AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK, Super 4: ಹುಟ್ಟು ಟೆರರಿಸ್ಟ್​ಗಳು: ಸಾಹಿಬ್‌ಜಾದಾ ಗನ್ ಫೈಯರ್ ಸೆಲೆಬ್ರೇಷನ್​ಗೆ ವ್ಯಾಪಕ ಆಕ್ರೋಶ

Sahibzada Farhan Gun Fire Celebration: ಭಾರತ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನದ ಸಾಹಿಬ್‌ಜಾದಾ ಫರ್ಹಾನ್ 35 ಎಸೆತಗಳಲ್ಲಿ ಅರ್ಧಶತಕ ತಲುಪಿದರು. ಹಾಫ್ ಸೆಂಚುರಿ ಬಾರಿಸಿದ ವೇಳೆ ಫರ್ಹಾನ್ ಮಾಡಿದ ಗನ್ ಫೈಯರ್ ಸೆಲೆಬ್ರೇಷನ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

IND vs PAK, Super 4: ಹುಟ್ಟು ಟೆರರಿಸ್ಟ್​ಗಳು: ಸಾಹಿಬ್‌ಜಾದಾ ಗನ್ ಫೈಯರ್ ಸೆಲೆಬ್ರೇಷನ್​ಗೆ ವ್ಯಾಪಕ ಆಕ್ರೋಶ
Sahibzada Farhan Celebration
ಪ್ರೀತಿ ಭಟ್​, ಗುಣವಂತೆ
| Edited By: |

Updated on:Sep 22, 2025 | 8:20 AM

Share

ಬೆಂಗಳೂರು (ಸೆ. 22): ಏಷ್ಯಾ ಕಪ್‌ 2025ರ ಸೂಪರ್ 4 ಹಂತದ ಎರಡನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾದವು. ಭಾರತದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ತಮ್ಮ ಆರಂಭಿಕ ಜೋಡಿಯಲ್ಲಿ ಬದಲಾವಣೆ ಮಾಡಿತು. ಸೈಮ್ ಅಯೂಬ್ ಬದಲಿಗೆ ಸಾಹಿಬ್‌ಜಾದಾ ಫರ್ಹಾನ್ ಅವರೊಂದಿಗೆ ಫಖರ್ ಜಮಾನ್ ಅವರನ್ನು ಓಪನರ್ ಆಗಿ ಕಳುಹಿಸಿತು. ಆರಂಭದಲ್ಲೇ ಪಾಕ್ ಬ್ಯಾಟರ್​ಗಳು ಎಡವಿದ್ದರೂ ಭಾರತೀಯ ಫೀಲ್ಡರ್‌ಗಳ ಕಳಪೆ ಪ್ರದರ್ಶನದಿಂದ ಬಚಾವ್ ಆದರು. ಈ ಪೈಕಿ ಫರ್ಹಾನ್ ತಮಗೆ ಸಿಕ್ಕ ಲೈಫ್‌ಲೈನ್‌ಗಳ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡರು.

ಸಾಹಿಬ್‌ಜಾದಾ ಫರ್ಹಾನ್ 45 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 58 ರನ್ ಗಳಿಸಿದರು. ಇದೀಗ ಇವರು ಅರ್ಧಶತಕ ಗಳಿಸಿದ ನಂತರ ಸಂಭ್ರಮಾಚರಣೆ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ವಿವಾದ ಹುಟ್ಟುಹಾಕಿದೆ. ಫರ್ಹಾನ್ ಹಾಫ್ ಸೆಂಚುರಿ ಸಿಡಿಸಿದ ತಕ್ಷ ತಮ್ಮ ಬ್ಯಾಟ್‌ ಅನ್ನು ರೈಫಲ್ ರೀತಿ ಹಿಡಿದು ಫೈಯರ್ ಮಾಡುವಂತೆ ಅರ್ಧಶತಕವನ್ನು ಆಚರಿಸಿದರು.

ಇದನ್ನೂ ಓದಿ
Image
ಕೈ ಸನ್ನೆಯೊಂದಿಗೆ ಭಾರತೀಯ ಸೈನಿಕರನ್ನು ಹೀಯಾಳಿಸಿದ ಹಾರಿಸ್ ರೌಫ್
Image
ಪಾಕ್ ತಂಡದ ಮಾನ ಕಳೆದ ಸೂರ್ಯಕುಮಾರ್
Image
ಹಾರಿಸ್ ರೌಫ್​ಗೆ ಚಳಿ ಬಿಡಿಸಿದ ಅಭಿಷೇಕ್ ಶರ್ಮಾ
Image
IND vs PAK: ಭಾರತದ ತೂಫಾನ್​ಗೆ ತತ್ತರಿಸಿದ ಪಾಕಿಸ್ತಾನ್

