ಏಕೈಕ ಆಟಗಾರನಿಗೆ ವಿನಾಯಿತಿ ನೀಡಿ ಮಿಕ್ಕವರಿಗೆ ಖಡಕ್ ಆದೇಶ ಹೊರಡಿಸಿದ ಬಿಸಿಸಿಐ
Indian Cricket Stars Must Play Vijay Hazare: ದೇಶಿ ಕ್ರಿಕೆಟ್‌ಗೆ ಮೆರಗು ತರಲು ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದೆ. ಅಂತರರಾಷ್ಟ್ರೀಯ ಪಂದ್ಯಗಳ ನಡುವಿನ ಅಂತರದಲ್ಲಿ ಟೀಂ ಇಂಡಿಯಾದ ಎಲ್ಲಾ ಆಟಗಾರರು ದೇಶಿ ಟೂರ್ನಿಗಳಲ್ಲಿ, ವಿಶೇಷವಾಗಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಕನಿಷ್ಠ ಎರಡು ಪಂದ್ಯಗಳನ್ನು ಆಡಬೇಕೆಂದು ಕಡ್ಡಾಯಗೊಳಿಸಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಹಲವು ಸ್ಟಾರ್ ಆಟಗಾರರು ಇನ್ನು ಮುಂದೆ ತಮ್ಮ ರಾಜ್ಯ ತಂಡಗಳ ಪರ ಆಡಲಿದ್ದಾರೆ. ಇದು ದೇಶಿ ಕ್ರಿಕೆಟ್‌ಗೆ ಹೊಸ ಮೆರುಗು ತರಲಿದೆ.

ಕಳೆಗುಂದಿದ್ದ ದೇಶಿಯ ಕ್ರಿಕೆಟ್‌ಗೆ ಮೆರಗು ತರವು ಸಲುವಾಗಿ ಬಿಸಿಸಿಐ (BCCI) ಕೆಲವು ದಿನಗಳ ಹಿಂದೆ ಸೂಕ್ತ ಕ್ರಮಕೈಗೊಂಡಿತ್ತು. ಅದೆನೆಂದರೆ ರಾಷ್ಟ್ರೀಯ ತಂಡದ ಭಾಗವಾಗಿರದ ಹಾಗೂ ಅಂತರರಾಷ್ಟ್ರೀಯ ಪಂದ್ಯಗಳು ನಡೆಯದೆ ಇರುವ ಸಮಯದಲ್ಲಿ ಟೀಂ ಇಂಡಿಯಾದ ಆಟಗಾರರೆಲ್ಲರೂ ದೇಶಿ ಟೂರ್ನಿಯಲ್ಲಿ ಆಡಲೇಬೇಕು ಎನ್ನುವುದನ್ನು ಕಡ್ಡಾಯಗೊಳಿಸಿತ್ತು. ಇದರ ಪರಿಣಾಮವಾಗಿ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಹಲವು ವರ್ಷಗಳ ಬಳಿಕ ದೇಶಿ ಕ್ರಿಕೆಟ್ನಲ್ಲಿ ಆಡುವಂತ್ತಾಗಿದೆ. ಇದೀಗ ಈ ಇಬ್ಬರು ಆಟಗಾರರು ಮಾತ್ರವಲ್ಲದೆ ಪ್ರಸ್ತುತ ಭಾರತೀಯ ತಂಡದ ಭಾಗವಾಗಿರುವ ಎಲ್ಲಾ ಆಟಗಾರರು ಡಿಸೆಂಬರ್ 24 ರಿಂದ ಪ್ರಾರಂಭವಾಗುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಕನಿಷ್ಠ ಎರಡು ಏಕದಿನ ಪಂದ್ಯಗಳನ್ನು ಆಡುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ.
ಎಲ್ಲಾ ಆಟಗಾರರಿಗೂ ಇದು ಕಡ್ಡಾಯ
ವಾಸ್ತವವಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟಿ20 ಪಂದ್ಯ (ಡಿಸೆಂಬರ್ 19) ಮತ್ತು ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ (ಜನವರಿ 11, 2026) ನಡುವೆ ಮೂರು ವಾರಗಳಿಗಿಂತ ಹೆಚ್ಚು ಅಂತರವಿದ್ದು, ಎಲ್ಲಾ ಹಿರಿಯ ಆಟಗಾರರು ದೇಶೀಯ ಕ್ರಿಕೆಟ್ ಆಡಬೇಕೆಂಬ ನಿಯಮವನ್ನು ಮಂಡಳಿ ಜಾರಿಗೆ ತಂದಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಈ ಸೂಚನೆ ಹೊರಡಿಸಿದೆ. ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿ ಸೋಲಿನ ನಂತರ, ಎಲ್ಲಾ ಸ್ವರೂಪಗಳಲ್ಲಿ ದೇಶೀಯ ಕ್ರಿಕೆಟ್‌ಗೆ ಹೆಚ್ಚಿನ ಒತ್ತು ನೀಡುವಂತೆ ಶಿಫಾರಸು ಮಾಡಿದೆ.
ಸ್ಟಾರ್ ಆಟಗಾರರು ದೇಶಿ ಅಂಗಳದಲ್ಲಿ
ಈ ನಿಯಮದಡಿಯಲ್ಲಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಹಿರಿಯ ಆಟಗಾರರು ತಮ್ಮ ರಾಜ್ಯ ತಂಡಗಳಿಗಾಗಿ ಆಡಲಿದ್ದಾರೆ. ಕೊಹ್ಲಿ ಈಗಾಗಲೇ ತಮ್ಮ ಲಭ್ಯತೆಯನ್ನು ದೃಢಪಡಿಸಿದ್ದಾರೆ. ಆದಾಗ್ಯೂ, ಶ್ರೇಯಸ್ ಅಯ್ಯರ್ ಅವರಿಗೆ ವಿನಾಯಿತಿ ನೀಡಲಾಗಿದೆ. ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದರು. ಹೀಗಾಗಿ ಅವರು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದು, ಅದಕ್ಕಾಗಿಯೇ ಬಿಸಿಸಿಐ ಅವರಿಗೆ ವಿಶ್ರಾಂತಿ ನೀಡಿದೆ.
ಐಸಿಸಿ ಮನವಿಗೂ ನಿಲುವು ಬದಲಿಸದ ಬಿಸಿಸಿಐ; ಪಾಕ್ ನಾಯಕನೊಂದಿಗೆ ಕೈಕುಲುಕದ ಟೀಂ ಇಂಡಿಯಾ ನಾಯಕ
ಕನಿಷ್ಠ ಎರಡು ಪಂದ್ಯಗಳು
‘ಡಿಸೆಂಬರ್ 24 ರಿಂದ ನ್ಯೂಜಿಲೆಂಡ್ ಏಕದಿನ ಸರಣಿಯ ಆರಂಭದವರೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಆರು ಸುತ್ತುಗಳಿವೆ. ಯಾವ ಎರಡು ಸುತ್ತುಗಳಲ್ಲಿ ಆಡಬೇಕೆಂದು ಆಟಗಾರರು ಮತ್ತು ಅವರ ರಾಜ್ಯ ಸಂಘಗಳು ನಿರ್ಧರಿಸುತ್ತವೆ. ಆದರೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವುದು ಐಚ್ಛಿಕವಲ್ಲ ಎಂದು ಆಟಗಾರರಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ, ಅಂದರೆ ಆಟಗಾರರು ತಲಾ ಕನಿಷ್ಠ ಎರಡು ಪಂದ್ಯಗಳನ್ನು ಆಡಬೇಕಾಗುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಹಿರಿಯ ಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
