ವರ್ಷದ ಅತ್ಯುತ್ತಮ ಟೆಸ್ಟ್ ತಂಡ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ; ಭಾರತದ ನಾಲ್ವರಿಗೆ ಸ್ಥಾನ! ಆದರೆ..?
ಕ್ರಿಕೆಟ್ ಆಸ್ಟ್ರೇಲಿಯಾ ಈ ವರ್ಷದ ಅತ್ಯುತ್ತಮ ಟೆಸ್ಟ್ ತಂಡವನ್ನು ಆಯ್ಕೆ ಮಾಡಿದೆ. ಇದರಲ್ಲಿ ಭಾರತದ ನಾಲ್ವರು ಆಟಗಾರರು ಆಯ್ಕೆಯಾಗಿದ್ದಾರೆ.ಆದರೆ ಭಾರತ ಕ್ರಿಕೆಟ್ ಜೊತೆಗೆ ವಿಶ್ವ ಕ್ರಿಕೆಟ್ನ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲೊಬ್ಬರಾದ ವಿರಾಟ್ ಕೊಹ್ಲಿಗೆ ಈ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿ ಅಂದರೆ ಕ್ರಿಕೆಟ್ ಆಸ್ಟ್ರೇಲಿಯಾ ಈ ವರ್ಷದ ಅತ್ಯುತ್ತಮ ಟೆಸ್ಟ್ ತಂಡವನ್ನು ಆಯ್ಕೆ ಮಾಡಿದೆ. ಇದರಲ್ಲಿ ಭಾರತದ ನಾಲ್ವರು ಆಟಗಾರರು ಆಯ್ಕೆಯಾಗಿದ್ದಾರೆ.ಆದರೆ ಭಾರತ ಕ್ರಿಕೆಟ್ ಜೊತೆಗೆ ವಿಶ್ವ ಕ್ರಿಕೆಟ್ನ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲೊಬ್ಬರಾದ ವಿರಾಟ್ ಕೊಹ್ಲಿಗೆ ಈ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಕೊಹ್ಲಿ ನಾಯಕತ್ವದಲ್ಲಿ ಭಾರತ ಟೆಸ್ಟ್‌ನಲ್ಲಿ ಅನೇಕ ಸಾಧನೆಗಳನ್ನು ಮಾಡಿದೆ. ಆದರೆ ಕೊಹ್ಲಿ ಈ ತಂಡದಲ್ಲಿ ಸ್ಥಾನ ಪಡೆದಿಲ್ಲ. 2016 ರಲ್ಲಿ ಮಿಚೆಲ್ ಸ್ಟಾರ್ಕ್ ತನ್ನ ಎಸೆತಗಳಿಗೆ ಬೆದರಿದ್ದ ಆಟಗಾರನನ್ನು ತಂಡದ ನಾಯಕನಾಗಿ ಕ್ರಿಕೆಟ್ ಆಸ್ಟ್ರೇಲಿಯಾ ನೇಮಿಸಿದೆ.
ಕರುಣಾರತ್ನೆ 2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಐದು ಇನ್ನಿಂಗ್ಸ್‌ಗಳಲ್ಲಿ ಐದು ಬಾರಿ, ಅವರು ಮಿಚೆಲ್ ಸ್ಟಾರ್ಕ್ ಅವರ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿದ್ದರು. ಅವರು ಮೂರು ಪಂದ್ಯಗಳಲ್ಲಿ ಕೇವಲ 41 ರನ್ ಗಳಿಸಿದ್ದರು. ಐದು ಬಾರಿ ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ. ತಮ್ಮ ಕಳಪೆ ಫಾರ್ಮ್‌ನ ಹೊರತಾಗಿಯೂ, ಶ್ರೀಲಂಕಾ ಆಸ್ಟ್ರೇಲಿಯಾವನ್ನು 3-0 ಅಂತರದಿಂದ ಸೋಲಿಸಿತು.
ಈ ನಾಲ್ವರು ಭಾರತೀಯರಿಗೆ ಸ್ಥಾನ ಸಿಕ್ಕಿದೆ ಕರುಣಾರತ್ನೆ ಆರಂಭಿಕರಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಆರಂಭಿಕ ಜವಬ್ದಾರಿಯನ್ನು ಭಾರತದ ರೋಹಿತ್ ಶರ್ಮಾ ಅವರಿಗೆ ವಹಿಸಲಾಗಿದೆ. ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲದೆ, ಈ ತಂಡದಲ್ಲಿ ಭಾರತದ ಇಬ್ಬರು ಸ್ಪಿನ್ನರ್‌ಗಳೂ ಸೇರಿದ್ದಾರೆ. ಅವರೆಂದರೆ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್.
