IPL 2021 ಪಂದ್ಯ ವೀಕ್ಷಿಸಲು ಏರ್​ಟೆಲ್, ಜಿಯೊ ಮತ್ತು ವೊಡಾಫೋನ್​ ಐಡಿಯಾದಿಂದ ಬೆಸ್ಟ್ ರೀಚಾರ್ಜ್​ ಪ್ಲಾನ್​

| Updated By: Digi Tech Desk

Updated on: Apr 14, 2021 | 2:42 PM

ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್​ ಐಡಿಯಾದಲ್ಲಿ ಹಾಟ್‌ಸ್ಟಾರ್​ಗೆ ಪ್ರವೇಶಿಸುವ ಅವಕಾಶವನ್ನು ಬಳಕೆದಾರರಿಗೆ ನೀಡಿದ್ದು, ಮೊಬೈಲ್​ ಮೂಲಕ ಆನ್‌ಲೈನ್‌ನಲ್ಲಿ ಪಂದ್ಯಗಳನ್ನು ನೋಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಇದರಿಂದಾಗಿ ಪ್ರೀಪೇಯ್ಡ್ ಅನ್ನು ಪೋಸ್ಟ್‌ಪೇಯ್ಡ್ ಮಾಡಲು ಅವಕಾಶ ನೀಡುತ್ತಿವೆ. ವೊಡಾಫೋನ್​ ಐಡಿಯಾ ಇತ್ತೀಚೆಗೆ 3 ಜಿಬಿ ದೈನಂದಿನ ಡೇಟಾ ನೀಡಲು ಪ್ರಾರಂಭಿಸಿದೆ.

IPL 2021 ಪಂದ್ಯ ವೀಕ್ಷಿಸಲು ಏರ್​ಟೆಲ್, ಜಿಯೊ ಮತ್ತು ವೊಡಾಫೋನ್​ ಐಡಿಯಾದಿಂದ ಬೆಸ್ಟ್ ರೀಚಾರ್ಜ್​ ಪ್ಲಾನ್​
ಜಿಯೋ, ಏರ್​ಟೆಲ್​, ವೊಡಾಫೋನ್​ ಚಂದಾದಾರರಿಗೆ ಆಫರ್​
Follow us on

ಐಪಿಎಲ್​ ಪಂದ್ಯ ಈಗಾಗಲೇ ಆರಂಭಗೊಂಡಿದೆ. ಹೆಚ್ಚುತ್ತಿರುವ ಕೊವಿಡ್ ಸಾಂಕ್ರಾಮಿಕ ಪ್ರಕರಣಗಳ ಮಧ್ಯ ನಿಮ್ಮ ಮೊಬೈಲ್​ನಲ್ಲಿ ಐಪಿಎಲ್​ ಸ್ಕೋರ್​ ಪರಿಶೀಲಿಸಲು ಅಥವಾ ಬೇರೊಂದು ಕೆಲಸ ಮಾಡುತ್ತಾ ಕ್ರಿಕೆಟ್​ ಪಂದ್ಯವನ್ನು ನೋಡಲು ಏರ್​ಟೆಲ್​, ಜಿಯೋ ಮತ್ತು ವೊಡಾಫೋನ್​ ಐಡಿಯಾ ಇಂಟರ್​ನೆಟ್​ ಆಫರ್​ ನೀಡಿದೆ.

ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್​ ಐಡಿಯಾದಲ್ಲಿ ಹಾಟ್‌ಸ್ಟಾರ್​ಗೆ ಪ್ರವೇಶಿಸುವ ಅವಕಾಶವನ್ನು ಬಳಕೆದಾರರಿಗೆ ನೀಡಿದ್ದು, ಮೊಬೈಲ್​ ಮೂಲಕ ಆನ್‌ಲೈನ್‌ನಲ್ಲಿ ಪಂದ್ಯಗಳನ್ನು ನೋಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಇದರಿಂದಾಗಿ ಪ್ರೀಪೇಯ್ಡ್ ಅನ್ನು ಪೋಸ್ಟ್‌ಪೇಯ್ಡ್ ಮಾಡಲು ಅವಕಾಶ ನೀಡುತ್ತಿವೆ. ವೊಡಾಫೋನ್​ ಐಡಿಯಾ ಇತ್ತೀಚೆಗೆ 3 ಜಿಬಿ ದೈನಂದಿನ ಡೇಟಾ ನೀಡಲು ಪ್ರಾರಂಭಿಸಿದೆ.

