ಟೀಂ ಇಂಡಿಯಾ ಅಭಿಮಾನಿಗಳಿಗೆ ಸಿಹಿ ಸುದ್ದಿ; ಇಷ್ಟರಲ್ಲೇ ತಂಡ ಸೇರಲಿದ್ದಾರೆ ಯಾರ್ಕರ್ ಕಿಂಗ್ ಬುಮ್ರಾ..!

Jasprit Bumrah: ಈ ತಿಂಗಳ ಅಂತ್ಯದ ವೇಳೆಗೆ ಬುಮ್ರಾ ಎನ್‌ಸಿಎಗೆ ವರದಿ ಸಲ್ಲಿಸಲಿದ್ದಾರೆ. ವೈದ್ಯಕೀಯ ತಂಡವು ಬುಮ್ರಾ ಅವರ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡಿಸಲಿದೆ. ಆ ಬಳಿಕ ಜನವರಿಯಲ್ಲಿ ನಡೆಯುವ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಬುಮ್ರಾರನ್ನು ಆಡಿಸಬೇಕೆ ಅಥವಾ ಬೇಡವೇ ಎಂಬುದುನ್ನು ಆಯ್ಕೆದಾರರು ನಿರ್ಧರಿಸುತ್ತಾರೆ ಎಂದಿದ್ದಾರೆ.

ಟೀಂ ಇಂಡಿಯಾ ಅಭಿಮಾನಿಗಳಿಗೆ ಸಿಹಿ ಸುದ್ದಿ; ಇಷ್ಟರಲ್ಲೇ ತಂಡ ಸೇರಲಿದ್ದಾರೆ ಯಾರ್ಕರ್ ಕಿಂಗ್ ಬುಮ್ರಾ..!
Jasprit Bumrah
Follow us
TV9 Web
| Updated By: ಪೃಥ್ವಿಶಂಕರ

Updated on: Dec 08, 2022 | 5:36 PM

ಇಂಜುರಿಯಿಂದಾಗಿ ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ತಂಡವನ್ನು ತೊರೆದು ತಿಂಗಳುಗಳೆ ಕಳೆದಿವೆ. ಯಾರ್ಕರ್ ಕಿಂಗ್ ಅಲಭ್ಯತೆಯ ಪರಿಣಾಮವನ್ನು ಟೀಂ ಇಂಡಿಯಾ (Team India) ಈಗಾಗಲೇ ಅನುಭವಿಸಿದೆ. ಕಳೆದ ಏಷ್ಯಾಕಪ್​ನಿಂದಲೂ (Asia Cup)ಇಂಜುರಿಯಿಂದ ಬಳಲುತ್ತಿರುವ ಬುಮ್ರಾ ಇದುವರೆಗೂ ತಂಡ ಸೇರಿಕೊಂಡಿಲ್ಲ. ಬುಮ್ರಾ ಅಲಭ್ಯತೆಯಿಂದ ಪ್ರಮುಖ ಬೌಲರ್​ಗಳ ಕೊರತೆಯನ್ನು ಎದುರಿಸಿದ ಟೀಂ ಇಂಡಿಯಾ ಮೊದಲು ಏಷ್ಯಾಕಪ್​ನಿಂದ ಬರಿಗೈಯಲ್ಲಿ ವಾಪಸ್ಸಾಗಿತ್ತು. ಆ ಬಳಿಕ ನಡೆದ ಟಿ20 ವಿಶ್ವಕಪ್​ನಲ್ಲೂ (T20 World Cup) ಟೀಂ ಇಂಡಿಯಾಕ್ಕೆ ಕಾಡಿದ್ದು ಇದೇ ಬೌಲಿಂಗ್ ಸಮಸ್ಯೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್​ಗಳ ಸೋಲು ಅನುಭವಿಸಿದಾಗ ಎಲ್ಲರಿಗೂ ಕಾಡಿದ್ದು ಬುಮ್ರಾ ಅಲಭ್ಯತೆ. ಹೀಗಾಗಿ ಬುಮ್ರಾ ಯಾವಾಗ ತಂಡಕ್ಕೆ ಮರಳುತ್ತಾರೆ ಎಂಬುದು ಟೀಂ ಇಂಡಿಯಾ ಅಭಿಮಾನಿಗಳ ಬಹುದಿನಗಳ ಪ್ರಶ್ನೆಯಾಗಿದೆ. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಬುಮ್ರಾ ಮುಂದಿನ ವರ್ಷ ಆಸ್ಟ್ರೇಲಿಯಾ ವಿರುದ್ಧ ನಡೆಯಲ್ಲಿರುವ ತವರು ಸರಣಿಯಲ್ಲಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಬೆನ್ನುನೋವಿನ ಸಮಸ್ಯೆಯಿಂದಾಗಿ ಹಲವು ತಿಂಗಳುಗಳಿಂದ ಕ್ರಿಕೆಟ್​ನಿಂದ ದೂರವಿರುವ ಜಸ್ಪ್ರೀತ್ ಬುಮ್ರಾರನ್ನು ಏಷ್ಯಾಕಪ್ ಆರಂಭಕ್ಕೂ ಮುನ್ನ ಭಾರತ ತಂಡದಿಂದ ಕೈಬಿಡಲಾಗಿತ್ತು. ನಂತರ ಟಿ20 ವಿಶ್ವಕಪ್‌ಗೂ ಬುಮ್ರಾ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಅದರ ನಂತರ, ಬುಮ್ರಾ ನ್ಯೂಜಿಲೆಂಡ್ ಪ್ರವಾಸ ಮತ್ತು ಈಗ ಬಾಂಗ್ಲಾದೇಶ ಪ್ರವಾಸಕ್ಕೂ ಆಯ್ಕೆಯಾಗಲಿಲ್ಲ. ಹಾಗಾಗಿ ಇದೀಗ ತವರಿನ ಅಂಗಳದ ಸರಣಿಯಲ್ಲಿ ಬುಮ್ರಾ ಆಡುವುದನ್ನು ನೋಡಬಹುದು ಎಂಬ ನಿರೀಕ್ಷೆ ಇದೆ. ಇದಕ್ಕೆ ಪೂರಕವೆಂಬಂತೆ ಮಂಡಳಿಯ ಮೂಲಗಳಿಂದ ಹೊರಬಿದ್ದಿರುವ ಕೆಲವು ಮಾಹಿತಿಗಳು ಕೂಡ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿವೆ.

