Chetan Sakariya: ಫೈನಲ್ ಪಂದ್ಯ ನೋಡಲು ರಾಜಸ್ಥಾನ್ ಜೆರ್ಸಿಯಲ್ಲಿ ಬಂದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯರ್

| Updated By: Vinay Bhat

Updated on: May 30, 2022 | 3:54 PM

IPL 2022 Final, GT vs RR: ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಐಪಿಎಲ್ 2022 ಫೈನಲ್ ಪಂದ್ಯ ವೀಕ್ಷಣೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್ ಚೇತನ್ ಸಕರಿಯ ಬಂದಿದ್ದರು. ಅಚ್ಚರಿ ಎಂದರೆ ಅವರು ರಾಜಸ್ಥಾನ್ ರಾಯಲ್ಸ್ ತಂಡದ ಜೆರ್ಸಿ ತೊಟ್ಟಿದ್ದರು.

Chetan Sakariya: ಫೈನಲ್ ಪಂದ್ಯ ನೋಡಲು ರಾಜಸ್ಥಾನ್ ಜೆರ್ಸಿಯಲ್ಲಿ ಬಂದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯರ್
Chetan Sakariya GT vs RR IPL Final
Follow us on

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಗೆ ಅದ್ಧೂರಿ ತೆರೆ ಬಿದ್ದಿದೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ (Gujarat Titans) ತಂಡ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸಂಘಟಿತ ಪ್ರದರ್ಶನದಿಂದಲೇ ಫೈನಲ್ ವರೆಗೆ ಬಂದಿ ಜಿಟಿ ತಂಡ ತನ್ನ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಜೊತೆಗೆ ಹಾರ್ದಿಕ್ ನಾಯಕತ್ವಕ್ಕೆ ಎಲ್ಲರು ಮನಸೋತಿದ್ದಾರೆ. ಇತ್ತ 2008ರ ಬಳಿಕ ಮೊದಲ ಬಾರಿಗೆ ಫೈನಲ್ ತಲುಪಿದ್ದ ರಾಜಸ್ಥಾನ್ ರಾಯಲ್ಸ್ ಕಪ್​ಗೆ ಮುತ್ತಿಕ್ಕುವಲ್ಲಿ ಎಡವಿತು. ವಿಶೇಷ ಎಂದರೆ ಈ ಪಂದ್ಯ ವೀಕ್ಷಣೆಗೆ ಲೀಗ್ ಹಂತದ ಕೊನೆಯಲ್ಲಿ ಟೂರ್ನಿಯಿಂದ ಹೊರಬದ್ದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಆಟಗಾರ ಹಾಜರಿದ್ದರು. ಅಚ್ಚರಿ ಎಂದರೆ ಅವರು ರಾಜಸ್ಥಾನ್ ರಾಯಲ್ಸ್ (Rajastan Royals) ತಂಡದ ಜೆರ್ಸಿ ತೊಟ್ಟಿದ್ದರು. ಹಾಗಾದ್ರೆ ಯಾರು ಆ ಪ್ಲೇಯರ್?, ಅವರು ಆರ್​​ಆರ್​ ಜೆರ್ಸಿ ತೊಟ್ಟು ಬಂದಿದ್ದೇಕೆ?, ಇಲ್ಲಿದೆ ನೋಡಿ ಮಾಹಿತಿ.

ಹೌದು, ಗುಜರಾತ್-ರಾಜಸ್ಥಾನ್ ಪಂದ್ಯ ವೀಕ್ಷಣೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್ ಚೇತನ್ ಸಕರಿಯ ರಾಜಸ್ಥಾನ್ ಜೆರ್ಸಿಯಲ್ಲಿ ಬಂದಿದ್ದರು. ಅವರು ಆರ್​ಆರ್​ ಜೆರ್ಸಿಯಲ್ಲಿ ಬರಲು ಪ್ರಮುಖ ಕಾರಣ ಕೂಡ ಇದೆ. ಸಕರಿಯ 2021 ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿದ್ದರು. ಇಲ್ಲಿ ಅತ್ಯುತ್ತಮ ಪ್ರದರ್ಶನ ಕೂಡ ನೀಡಿದ್ದರು. ಆರ್​ಆರ್​ ಅವರಿಗೆ ಅವಕಾಶ ನೀಡಿದ ಕಾರಣ ಮಾರಕ ಬೌಲರ್ ಆಗಿ ಗೋಚರಿಸಿದ ಇವರು ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡಕ್ಕೂ ಆಯ್ಕೆಯಾಗಿದ್ದರು. ಇದಕ್ಕೆಲ್ಲ ಮುಖ್ಯ ಕಾರಣ ರಾಜಸ್ಥಾನ್ ಪರ ಅವರು ನೀಡಿದ ಪ್ರದರ್ಶನ.

