IPL 2025: ಆರ್​ಸಿಬಿಗೆ ದೊಡ್ಡ ನಷ್ಟ: ಯಾವ ತಂಡದಿಂದ ಎಷ್ಟು ಆಟಗಾರರು ಐಪಿಎಲ್​ನಿಂದ ಔಟ್?, ಇಲ್ಲಿದೆ ಸಂಪೂರ್ಣ ಮಾಹಿತಿ

IPL 2025 Miss Players: ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ನಡುವಿನ ಪಂದ್ಯಗಳು ಮೇ 21 ರಿಂದ ಮತ್ತು ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯಗಳು ಮೇ 29 ರಿಂದ ನಡೆಯಲಿವೆ. ಹೀಗಿರುವಾಗ ಬೇರೆ ದೇಶಗಳು ತಮ್ಮ ಆಟಗಾರರನ್ನು ವಾಪಸ್ ಕರೆಸಿಕೊಂಡರೆ ಯಾವ ತಂಡಗಳು ನಷ್ಟ ಅನುಭವಿಸುತ್ತವೆ ಎಂಬುದನ್ನು ನೋಡುವುದಾದರೆ...

IPL 2025: ಆರ್​ಸಿಬಿಗೆ ದೊಡ್ಡ ನಷ್ಟ: ಯಾವ ತಂಡದಿಂದ ಎಷ್ಟು ಆಟಗಾರರು ಐಪಿಎಲ್​ನಿಂದ ಔಟ್?, ಇಲ್ಲಿದೆ ಸಂಪೂರ್ಣ ಮಾಹಿತಿ
Mi And Rcb

Updated on: May 14, 2025 | 7:42 AM

ಬೆಂಗಳೂರು (ಮೇ. 14): ಬಿಸಿಸಿಐ ಐಪಿಎಲ್ 2025 ರ (Indian Premier League) ಉಳಿದ 17 ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೇ 9 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಲೀಗ್ ಅನ್ನು ಒಂದು ವಾರ ಮುಂದೂಡಲಾಯಿತು. ಆರಂಭಿಕ ವೇಳಾಪಟ್ಟಿಯ ಪ್ರಕಾರ, ಐಪಿಎಲ್ ಫೈನಲ್ ಪಂದ್ಯವು ಮೇ 25 ರಂದು ನಡೆಯಬೇಕಿತ್ತು. ಈಗ ಅದು ಜೂನ್ 3ಕ್ಕೆ ಮುಂದೂಡಲಾಗಿದೆ. ಸಾಮಾನ್ಯವಾಗಿ ಎಲ್ಲಾ ಪ್ರಮುಖ ಕ್ರಿಕೆಟ್ ರಾಷ್ಟ್ರಗಳು ಐಪಿಎಲ್ ಇರುವ ಸಮಯದಲ್ಲಿ ಇತರೆ ಯಾವುದೇ ಅಂತರಾಷ್ಟ್ರೀಯ ಪಂದ್ಯವನ್ನು ಆಯೋಜಿಸುವುದಿಲ್ಲ. ಐಪಿಎಲ್ ಮುಗಿದ ತಕ್ಷಣ ಅಂತರರಾಷ್ಟ್ರೀಯ ಪಂದ್ಯಗಳು ಮತ್ತೆ ಪ್ರಾರಂಭವಾಗುತ್ತವೆ. ಆದರೀಗ ಈಗ ವೇಳಾಪಟ್ಟಿಯಲ್ಲಿನ ಬದಲಾವಣೆಯಿಂದಾಗಿ, ಅನೇಕ ದೇಶಗಳ ಅಂತರಾಷ್ಟ್ರೀಯ ಪಂದ್ಯಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

WTC ಫೈನಲ್ ಸೇರಿದಂತೆ ಮೂರು ಸರಣಿಗಳು:

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಇದು ಮೇ 11 ರಿಂದ ಪ್ರಾರಂಭವಾಗಲಿದೆ. ಐಪಿಎಲ್ ಅದಕ್ಕಿಂತ ಒಂದು ವಾರ ಮೊದಲು ಕೊನೆಗೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರಿಗೆ ಇಂಗ್ಲೆಂಡ್ ತಲುಪಿದ ನಂತರ ಅಭ್ಯಾಸ ಮಾಡಲು ಅವಕಾಶ ಸಿಗುವುದಿಲ್ಲ. ಆಟಗಾರರು ಬಿಳಿ ಚೆಂಡಿನ ಕ್ರಿಕೆಟ್‌ನಿಂದ ಕೆಂಪು ಚೆಂಡಿನ ಕ್ರಿಕೆಟ್‌ಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಇದರೊಂದಿಗೆ ವೆಸ್ಟ್ ಇಂಡೀಸ್ ತಂಡವು ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸವನ್ನೂ ಮಾಡಬೇಕಾಗಿದೆ. ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ನಡುವಿನ ಪಂದ್ಯಗಳು ಮೇ 21 ರಿಂದ ಮತ್ತು ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯಗಳು ಮೇ 29 ರಿಂದ ನಡೆಯಲಿವೆ.

ಹೀಗಿರುವಾಗ ಬೇರೆ ದೇಶಗಳು ತಮ್ಮ ಆಟಗಾರರನ್ನು ವಾಪಸ್ ಕರೆಸಿಕೊಂಡರೆ ಯಾವ ತಂಡಗಳು ನಷ್ಟ ಅನುಭವಿಸುತ್ತವೆ ಎಂಬುದನ್ನು ನೋಡುವುದಾದರೆ…

ಇದನ್ನೂ ಓದಿ
ರೋ-ಕೊ ಇಲ್ಲದೆ ಟೆಸ್ಟ್ ಆಡಲಿರುವ ಭಾರತ: ಅಂದು ಹೀಗಾಗಿದ್ದಾಗ ಏನಾಗಿತ್ತು?
ನಿವೃತ್ತಿಯ ಮರುದಿನವೇ ಗುರೂಜಿಯ ಭೇಟಿಯಾದ ವಿರಾಟ್ ಕೊಹ್ಲಿ
ವಿದೇಶಿ ಆಟಗಾರರು ಬರದಿದ್ದರೂ, ಮೇ 16 ರಿಂದ ಲೀಗ್ ಮತ್ತೆ ಆರಂಭ
ಮೊದಲ ಪಂದ್ಯದಲ್ಲೇ ಆರ್​ಸಿಬಿ ಕಣಕ್ಕೆ; ಇಲ್ಲಿದೆ ಹೊಸ ವೇಳಾಪಟ್ಟಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಹೊಡೆತ:

ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಮ್ಮ ಆಟಗಾರರನ್ನು ವಾಪಸ್ ಕರೆಸಿದರೆ ಆರ್‌ಸಿಬಿಗೆ ದೊಡ್ಡ ಹೊಡೆತ ಬೀಳಲಿದೆ. ತಂಡದ ಆರಂಭಿಕ ಆಟಗಾರ ಫಿಲ್ ಸಾಲ್ಟ್, ಯುವ ಬ್ಯಾಟ್ಸ್‌ಮನ್ ಜಾಕೋಬ್ ಬೆಥೆಲ್, ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ರೊಮಾರಿಯೊ ಶೆಫರ್ಡ್ ತಮ್ಮ ದೇಶಕ್ಕೆ ಮರಳಬೇಕಾಗುತ್ತದೆ. ಗಾಯಗೊಂಡ ಜೋಶ್ ಹೈಡೆಲ್‌ವುಡ್ ಭಾಗವಹಿಸುವ ಬಗ್ಗೆ ಈಗಾಗಲೇ ಸಂದೇಹವಿದೆ. ಲುಂಗಿ ಎನ್‌ಗಿಡಿ ಕೂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಬೇಕಾಗಿದ್ದು, ಅವರನ್ನೂ ಮೊದಲೇ ಕರೆಸಿಕೊಳ್ಳಬಹುದು.