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ತಂಡಕ್ಕೆ ಎಂಟ್ರಿ?

ಮುಂದಿನ ವರ್ಷ ಜನವರಿಯಲ್ಲಿ ತವರಿನಲ್ಲಿ ನಡೆಯಲಿರುವ ಏಕದಿನ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ತಂಡದಲ್ಲಿ ಆಡುವ ಬಗ್ಗೆ ನಿರ್ಧರಿಸಬಹುದು ಎಂದು ಮಾಧ್ಯಮ ವರದಿ ಬಹಿರಂಗಪಡಿಸಿದೆ. ಮಂಡಳಿಯ ಅಧಿಕಾರಿಯೊಬ್ಬರು ಇನ್​ಸೈಡ್​ ಸ್ಫೋಟ್ಸ್ರ್ಗೆ ನೀಡಿರುವ ಮಾಹಿತಿ ಪ್ರಕಾರ, ಹೌದು ಬುಮ್ರಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರು ಆಸ್ಟ್ರೇಲಿಯಾ ವಿರುದ್ಧದ ತವರು ಸರಣಿಯ ಮೂಲಕ ತಂಡಕ್ಕೆ ಮರಳಲಿದ್ದಾರೆ. ಈ ತಿಂಗಳ ಅಂತ್ಯದ ವೇಳೆಗೆ ಬುಮ್ರಾ ಎನ್‌ಸಿಎಗೆ ವರದಿ ಸಲ್ಲಿಸಲಿದ್ದಾರೆ. ವೈದ್ಯಕೀಯ ತಂಡವು ಬುಮ್ರಾ ಅವರ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡಿಸಲಿದೆ. ಆ ಬಳಿಕ ಜನವರಿಯಲ್ಲಿ ನಡೆಯುವ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಬುಮ್ರಾರನ್ನು ಆಡಿಸಬೇಕೆ ಅಥವಾ ಬೇಡವೇ ಎಂಬುದುನ್ನು ಆಯ್ಕೆದಾರರು ನಿರ್ಧರಿಸುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ಐಪಿಎಲ್​ಗೂ ಮುನ್ನ 6 ಸರಣಿ, 19 ಪಂದ್ಯಗಳನ್ನಾಡಲಿದೆ ಟೀಂ ಇಂಡಿಯಾ; ಇಲ್ಲಿದೆ ಪೂರ್ಣ ವೇಳಾಪಟ್ಟಿ

ಇದಕ್ಕೆ ಪೂರಕವೆಂಬಂತೆ ಕಳೆದ ತಿಂಗಳು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದ ಬುಮ್ರಾ, ತಾನು ತಂಡ ಸೇರಲು ಮಾಡುತ್ತಿರುವ ಕಸರತ್ತನ್ನು ಜನರ ಮುಂದಿಟ್ಟಿದ್ದರು.

