ಟೀಮ್ ಇಂಡಿಯಾ ಮತ್ತು ಕನ್ಕಶನ್ ಸಬ್ ವಿವಾದ: ಚಹಲ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದಿದ್ದ ಭಾರತ..!

Concussion Substitute Controversy: ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶಿವಂ ದುಬೆ ಬದಲಿಯಾಗಿ ಕನ್ಕಶನ್ ಸಬ್ ಆಗಿ ಕಣಕ್ಕಿಳಿಸಲು ಟೀಮ್ ಇಂಡಿಯಾ ಮುಂದೆ ಮತ್ತೋರ್ವ ಆಲ್​ರೌಂಡರ್ ರಮಣ್​ದೀಪ್ ಸಿಂಗ್ ಇದ್ದರು. ರಮಣ್​ದೀಪ್ ಮೀಡಿಯಂ ಫಾಸ್ಟ್ ಬೌಲಿಂಗ್ ಆಲ್​​ರೌಂಡರ್ ಆಗಿರುವ ಕಾರಣ ಅವರೇ ಸೂಕ್ತ ಆಯ್ಕೆಯಾಗಿದ್ದರು. ಇದಾಗ್ಯೂ ಟೀಮ್ ಇಂಡಿಯಾ ಕಣಕ್ಕಿಳಿಸಿರಲಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.

ಟೀಮ್ ಇಂಡಿಯಾ ಮತ್ತು ಕನ್ಕಶನ್ ಸಬ್ ವಿವಾದ: ಚಹಲ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದಿದ್ದ ಭಾರತ..!
Yuzvendra Chahal
Follow us
ಝಾಹಿರ್ ಯೂಸುಫ್
|

Updated on: Feb 02, 2025 | 8:56 AM

ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟಿ20 ಪಂದ್ಯದ ಮುಕ್ತಾಯದ ಬೆನ್ನಲ್ಲೇ ಕನ್ಕಶನ್ ಸಬ್ ವಿವಾದ ಹುಟ್ಟಿಕೊಂಡಿದೆ. ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಈ ಪಂದ್ಯದ ಬ್ಯಾಟಿಂಗ್​ ವೇಳೆ ಶಿವಂ ದುಬೆ ಅವರ ಹೆಲ್ಮೆಟ್​ಗೆ ಬಾಲ್ ಬಡಿದಿದ್ದರಿಂದ ಅವರು ಫೀಲ್ಡಿಂಗ್​ನಲ್ಲಿ ತೊಡಗಿಸಿಕೊಂಡಿರಲಿಲ್ಲ. ಅಲ್ಲದೆ ಅವರ ಬದಲಿಗೆ ಕನ್ಕಶನ್ ಸಬ್‌ಸ್ಟಿಟ್ಯೂಟ್ ಆಗಿ ಹರ್ಷಿತ್ ರಾಣಾ ಅವರನ್ನು ಕಣಕ್ಕಿಳಿಸಲಾಗಿತ್ತು. ಇದುವೇ ಈಗ ವಿವಾದವಾಗಿ ಮಾರ್ಪಟ್ಟಿದೆ.

ಏಕೆಂದರೆ ‘ಕನ್ಕಶನ್ ಸಬ್‌ಸ್ಟಿಟ್ಯೂಟ್’ ನಿಯಮದ ಪ್ರಕಾರ ಲೈಕ್ ಟು ಲೈಕ್ ಪ್ಲೇಯರ್ ಕಣಕ್ಕಿಳಿಯಬೇಕು. ಅಂದರೆ ಇಲ್ಲಿ ಬ್ಯಾಟರ್ ಬದಲಿಗೆ ಬ್ಯಾಟರ್, ಬೌಲರ್​ ಬದಲಿಗೆ ಬೌಲರ್​ನನ್ನೇ ಕಣಕ್ಕಿಳಿಸಬೇಕು. ಅಥವಾ ಆಲ್​ರೌಂಡರ್ ಬದಲಿಗೆ ಆಲ್​ರೌಂಡರ್​ನನ್ನು ಆಡಬೇಕೆಂಬ ನಿಯಮವಿದೆ.

ಆದರೆ ಆಲ್​ರೌಂಡರ್ ಶಿವಂ ದುಬೆ ಬದಲಿಗೆ ಪರಿಪೂರ್ಣ ಬೌಲರ್ ಹರ್ಷಿತ್ ರಾಣಾಗೆ ಅವರನ್ನು ಕಣಕ್ಕಿಳಿಸಿರುವುದೇ ಈಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಈ ನಿಯಮದ ಬಗ್ಗೆ ಸ್ಪಷ್ಟತೆ ಇರಬೇಕೆಂದು ಹಲವು ಮಾಜಿ ಕ್ರಿಕೆಟರುಗಳು ಅಭಿಪ್ರಾಯಪಟ್ಟಿದ್ದಾರೆ.

