AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023 ರಿಂದ 5,120 ಕೋಟಿ ರೂ. ಗಳಿಸಿದ ಬಿಸಿಸಿಐ

BCCI - IPL: ಐಪಿಎಲ್ 2022ರ ಮೂಲಕ 2,367 ಕೋಟಿ ರೂ. ಲಾಭಗಳಿಸಿದ್ದ ಬಿಸಿಸಿಐ ಐಪಿಎಲ್ 2023 ರಿಂದ 5,120.13 ಕೋಟಿ ರೂ.ಗಳ ಹೆಚ್ಚುವರಿ ಆದಾಯಗಳಿಸಿದೆ. ಇದು ಕಳೆದ 2022ಕ್ಕೆ ಹೋಲಿಸಿದರೆ ಶೇ. 116 ರಷ್ಟು ಹೆಚ್ಚಳ. ಹಾಗೆಯೇ ಬಿಸಿಸಿಐನ ವಾರ್ಷಿಕ ಒಟ್ಟು ಆದಾಯದಲ್ಲೂ ಮಹತ್ತರ ಬದಲಾವಣೆಯಾಗಿದೆ.

IPL 2023 ರಿಂದ 5,120 ಕೋಟಿ ರೂ. ಗಳಿಸಿದ ಬಿಸಿಸಿಐ
BCCI - IPL
ಝಾಹಿರ್ ಯೂಸುಫ್
|

Updated on:Aug 21, 2024 | 10:26 AM

Share

ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ತನ್ನ 2022-23ರ ವಾರ್ಷಿಕ ಹಣಕಾಸು ವರದಿಯನ್ನು ಪ್ರಕಟಿಸಿದೆ. ಈ ಆದಾಯ ವರದಿಯಲ್ಲಿ ಕಳೆದ ವರ್ಷ ಒಟ್ಟು 11 ಸಾವಿರ ಕೋಟಿ ರೂ.ಗೂ ಅಧಿಕ ಆದಾಯ ಗಳಿಸಿರುವುದಾಗಿ ಬಿಸಿಸಿಐ ತಿಳಿಸಿದೆ. ಇದರಲ್ಲಿ ಐಪಿಎಲ್ 2023ರ ಮೂಲಕವೇ ಭಾರತೀಯ ಕ್ರಿಕೆಟ್ ಮಂಡಳಿ 5,120.13 ಕೋಟಿ ರೂ.ಗಳ ಹೆಚ್ಚುವರಿ ಆದಾಯಗಳಿಸಿದೆ.

ಐಪಿಎಲ್ 2022 ರ ಆದಾಯ 2,367 ಕೋಟಿ ರೂ.ಗೆ ಹೋಲಿಸಿದರೆ ಇದು ಶೇ. 116 ರಷ್ಟು ಹೆಚ್ಚಳವಾಗಿದೆ. ಹಾಗೆಯೇ ಬಿಸಿಸಿಐನ 2022-23 ವಾರ್ಷಿಕ ವರದಿಯ ಪ್ರಕಾರ, IPL 2023 ರ ಒಟ್ಟು ಆದಾಯವು ವರ್ಷದಿಂದ ವರ್ಷಕ್ಕೆ 11,769 ಕೋಟಿ ರೂ.ಗೆ ಜಿಗಿದಿದೆ.

ಐಪಿಎಲ್ ಹಾಗೂ ಟೀಮ್ ಇಂಡಿಯಾದ ಅನೇಕ ಪ್ರಾಯೋಜಕರಿಂದ ಪಡೆದ ಹಣವು ಬಿಸಿಸಿಐ ಆದಾಯ ಏರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಇದರಲ್ಲಿ ಗರಿಷ್ಠ ಆದಾಯವನ್ನು ಮಂಡಳಿಯು ಪ್ರಸಾರ ಹಕ್ಕುಗಳಿಂದ ಗಳಿಸುತ್ತದೆ ಎಂಬುದು ಉಲ್ಲೇಖಾರ್ಹ.

