BCCI Naman Awards: ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪಡೆದ ಕ್ರಿಕೆಟಿಗರ ಸಂಪೂರ್ಣ ಪಟ್ಟಿ ಇಲ್ಲಿದೆ
BCCI Naman Awards 2025: ಬಿಸಿಸಿಐ ಪ್ರತಿ ವರ್ಷ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ನಮನ್ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಈ ಬಾರಿ ಒಟ್ಟು 27 ಪ್ರಶಸ್ತಿಗಳನ್ನು ನೀಡಲಾಗಿದ್ದು, ಈ ಮೂಲಕ ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರನ್ನು ಗೌರವಿಸಿದೆ. ಈ ಪ್ರಶಸ್ತಿ ಪಡೆದ ಭಾರತೀಯ ಕ್ರಿಕೆಟಿಗರ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ..

Team India
ಮುಂಬೈನಲ್ಲಿ ಶನಿವಾರ (ಫೆಬ್ರವರಿ 1) ನಡೆದ ಸಮಾರಂಭದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ವಾರ್ಷಿಕ ನಮನ್ ಪ್ರಶಸ್ತಿಗಳನ್ನು ಪ್ರಧಾನ ಮಾಡಿದೆ. ಈ ಸಮಾರಂಭದಲ್ಲಿ ದಿಗ್ಗಜ ಸಚಿನ್ ತೆಂಡೂಲ್ಕರ್‌ಗೆ ಪ್ರತಿಷ್ಠಿತ ಕರ್ನಲ್ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇನ್ನು ಭಾರತ ಟೆಸ್ಟ್ ತಂಡದ ಉಪನಾಯಕ ಜಸ್ಪ್ರೀತ್ ಬುಮ್ರಾ, ಟೀಮ್ ಇಂಡಿಯಾ ಬ್ಯಾಟರ್ ಸ್ಮೃತಿ ಮಂಧಾನ ಸೇರಿದಂತೆ ಹಲವರಿಗೆ ಪ್ರಶಸ್ತಿ ನೀಡಲಾಯಿತು. ಈ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ಕೆಳಗಿನಂತಿದೆ…
2025ರ ನಮನ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ:
- ಮಹಿಳಾ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ ವಿಕೆಟ್ ಪಡೆದ ಪ್ರಶಸ್ತಿ – ದೀಪ್ತಿ ಶರ್ಮಾ
- ಮಹಿಳಾ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ ರನ್‌ಗಳಿಸಿದ ಪ್ರಶಸ್ತಿ – ಸ್ಮೃತಿ ಮಂಧಾನ
- ಅತ್ಯುತ್ತಮ ಅಂತಾರಾಷ್ಟ್ರೀಯ ಪಾದಾರ್ಪಣೆ (ಮಹಿಳೆ) – ಆಶಾ ಸೊಬ್ನಾ
- ಅತ್ಯುತ್ತಮ ಅಂತಾರಾಷ್ಟ್ರೀಯ ಪದಾರ್ಪಣೆ (ಪುರುಷ) – ಸರ್ಫರಾಝ್ ಖಾನ್
- ಅತ್ಯುತ್ತಮ ಅಂತಾರಾಷ್ಟ್ರೀಯ ಆಟಗಾರ್ತಿ – ಸ್ಮೃತಿ ಮಂಧಾನ
- ಅತ್ಯುತ್ತಮ ಅಂತಾರಾಷ್ಟ್ರೀಯ ಆಟಗಾರ (ಪಾಲಿ ಉಮ್ರಿಗರ್ ಪ್ರಶಸ್ತಿ) – ಜಸ್ಪ್ರೀತ್ ಬುಮ್ರಾ
- ಬಿಸಿಸಿಐ ವಿಶೇಷ ಪ್ರಶಸ್ತಿ – ರವಿಚಂದ್ರನ್ ಅಶ್ವಿನ್
- ಕರ್ನಲ್ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿ – ಸಚಿನ್ ತೆಂಡೂಲ್ಕರ್
- ದೇಶೀಯ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಪ್ರದರ್ಶನ – ಮುಂಬೈ ಕ್ರಿಕೆಟ್ ಸಂಸ್ಥೆ
