ಭಾರತದಲ್ಲಿ ಅಫ್ಘಾನಿಸ್ತಾನ್ ಕನಸಿಗೆ ತಣ್ಣೀರು: ನ್ಯೂಝಿಲೆಂಡ್ ವಿರುದ್ಧ ಶುರುವಾಗದ ಪಂದ್ಯ

Afghanistan vs New Zealand: ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕಾಗಿ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್​ಗೆ ಬಿಸಿಸಿಐ ಮೂರು ಸ್ಟೇಡಿಯಂಗಳ ಆಯ್ಕೆ ನೀಡಿದ್ದರು. ಅದರಂತೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ, ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ಹಾಗೂ ಗ್ರೇಟರ್ ನೋಯ್ಡಾದಲ್ಲಿನ ಕಾಂಪ್ಲೆಕ್ಸ್ ಸ್ಟೇಡಿಯಂನಲ್ಲಿ ಪಂದ್ಯವನ್ನು ಆಯೋಜಿಸಬಹುದು ಎಂದು ತಿಳಿಸಲಾಗಿತ್ತು.

ಭಾರತದಲ್ಲಿ ಅಫ್ಘಾನಿಸ್ತಾನ್ ಕನಸಿಗೆ ತಣ್ಣೀರು: ನ್ಯೂಝಿಲೆಂಡ್ ವಿರುದ್ಧ ಶುರುವಾಗದ ಪಂದ್ಯ
Noid Ground
Follow us
|

Updated on: Sep 11, 2024 | 8:23 AM

ಭಾರತದ ಗ್ರೇಟರ್ ನೋಯ್ಡಾ ಕಾಂಪ್ಲೆಕ್ಸ್ ಸ್ಟೇಡಿಯಂನಲ್ಲಿ ಶುರುವಾಗಬೇಕಿದ್ದ ಅಫ್ಘಾನಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಪಂದ್ಯವು 2ನೇ ದಿನದಾಟದಲ್ಲೂ ಆರಂಭವಾಗಿಲ್ಲ. ಮೊದಲ ದಿನವು ಮಳೆಗೆ ಅಹುತಿಯಾದರೆ, ಎರಡನೇ ದಿನವು ಒದ್ದೆ ಮೈದಾನದ ಕಾರಣ ಪಂದ್ಯವನ್ನು ನಡೆಸಲು ಸಾಧ್ಯವಾಗಿಲ್ಲ. ಇನ್ನು ಮೂರನೇ ದಿನದಾಟದಲ್ಲಿ ಪಂದ್ಯ ಶುರುವಾಗುವ ನಿರೀಕ್ಷೆಯಲ್ಲಿದೆ ಉಭಯ ತಂಡಗಳು.

ಭಾರತದಲ್ಲಿ ಪಂದ್ಯವೇಕೆ?

ಅಫ್ಘಾನಿಸ್ತಾನ್ ಹಾಗೂ ನ್ಯೂಝಿಲೆಂಡ್ ನಡುವಣ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಭಾರತವು ಆತಿಥ್ಯವಹಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಅಫ್ಘಾನಿಸ್ತಾನಕ್ಕೆ ನ್ಯೂಝಿಲೆಂಡ್ ತಂಡ ತೆರಳದಿರುವುದು. ತಾಲಿಬಾನಿಗಳ ಆಡಳಿತದಲ್ಲಿರುವ ಅಫ್ಘಾನಿಸ್ತಾನದಲ್ಲಿ ಪಂದ್ಯವಾಡಲು ನ್ಯೂಝಿಲೆಂಡ್ ಹಿಂದೇಟು ಹಾಕಿದೆ. ಹೀಗಾಗಿ ಅಫ್ಘಾನಿಸ್ತಾನ್ ಭಾರತವನ್ನು 2ನೇ ಹೋಮ್ ಗ್ರೌಂಡ್ ಆಗಿ ಆಯ್ಕೆ ಮಾಡಿಕೊಂಡಿತು. ಅದರಂತೆ ಗ್ರೇಟರ್ ನೋಯ್ಡಾ ಮೈದಾನದಲ್ಲಿ ಏಕೈಕ ಟೆಸ್ಟ್ ಪಂದ್ಯ ನಡೆಯುವ ನಿರೀಕ್ಷೆಯಿದೆ.

ಎಸಿಬಿ ಎಡವಟ್ಟು..!

ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕಾಗಿ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್​ಗೆ ಬಿಸಿಸಿಐ ಮೂರು ಸ್ಟೇಡಿಯಂಗಳ ಆಯ್ಕೆ ನೀಡಿದ್ದರು. ಅದರಂತೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ, ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ಹಾಗೂ ಗ್ರೇಟರ್ ನೋಯ್ಡಾದಲ್ಲಿನ ಕಾಂಪ್ಲೆಕ್ಸ್ ಸ್ಟೇಡಿಯಂನಲ್ಲಿ ಪಂದ್ಯವನ್ನು ಆಯೋಜಿಸಬಹುದು ಎಂದು ತಿಳಿಸಲಾಗಿತ್ತು. ಆದರೆ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ನೋಯ್ಡಾವನ್ನು ಆಯ್ಕೆ ಮಾಡಿಕೊಂಡಿದ್ದರು.

