ಭಾರತ ಕ್ರಿಕೆಟ್​ಗೆ ವಿದಾಯ ಹೇಳಿದ್ರಾ ಭುವನೇಶ್ವರ್? ಅನುಮಾನ ಹೆಚ್ಚಿಸಿದ ಇನ್ಸ್ಟಾಗ್ರಾಮ್ ಬಯೋ ಬದಲಾವಣೆ

Updated on: Jul 28, 2023 | 1:50 PM

Bhuvneshwar Kumar: ಭುವನೇಶ್ವರ್ ಕುಮಾರ್ ತಮ್ಮ ಇನ್‌ಸ್ಟಾಗ್ರಾಮ್ ಬಯೋ ಬದಲಿಸಿದ್ದು, ಇದನ್ನು ಗಮನಿಸಿದ ನೆಟ್ಟಿಗರು ಭುವಿ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರಾ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

1 / 6
ಪ್ರಸ್ತುತ ಟೀಂ ಇಂಡಿಯಾದಿಂದ ಹೊರಗುಳಿದಿರುವ ತಂಡದ ಮಾಜಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಇದೀಗ ಸೋಶಿಯಲ್ ಮಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದ್ದಾರೆ.

2 / 6
ಇದಕ್ಕೆ ಕಾರಣವೂ ಇದ್ದು, ಟೀಂ ಇಂಡಿಯಾದಲ್ಲಿ ಮತ್ತೆ ಅವಕಾಶಕ್ಕಾಗಿ ಕಾಯ್ದು ಕಾಯ್ದು ಬಸವಳಿದಿರುವ ಭುವಿ, ಮತ್ತೆ ತಂಡಕ್ಕೆ ಆಯ್ಕೆಯಾಗುವುದು ಅನುಮಾನವಾಗಿದೆ. ಈ ನಡುವೆ ಭುವನೇಶ್ವರ್ ಕುಮಾರ್ ತಮ್ಮ ಇನ್‌ಸ್ಟಾಗ್ರಾಮ್ ಬಯೋ ಬದಲಿಸಿದ್ದು, ಇದನ್ನು ಗಮನಿಸಿದ ನೆಟ್ಟಿಗರು ಭುವಿ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರಾ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

3 / 6
ಈ ಮೊದಲು ತಮ್ಮ ಇನ್‌ಸ್ಟಾಗ್ರಾಮ್ ಬಯೋದಲ್ಲಿ ಇಂಡಿಯನ್ ಕ್ರಿಕೆಟರ್ ಎಂದು ಬರೆದುಕೊಂಡಿದ್ದ ಭುವಿ, ಇದೀ ಗ ಅದನ್ನು ಇಂಡಿಯನ್ ಎಂದು ಬದಲಿಸಿದ್ದಾರೆ. ಹೀಗಾಗಿ ಭುವನೇಶ್ವರ್ ಕುಮಾರ್ ಭಾರತ ಕ್ರಿಕೆಟ್​ಗೆ ವಿದಾಯ ಹೇಳಿದ್ರಾ ಎನ್ನುವ ಅನುಮಾನ ಎಲ್ಲರನ್ನು ಕಾಡಲಾರಂಭಿಸಿದೆ.

4 / 6
33ರ ಹರೆಯದ ಭುವಿ ಕೊನೆಯದಾಗಿ 2022ರ ಟಿ20ಯಲ್ಲಿ ತಂಡದ ಪರ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಆಡಿದ 6 ಪಂದ್ಯಗಳಲ್ಲಿ ಕೇವಲ ನಾಲ್ಕು ವಿಕೆಟ್ಗಳನ್ನು ಪಡೆದಿದ್ದರು. ಆದರೆ ರನ್​ಗಳಿಗೆ ಕಡಿವಾಣ ಹಾಕುವಲ್ಲಿ ಭುವಿ ಯಶಸ್ವಿಯಾಗಿದ್ದರು.

5 / 6
ಟಿ20 ಮಾದರಿಯಲ್ಲಿ ಆಗಾಗ್ಗೆ ಅವಕಾಶ ಪಡೆಯುತ್ತಿದ್ದ ಭುವನೇಶ್ವರ್ ಕುಮಾರ್ ಉಳಿದ ಮಾದರಿಯಲ್ಲಿ ಅಂದರೆ, ಟೆಸ್ಟ್ ಕ್ರಿಕೆಟ್​ನಲ್ಲಿ 2018 ರಲ್ಲಿ ಕೊನೆಯದಾಗಿ ತಂಡದಲ್ಲಿ ಕಾಣಿಸಿಕೊಂಡಿದ್ದ ಭುವಿ, ಜನವರಿ 2022 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡದ ಭಾಗವಾಗಿದ್ದರು.

6 / 6
ಈ ವರ್ಷ ನಡೆಯಲ್ಲಿರುವ ಏಷ್ಯಾಕಪ್ ಹಾಗೂ ವಿಶ್ವಕಪ್​ನಲ್ಲಿ ಭುವಿ ಕಾಣಿಸಿಕೊಳ್ಳುವುದು ಅನುಮಾನವಾಗಿದೆ. ಏಕೆಂದರೆ ಮೂವರು ವೇಗಿಗಳಾಗಿ ಸಿರಾಜ್, ಬುಮ್ರಾ ಹಾಗೂ ಶಮಿ ಆಡುವುದು ಖಚಿತವಾಗಿದೆ. ಇನ್ನೊಂದೆಡೆ ಯುವ ಟಿ20 ತಂಡವನ್ನು ಕಟ್ಟಲು ಆರಂಭಿಸಿರುವ ಬಿಸಿಸಿಐ ಮುಂದಿನ ವರ್ಷ ನಡೆಯಲ್ಲಿರುವ ಟಿ20 ವಿಶ್ವಕಪ್​ಗೆ ಭುವಿಯನ್ನು ಆಯ್ಕೆ ಮಾಡುವುದು ಅನುಮಾನವಾಗಿದೆ.

Published On - 1:49 pm, Fri, 28 July 23

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us