ಸದ್ಯ ಬಾಂಗ್ಲಾ ಪ್ರವಾಸದಲ್ಲಿರುವ ಟೀಂ ಇಂಡಿಯಾ

ಸದ್ಯ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸದಲ್ಲಿದ್ದು, ಪ್ರಸ್ತುತ ತಂಡವು 3 ಏಕದಿನ ಸರಣಿಯನ್ನು ಆಡುತ್ತಿದೆ. ಈಗಾಗಲೇ 2-0 ಅಂತರದಿಂದ ಸರಣಿ ಸೋತಿರುವ ಟೀಂ ಇಂಡಿಯಾ ಇದೀಗೆ ಕೊನೆಯ ಏಕದಿನ ಪಂದ್ಯವನ್ನು ಗೆದ್ದು ಮುಜುಗರನ್ನು ತಪ್ಪಿಸಿಕೊಳ್ಳುವ ಯತ್ನದಲ್ಲಿದೆ. ಈ ಸರಣಿ ಮುಗಿದ ಬಳಿಕ ಉಭಯ ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಾಸ್ ತೋರಿಸಿ ಎಂದಿದ್ದಕ್ಕೆ ಬಿಎಂಟಿಸಿ ಸಿಬ್ಬಂದಿಗೆ ಆವಾಜ್ ಹಾಕಿದ ಪ್ರಯಾಣಿಕ
ಪಾಸ್ ತೋರಿಸಿ ಎಂದಿದ್ದಕ್ಕೆ ಬಿಎಂಟಿಸಿ ಸಿಬ್ಬಂದಿಗೆ ಆವಾಜ್ ಹಾಕಿದ ಪ್ರಯಾಣಿಕ
‘ಪುಷ್ಪ 2’ ಟ್ರೇಲರ್​ ಲಾಂಚ್​ನಲ್ಲಿ ಜನಸಾಗರ; ಅಲ್ಲು ಅರ್ಜುನ್ ಕ್ರೇಜ್ ನೋಡಿ
‘ಪುಷ್ಪ 2’ ಟ್ರೇಲರ್​ ಲಾಂಚ್​ನಲ್ಲಿ ಜನಸಾಗರ; ಅಲ್ಲು ಅರ್ಜುನ್ ಕ್ರೇಜ್ ನೋಡಿ
ಮದ್ವೆ ಮನೆಯಲ್ಲಿ ಕಳ್ಳರ ಕೈಚಳಕ: ಚಿನ್ನ, ಹಣ ದೋಚಿದ ಖದೀಮರು!
ಮದ್ವೆ ಮನೆಯಲ್ಲಿ ಕಳ್ಳರ ಕೈಚಳಕ: ಚಿನ್ನ, ಹಣ ದೋಚಿದ ಖದೀಮರು!
BBK 11: ಕಾಂಟ್ರವರ್ಸಿ ಮೂಲಕವೇ ವೈಲ್ಡ್ ಕಾರ್ಡ್​ ಸ್ಪರ್ಧಿ ಎಂಟ್ರಿ
BBK 11: ಕಾಂಟ್ರವರ್ಸಿ ಮೂಲಕವೇ ವೈಲ್ಡ್ ಕಾರ್ಡ್​ ಸ್ಪರ್ಧಿ ಎಂಟ್ರಿ
ಸ್ವಿಮ್ಮಿಂಗ್ ಫುಲ್​ನಲ್ಲಿ ದುರಂತ ಅಂತ್ಯಕಂಡ ಯುವತಿಯರ ಕೊನೆ ಕ್ಷಣದ ವಿಡಿಯೋ!
ಸ್ವಿಮ್ಮಿಂಗ್ ಫುಲ್​ನಲ್ಲಿ ದುರಂತ ಅಂತ್ಯಕಂಡ ಯುವತಿಯರ ಕೊನೆ ಕ್ಷಣದ ವಿಡಿಯೋ!
ಸ್ಕೂಟಿ​ ಡಿಕ್ಕಿಯೊಳಗೆ ಹಾವು ಪ್ರತ್ಯಕ್ಷ, ಬೆಚ್ಚಿಬಿದ್ದ ಚಾಲಕ, ಮುಂದೇನಾಯ್ತು
ಸ್ಕೂಟಿ​ ಡಿಕ್ಕಿಯೊಳಗೆ ಹಾವು ಪ್ರತ್ಯಕ್ಷ, ಬೆಚ್ಚಿಬಿದ್ದ ಚಾಲಕ, ಮುಂದೇನಾಯ್ತು
ಬಿಪಿಎಲ್ ಕಾರ್ಡ್ ರದ್ದು: ಸರ್ಕಾರ ನಡೆ ಸ್ವಾಗತಿಸಿದ ಬಿಜೆಪಿ ಎಂಪಿ ರಾಘವೇಂದ್ರ
ಬಿಪಿಎಲ್ ಕಾರ್ಡ್ ರದ್ದು: ಸರ್ಕಾರ ನಡೆ ಸ್ವಾಗತಿಸಿದ ಬಿಜೆಪಿ ಎಂಪಿ ರಾಘವೇಂದ್ರ
ಬಾಲನಟ ರೋಹಿತ್​ಗೆ ಅಪಘಾತ ಆಗಿದ್ದು ಹೇಗೆ? ಈಗ ಆರೋಗ್ಯ ಹೇಗಿದೆ?
ಬಾಲನಟ ರೋಹಿತ್​ಗೆ ಅಪಘಾತ ಆಗಿದ್ದು ಹೇಗೆ? ಈಗ ಆರೋಗ್ಯ ಹೇಗಿದೆ?
PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC
PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC
ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ
ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