AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈ ತಂಡ ಬಾಂಗ್ಲಾ ಎದುರು ಸೋಲುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ’: ರೋಹಿತ್ ಪಡೆ ಮೇಲೆ ಬಿಸಿಸಿಐ ಗರಂ

BCCI: ನಮ್ಮ ಕೆಲವು ಅಧಿಕಾರಿಗಳು ಬೇರೆ ಬೇರೆ ಕೆಲಸದಲ್ಲಿ ಕಾರ್ಯನಿರತರಾಗಿದ್ದರಿಂದ ಬಾಂಗ್ಲಾದೇಶ ಪ್ರವಾಸಕ್ಕೆ ಹೊರಡುವ ಮೊದಲು ನಾವು ಭಾರತ ತಂಡವನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ತಂಡವು ಬಾಂಗ್ಲಾದೇಶ ಪ್ರವಾಸದಿಂದ ಹಿಂತಿರುಗುತ್ತಿದಂತೆಯೇ ನಾವು ತಂಡದ ಪ್ರಮುಖರೊಂದಿಗೆ ಸಭೆ ನಡೆಸಲಿದ್ದೇವೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಈ ತಂಡ ಬಾಂಗ್ಲಾ ಎದುರು ಸೋಲುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ': ರೋಹಿತ್ ಪಡೆ ಮೇಲೆ ಬಿಸಿಸಿಐ ಗರಂ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಪೃಥ್ವಿಶಂಕರ

Updated on:Dec 08, 2022 | 6:41 PM

ಕಳೆದ ಟಿ20 ವಿಶ್ವಕಪ್​ನ (T20 World Cup 2022) ಸೆಮಿಫೈನಲ್ ಪಂದ್ಯದ ಸೋಲಿನ ಬಳಿಕ ಸತತ ಸೋಲುಗಳ ಸರಮಾಲೆ ಹೊತ್ತಿರುವ ಟೀಂ ಇಂಡಿಯಾಕ್ಕೆ (Team India) ಬಾಂಗ್ಲಾ ಪ್ರವಾಸವೂ ಗೆಲುವಿನ ಸಿಹಿ ನೀಡಲಿಲ್ಲ. ಈ ಹಿಂದೆ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಕಳೆದುಕೊಂಡಿದ್ದ ಟೀಂ ಇಂಡಿಯಾ ಬಾಂಗ್ಲಾ ಪ್ರವಾಸದಲ್ಲೂ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಇದೀಗ ಇದು ಸಾಲದೆಂಬಂತೆ ವೈಟ್​ ವಾಶ್ ಭೀತಿಯನ್ನು ಎದುರಿಸುತ್ತಿದೆ. ಬಾಂಗ್ಲಾ ಪ್ರವಾಸದಲ್ಲಿ ಟೀಂ ಇಂಡಿಯಾ ನೀಡುತ್ತಿರುವ ಪ್ರದರ್ಶನ ಅಭಿಮಾನಿಗಳಿಗೆ ಮಾತ್ರವಲ್ಲದೆ, ಬಿಸಿಸಿಐಗೂ (BCCI) ಶಾಕ್ ನೀಡಿದೆ. ಏಕೆಂದರೆ ಈ ಸರಣಿಯಿಂದ ಮುಂದಿನ ವರ್ಷ ನಡೆಯುವ ಏಕದಿನ ವಿಶ್ವಕಪ್​ಗೆ ತಯಾರಿ ಆರಂಭಿಸುವ ಯೋಜನೆಯಲ್ಲಿ ಬಿಸಿಸಿಐ ಇತ್ತು. ಆದರೆ ರೋಹಿತ್ ಪಡೆ ದುರ್ಬಲ ಬಾಂಗ್ಲಾ ಎದುರು ಸರಣಿ ಸೋತಿರುವುದು ಮಂಡಳಿಯ ಯೋಜನೆಯನ್ನೇ ಬುಡಮೇಲು ಮಾಡಿದೆ. ಹೀಗಾಗಿ ಸರಣಿ ಬಳಿಕ ಬಿಸಿಸಿಐ ಮಹತ್ವದ ಸಭೆ ನಡೆಸಲು ಮುಂದಾಗಿದೆ.

ಈ ಮಹತ್ವದ ಪರಿಶೀಲನಾ ಸಭೆಯನ್ನು ಬಿಸಿಸಿಐ ಶೀಘ್ರದಲ್ಲೇ ನಡೆಸಲಿದ್ದು, ಈ ಸಭೆಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ವಿವಿಎಸ್ ಲಕ್ಷ್ಮಣ್​ರನ್ನು ಆಹ್ವಾನಿಸಲಾಗಿದೆ. ಈ ಸಭೆಯಲ್ಲಿ ಮುಖ್ಯವಾಗಿ ಬಾಂಗ್ಲಾದೇಶ ಪ್ರವಾಸದಲ್ಲಿನ ಸೋಲು ಮತ್ತು ಹಿಂದಿನ ಟಿ20 ವಿಶ್ವಕಪ್ 2022 ಸೆಮಿಫೈನಲ್‌ನಲ್ಲಿ ಬಗ್ಗೆ ಪರಾಮರ್ಶೆ ನಡೆಸಲಾಗವುದು ಎಂದು ವರದಿಯಾಗಿದೆ.