ಇದನ್ನೂ ಓದಿ
Hardik Pandya: ಗುಜರಾತ್ ಗೆದ್ದ ತಕ್ಷಣ ಹಾರ್ದಿಕ್ ಪಾಂಡ್ಯ ಬಳಿ ಅಳುತ್ತಾ ಓಡಿ ಬಂದ ನತಾಶ: ವಿಡಿಯೋ
IPL 2022 Award Winners: ಐಪಿಎಲ್ 2022 ಎಮರ್ಜಿಂಗ್ ಪ್ಲೇಯರ್, ಸೂಪರ್ ಸ್ಟ್ರೈಕರ್ ಯಾರು?; ಇಲ್ಲಿದೆ ಎಲ್ಲ ಪ್ರಶಸ್ತಿಯ ಸಂಪೂರ್ಣ ಮಾಹಿತಿ
Hardik Pandya: ಇದು ಪ್ರಪಂಚಕ್ಕೆ ಒಂದು ಸಂದೇಶ: ಪಂದ್ಯ ಮುಗಿದ ಬಳಿಕ ಹಾರ್ದಿಕ್ ಪಾಂಡ್ಯ ಹೀಗೆ ಹೇಳಿದ್ದೇಕೆ?
GT vs RR, IPL 2022 Final: ಫೈನಲ್​ನಲ್ಲಿ ಗೆದ್ದ ತಕ್ಷಣ ಗುಜರಾತ್ ಟೈಟಾನ್ಸ್ ಆಟಗಾರರು ಮಾಡಿದ್ದೇನು ನೋಡಿ

GT vs RR, IPL 2022: ಐಪಿಎಲ್ 2022 ಫೈನಲ್ ಪಂದ್ಯ ಫಿಕ್ಸಿಂಗ್?: ಅನುಮಾನ ಹುಟ್ಟುಹಾಕಿದೆ ಫೋಟೋಗಳು ಎಂದ ಫ್ಯಾನ್ಸ್

ಐಪಿಎಲ್ 2021 ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಮೆಗಾ ಹರಾಜಿನ ಕಾರಣ ರಾಜಸ್ಥಾನ್ ಚೇತನ್ ಸಕರಿಯ ಅವರನ್ನು ಕೈಬಿಟ್ಟಿತು. ನಂತರ ಐಪಿಎಲ್ 2022 ದೊಡ್ಡ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇವರನ್ನು ಖರೀದಿ ಮಾಡಿತ್ತು. ಈ ಬಾರಿ ಇವರಿಗೆ ಹೆಚ್ಚಿನ ಪಂದ್ಯದಲ್ಲಿ ಆಡಲು ಅವಕಾಶ ಸಿಗಲಿಲ್ಲ. ಕೇವಲ 3 ಪಂದ್ಯದಲ್ಲಿ ಮಾತ್ರ ಕಣಕ್ಕಿಳಿದಿದ್ದರು. ಆದರೀಗ ತನ್ನನ್ನು ಬೆಳೆಸಿದ ರಾಜಸ್ಥಾನ್ ರಾಯಲ್ಸ್ ಗೆಲ್ಲಲಿ ಎಂದು ಹಾರೈಸಿ ಸಪೋರ್ಟ್​ ಮಾಡಲು ಫೈನಲ್ ಪಂದ್ಯಕ್ಕೆ ಮೈದಾನದಲ್ಲಿ ಹಾಜರಿದ್ದರು. ಇವರ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

ಆದರೆ, ಫೈನಲ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಪಡೆ ಗೆಲುವು ಕಾಣಲು ಸಾಧ್ಯವಾಗಲಿಲ್ಲ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ನಿರ್ಣಾಯಕ ಪಂದ್ಯದಲ್ಲಿ ವೈಫಲ್ಯ ಕಂಡಿತು. 20 ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿತು. ಜೈಸ್ವಾಲ್ 22, ಬಟ್ಲರ್ 39, ಸ್ಯಾಮ್ಸನ್ 14, ಹೆಟ್ಮೈಯರ್ 11, ಆರ್. ಅಶ್ವಿನ್ 6, ರಿಯಾನ್ 15 ರನ್ ಗಳಿಸಿದರು. ಗುಜರಾತ್ ಪರವಾಗಿ ಹಾರ್ದಿಕ್ ಪಾಂಡ್ಯ 3 ವಿಕೆಟ್, ಸಾಯಿಕಿಶೋರ್ 2 ವಿಕೆಟ್ ಪಡೆದರು.

ಗೆಲುವಿನ ಗುರಿ ಬೆನ್ನತ್ತಿದ್ದ ಗುಜರಾತ್ ತಂಡ 18.1 ಓವರುಗಳಲ್ಲಿ 3 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ ಗೆಲುವಿನ ನಗೆ ಬೀರಿತು. ವೃದ್ಧಿಮಾನ್ ಸಹಾ 5 ಹಾಗೂ ಮ್ಯಾಥ್ಯೂ ವೇಡ್ 8 ವೈಫಲ್ಯ ಅನುಭವಿಸಿದರೂ, ಶುಭ್ಮನ್ ಗಿಲ್ ಅಜೇಯ 45, ಹಾರ್ದಿಕ್ ಪಾಂಡ್ಯ 34, ಡೇವಿಡ್ ಮಿಲ್ಲರ್ ಅಜೇಯ 32 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:54 pm, Mon, 30 May 22