ಏರ್​ಟೆಲ್​ 448 ರೂಪಾಯಿ VS ಜಿಯೋ 401 ರೂ. VS ವೊಡಾಫೋನ್​ ಐಡಿಯಾ 401 ರೂ. ಪ್ರಿಪೇಯ್ಡ್​ ಪ್ಲಾನ್​
ಏರ್​ಟೆಲ್​ನಲ್ಲಿ 448 ಪ್ರೀಪೇಡ್​ ಪ್ಲಾನ್:
ಐಪಿಲ್​ ನಡೆಯುತ್ತಿರುವ ಸಮಯದಲ್ಲಿ ತನ್ನ ಬಳಕೆದಾರರಿಗಾಗಿ ಏರ್​ಟೆಲ್​ ಹೊಸ ಪ್ಲಾನ್​ ನೀಡಿದೆ. 448 ರೂಪಾಯಿಗೆ 28 ದಿನಗಳ ವ್ಯಾಲಿಡಿಟಿ, ದಿನಕ್ಕೆ 3ಜಿಬಿ ಡೇಟಾ ಜೊತೆ ಅನ್​ಲಿಮಿಟೆಡ್​ ಕಾಲ್ ಸೌಲಭ್ಯ ನೀಡಿದೆ. ಈ ಆಫರ್​ನಿಂದ ಪ್ರೆಕ್ಷಕರು ಆನ್​ಲೈನ್​ ಮೂಲಕ ಐಪಿಲ್​ ನೋಡಬಹುದಾಗಿದೆ. ಇದರ ಜತೆಗೆ ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಿಂದ ಸ್ಟ್ರೀಮಿಂಗ್ ಪ್ರಯೋಜನಗಳನ್ನು ನೀಡುತ್ತದೆ.

ಜಿಯೋ 401 ರೂಪಾಯಿ ಪ್ರಿಪೇಯ್ಡ್ ಪ್ಲಾನ್:
401 ರೂಪಾಯಿ ಪ್ಯಾಕ್​ಗೆ ಪ್ರತಿನಿತ್ಯ 3ಜಿಬಿ ಹೈ-ಸ್ಪೀಡ್​ ಡೇಟಾದೊಂದಿಗೆ, ಅನಿಯಮಿತ ಕರೆ (ಅನ್​ಲಿಮಿಟೆಡ್​ ಕಾಲ್) ನೀಡಲಾಗಿದೆ. ಜೊತೆಗೆ ದಿನಕ್ಕೆ 100 ಉಚಿತ ಎಸ್​ಎಮ್​ಎಸ್ ನೀಡಿದೆ. ಈ ಇಂಟರ್​ನೆಟ್​ ಪ್ಯಾಕ್​ 28 ದಿನಗಳ ಅವಧಿಗೆ ಸೀಮಿತವಾಗಿರುತ್ತದೆ. ಜೊತೆಗೆ ಡಿಸ್ನಿ+ ಹಾಟ್​ಸ್ಟಾರ್​ಗೆ ಉಚಿತ ಸಬ್​ಸ್ಕ್ರಿಪ್ಷನ್​ ಪಡೆಯಲು 28 ದಿನಗಳ ಕಾಲ ಮಾತ್ರ ಅವಕಾಶವಿರುತ್ತದೆ.

ವಡಾಫೋನ್​ ಐಡಿಯಾ 401ರೂಪಾಯಿ ಪ್ರಿಪೇಯ್ಡ್ ಪ್ಲಾನ್​:
401 ರೂಪಾಯಿಯ ಪ್ರಿಪೇಯ್ಡ್​ ಪ್ಲಾನ್​ಗೆ​ 3 ಜಿಬಿ ಡೇಟಾ ಜೊತೆಗೆ ಅನಿಯಮಿತ ಕರೆಯನ್ನು ನೀಡುತ್ತದೆ. ಜೊತೆಗೆ ಡಿಸ್ನಿ+ ಹಾಟ್​ಸ್ಟಾರ್​ ಪ್ರವೇಶಿಸಲು ಅನುಕೂಲ ಮಾಡಿಕೊಡುತ್ತದೆ. ಈ ಪ್ರೀಪೇಯ್ಡ್​ ಪ್ಲಾನ್​ನಲ್ಲಿ 100 ಎಸ್​ಎಂಎಸ್​ಗಳನ್ನು ದಿನಕ್ಕೆ ನೀಡಲಾಗುತ್ತಿದೆ. ಜೊತೆಗೆ 16 ಜಿಬಿ ಡೇಟಾವನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ.