ತಂಡದ ಪ್ರದರ್ಶನ ನಿರಾಶಾದಾಯಕವಾಗಿತ್ತು- ಬಿಸಿಸಿಐ

ಬಿಸಿಸಿಐ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿರುವ ಪ್ರಕಾರ, ನಮ್ಮ ಕೆಲವು ಅಧಿಕಾರಿಗಳು ಬೇರೆ ಬೇರೆ ಕೆಲಸದಲ್ಲಿ ಕಾರ್ಯನಿರತರಾಗಿದ್ದರಿಂದ ಬಾಂಗ್ಲಾದೇಶ ಪ್ರವಾಸಕ್ಕೆ ಹೊರಡುವ ಮೊದಲು ನಾವು ಭಾರತ ತಂಡವನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ತಂಡವು ಬಾಂಗ್ಲಾದೇಶ ಪ್ರವಾಸದಿಂದ ಹಿಂತಿರುಗುತ್ತಿದಂತೆಯೇ ನಾವು ತಂಡದ ಪ್ರಮುಖರೊಂದಿಗೆ ಸಭೆ ನಡೆಸಲಿದ್ದೇವೆ. ಬಾಂಗ್ಲಾದೇಶ ಪ್ರವಾಸದಲ್ಲಿ ಟೀಂ ಇಂಡಿಯಾ ಮುಜುಗರದ ಪ್ರದರ್ಶನ ನೀಡಿದೆ. ತಂಡದಿಂದ ನಾವು ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಅಧಿಕಾರಿ ಹೇಳಿಕೊಂಡಿದ್ದಾರೆ .

ಇದನ್ನೂ ಓದಿ: ಟೀಂ ಇಂಡಿಯಾ ಅಭಿಮಾನಿಗಳಿಗೆ ಸಿಹಿ ಸುದ್ದಿ; ಇಷ್ಟರಲ್ಲೇ ತಂಡ ಸೇರಲಿದ್ದಾರೆ ಯಾರ್ಕರ್ ಕಿಂಗ್ ಬುಮ್ರಾ..!

ಬಿಸಿಸಿಐನ ಅಧಿಕಾರಿಯೊಬ್ಬರ ಈ ಹೇಳಿಕೆಯನ್ನು ಕೇಳಿದ ನಂತರ ಮಂಡಳಿ, ಆಟಗಾರರ ಈ ಪ್ರದರ್ಶನದಿಂದ ಅಸಮಾಧಾನಗೊಂಡಿರುವುದು ಸ್ಪಷ್ಟವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ತಂಡದಲ್ಲಿ ಭಾರೀ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಈಗಾಗಲೇ ಕೇಳಿಬರುತ್ತಿರುವ ಮಾತಿನಂತೆ, ಮುಂದಿನ ವರ್ಷದ ಆರಂಭದಲ್ಲಿ ನಡೆಯುವ ಲಂಕಾ ವಿರುದ್ಧದ ತವರು ಸರಣಿಯಲ್ಲಿ ರೋಹಿತ್ ಬದಲು ಹಾರ್ದಿಕ್ ಪಾಂಡ್ಯಗೆ ಟಿ20 ನಾಯಕತ್ವ ನೀಡುವ ಸಾಧ್ಯತೆಗಳಿವೆ. ಅಲ್ಲದೆ ವೈಟ್ ಬಾಲ್ ಹಾಗೂ ರೆಡ್ ಬಾಲ್ ಕ್ರಿಕೆಟ್​ಗೆ ಪ್ರತ್ಯೇಕ ಕೋಚ್​ಗಳನ್ನು ನೇಮಿಸುವ ಸಾಧ್ಯತೆಯೂ ದಟ್ಟವಾಗಿವೆ.

2023 ರ ಏಕದಿನ ವಿಶ್ವಕಪ್​ವರೆಗೂ ರೋಹಿತ್​ಗೆ ನಾಯಕತ್ವ

ಭಾರತ ತಂಡದ ನಾಯಕತ್ವಕ್ಕೆ ಸಂಬಂಧಿಸಿದಂತೆ, ರೋಹಿತ್ ಶರ್ಮಾ ಅವರಿಗೆ 35 ವರ್ಷ ವಯಸ್ಸಾಗಿದ್ದು, ಏಕದಿನ ವಿಶ್ವಕಪ್‌ವರೆಗೆ ಅವರನ್ನು ನಾಯಕರನ್ನಾಗಿ ಮುಂದುವರೆಸಲು ಬಿಸಿಸಿಐ ಆಸಕ್ತಿ ತೋರಿದೆ. ಇದಲ್ಲದೇ ಹಾರ್ದಿಕ್ ಪಾಂಡ್ಯ ಟಿ20 ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಗಳಿವೆ. ಸದ್ಯ ಬಿಸಿಸಿಐ ವಜಾಗೊಳಿಸಿರುವ ಆಯ್ಕೆ ಮಂಡಳಿಗೆ ಹೊಸ ಸದಸ್ಯರನ್ನು ಆಯ್ಕೆ ಮಾಡುವುದರ ಮೇಲೆ ಗಮನಹರಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:41 pm, Thu, 8 December 22

ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