IPL 2022 Mega Auction: ಮೆಗಾ ಹರಾಜಿಗೆ ಆಟಗಾರರ ನೋಂದಣಿ ಗಡುವು ವಿಸ್ತರಿಸಿದ ಬಿಸಿಸಿಐ! ಸ್ಟಾರ್ ಆಟಗಾರರು ಅನುಮಾನ?

IPL 2022 Mega Auction: ಕಮ್ಮಿನ್ಸ್ ಮತ್ತು ಸ್ಟಾರ್ಕ್ ಆಸ್ಟ್ರೇಲಿಯಾದ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡುತ್ತಿದ್ದಾರೆ. ಹೀಗಾಗಿ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಅವರು ಫಿಟ್ನೇಸ್ ಕಾಯ್ದುಕೊಳ್ಳಬೇಕು.

IPL 2022 Mega Auction: ಮೆಗಾ ಹರಾಜಿಗೆ ಆಟಗಾರರ ನೋಂದಣಿ ಗಡುವು ವಿಸ್ತರಿಸಿದ ಬಿಸಿಸಿಐ! ಸ್ಟಾರ್ ಆಟಗಾರರು ಅನುಮಾನ?
ಪ್ರಾತಿನಿಧಿಕಚಿತ್ರ
Follow us
TV9 Web
| Updated By: ಪೃಥ್ವಿಶಂಕರ

Updated on: Jan 17, 2022 | 6:47 PM

ಭಾರತೀಯ ಕ್ರಿಕೆಟ್ ಮಂಡಳಿ ( BCCI ) ಆಟಗಾರರು IPL 2022 ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ . ಈಗ ಜನವರಿ 20 ರವರೆಗೆ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. ಐಪಿಎಲ್ ಮೆಗಾ ಹರಾಜು ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು 13 ರಂದು ನಡೆಯಲಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ಆಟಗಾರರ ಕಾರಣದಿಂದ ಆಟಗಾರರ ಹೆಸರಿನ ನೋಂದಣಿ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಎರಡು ದೇಶಗಳ ಆಟಗಾರರು ಐಪಿಎಲ್ ಮೆಗಾ ಹರಾಜಿನಲ್ಲಿ ಭಾಗವಹಿಸುವ ಬಗ್ಗೆ ಆ ದೇಶದ ಕ್ರಿಕೆಟ್ ಮಂಡಳಿಯಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಅಲ್ಲದೆ ಜೋ ರೂಟ್, ಬೆನ್ ಸ್ಟೋಕ್ಸ್, ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರಂತಹ ಆಟಗಾರರು ಈ ಪಂದ್ಯಾವಳಿಗೆ ಗೈರಾಗಬಹುದು ಎಂದು ವರದಿಯಾಗಿದೆ.

ಕ್ರಿಕ್‌ಬಜ್ ವೆಬ್‌ಸೈಟ್‌ನ ಸುದ್ದಿ ಪ್ರಕಾರ, ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಐಪಿಎಲ್ ಮೆಗಾ ಹರಾಜಿನಲ್ಲಿ ಭಾಗವಹಿಸಬೇಕೇ ಅಥವಾ ಬೇಡವೇ ಎಂದು ಗಂಭೀರವಾಗಿ ಆಲೋಚಿಸುತ್ತಿದ್ದಾರೆ. ಏಕೆಂದರೆ ಬಯೋಬಬಲ್​ನಲ್ಲಿ ಇರುವುದು ಈ ಆಟಗಾರರಿಗೆ ಸಾಕಷ್ಟು ಕಷ್ಟ ಎನಿಸಿದೆ. ಅವರು ಐಪಿಎಲ್ 2022 ಗೆ ಸೇರಿದರೆ, ಅವರು ಜುಲೈವರೆಗೆ ಸುಮಾರು 22 ವಾರಗಳ ಕಾಲ ಬಯೋಬಬಲ್​ನಲ್ಲಿ ಇರಬೇಕಾಗುತ್ತದೆ. ಜುಲೈ ನಂತರವೇ ಅವರು ಸ್ವಲ್ಪ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ.