ಏಕೆಂದರೆ 2022ರಲ್ಲಿ ಐಪಿಎಲ್‌ ಪ್ರಸಾರ ಹಕ್ಕುಗಳನ್ನು ಬಿಸಿಸಿಐ 48390 ಕೋಟಿ ರೂ.ಗೆ ಮಾರಾಟ ಮಾಡಿತ್ತು. ಈ ಒಪ್ಪಂದದಿಂದಾಗಿ ಐಪಿಎಲ್​ 2023 ರಲ್ಲಿ ಬಿಸಿಸಿಐ 8744 ಕೋಟಿ ರೂ. ಗಳಿಸಿದೆ. ಇದುವೇ ಐಪಿಎಲ್ 2022 ರಲ್ಲಿ ರೂ 3780 ಕೋಟಿ ಆಗಿತ್ತು. ಅಂದರೆ ಪ್ರಸಾರ ಹಕ್ಕುಗಳಿಂದಲೇ ಮಂಡಳಿಯ ಒಟ್ಟು ಗಳಿಕೆ ಶೇ.131ರಷ್ಟು ಹೆಚ್ಚಾಗಿದೆ.

ಇನ್ನು ವರ್ಷದಿಂದ ವರ್ಷಕ್ಕೆ ಆದಾಯವನ್ನು ದ್ವಿಗುಣಗೊಳಿಸುತ್ತಿರುವ ಬಿಸಿಸಿಐಯ ಒಟ್ಟಾರೆ ವೆಚ್ಚವು 6648 ಕೋಟಿ ರೂ.ಗೆ ಏರಿಕೆಯಾಗಿದೆ. ಇದಾಗ್ಯೂ ಭಾರತೀಯ ಮಂಡಳಿಯು ಬ್ಯಾಂಕ್‌ ಖಾತೆಯಲ್ಲಿ 16493.2 ಕೋಟಿ ರೂ. ಎಫ್​ಡಿ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹಾಗೆಯೇ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು 2023 ಮತ್ತು 2024ರ ಅವಧಿಯಲ್ಲಿ ಬಿಸಿಸಿಐ 2,038 ಕೋಟಿ ರೂ ಜಿಎಸ್‌ಟಿ ಪಾವತಿಸಿದೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಿದ್ದರು.

ಇದೀಗ ಐಪಿಎಲ್ ಸೀಸನ್-18 ಕ್ಕಾಗಿ ಸಿದ್ಧತೆಯಲ್ಲಿರುವ ಬಿಸಿಸಿಐ ಈ ಬಾರಿ ಕೂಡ ಪ್ರಾಯೋಕತ್ವದಿಂದ ಬೃಹತ್ ಮೊತ್ತವನ್ನು ನಿರೀಕ್ಷಿಸುತ್ತಿದೆ. ಅದರಲ್ಲೂ ಈ ಬಾರಿ ಪಂದ್ಯಗಳ ಸಂಖ್ಯೆಯು ಹೆಚ್ಚಳವಾಗುವ ಸಾಧ್ಯತೆಯಿದೆ. ಅಂದರೆ ಮಾಧ್ಯಮ ಪ್ರಸಾರ ಒಪ್ಪಂದಗಳ ಪ್ರಕಾರ ಐಪಿಎಲ್ 2025 ರಲ್ಲಿ ಒಟ್ಟು 84 ಪಂದ್ಯಗಳನ್ನು ಆಯೋಜಿಸುವುದಾಗಿ ಬಿಸಿಸಿಐ ತಿಳಿಸಿತ್ತು.

ಇದನ್ನೂ ಓದಿ: IPL 2025: LSG ತಂಡಕ್ಕೆ ಝಹೀರ್ ಖಾನ್..?

ಅಂದರೆ ಕಳೆದ ಬಾರಿ ಒಟ್ಟು 74 ಪಂದ್ಯಗಳನ್ನಾಡಿದ್ದರೆ, ಈ ಸಲ 10 ಪಂದ್ಯಗಳ ಸಂಖ್ಯೆ ಹೆಚ್ಚಳವಾಗಲಿದೆ. ಇತ್ತ ಮ್ಯಾಚ್​ಗಳ ಸಂಖ್ಯೆಯ ಹೆಚ್ಚಳದೊಂದಿಗೆ ಬಿಸಿಸಿಐ ಕೂಡ ತನ್ನ ಪ್ರಾಯೋಜಕರಿಂದ ಹೆಚ್ಚಿನ ಮೊತ್ತವನ್ನು ನಿರೀಕ್ಷಿಸುತ್ತಿದ್ದಾರೆ. ಹೀಗಾಗಿ ಬಿಸಿಸಿಐನ ಮುಂದಿನ ವರ್ಷದ ಆದಾಯದಲ್ಲಿ ಮತ್ತಷ್ಟು ಹೆಚ್ಚಳ ಕಂಡು ಬಂದರೂ ಅಚ್ಚರಿಪಡಬೇಕಿಲ್ಲ.

Published On - 10:23 am, Wed, 21 August 24

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?