲಿರುವಾಗ ಗದಗ ಡಿಸಿ ನಿವಾಸದಲ್ಲಿ ಮೋಜು-ಮಸ್ತಿ