ಸಾಹಿಬ್‌ಜಾದಾ ಫರ್ಹಾನ್ ಗನ್ ಫೈಯರ್ ಸೆಲೆಬ್ರೇಷನ್ ವಿಡಿಯೋ:

ಸಾಹಿಬ್‌ಜಾದಾ ಫರ್ಹಾನ್ ಈ ರೀತಿ ಸಂಭ್ರಮಾಚರಣೆ ಮಾಡಿದ್ದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಓರ್ವ ಎಕ್ಸ್ ಬಳಕೆದಾರ, ‘‘ಈ ಫೋಟೋದಲ್ಲಿ ಪಾಕಿಸ್ತಾನಿ ಮನಸ್ಥಿತಿಯನ್ನು ಪಾಕಿಸ್ತಾನಿ ಕ್ರಿಕೆಟಿಗರು ತೋರಿಸಿದ್ದಾರೆ. ಇವರು ಹುಟ್ಟು ಭಯೋತ್ಪಾದಕರು. ಜೀವನದಲ್ಲಿ ಒಂದೇ ಒಂದು ಗುರಿ. ಭಾರತೀಯರ ಮೇಲೆ ಗುಂಡು ಹಾರಿಸುವುದು. ಬ್ಲಡಿ ಈಡಿಯಟ್ಸ್ – ಇದೇ ರೀತಿಯ ದ್ವೇಷಪೂರಿತ ಮನಸ್ಥಿತಿ, ಪ್ರಚೋದಿಸಿದರೆ – ಯಾರೂ ಅವರಿಗೆ ಕರುಣೆ ತೋರಿಸುವುದಿಲ್ಲ.’’ ಎಂದು ಬರೆದುಕೊಂಡಿದ್ದಾರೆ.

ಫರ್ಹಾನ್ ಈ ಹಿಂದೆ ಭಾರತದ ವಿರುದ್ಧ ಗುಂಪು ಹಂತದ ಪಂದ್ಯದಲ್ಲಿ ನಿಧಾನವಾಗಿ ಬ್ಯಾಟಿಂಗ್ ಮಾಡಿದ್ದರು ಎಂಬುದನ್ನು ಗಮನಿಸಬೇಕು. ಅಲ್ಲಿ ಅವರು 44 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 40 ರನ್ ಗಳಿಸಿದರು.

IND vs PAK: ಭಾರತದ ತೂಫಾನ್​ಗೆ ತತ್ತರಿಸಿದ ಪಾಕಿಸ್ತಾನ್

ಸಾಹಿಬ್‌ಜಾದಾ ಫರ್ಹಾನ್‌ಗೆ ಎರಡು ಜೀವದಾನ

ಈ ಪಂದ್ಯದಲ್ಲಿ ಸಾಹಿಬ್‌ಜಾದಾ ಫರ್ಹಾನ್‌ಗೆ ಎರಡು ಜೀವದಾನ ನೀಡಲಾಯಿತು. ಅವರ ಎರಡೂ ಕ್ಯಾಚ್‌ಗಳನ್ನು ಭಾರತದ ಅಭಿಷೇಕ್ ಶರ್ಮಾ ಕೈಬಿಟ್ಟರು. ಅವರು ಈ ಜೀವಗಳನ್ನು ಸದುಪಯೋಗಪಡಿಸಿಕೊಂಡರು. ಅವರು 45 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 58 ರನ್ ಗಳಿಸಿದರು. 15 ನೇ ಓವರ್‌ನ ಮೊದಲ ಎಸೆತದಲ್ಲಿ ಅವರು ಔಟಾ ಆದರು. ಶಿವಂ ದುಬೆ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಉತ್ತಮ ಕ್ಯಾಚ್ ಪಡೆದರು.

ಟೀಮ್ ಇಂಡಿಯಾ ಪಾಕಿಸ್ತಾನವನ್ನು ಆರು ವಿಕೆಟ್‌ಗಳಿಂದ ಸೋಲಿಸಿ ಜಯಗಳಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಭಾರತಕ್ಕೆ 172 ರನ್‌ಗಳ ಗುರಿಯನ್ನು ನಿಗದಿಪಡಿಸಿತು. ಟೀಮ್ ಇಂಡಿಯಾ 18.5 ಓವರ್‌ಗಳಲ್ಲಿ ಆರು ವಿಕೆಟ್‌ಗಳು ಬಾಕಿ ಇರುವಾಗಲೇ ಗುರಿಯನ್ನು ತಲುಪಿತು. ಅಭಿಷೇಕ್ ಶರ್ಮಾ (74) ಸ್ಫೋಟಕ ಬ್ಯಾಟಿಂಗ್ ನಡೆಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:19 am, Mon, 22 September 25

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