ಇಂಟ್ರೆಸ್ಟಿಂಗ್ ವಿಷಯ ಎಂದರೆ ಟೀಮ್ ಇಂಡಿಯಾ ಪಾಲಿಗೆ ಕನ್ಕಶನ್ ಸಬ್‌ಸ್ಟಿಟ್ಯೂಟ್ ಹೊಸದೇನಲ್ಲ. ಹಾಗೆಯೇ ಕನ್ಕಶನ್ ಸಬ್​ ವಿಷಯದಲ್ಲೂ ಈ ಹಿಂದೆ ಕೂಡ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು ಎಂದು ವಿಶೇಷ.

2020, ಡಿಸೆಂಬರ್ 4 ರಂದು ಕ್ಯಾನ್​ಬೆರಾದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತು.

ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (51) ಅರ್ಧಶತಕ ಬಾರಿಸಿ ಮಿಂಚಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ 23 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 44 ರನ್ ಬಾರಿಸಿದರು.

ಈ ಪಂದ್ಯದ ಅಂತಿಮ ಓವರ್​ ವೇಳೆ ಮಿಚೆಲ್ ಸ್ಟಾರ್ಕ್ ಎಸೆದ ಚೆಂಡು ರವೀಂದ್ರ ಜಡೇಜಾ ಅವರ ಹೆಲ್ಮೆಟ್​ಗೆ ಬಡಿದಿದ್ದರಿಂದ ಅವರು ಗಾಯಗೊಂಡರು. ಹೀಗಾಗಿ ಫೀಲ್ಡಿಂಗ್​ಗೆ ಇಳಿದಿರಲಿಲ್ಲ. ಅತ್ತ ಟೀಮ್ ಇಂಡಿಯಾ ರವೀಂದ್ರ ಜಡೇಜಾ ಬದಲಿಗೆ ಕನ್ಕಶನ್ ಸಬ್‌ಸ್ಟಿಟ್ಯೂಟ್ ಆಗಿ ಯುಜ್ವೇಂದ್ರ ಚಹಲ್ ಅವರನ್ನು ಕಣಕ್ಕಿಳಿಸಿತು.

ಟೀಮ್ ಇಂಡಿಯಾದ ಈ ನಿರ್ಧಾರದ ವಿರುದ್ಧ ಅಂದು ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ ಅಸಮಾಧಾನ ವ್ಯಕ್ತಪಡಿಸಿದರು. ಚಹಲ್ ಕಣಕ್ಕಿಳಿಯುತ್ತಿದ್ದಂತೆ ಮ್ಯಾಚ್ ರೆಫರಿ ಡೇವಿಡ್ ಬೂನ್ ಜೊತೆ ಲ್ಯಾಂಗರ್ ಹಾಗೂ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ ಚರ್ಚಿಸಿದ್ದರು.

ಕನ್ಕಶನ್ ಸಬ್‌ಸ್ಟಿಟ್ಯೂಟ್ ಆಗಿ ಲೈಕ್ ಟು ಲೈಕ್ ಪ್ಲೇಯರ್​​ಗೆ ಅವಕಾಶ ನೀಡಬೇಕೆಂದು, ಚಹಲ್​ಗೆ ಬೌಲಿಂಗ್ ಮಾಡಲು ಅವಕಾಶ ಕೊಡಬಾರದೆಂದು ಆಸ್ಟ್ರೇಲಿಯಾ ತಂಡದ ನಾಯಕ ಮತ್ತು ಕೋಚ್ ವಾದಿಸಿದ್ದರು. ಆದರೆ ಮ್ಯಾಚ್ ರೆಫರಿ ಡೇವಿಡ್ ಬೂನ್ ಇದಕ್ಕೆ ಒಪ್ಪಿರಲಿಲ್ಲ. ಬದಲಾಗಿ ರವೀಂದ್ರ ಜಡೇಜಾ ದ್ವಿತೀಯ ಇನಿಂಗ್ಸ್​ನಲ್ಲಿ ಬೌಲಿಂಗ್ ಮಾಡಬಲ್ಲವರಾಗಿದ್ದ ಕಾರಣ ಚಹಲ್​ಗೆ ಅವಕಾಶ ಕಲ್ಪಿಸಿದ್ದರು.

