ಕೊಹ್ಲಿ, ಗಿಲ್, ಸೂರ್ಯ…ರೋಹಿತ್ ಶರ್ಮಾಗೆ ಯಾರಲ್ಲಿ ಏನು ಇಷ್ಟ? ಇಲ್ಲಿದೆ ಉತ್ತರ
ODI World Cup 2023: ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಭಾರತ ತಂಡವು ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಒಂದೆಡೆ ಏಕದಿನ ವಿಶ್ವಕಪ್ ಕಾವೇರುತ್ತಿದ್ದರೆ, ಮತ್ತೊಂದೆಡೆ ಟೀಮ್ ಇಂಡಿಯಾ ಮೇಲಿನ ನಿರೀಕ್ಷೆಗಳು ಮುಗಿಲೆತ್ತರಕ್ಕೇರುತ್ತಿದೆ. ಇದಕ್ಕೆ ಮುಖ್ಯ ಕಾರಣ ಈ ಬಾರಿ ಭಾರತದಲ್ಲಿ ವಿಶ್ವಕಪ್ ನಡೆಯುತ್ತಿರುವುದು. ಅದರ ಜೊತೆಗೆ ಯಶಸ್ವಿ ನಾಯಕ ಎನಿಸಿಕೊಂಡಿರುವ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವುದು.
ಈ ನಿರೀಕ್ಷೆಗಳನ್ನು ದುಪಟ್ಟುಗೊಳಿಸುವಂತೆ ಬಲಿಷ್ಠ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. ತಂಡದಲ್ಲಿ ಅತಿರಥ ಮಹಾರಥರಂತಹ ಬ್ಯಾಟರ್ಗಳು ಇರುವುದು ರೋಹಿತ್ ಶರ್ಮಾ ಅವರ ವಿಶ್ವಾಸವನ್ನು ಹೆಚ್ಚಿಸಿದೆ.
ಈ ಬ್ಯಾಟರ್ಗಳಲ್ಲಿ ಯಾರು ಬೆಸ್ಟ್ ಪ್ರಶ್ನೆಗೆ ರೋಹಿತ್ ಶರ್ಮಾ ವಿಭಿನ್ನ ಉತ್ತರಗಳನ್ನು ನೀಡಿದ್ದಾರೆ. ಅದರಲ್ಲೂ ಒಬ್ಬೊಬ್ಬರಲ್ಲಿ ಒಂದೊಂದು ಹೊಡೆತಗಳನ್ನು ಇಷ್ಟಪಡುತ್ತೇನೆ ಎಂದಿದ್ದಾರೆ ಹಿಟ್ಮ್ಯಾನ್. ಹಾಗೆಯೇ ಕ್ರಿಕೆಟ್ ಅಂಗಳದಲ್ಲಿ ತಾನು ಎದುರಿಸಿದ ಕಠಿಣ ಬೌಲರ್ ಯಾರು ಎಂಬುದನ್ನೂ ಕೂಡ ರೋಹಿತ್ ಶರ್ಮಾ ಬಹಿರಂಗಪಡಿಸಿದ್ದಾರೆ.
ಅದರಂತೆ ರೋಹಿತ್ ಶರ್ಮಾರನ್ನು ಕಾಡಿದ ಬೌಲರ್ ಯಾರು? ಯಾವ ಬ್ಯಾಟರ್ನ ಯಾವ ಶಾಟ್ ಇಷ್ಟ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ…
- ವಿರಾಟ್ ಕೊಹ್ಲಿ: ಅತ್ಯುತ್ತಮ ಕವರ್ ಡ್ರೈವ್
- ಸಚಿನ್ ತೆಂಡೂಲ್ಕರ್: ಅತ್ಯುತ್ತಮ ಸ್ಟ್ರೈಟ್ ಡ್ರೈವ್
- ಶುಭ್ಮನ್ ಗಿಲ್: ಅದ್ಭುತ ಪ್ರತಿಭೆ
- ರಿಕಿ ಪಾಂಟಿಂಗ್: ಅತ್ಯುತ್ತಮ ಪುಲ್ ಶಾಟ್
- ಸೂರ್ಯಕುಮಾರ್ ಯಾದವ್: ಅತ್ಯುತ್ತಮ ಸ್ಕೂಪ್
- ಡೇಲ್ ಸ್ಟೈನ್: ಎದುರಿಸಿದ ಕಠಿಣ ಬೌಲರ್.