- ಅತ್ಯುತ್ತಮ ಮಹಿಳಾ ದೇಶೀಯ ಆಟಗಾರ್ತಿ (ಜೂನಿಯರ್) – ಈಶ್ವರಿ ಅವಸರೆ (ಮಹಾರಾಷ್ಟ್ರ)
- ಅತ್ಯುತ್ತಮ ಮಹಿಳಾ ದೇಶೀಯ ಆಟಗಾರ್ತಿ- ಪ್ರಿಯಾ ಮಿಶ್ರಾ (ದೆಹಲಿ)
- U16 ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ – ಹೇಮಚೂಡೇಶನ್ ಜೆಗನಾಥನ್ (ತಮಿಳುನಾಡು)
- U16 ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ – ಲಕ್ಷ ರಾಯಚಂದನಿ (ಉತ್ತರಾಖಂಡ)
- U19 ಕೂಚ್ ಬೆಹಾರ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ- ವಿಷ್ಣು ಭಾರದ್ವಾಜ್ (ಮಧ್ಯಪ್ರದೇಶ)
- U19 ಕೂಚ್ ಬೆಹಾರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ- ಕಾವ್ಯಾ ಟಿಯೋಟಿಯಾ (ಉತ್ತರ ಪ್ರದೇಶ)
- U23 CK ನಾಯುಡು ಟ್ರೋಫಿ (ಪ್ಲೇಟ್ ಗ್ರೂಪ್) ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಟಗಾರ- ನೀಜೆಖೋ ರುಪ್ರಿಯೊ (ನಾಗಲ್ಯಾಂಡ್)
- U23 CK ನಾಯುಡು ಟ್ರೋಫಿ (ಪ್ಲೇಟ್ ಗ್ರೂಪ್) ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ- ಹೇಮ್ ಚೆಟ್ರಿ (ನಾಗಲ್ಯಾಂಡ್)
- U23 CK ನಾಯುಡು ಟ್ರೋಫಿ (ಎಲೈಟ್ ಗ್ರೂಪ್) ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ- P. ವಿದ್ಯುತ್ (ತಮಿಳುನಾಡು)
- U23 CK ನಾಯುಡು ಟ್ರೋಫಿ (ಎಲೈಟ್ ಗ್ರೂಪ್) ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ- ಅನೀಶ್ ಕೆವಿ (ಕರ್ನಾಟಕ)
- ರಣಜಿ ಟ್ರೋಫಿಯಲ್ಲಿ ಅತ್ಯಧಿಕ ವಿಕೆಟ್ ಆಟಗಾರ(ಪ್ಲೇಟ್ ಗ್ರೂಪ್) – ಮೋಹಿತ್ ಜಾಂಗ್ರಾ (ಮಿಜೋರಾಂ)
- ರಣಜಿ ಟ್ರೋಫಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಟಗಾರ (ಎಲೈಟ್ ಗ್ರೂಪ್) – ತನಯ್ ತ್ಯಾಗರಾಜನ್ (ಹೈದರಾಬಾದ್)
- ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ (ಪ್ಲೇಟ್ ಗ್ರೂಪ್) – ಅಗ್ನಿ ಚೋಪ್ರಾ (ಮಿಜೋರಾಂ)
- ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ (ಎಲೈಟ್ ಗ್ರೂಪ್) – ರಿಕಿ ಭುಯಿ (ಆಂಧ್ರ ಪ್ರದೇಶ)
- ದೇಶೀಯ ಸೀಮಿತ ಓವರ್‌ಗಳ ಸ್ಪರ್ಧೆಗಳಲ್ಲಿ ಅತ್ಯುತ್ತಮ ಆಲ್‌ರೌಂಡರ್ ಪ್ರಶಸ್ತಿ – ಶಶಾಂಕ್ ಸಿಂಗ್ (ಛತ್ತೀಸ್‌ಗಢ)
- ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಆಲ್‌ರೌಂಡರ್ ಪ್ರಶಸ್ತಿ – ತನುಷ್ ಕೋಟ್ಯಾನ್ (ಮುಂಬೈ)
- ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಅಂಪೈರ್ – ಅಕ್ಷಯ್ ಟೋಟ್ರೆ
Published On - 7:38 am, Sun, 2 February 25