Virat Kohli: ಛಾಮಿಯಾ ಡ್ಯಾನ್ಸ್…ವಿರಾಟ್ ಕೊಹ್ಲಿ ವಿರುದ್ದ ನಾಲಿಗೆ ಹರಿಬಿಟ್ಟ ಸೆಹ್ವಾಗ್

| Updated By: ಝಾಹಿರ್ ಯೂಸುಫ್

Updated on: Jul 04, 2022 | 2:00 PM

Virender Sehwag: ಮೈದಾನದಲ್ಲಿ ಕೊಹ್ಲಿನೃತ್ಯ ಶುರುಮಾಡಿದ್ದರೆ, ಇತ್ತ ಕಾಮೆಂಟರಿ ಪ್ಯಾನೆಲ್​ನಲ್ಲಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ವೀರೇಂದ್ರ ಸೆಹ್ವಾಗ್​ಗೆ ನೋಡಿ ವಿರಾಟ್ ಕೊಹ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ ಎಂದು ತೋರಿಸಿದರು.

Virat Kohli: ಛಾಮಿಯಾ ಡ್ಯಾನ್ಸ್...ವಿರಾಟ್ ಕೊಹ್ಲಿ ವಿರುದ್ದ ನಾಲಿಗೆ ಹರಿಬಿಟ್ಟ ಸೆಹ್ವಾಗ್
Virender Sehwag-Virat Kohli
Follow us on

ಎಡ್ಜ್‌ಬಾಸ್ಟನ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ (India vs England 5th Test) ವಿರುದ್ದದ 5ನೇ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಉತ್ತಮ ಸ್ಥಿತಿಯಲ್ಲಿದೆ. ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್​ ನಷ್ಟದೊಂದಿಗೆ 125 ರನ್​ಗಳಿಸಿದೆ. ಇದರೊಂದಿಗೆ ಭಾರತ ತಂಡವು ಒಟ್ಟು 257 ರನ್‌ಗಳ ಮುನ್ನಡೆ ಪಡೆದುಕೊಂಡಿದೆ. ಇದಕ್ಕೂ ಮುನ್ನ ಇಂಗ್ಲೆಂಡ್​ ತಂಡದ ಮೊದಲ ಇನಿಂಗ್ಸ್​ ವೇಳೆ ವಿರಾಟ್ ಕೊಹ್ಲಿ ಅತ್ಯುತ್ಸಾಹದಲ್ಲಿ ಕಾಣಿಸಿಕೊಂಡಿದ್ದರು. ಟೀಮ್ ಇಂಡಿಯಾ ಬೌಲರ್​​ಗಳನ್ನು ಹುರಿದುಂಬಿಸುತ್ತಾ ಕೊಹ್ಲಿ ಮೈದಾನದಲ್ಲಿ ಮಾಜಿ ನಾಯಕನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಇದರ ನಡುವೆ ಮೈದಾನದಲ್ಲಿ ವಿರಾಟ್ ಕೊಹ್ಲಿ ನೃತ್ಯ ಮಾಡುತ್ತಿರುವುದು ಕೂಡ ಕಂಡು ಬಂದಿದೆ.

ಅತ್ತ ಮೈದಾನದಲ್ಲಿ ಕೊಹ್ಲಿ ಡ್ಯಾನ್ಸ್ ಶುರುಮಾಡಿದ್ದರೆ, ಇತ್ತ ಕಾಮೆಂಟರಿ ಪ್ಯಾನೆಲ್​ನಲ್ಲಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ವೀರೇಂದ್ರ ಸೆಹ್ವಾಗ್​ಗೆ ನೋಡಿ ವಿರಾಟ್ ಕೊಹ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ ಎಂದು ತೋರಿಸಿದರು. ಆದರೆ ಇದನ್ನು ನೋಡಿದ ಸೆಹ್ವಾಗ್, ಛಾಮಿಯಾ ನೃತ್ಯ ಮಾಡುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ
IND vs ENG: ಟೀಮ್ ಇಂಡಿಯಾ ಆಟಗಾರರು ವಿಶೇಷ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದು ಯಾಕೆ ಗೊತ್ತಾ?
6,6,6,6,6: ಒಂದೇ ಓವರ್​ನಲ್ಲಿ ಸಿಕ್ಸ್​ಗಳ ಸುರಿಮಳೆ: ಟಿ20 ಬ್ಲಾಸ್ಟ್​ನಲ್ಲಿ ಹೊಸ ದಾಖಲೆ
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!
Test Cricket Records: ಟೆಸ್ಟ್​ನಲ್ಲಿ ಅತೀ ವೇಗದ ಶತಕ ಬಾರಿಸಿದ್ದು ಯಾರು ಗೊತ್ತಾ?