ಆಸ್ಟ್ರೇಲಿಯಾ ತಂಡದ ದುರಾದೃಷ್ಟ, ಕನ್ಕಶನ್ ಸಬ್​ ಆಗಿ ಕಣಕ್ಕಿಳಿದ ಯುಜ್ವೇಂದ್ರ ಚಹಲ್ ಆರೋನ್ ಫಿಂಚ್, ಸ್ಟೀವ್ ಸ್ಮಿತ್ ಹಾಗೂ ಮ್ಯಾಥ್ಯೂ ವೇಡ್ ಅವರ ವಿಕೆಟ್ ಕಬಳಿಸಿದರು. ಅಲ್ಲದೆ 4 ಓವರ್​ಗಳಲ್ಲಿ ಕೇವಲ 25 ರನ್ ನೀಡಿ 3 ವಿಕೆಟ್ ಉರುಳಿಸಿದರು. ಪರಿಣಾಮ ಭಾರತ ತಂಡವು 11 ರನ್​ಗಳಿಂದ ಈ ಪಂದ್ಯವನ್ನು ಗೆದ್ದುಕೊಂಡಿತ್ತು.

ಇನ್ನು ಕನ್ಕಶನ್ ಸಬ್‌ ಆಗಿ ಕಣಕ್ಕಿಳಿದ ಯುಜ್ವೇಂದ್ರ ಚಹಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದರು. ಆ ಬಳಿಕ ಈ ನಿಯಮದ ಬಗ್ಗೆ ಭಾರೀ ಚರ್ಚೆಯಾಯಿತು. ಭಾರತ ತಂಡದ ನಿರ್ಧಾರದ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರುಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಇದಾಗಿ 5 ವರ್ಷಗಳ ಬಳಿಕ ಮತ್ತೊಮ್ಮೆ ಟೀಮ್ ಇಂಡಿಯಾ ಕನ್ಕಶನ್ ಸಬ್‌ಸ್ಟಿಟ್ಯೂಟ್ ಮೂಲಕ ವಿವಾದವನ್ನು ಹುಟ್ಟುಹಾಕಿದೆ. ಈ ಬಾರಿ ಕೂಡ ಭಾರತ ತಂಡ ಲೈಕ್ ಟು ಲೈಕ್ ಪ್ಲೇಯರ್​ನನ್ನು ಕಣಕ್ಕಿಳಿಸದೇ ಪರಿಪೂರ್ಣ ಬೌಲರ್​ನನ್ನು ಆಡಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಈ ವಿವಾದದ ಬೆನ್ನಲ್ಲೇ ಇದೀಗ ಕನ್ಕಶನ್ ಸಬ್‌ಸ್ಟಿಟ್ಯೂಟ್ ನಿಯಮವನ್ನು ಪರಿಶೀಲಿಸಬೇಕೆಂಬ ಕೂಗುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಪವರ್​ಗೆ ವಿರಾಟ್ ಕೊಹ್ಲಿಯ ದಾಖಲೆ ಉಡೀಸ್

ಟೀಮ್ ಇಂಡಿಯಾ ಈ ನಿಯಮದ ಸಂಪೂರ್ಣ ಲಾಭ ಪಡೆದಿರುವುದರಿಂದ, ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ನಿಯಮದ ಲಾಭ ಪಡೆಯಲು ಎಲ್ಲಾ ತಂಡಗಳು ಪ್ರಯತ್ನಿಸಬಹುದು. ಅದರಲ್ಲೂ ಲೈಕ್ ಟು ಲೈಕ್ ಪ್ಲೇಯರ್​ನನ್ನು ಕಣಕ್ಕಿಳಿಸದಿರುವ ಟೀಮ್ ಇಂಡಿಯಾ ವಿರುದ್ಧವೇ ಈ ನಿಯಮವನ್ನು ನಿರ್ಣಾಯಕ ಪಂದ್ಯಗಳಲ್ಲಿ ಪ್ರಯೋಗಿಸಿದರೆ..? ಸಟ್ ಪಟ್ ದುಡುಂ ಅಷ್ಟೇ.

ಸೆಲೆಬ್ರಿಟಿಗಳಿಲ್ಲದೆ ಸರಳವಾಗಿ ಮದುವೆಯಾದ ಬಿಲಿಯನೇರ್ ಮಗ ಜೀತ್ ಅದಾನಿ
ಸೆಲೆಬ್ರಿಟಿಗಳಿಲ್ಲದೆ ಸರಳವಾಗಿ ಮದುವೆಯಾದ ಬಿಲಿಯನೇರ್ ಮಗ ಜೀತ್ ಅದಾನಿ
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ರಕ್ಷಿತಾರನ್ನು ಮದುವೆಯಾದಾಗ ಅಂಬರೀಶ್ ಹೇಳಿದ್ದನ್ನು ಮೆಲಕು ಹಾಕಿದ ಪ್ರೇಮ್
ರಕ್ಷಿತಾರನ್ನು ಮದುವೆಯಾದಾಗ ಅಂಬರೀಶ್ ಹೇಳಿದ್ದನ್ನು ಮೆಲಕು ಹಾಕಿದ ಪ್ರೇಮ್
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