AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಐಪಿಎಲ್ ನೋಡಲು ಒಂದೇ ಚಾನೆಲ್ ಸಾಕಾಗಲ್ಲ, ಬಿಸಿಸಿಐ ಭರ್ಜರಿ ಪ್ಲ್ಯಾನ್!

ಈ ಬಾರಿ ಡಿಜಿಟಲ್ ಪ್ರಸಾರ ಮತ್ತು ದೂರದರ್ಶನ ಪ್ರಸಾರ ಹಕ್ಕುಗಳನ್ನೂ ಬಿಸಿಸಿಐ ಪ್ರತ್ಯೇಕಿಸಲು ಹೊರಟಿದೆ. ಇಲ್ಲಿಯವರೆಗೆ ಇಬ್ಬರೂ ಒಟ್ಟಿಗೆ ಬಿಡ್ ಮಾಡುತ್ತಿದ್ದರು

IPL 2022: ಐಪಿಎಲ್ ನೋಡಲು ಒಂದೇ ಚಾನೆಲ್ ಸಾಕಾಗಲ್ಲ, ಬಿಸಿಸಿಐ ಭರ್ಜರಿ ಪ್ಲ್ಯಾನ್!
BCCI
TV9 Web
| Edited By: |

Updated on: Mar 01, 2022 | 5:50 PM

Share

ಇಂಡಿಯನ್ ಪ್ರೀಮಿಯರ್ ಲೀಗ್ 2022 (IPL 2022) ಸೀಸನ್​ಗಾಗಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗಾಗಲೇ ದಿನಾಂಕಗಳು ಮತ್ತು ಹೊಸ ಸ್ವರೂಪವನ್ನು ಪ್ರಕಟಿಸಿದೆ. ಮತ್ತೊಂದೆಡೆ ಮುಂದಿನ ಸೀಸನ್​ಗಳಿಗಾಗಿ ಬಿಸಿಸಿಐ ಐಪಿಎಲ್ ಪ್ರಸಾರ ಹಕ್ಕುಗಳ ಮಾರಾಟಕ್ಕೆ ಮುಂದಾಗಿದೆ. ಪ್ರಸ್ತುತ ಸೀಸನ್ ಅನ್ನು ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. ಆದರೆ 2023ರ ಐಪಿಎಲ್​ ಸೀಸನ್​ಗಳ ಪ್ರಸಾರ ಹಕ್ಕು ಮಾರಾಟಕ್ಕಾಗಿ ಬಿಸಿಸಿಐ ಭರ್ಜರಿ ಪ್ಲ್ಯಾನ್​ಗಳನ್ನು ರೂಪಿಸುತ್ತಿದೆ. ಪ್ರಸ್ತುತ ಮಾಹಿತಿ ಪ್ರಕಾರ, ಮುಂಬರುವ ಐಪಿಎಲ್ ಸೀಸನ್​ ಪಂದ್ಯಗಳು 2-3 ಚಾನೆಲ್‌ಗಳಲ್ಲಿ ಪ್ರಸಾರವಾಗುವ ಸಾಧ್ಯತೆಯಿದೆ.

2008 ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ, ಪ್ರತಿ ಸೀಸನ್ ಪಂದ್ಯಾವಳಿಯನ್ನು ಪ್ರದರ್ಶಿಸಲು ಕೇವಲ ಒಬ್ಬ ಪ್ರಸಾರಕರು ಮಾತ್ರ ಅರ್ಹರಾಗಿದ್ದಾರೆ. ಆರಂಭಿಕ ವರ್ಷಗಳಲ್ಲಿ, ಸೋನಿ ನೆಟ್‌ವರ್ಕ್ IPL ಅನ್ನು ಪ್ರಸಾರ ಮಾಡುತ್ತಿತ್ತು. ಆದರೆ ಕಳೆದ ಕೆಲವು ಸೀಸನ್​ಗಳಿಂದ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಪ್ರಸಾರದ ಹಕ್ಕುಗಳನ್ನು ಹೊಂದಿದೆ. ಪ್ರಸ್ತುತ ಐಪಿಎಲ್ ಪ್ರಸಾರದ ಅವಧಿಯು ಈ ಸೀಸನ್‌ನೊಂದಿಗೆ ಕೊನೆಗೊಳ್ಳಲಿದೆ. ಮುಂದಿನ ಸೀಸನ್‌ಗಾಗಿ ಹೊಸ ಮಾಧ್ಯಮ ಹಕ್ಕುಗಳ ಪ್ರಕ್ರಿಯೆಯನ್ನು ಮಂಡಳಿಯು ಪ್ರಾರಂಭಿಸಲಿದೆ. ಈ ಮೂಲಕ ದೊಡ್ಡ ಮೊತ್ತದ ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ ಬಿಸಿಸಿಐ.