ಏರ್​ಟೆಲ್​ 599ರೂಪಾಯಿ vs ಜಿಯೋ 598 ರೂಪಾಯಿ vs ವೊಡಾಫೋನ್​ ಐಡಿಯಾ 601 ರೂಪಾಯಿ ಪ್ರಿಪೇಯ್ಡ್​ ಪ್ಲಾನ್​
ಏರ್​ಟೆಲ್​ 599 ರೂಪಾಯಿ ಪ್ರಿಪೇಯ್ಡ್​ ಪ್ಲಾನ್:
599 ರೂಪಾಯಿಯ ಪ್ರೀಪೇಯ್ಡ್​ ಪ್ಲಾನ್​ನಲ್ಲಿ ದಿನಕ್ಕೆ 2 ಜಿಬಿ ಡೇಟಾ ಜೊತೆಗೆ 56 ದಿನ ವ್ಯಾಲಿಡಿಟಿ ನೀಡಲಾಗುತ್ತಿದೆ. ಇದರೊಂದಿಗೆ ಅನಿಯಮಿತ ಕರೆಯನ್ನು ನೀಡಲಾಗುತ್ತಿದೆ. ಇದರಲ್ಲಿ ಡಿಸ್ನಿ+ ಹಾಟ್​ಸ್ಟಾರ್​ ಮತ್ತು ಅಮೆಜಾನ್​ ಪ್ರೈಮ್​ ವಿಡಿಯೋ ಕಂಟೆಂಟ್ ವೀಕ್ಷಿಸಲು ಅವಕಾಶವಿದೆ.

ಜಿಯೋ 598 ರೂಪಾಯಿ ಪ್ರಿಪೇಯ್ಡ್ ಪ್ಲಾನ್:
ಜಿಯೋ ನೀಡಿದ 598 ರೂಪಾಯಿ ಪ್ರೀಪೇಯ್ಡ್​ ಪ್ಲಾನ್​ನಲ್ಲಿ ದಿನಕ್ಕೆ 2ಜಿಬಿ ಡೇಟಾ ನೀಡುತ್ತಿದೆ. ಅನಿಯಮಿತ ಕರೆ ಜೊತೆಗೆ 100 ಎಸ್​ಎಂಎಸ್​ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇದರ ಪ್ರಯೋಜನ ಜಿಯೋ ಅಪ್ಲಿಕೇಶನ್​ ಹೊಂದಿರುವ ಬಳಕೆದಾರರಿಗೆ ಮಾತ್ರ ಸಿಗುತ್ತದೆ. 56 ದಿನಗಳವರೆಗೆ ಈ ಪ್ಯಾಕ್​ನ ವ್ಯಾಲಿಡಿಟಿ ಇರುತ್ತದೆ.

ವೊಡಾಫೋನ್​ ಐಡಿಯಾ 601 ರೂಪಾಯಿ ಪ್ರಿಪೇಯ್ಡ್ ಪ್ಲಾನ್​:
601 ರೂಪಾಯಿಯ ಪ್ರಿಪೇಯ್ಡ್​ ಪ್ಲಾನ್​ನಲ್ಲಿ ಪ್ರತ ದಿನ​ 3 ಜಿಬಿ ಡೇಟಾ ದೊರೆಯುತ್ತದೆ. ಜೊತೆಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್​ಎಂಎಸ್​ಗಳನ್ನು ಉಚಿತವಾಗಿ ನೀಡಲಾಗುತ್ತದೆ.

ವೊಡಾಫೋನ್​ ಐಡಿಯಾ 801 ರೂಪಾಯಿ vs ಜಿಯೊ 777 ರೂಪಾಯಿ ಪ್ರಿಪೇಯ್ಡ್ ಪ್ಲಾನ್​
ಜಿಯೋ 777 ರೂಪಾಯಿ ಪ್ರಿಪೇಯ್ಡ್​ ಪ್ಲಾನ್​:
ಜಿಯೋ ನೀಡುತ್ತಿರುವ 777 ರೂಪಾಯಿ ಡೇಟಾ ಪ್ಯಾಕ್​ನಲ್ಲಿ​ ಅನಿಯಮಿತ ಕರೆಗಳ ಜೊತೆಗೆ ದಿನಕ್ಕೆ 1.5 ಜಿಬಿ ಡೇಟಾವನ್ನು ನೀಡುತ್ತಿದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಸಹ ನೀಡುತ್ತಿದೆ. ಪ್ರಿಪೇಯ್ಡ್ ಪ್ಲಾನ್​ 84 ದಿನಗಳ ಕಾಲಾವಕಾಶವನ್ನು ಹೊಂದಿರುತ್ತದೆ.