ಸೆಹ್ವಾಗ್ ಅವರ ಈ ವರ್ಣನೆಗೆ ಇದೀಗ ವಿರಾಟ್ ಕೊಹ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಛಾಮಿಯಾ ಎಂಬ ಪದವನ್ನು ಜನರ ಗುಂಪಿನ ನಡುವೆ ನರ್ತಿಸುವ ನರ್ತಕಿಯರಿಗೆ ಅಥವಾ​ ಬಾರ್​​ನಲ್ಲಿ ಡ್ಯಾನ್ಸ್​ ಮಾಡುವ ಯುವತಿಯರಿಗೆ ಬಳಸಲಾಗುತ್ತದೆ. ಇತ್ತ ಕೊಹ್ಲಿ ಡ್ಯಾನ್ಸ್ ಮಾಡುವುದನ್ನು ನೋಡಿ ಸೆಹ್ವಾಗ್ ಛಾಮಿಯಾ ಡ್ಯಾನ್ಸ್ ಮಾಡ್ತಿದ್ದಾರೆ ಎಂದಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಪದವನ್ನು ವಿರಾಟ್ ಕೊಹ್ಲಿಯ ಮೇಲೆ ಸೆಹ್ವಾಗ್ ಪ್ರಯೋಗಿಸಿದ್ದು ಸರಿಯಲ್ಲ ಎಂಬ ವಾದಗಳನ್ನು ಕೊಹ್ಲಿ ಅಭಿಮಾನಿಗಳು ಮುಂದಿಡುತ್ತಿದ್ದಾರೆ.

ಇದಕ್ಕೂ ಮುನ್ನ ಸೆಹ್ವಾಗ್, ವಿರಾಟ್ ಕೊಹ್ಲಿ ಜಾನಿ ಬೈರ್​ಸ್ಟೋವ್ ಜೊತೆಗೆ ವಾಕ್ಸಮರಕ್ಕೆ ಇಳಿದಿದ್ದನ್ನು ಪ್ರಶ್ನಿಸುವಂತೆ ಟ್ವೀಟ್ ಮಾಡಿದ್ದರು. ವಿರಾಟ್ ಕೊಹ್ಲಿಯಿಂದಾಗಿ ಜಾನಿ ಬೈರ್‌ಸ್ಟೋವ್ ಭಾರತದ ವಿರುದ್ಧ ಶತಕ ಬಾರಿಸಿದ್ದಾರೆ ಎಂದು ಸೆಹ್ವಾಗ್ ಟ್ವೀಟ್‌ನಲ್ಲಿ ಹೇಳಿದ್ದರು. ಕೋಹ್ಲಿ ಸ್ಲೆಡ್ಜಿಂಗ್‌ ಮಾಡುವ ಮೊದಲು ಜಾನಿ ಬೈರ್‌ಸ್ಟೋವ್ ಅವರ ಸ್ಟ್ರೈಕ್ ರೇಟ್ 21 ಆಗಿತ್ತು. ಕೊಹ್ಲಿ ಕೆಣಕಿ ಬೈರ್​ಸ್ಟೋವ್ ಅವರ ಸ್ಟ್ರೈಕ್ ರೇಟ್ ಅನ್ನು 150 ಮಾಡಿದ್ದರು. ಕೊಹ್ಲಿ ಅನಗತ್ಯವಾಗಿ ಸ್ಲೆಡ್ಜಿಂಗ್ ಮಾಡಿ ಬೈರ್​ಸ್ಟೋವ್​ರನ್ನು ರಿಷಭ್ ಪಂತ್ ಮಾಡಿಬಿಟ್ಟರು ಎಂದು ಸೆಹ್ವಾಗ್ ಟ್ವೀಟ್​ನಲ್ಲಿ ಬರೆದುಕೊಂಡಿದ್ದರು. ಇದಾದ ಬಳಿಕ ಕೊಹ್ಲಿಯ ಡ್ಯಾನ್ಸ್​ ಅನ್ನು ಛಾಮಿಯಾ ನರ್ತಿಸುತ್ತಿದ್ದಾರೆ ಎನ್ನುವ ಮೂಲಕ ಇದೀಗ ವೀರೇಂದ್ರ ಸೆಹ್ವಾಗ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇನ್ನು ಈ ಪಂದ್ಯದ ಮಾತನಾಡುವುದಾದರೆ, ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಕಲೆಹಾಕಿದ 416 ರನ್​ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತಂಡವು 284 ರನ್​ಗಳಿಗೆ ಆಲೌಟ್ ಆಗಿದೆ. ಇದೀಗ ಮೊದಲ ಇನಿಂಗ್ಸ್​ನ 132 ರನ್​ಗಳ ಮುನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 125 ರನ್​ಗಳಿಸಿದೆ. ಈ ಮೂಲಕ ಒಟ್ಟು 257 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ವಿಶೇಷ ಎಂದರೆ ಉಭಯ ತಂಡಗಳಿಗೂ ನಾಲ್ಕನೇ ದಿನದಾಟ ಬಹಳ ಮುಖ್ಯವಾಗಿದೆ. ಹೀಗಾಗಿ ಉಳಿದೆರಡು ದಿನ ಎಡ್ಜ್​ಬಾಸ್ಟನ್​ ಮೈದಾನದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

 

 

Published On - 1:59 pm, Mon, 4 July 22