ಸಿಎ ತನ್ನ ದೇಶದ ಮಾರ್ನಸ್ ಲ್ಯಾಬುಸ್ಚಾಗ್ನೆ ಅವರನ್ನು ಮೂರನೇ ಸ್ಥಾನಕ್ಕೆ ಆಯ್ಕೆ ಮಾಡಿದೆ. ಜೋ ರೂಟ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರ ನಂತರ ಫವಾದ್ ಆಲಂ ಮತ್ತು ಪಂತ್ ಇದ್ದಾರೆ. ನಂತರ ಅಶ್ವಿನ್ ಮತ್ತು ನಂತರ ನ್ಯೂಜಿಲೆಂಡ್‌ನ ಕೈಲ್ ಜೇಮ್ಸನ್ ಇದ್ದಾರೆ. ಅಕ್ಷರ್ ಪೆಟಲ್ ನಂತರ ಪಾಕಿಸ್ತಾನದ ಹಸನ್ ಅಲಿ ಮತ್ತು ಶಾಹೀನ್ ಶಾ ಆಫ್ರಿದಿ ಇದ್ದಾರೆ.
ಕೊಹ್ಲಿ ನಾಯಕತ್ವದಲ್ಲಿ ಉತ್ತಮ ಸಾಧನೆ ಆದರೆ, ಕೊಹ್ಲಿ ನಾಯಕತ್ವದಲ್ಲಿ ಭಾರತ ಈ ವರ್ಷ ಉತ್ತಮ ಸಾಧನೆ ಮಾಡಿದೆ. ತಮ್ಮ ತಾಯ್ನಾಡಿನಲ್ಲಿ, ಭಾರತವು ಇಂಗ್ಲೆಂಡ್ ಅನ್ನು ಸೋಲಿಸಿತು ಮತ್ತು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಿತು. ಆದರೆ ತಂಡವು ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿತು. ಇದರ ನಂತರ, ವಿರಾಟ್ ನಾಯಕತ್ವದಲ್ಲಿ, ಭಾರತವು ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿತು. ಭಾರತವು ಐತಿಹಾಸಿಕವಾಗಿ ವರ್ಷವನ್ನು ಕೊನೆಗೊಳಿಸಿತು. ವಿರಾಟ್ ನಾಯಕತ್ವದಲ್ಲಿ ಟೀಂ ಇಂಡಿಯಾ ಸೆಂಚುರಿಯನ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಈ ಮೈದಾನದಲ್ಲಿ ಭಾರತಕ್ಕಿಂತ ಮೊದಲು ಯಾವುದೇ ಏಷ್ಯಾದ ತಂಡ ದಕ್ಷಿಣ ಆಫ್ರಿಕಾವನ್ನು ಟೆಸ್ಟ್‌ನಲ್ಲಿ ಸೋಲಿಸಿರಲಿಲ್ಲ. ಆದರೆ, ವಿರಾಟ್ ಅವರ ಬ್ಯಾಟ್ ಅಷ್ಟಾಗಿ ಯಶಸ್ವಿಯಾಗಲಿಲ್ಲ. ಈ ವರ್ಷವೂ ಅವರ ಶತಕಗಳ ಬರ ಮುಂದುವರಿದಿದೆ. ಎರಡು ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶತಕ ಬಾರಿಸಲು ಸಾಧ್ಯವಾಗಿಲ್ಲ.
ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಮಾಡಿರುವ ಟೆಸ್ಟ್ ತಂಡ ಇಂತಿದೆ: ದಿಮುತ್ ಕರುಣಾರತ್ನೆ (ನಾಯಕ), ರೋಹಿತ್ ಶರ್ಮಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಜೋ ರೂಟ್, ಫವಾದ್ ಆಲಂ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕೈಲ್ ಜೇಮ್ಸನ್, ಅಕ್ಷರ್ ಪಟೇಲ್, ಹಸನ್ ಅಲಿ, ಶಾಹೀನ್ ಶಾ ಆಫ್ರಿದಿ.