ಆಸ್ಟ್ರೇಲಿಯಾದ ವೇಳಾಪಟ್ಟಿ ತುಂಬಿದೆ ಕಮ್ಮಿನ್ಸ್ ಮತ್ತು ಸ್ಟಾರ್ಕ್ ಆಸ್ಟ್ರೇಲಿಯಾದ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡುತ್ತಿದ್ದಾರೆ. ಹೀಗಾಗಿ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಅವರು ಫಿಟ್ನೇಸ್ ಕಾಯ್ದುಕೊಳ್ಳಬೇಕು. ಈ ಟೂರ್ನಿ ಹೇಗಿದ್ದರೂ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಹೀಗಿರುವಾಗ ಈ ಆಟಗಾರರು ಹರಾಜಿನಿಂದ ಹಿಂದೆ ಸರಿಯಬಹುದು. ಆಸ್ಟ್ರೇಲಿಯಾ ಈಗ ಜನವರಿ 30 ರಿಂದ ಫೆಬ್ರವರಿ 8 ರವರೆಗೆ ನ್ಯೂಜಿಲೆಂಡ್‌ ವಿರುದ್ಧ ODI-T20, ಫೆಬ್ರವರಿಯಲ್ಲಿ ಶ್ರೀಲಂಕಾ ವಿರುದ್ಧ T20 ಸರಣಿಯನ್ನು ಆಡಬೇಕಾಗಿದೆ. ಇದಾದ ನಂತರ ಅವರು ಪಾಕಿಸ್ತಾನ ಪ್ರವಾಸ ಮಾಡಬೇಕು. ಈ ಪ್ರವಾಸವು ಒಂದು ತಿಂಗಳವರೆಗೆ ಇರುತ್ತದೆ. ಅಷ್ಟರಲ್ಲೇ ಐಪಿಎಲ್‌ ಆರಂಭವಾಗುತ್ತದೆ. ಬಳಿಕ ಟೆಸ್ಟ್ ಮತ್ತು ಏಕದಿನ ಪಂದ್ಯವನ್ನಾಡಲು ಶ್ರೀಲಂಕಾಕ್ಕೆ ಹೋಗಬೇಕಿದೆ.

ಈ ಹಿಂದೆ ಮಿಚೆಲ್ ಸ್ಟಾರ್ಕ್ ಅವರು ಐಪಿಎಲ್‌ ಹರಾಜಿಗೆ ಹೆಸರು ನೋಂದಾಯಿಸಲು ಯೋಚಿಸುತ್ತಿರುವುದಾಗಿ ಹೇಳಿದ್ದರು ಆದರೆ ಇನ್ನೂ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೆ ಈಗ ಅವರು ಐಪಿಎಲ್ ಆಡುವುದು ಕಷ್ಟವಾಗುತ್ತಿದೆ. ಐಪಿಎಲ್ ಆಡಬೇಕೆಂಬ ಆಸೆ ಹೊತ್ತಿದ್ದ ರೂಟ್ ಆಶಸ್ ಸರಣಿಯಲ್ಲಿ ತಂಡದ ಸೋಲಿನ ನಂತರ ತಮ್ಮ ನಿರ್ಧಾರವನ್ನು ಬದಲಾಯಿಸಿದರು.

ಸ್ಟೋಕ್ಸ್-ಕಮಿನ್ಸ್ ಮೇಲೆ ಹಣದ ಮಳೆ ಬೆನ್ ಸ್ಟೋಕ್ಸ್ ಮತ್ತು ಪ್ಯಾಟ್ ಕಮಿನ್ಸ್ ಐಪಿಎಲ್‌ನ ಅತ್ಯಂತ ದುಬಾರಿ ಕ್ರಿಕೆಟಿಗರಲ್ಲಿ ಒಬ್ಬರು. ಅದೇ ಸಮಯದಲ್ಲಿ, ಜೋ ರೂಟ್ ಇದುವರೆಗೆ ಈ ಪಂದ್ಯಾವಳಿಯಲ್ಲಿ ಆಡಿಲ್ಲ. ಅದೇ ಸಮಯದಲ್ಲಿ, ಮಿಚೆಲ್ ಸ್ಟಾರ್ಕ್ ಕೊನೆಯದಾಗಿ IPL 2016 ರಲ್ಲಿ ಆಡಿದರು. ಅಂದಿನಿಂದ ಅವರು IPL ನಿಂದ ದೂರವಿದ್ದಾರೆ. ರೂಟ್ ಹೊರತಾಗಿ ಉಳಿದ ಮೂವರು ಹರಾಜಿಗೆ ಬಂದರೆ ಅವರ ಮೇಲೆ ಭಾರಿ ಹಣದ ಸುರಿಮಳೆಗೆ ತಂಡಗಳು ಸಜ್ಜಾಗಬಹುದು.

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’