Viral Video: ತಾಗಬಾರದ ಜಾಗಕ್ಕೆ ತಾಗಿದ ಚೆಂಡು, ಮೈದಾನದಲ್ಲೇ ಕುಸಿದ ಬಿದ್ದ ಹೆನ್ರಿಕ್ಸ್
BBL 2021-22: ರೆನ್‌ಶಾ 31 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 50 ರನ್ ಗಳಿಸಿದರು. ಮತ್ತೊಂದೆಡೆ ಕಾಕ್‌ಬೈನ್ 42 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 71 ರನ್ ಗಳಿಸಿ ಅಜೇಯರಾಗಿ ಉಳಿದರು.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸೋಮವಾರ ಭಾರೀ ಅವಘಡವೊಂದು ತಪ್ಪಿದೆ. ಬಿಬಿಎಲ್ನ 51 ನೇ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ಮತ್ತು ಅಡಿಲೇಡ್ ಸ್ಟ್ರೈಕರ್ಸ್ ಮುಖಾಮುಖಿಯಾಗಿತ್ತು. ಅಡಿಲೇಡ್ ಸ್ಟ್ರೈಕರ್ಸ್‌ನ ಹೆನ್ರಿ ಥಾರ್ನ್‌ಟನ್ 10 ನೇ ಓವರ್‌ಗೆ ಬೌಲ್ ಮಾಡಲು ಬಂದರು. ಈ ಓವರ್‌ನ ಮೂರನೇ ಎಸೆತದಲ್ಲಿ ಜ್ಯಾಕ್ ಎಡ್ವರ್ಡ್ಸ್ ಸ್ಟೈಟ್ ಶಾಟ್ ಹೊಡೆದರು. ಆದರೆ ಚೆಂಡು ನಾನ್ ಸ್ಟ್ರೈಕರ್‌ನಲ್ಲಿದ್ದ ಮೊಯಿಸೆಸ್ ಹೆನ್ರಿಕ್ಸ್ಗೆ ಬಡಿಯಿತು. ತಾಗಬಾರದ ಜಾಗಕ್ಕೆ ಚೆಂಡು ತಾಗಿದ್ದರಿಂದ ನೋವಿನಿಂದ ಹೆನ್ರಿಕ್ಸ್ ಕುಸಿದು ಬಿದ್ದರು. ಇತ್ತ ಪಂದ್ಯ ನೋಡುತ್ತಿದ್ದವರು ಒಂದು ಕ್ಷಣ ದಂಗಾದರು. ಅದೃಷ್ಟವಶಾತ್ ಯಾವುದೇ ಗಂಭೀರ ಗಾಯವಾಗಲಿಲ್ಲ. ಆ ಬಳಿಕ ಚೇತರಿಸಿಕೊಂಡ ಹೆನ್ರಿಕ್ಸ್ ಮತ್ತೆ ಬ್ಯಾಟಿಂಗ್ ಮುಂದುವರೆಸಿದರು. ಈ ವಿಡಿಯೋವನ್ನು BBL ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾಗಿದೆ.
That’s gotta hurt ? Moises Henriques is currently sucking in the big ones after getting hit in “the Joe Root region” @KFCAustralia | #BBL11 pic.twitter.com/HUsJ2eUL6M
— KFC Big Bash League (@BBL) January 17, 2022
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಸಿಕ್ಸರ್ಸ್ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 161 ರನ್ ಪೇರಿಸಿತು. ಈ ಸ್ಪರ್ಧಾತ್ಮಕ ಸವಾಲನ್ನು ಬೆನ್ನತ್ತಿದ ಅಡಿಲೇಡ್ ಸ್ಟ್ರೈಕರ್ಸ್ ಪರ ಮ್ಯಾಟ್ ರೆನ್‌ಶಾ ಮತ್ತು ಇಯಾನ್ ಕಾಕ್‌ಬೈನ್ ಬಿರುಸಿನ ಅರ್ಧಶತಕ ಬಾರಿಸಿದರು. ಮೊದಲ ವಿಕೆಟ್‌ಗೆ ಹೆನ್ರಿ ಹಂಟ್ ಅವರೊಂದಿಗೆ ರೆನ್‌ಶಾ 45 ರನ್ ಕಲೆಹಾಕಿದರು. ಇದಾದ ಬಳಿಕ ಕಾಕ್‌ಬೈನ್ ಮತ್ತು ರೆನ್‌ಶಾ ಎರಡನೇ ವಿಕೆಟ್‌ಗೆ 53 ರನ್‌ಗಳ ಜೊತೆಯಾಟವಾಡಿದರು.
ರೆನ್‌ಶಾ 31 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 50 ರನ್ ಗಳಿಸಿದರು. ಮತ್ತೊಂದೆಡೆ ಕಾಕ್‌ಬೈನ್ 42 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 71 ರನ್ ಗಳಿಸಿ ಅಜೇಯರಾಗಿ ಉಳಿದರು. ಕಾಕ್‌ಬೈನ್ ಮತ್ತು ಜೊನಾಥನ್ ವೆಲ್ಸ್ ಮೂರನೇ ವಿಕೆಟ್‌ಗೆ ಅಜೇಯ 67 ರನ್ ಜೊತೆಯಾಟವಾಡುವ ಮೂಲಕ 17.3 ಓವರ್ಗಳಲ್ಲಿ ತಂಡವನ್ನು 2 ವಿಕೆಟ್ ನಷ್ಟಕ್ಕೆ 165 ರನ್‌ಗಳ ಗುರಿಮುಟ್ಟಿಸಿದರು.
ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಐರ್ಲೆಂಡ್‌ಗೆ: 8 ಸಾವಿರ ಕಿ.ಮೀ ನಡೆದು ಕ್ರಿಕೆಟ್ಗೆ ಎಂಟ್ರಿ ಕೊಟ್ಟ ಯುವ ಬೌಲರ್..!
ಇದನ್ನೂ ಓದಿ: ಈ ಫೋಟೋದಲ್ಲಿರುವ ಇಬ್ಬರು ಸ್ಟಾರ್ ಆಟಗಾರರನ್ನು ಗುರುತಿಸಬಲ್ಲಿರಾ?
ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(Big Bash League: The ball hit Henriques’ ‘guard’)