IPL 2025: ಮೇ 17 ರಿಂದ ಐಪಿಎಲ್ ದ್ವಿತೀಯಾರ್ಧ, ಜೂನ್ 3 ರಂದು ಫೈನಲ್; ಬಿಸಿಸಿಐ ಅಧಿಕೃತ ಹೇಳಿಕೆ

ಕೋಲ್ಕತ್ತಾ ತಂಡ ಸುರಕ್ಷಿತ:

ಪ್ಲೇಆಫ್ ರೇಸ್‌ನಲ್ಲಿರುವ ತಂಡಗಳಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಮಾತ್ರ ಅಂತರರಾಷ್ಟ್ರೀಯ ವೇಳಾಪಟ್ಟಿಯಿಂದ ಸುರಕ್ಷಿತವಾಗಿದೆ. ತಂಡದಲ್ಲಿ ಮೂವರು ವೆಸ್ಟ್ ಇಂಡೀಸ್ ಆಟಗಾರರಿದ್ದಾರೆ. ಆದರೆ ಅವರಲ್ಲಿ ಯಾರೂ ಏಕದಿನ ಪಂದ್ಯಗಳನ್ನು ಆಡುವುದಿಲ್ಲ. ಇಂಗ್ಲೆಂಡ್‌ನ ಮೊಯಿನ್ ಅಲಿ ಮತ್ತು ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ನಿವೃತ್ತರಾಗಿದ್ದಾರೆ. ಸ್ಪೆನ್ಸರ್ ಜಾನ್ಸನ್ ಮತ್ತು ಅನ್ರಿಚ್ ನಾರ್ಟ್ಜೆ ಟೆಸ್ಟ್ ತಂಡದಲ್ಲಿದ್ದಾರೆ. ಅಫ್ಘಾನಿಸ್ತಾನ ಈ ಪಂದ್ಯದಲ್ಲಿ ಆಡದ ಕಾರಣ ರಹಮಾನಲ್ಲಾ ಗುರ್ಬಾಜ್ ಕೂಡ ಇಡೀ ಋತುವಿಗೆ ಲಭ್ಯವಿರುತ್ತಾರೆ.

ಪ್ಲೇಆಫ್ ರೇಸ್‌ನಲ್ಲಿ ಯಾವ ತಂಡದಿಂದ ಯಾವ ಆಟಗಾರರು ಹೊರ ಹೋಗಬಹುದು?:

ಮುಂಬೈ ಇಂಡಿಯನ್ಸ್: ರಿಯಾನ್ ರಿಕಲ್ಟನ್ ಮತ್ತು ಕಾರ್ಬಿನ್ ಬಾಷ್.

ಪಂಜಾಬ್ ಕಿಂಗ್ಸ್: ಮಾರ್ಕೊ ಜಾನ್ಸೆನ್, ಜೋಶ್ ಇಂಗ್ಲಿಸ್.

ಗುಜರಾತ್ ಟೈಟಾನ್ಸ್: ಜೋಸ್ ಬಟ್ಲರ್, ಶೆರ್ಫೇನ್ ರುದರ್‌ಫೋರ್ಡ್, ಕಗಿಸೊ ರಬಾಡ ಮತ್ತು ಜೆರಾಲ್ಡ್ ಕೋಟ್ಜಿ.

ಡೆಲ್ಲಿ ಕ್ಯಾಪಿಟಲ್ಸ್: ಮಿಚೆಲ್ ಸ್ಟಾರ್ಕ್ ಮತ್ತು ಟ್ರಿಸ್ಟಾನ್ ಸ್ಟಬ್ಸ್.

ಲಕ್ನೋ ಸೂಪರ್ ಜೈಂಟ್ಸ್: ಶೆಮರ್ ಜೋಸೆಫ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಜೋಶ್ ಹ್ಯಾಜಲ್‌ವುಡ್, ಲುಂಗಿ ಎನ್‌ಗಿಡಿ, ರೊಮಾರಿಯೊ ಶೆಫರ್ಡ್, ಜಾಕೋಬ್ ಬೆಥೆಲ್, ಫಿಲ್ ಸಾಲ್ಟ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