ವೊಡಾಫೋನ್​ ಐಡಿಯಾ 801 ರೂಪಾಯಿ ಪ್ರಿಪೇಯ್ಡ್ ಪ್ಲಾನ್​:
3 ಜಿಬಿ ದೈನಂದಿನ ಡೇಟಾ ಜೊತೆಗೆ ಅನಿಯಮಿತ ಕರೆ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ಗೆ ಪ್ರವೇಶವನ್ನು ನೀಡಿದೆ. ಈ ಯೋಜನೆಯು 100 ಎಸ್‌ಎಂಎಸ್‌ಗೆ 48 ಜಿಬಿ ಹೆಚ್ಚುವರಿ ಡೇಟಾವನ್ನು ನೀಡುತ್ತದೆ.

ಏರ್​ಟೆಲ್ 2,698 ರೂಪಾಯಿ ಮತ್ತು ಜಿಯೋ 2,599 ರೂಪಾಯಿ ಪ್ರಿಪೇಯ್ಡ್ ಪ್ಲಾನ್
ಜಿಯೋ 2599 ರೂಪಾಯಿ ಪ್ರಿಪೇಯ್ಡ್ ಪ್ಲಾನ್​:
ಇದು ಒಂದು ವರ್ಷದ ಇಂಟರ್​ನೆಟ್​ ಪ್ಯಾಕ್​ ಆಗಿದ್ದು, ಜಿಯೋ ಟು ಜಿಯೋ ಅನ್​ಲಿಮಿಟೆಡ್​ ಕರೆಯನ್ನು ನೀಡುತ್ತದೆ. ಜೊತೆಗೆ ದಿನಕ್ಕೆ 100 ಎಸ್​ಎಂಎಸ್​ಗಳನ್ನು ಬಳಕೆದಾರರಿಗೆ ಜಿಯೋ ನೀಡಿದೆ. 399 ರೂಪಾಯಿ ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ ವಿಐಪಿಗೆ ಉಚಿತ ಸಬ್​ಸ್ಕ್ರಿಪ್ಷನ್​ಅನ್ನು ನೀಡುತ್ತದೆ. ಇದನ್ನು ವೀಕ್ಷಿಸಿದರೆ ದಿನಕ್ಕೆ 2 ಜಿಬಿ ಡೇಟಾದಂತೆ ಹೆಚ್ಚುವರಿಯಾಗಿ 10 ಜಿಬಿ ಡೇಟಾ ನೀಡುತ್ತದೆ.

ಏರ್‌ಟೆಲ್ 2,698 ರೂಪಾಯಿ ಪ್ರಿಪೇಯ್ಡ್ ಪ್ಲಾನ್​:
ಏರ್​ಟೆಲ್​ನ 2,698 ರೂಪಾಯಿ ಡೇಟಾ ಪ್ಯಾಕ್​ 2 ಜಿಬಿ ದೈನಂದಿನ ಡೇಟಾವನ್ನು 365 ದಿನಗಳಿಗೆ ನೀಡುತ್ತದೆ. ಜೊತೆಗೆ ಡಿಸ್ನಿ + ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋವನ್ನು ಆನ್​ಲೈನ್​ ಮೂಲಕ ಮೊಬೈಲ್​ನಲ್ಲಿ ನೋಡಲು ಅವಕಾಶ ಕಲ್ಪಿಸಿಕೊಟ್ಟಿದೆ.

ಇದನ್ನೂ ಓದಿ: Jio IPL Plans: ಐಪಿಎಲ್​ ವೀಕ್ಷಿಸುವ ಜಿಯೋ ಚಂದಾದಾರರಿಗೆ ಭರ್ಜರಿ ಕೊಡುಗೆ; ರೀಚಾರ್ಜ್​ ಮೇಲೆ ಉಚಿತ 10 ಜಿಬಿ ಡೇಟಾ ನೀಡಲಿದೆ ಜಿಯೋ

ಗ್ರಾಹಕರಿಗೆ ಆಕರ್ಷಕ ಆಫರ್​ಗಳನ್ನು ಘೋಷಿಸಿದ ಬಿಎಸ್ಎನ್ಎಲ್, ಕೇವಲ ರೂ.129 ಗಳಿಗೆ 300 ಚ್ಯಾನೆಲ್​ಗಳು!.

(Best IPL 2021 Live Streaming plans Recharge from Airtel Jio and Vodafone Idea)

Published On - 12:50 pm, Wed, 14 April 21