ಇದಕ್ಕೆ ಮುಖ್ಯ ಕಾರಣ ಗ್ರೇಟರ್ ನೋಯ್ಡಾ ಕಾಂಪ್ಲೆಕ್ಸ್ ಸೇಡಿಯಂ ದೆಹಲಿಗೆ ಹತ್ತಿರದಲ್ಲಿರುವುದು. ಕಾಬೂಲ್​ನಿಂದ ದೆಹಲಿಗೆ ಬಂದಿಳಿದ ಆಟಗಾರರು ನೇರವಾಗಿ ಗ್ರೇಟರ್ ನೋಯ್ಡಾಗೆ ತೆರಳಬಹುದು ಎಂಬ ಉದ್ದೇಶದೊಂದಿಗೆ ಈ ಸ್ಟೇಡಿಯಂ ಅನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೀಗ ಮಳೆಯ ಕಾರಣ ಸಮಸ್ಯೆ ಎದುರಾಗಿದೆ.

ಅಂದರೆ ಈ ಸ್ಟೇಡಿಯಂ ಅಂತಾರಾಷ್ಟ್ರೀಯ ಪಂದ್ಯವಾಡಲು ಸೂಕ್ತವಾಗಿದ್ದರೂ, ಉತ್ತಮ ಒಳಚರಂಡಿ ವ್ಯವಸ್ಥೆಯನ್ನು ಹೊಂದಿಲ್ಲ. ಇತ್ತ ಮಳೆ ಬರುವ ನಿರೀಕ್ಷೆಯಲ್ಲಿರದ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ನೋಯ್ದಾ ಸ್ಟೇಡಿಯಂ ಅನ್ನು ಆಯ್ಕೆ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿದೆ.

ಏಕೆಂದರೆ ಮೊದಲ ದಿನದಾಟವು ಮಳೆಗೆ ಅಹುತಿಯಾದರೆ, 2ನೇ ದಿನದಾಟವು ಮೈದಾನವನ್ನು ಸಿದ್ಧಗೊಳಿಸುವುದರಲ್ಲೇ ಕಳೆದು ಹೋಗಿದೆ. ಇದೀಗ ಮೂರನೇ ದಿನದಾಟದಲ್ಲಿ ಪಂದ್ಯ ಆರಂಭವಾಗುವ ನಿರೀಕ್ಷೆಯಲ್ಲಿದೆ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್.

ಅಫ್ಘಾನಿಸ್ತಾನ್ ಟೆಸ್ಟ್ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ) , ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್) , ಇಬ್ರಾಹಿಂ ಝದ್ರಾನ್ , ರಹಮತ್ ಷಾ , ರಿಯಾಝ್ ಹಸನ್ , ಬಹಿರ್ ಶಾ , ಶಾಹಿದುಲ್ಲಾ ಕಮಾಲ್ , ಅಜ್ಮತುಲ್ಲಾ ಒಮರ್ಜಾಯ್ , ಖೈಸ್ ಅಹ್ಮದ್ , ಜಹೀರ್ ಖಾನ್ , ಖಲೀಲ್ ಅಹ್ಮದ್ , ಜಿಯಾ ಉರ್ ರೆಹಮಾನ್, ಅಫ್ಸರ್ ಝಝೈ, ನಿಜಾತ್ ಮಸೂದ್, , ಅಬ್ದುಲ್ ಮಲಿಕ್.

ಇದನ್ನೂ ಓದಿ: CSK ಪರ ಆಡಬೇಕು… RCB ಆಟಗಾರನ ಹೇಳಿಕೆ..!

ನ್ಯೂಝಿಲೆಂಡ್ ಟೆಸ್ಟ್ ತಂಡ: ಟಾಮ್ ಲ್ಯಾಥಮ್ (ವಿಕೆಟ್ ಕೀಪರ್) , ಟಿಮ್ ಸೌಥಿ (ನಾಯಕ) , ಡೆವೊನ್ ಕಾನ್ವೇ , ಕೇನ್ ವಿಲಿಯಮ್ಸನ್ , ಡೇರಿಲ್ ಮಿಚೆಲ್ , ವಿಲ್ ಯಂಗ್ , ಗ್ಲೆನ್ ಫಿಲಿಪ್ಸ್ , ಮೈಕೆಲ್ ಬ್ರೇಸ್‌ವೆಲ್ , ಮಿಚೆಲ್ ಸ್ಯಾಂಟ್ನರ್ , ಅಜಾಜ್ ಪಟೇಲ್ , ಮ್ಯಾಟ್ ಹೆನ್ರಿ , ಟಾಮ್ ಬ್ಲುಂಡೆಲ್ , ರಚಿನ್ ರವೀಂದ್ರ, ಬೆನ್ ಸೀರ್ಸ್.

ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