ಆಫ್ರಿಕಾದಲ್ಲಿ ನಡೆಯಲ್ಲಿರುವ ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟ; ಸ್ಫೋಟಕ ಓಪನರ್ಗೆ ತಂಡದ ನಾಯಕತ್ವ..!
ICC U-19 World Cup: ಈ ವಿಶ್ವಕಪ್ ಜನವರಿ 14 ರಿಂದ 29 ರವರೆಗೆ ನಡೆಯಲಿದೆ. ಇದಲ್ಲದೇ ವಿಶ್ವಕಪ್ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೂ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು, ಈ ತಂಡದ ನಾಯಕತ್ವವನ್ನೂ ಸಹ ಶೆಫಾಲಿ ವರ್ಮಾ ಅವರಿಗೆ ವಹಿಸಲಾಗಿದೆ.
ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 19 ವರ್ಷದೊಳಗಿನವರ ಮಹಿಳಾ ವಿಶ್ವಕಪ್‌ಗೆ (ICC U-19 World Cup) 18 ಆಟಗಾರ್ತಿಯರ ಬಲಿಷ್ಠ ತಂಡವನ್ನು ಬಿಸಿಸಿಐ (BCCI) ಪ್ರಕಟಿಸಿದೆ. ಇವರಲ್ಲಿ 15 ಆಟಗಾರ್ತಿಯರು ಮುಖ್ಯ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಮಿಕ್ಕ ಮೂವರು ಸ್ಟ್ಯಾಂಡ್ ಬೈ ಆಟಗಾರ್ತಿಯರಾಗಿ ತಂಡ ಸೇರಿಕೊಂಡಿದ್ದಾರೆ. ಮೊದಲ ಬಾರಿಗೆ ನಡೆಯುತ್ತಿರುವ ಈ ಮಹಿಳಾ ವಿಶ್ವಕಪ್ ಸಮರಕ್ಕೆ ಟೀಂ ಇಂಡಿಯಾದ ನಾಯಕತ್ವವನ್ನು ತಂಡದ ಸ್ಫೋಟಕ ಓಪನರ್ ಶಫಾಲಿ ವರ್ಮಾ (Shafali Verma) ಅವರಿಗೆ ವಹಿಸಲಾಗಿದೆ. ಈ ಬಗ್ಗೆ ಸೋಮವಾರ ಹೇಳಿಕೆ ನೀಡುವ ಮೂಲಕ ಬಿಸಿಸಿಐ ಮಾಹಿತಿ ನೀಡಿದೆ.
ಈ ವಿಶ್ವಕಪ್ ಜನವರಿ 14 ರಿಂದ 29 ರವರೆಗೆ ನಡೆಯಲಿದೆ. ಇದಲ್ಲದೇ ವಿಶ್ವಕಪ್ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೂ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು, ಈ ತಂಡದ ನಾಯಕತ್ವವನ್ನೂ ಸಹ ಶೆಫಾಲಿ ವರ್ಮಾ ಅವರಿಗೆ ವಹಿಸಲಾಗಿದೆ. ಈ ಸರಣಿಯು ವಿಶ್ವಕಪ್‌ಗಿಂತ ಮೊದಲು ಅಂದರೆ, ಡಿಸೆಂಬರ್-ಜನವರಿಯಲ್ಲಿ ನಡೆಯಲಿದೆ.
? NEWS ?: India U19 Women’s squad for ICC World Cup and SA series announced.
More Details ?https://t.co/onr5tDraiq
— BCCI Women (@BCCIWomen) December 5, 2022
ದಕ್ಷಿಣ ಆಫ್ರಿಕಾ ಸರಣಿಗೆ 19 ವರ್ಷದೊಳಗಿನವರ ಭಾರತ ಮಹಿಳಾ ತಂಡ ಇಂತಿದೆ
ಶಫಾಲಿ ವರ್ಮಾ (ನಾಯಕಿ), ಶ್ವೇತಾ ಸೆಹ್ರಾವತ್ (ಉಪನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಜಿ. ತ್ರಿಶಾ, ಸೌಮ್ಯ ತಿವಾರಿ, ಸೋನಿಯಾ ಮೆಹದಿಯಾ, ಹರ್ಲೆ ಗಾಲಾ, ರಿಷಿತಾ ಬಸು (ವಿಕೆಟ್‌ಕೀಪರ್), ಸೋನಮ್ ಯಾದವ್, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ, ಟಿಟಾಸ್ ಸಾಧು, ಫಲಕ್ ನಾಜ್, ಶಬ್ನಮ್ ಎಂಡಿ, ಶಿಖಾ, ನಜ್ಲಾ ಸಿಎಂಸಿ, ಯಶಶ್ರೀ.
ಇದನ್ನೂ ಓದಿ: ಅಬುದಾಬಿ ಟಿ10 ಲೀಗ್ ಗೆದ್ದ ರೈನಾ ತಂಡ; ಟಿ20 ವಿಶ್ವಕಪ್ ಫ್ಲಾಪ್ ಸ್ಟಾರ್ಗಳೇ ಇಲ್ಲಿ ಸೂಪರ್ ಸ್ಟಾರ್ಸ್..!
ಅಂಡರ್-19 ಮಹಿಳಾ ವಿಶ್ವಕಪ್‌ಗೆ ಭಾರತ ತಂಡ ಇಂತಿದೆ
ಶಫಾಲಿ ವರ್ಮಾ (ನಾಯಕಿ), ಶ್ವೇತಾ ಸೆಹ್ರಾವತ್ (ಉಪನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಜಿ ತ್ರಿಶಾ, ಸೌಮ್ಯ ತಿವಾರಿ, ಸೋನಿಯಾ ಮೆಹದಿಯಾ, ಹರ್ಲೆ ಗಾಲಾ, ರಿಷಿತಾ ಬಸು (ವಿಕೆಟ್ ಕೀಪರ್), ಸೋನಮ್ ಯಾದವ್, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ, ಟಿಟಾಸ್ ಸಾಧು, ಫಲಕ್ ನಾಜ್, ಶಬ್ನಮ್ ಎಂಡಿ.
ಸ್ಟ್ಯಾಂಡ್‌ಬೈ ಆಟಗಾರ್ತಿಯರು: ಶಿಖಾ, ನಜ್ಲಾ ಸಿಎಂಸಿ, ಯಶಶ್ರೀ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:00 pm, Mon, 5 December 22