ಹೆಚ್ಚು ಚಾನಲ್‌ಗಳು, ಹೆಚ್ಚು ಗಳಿಕೆ: ಕ್ರಿಕ್‌ಬಜ್‌ನ ವರದಿಯ ಪ್ರಕಾರ , ಈ ಬಾರಿ ಕೇವಲ ಒಬ್ಬ ಪ್ರಸಾರಕನಿಗೆ ಎಲ್ಲಾ ಹಕ್ಕುಗಳನ್ನು ನೀಡುವ ಬದಲು, ಭಾರತೀಯ ಕ್ರಿಕೆಟ್ ಮಂಡಳಿಯು ಪಂದ್ಯಗಳ ಪ್ರಸಾರವನ್ನು 3-4 ಬಿಡ್‌ದಾರರಿಗೆ ಸಮಾನ ಅಥವಾ ವಿಭಿನ್ನ ಪ್ರಮಾಣದಲ್ಲಿ ವಿತರಿಸುವ ಸಾಧ್ಯತೆಯಿದೆ. ಈ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವ ಮೂಲಕ ಹೊಸ ಒಪ್ಪಂದದಿಂದ 30 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಆದಾಯ ಸಿಗಲಿದೆ ಎಂದು ಮಂಡಳಿ ನಿರೀಕ್ಷಿಸಿದೆ. ವರದಿಯ ಪ್ರಕಾರ, ಸ್ಟಾರ್, ಸೋನಿ, ರಿಲಯನ್ಸ್ ಗ್ರೂಪ್ (ಚಾನೆಲ್ ಅನ್ನು ಇನ್ನೂ ಪ್ರಾರಂಭಿಸಲಾಗಿಲ್ಲ) ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋ ಹೊಸ ಒಪ್ಪಂದಕ್ಕೆ ಬಿಡ್ ಮಾಡಲಿದೆ. ಆದರೆ ಅವುಗಳಲ್ಲಿ ಯಾವುದಾದರೂ ಒಂದು ಎಲ್ಲಾ ಹಕ್ಕುಗಳನ್ನು ಪಡೆಯುವ ಬದಲು, ಎಲ್ಲರಿಗೂ ಸ್ವಲ್ಪ ಪಾಲು ನೀಡುವ ಬಗ್ಗೆ ಬಿಸಿಸಿಐ ಪ್ಲ್ಯಾನ್ ರೂಪಿಸುತ್ತಿದೆ.

ಪ್ರಸ್ತುತ, ಇಂಗ್ಲೆಂಡ್‌ನ ಪ್ರಸಿದ್ಧ ಫುಟ್‌ಬಾಲ್ ಪಂದ್ಯಾವಳಿ ಪ್ರೀಮಿಯರ್ ಲೀಗ್‌ನಲ್ಲಿ ಅಂತಹ ಸಂಪ್ರದಾಯವಿದೆ. ಇದರಲ್ಲಿ 3-4 ವಿಭಿನ್ನ ಪ್ರಸಾರಕರು ವಿಭಿನ್ನ ಪಂದ್ಯಗಳನ್ನು ಪ್ರಸಾರ ಮಾಡುವ ಹಕ್ಕುಗಳನ್ನು ಹೊಂದಿದ್ದಾರೆ. ಮಂಡಳಿಯೂ ಇದೇ ಮಾದರಿ ಅನುಸರಿಸುವ ಬಗ್ಗೆ ಒಲವು ತೋರುತ್ತಿದೆ. ಆದರೆ ಬಿಡ್ಡಿಂಗ್ ಪ್ರಸಾರಕರು ಇದಕ್ಕೆ ಸಿದ್ಧರಾಗುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಡಿಜಿಟಲ್ ಮತ್ತು ಟಿವಿ ಪ್ರಸಾರ: ಅಷ್ಟೇ ಅಲ್ಲ, ಈ ಬಾರಿ ಡಿಜಿಟಲ್ ಪ್ರಸಾರ ಮತ್ತು ದೂರದರ್ಶನ ಪ್ರಸಾರ ಹಕ್ಕುಗಳನ್ನೂ ಬಿಸಿಸಿಐ ಪ್ರತ್ಯೇಕಿಸಲು ಹೊರಟಿದೆ. ಇಲ್ಲಿಯವರೆಗೆ ಇಬ್ಬರೂ ಒಟ್ಟಿಗೆ ಬಿಡ್ ಮಾಡುತ್ತಿದ್ದರು. ಅದರಂತೆ ಈ ತನಕ ಈ ಹಕ್ಕನ್ನು ಸ್ಟಾರ್‌ ನೆಟ್​ವರ್ಕ್​ ಹೊಂದಿತ್ತು. ಅದರಂತೆ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್ ಹಾಟ್‌ಸ್ಟಾರ್‌ನಲ್ಲಿ ಪಂದ್ಯಗಳನ್ನು ಪ್ರದರ್ಶಿಸಲಾಗುತ್ತಿತ್ತು. ಆದರೆ ಈ ಬಾರಿ ಡಿಜಿಟಲ್ ಹಾಗೂ ಟಿವಿ ರೈಟ್ಸ್​ ಅನ್ನು ಪ್ರತ್ಯೇಕವಾಗಿ ಬಿಡ್ ಮಾಡಲು ಬಿಸಿಸಿಐ ಮುಂದಾಗಿದೆ. ಒಟ್ಟಿನಲ್ಲಿ ಬಿಸಿಸಿಐ ಮುಂಬರುವ ಐಪಿಎಲ್ ಸೀಸನ್​ ಪ್ರಸಾರ ಹಕ್ಕುಗಳ ಮಾರಾಟಕ್ಕಾಗಿ ವಿಭಿನ್ನ ಪ್ರಯೋಗಕ್ಕೆ ಮುಂದಾಗಿದ್ದು, ಇದು ಫಲ ನೀಡಲಿದೆಯಾ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(BCCI mulling over multiple broadcasters for IPL from next years in new Media rights deal)

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?