AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: RCB ದಾಖಲೆಯನ್ನು ಸರಿಗಟ್ಟಿದ CSK

RCB vs CSK: 217 ರನ್​ಗಳ ಟಾರ್ಗೆಟ್ ನೀಡಿದ ಸಿಎಸ್​ಕೆ ಗೆಲುವಿನ ವಿಶ್ವಾಸದಲ್ಲೇ ಮೈದಾನಕ್ಕಿಳಿಯಿತು. ಮೂರನೇ ಓವರ್​ನಲ್ಲಿ ಫಾಫ್ ಡುಪ್ಲೆಸಿಸ್, 5ನೇ ಓವರ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ 6ನೇ ಓವರ್​ನಲ್ಲಿ ಅನೂಜ್ ರಾವತ್ ವಿಕೆಟ್ ಪಡೆಯುವ ಮೂಲಕ ಸಿಎಸ್​ಕೆ ಪವರ್​ಪ್ಲೇನಲ್ಲೇ ಆರ್​ಸಿಬಿಗೆ ಆಘಾತ ನೀಡಿದರು.

IPL 2022: RCB ದಾಖಲೆಯನ್ನು ಸರಿಗಟ್ಟಿದ CSK
Csk vs Rcb
TV9 Web
| Updated By: ಝಾಹಿರ್ ಯೂಸುಫ್|

Updated on: Apr 13, 2022 | 4:17 PM

Share

IPL 2022: ಇಂಡಿಯನ್ ಪ್ರೀಮಿಯರ್ ಲೀಗ್​ನ 22ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್​ ತಂಡವು 23 ರನ್​ಗಳಿಂದ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ತಂಡವು 216 ರನ್​ಗಳನ್ನು ಕಲೆಹಾಕಿತು. ಈ ದೊಡ್ಡ ಟಾರ್ಗೆಟ್ ಬೆನ್ನತ್ತಿದ ಆರ್​ಸಿಬಿ ಅಂತಿಮವಾಗಿ 193 ರನ್​ಗಳಿಸಲಷ್ಟೇ ಶಕ್ತರಾದರು. ವಿಶೇಷ ಎಂದರೆ ಆರ್​ಸಿಬಿ ತಂಡದಕ್ಕೆ 216 ರನ್​ಗಳ ಟಾರ್ಗೆಟ್ ನೀಡುವ ಸಿಎಸ್​ಕೆ ತಂಡವು ಆರ್​ಸಿಬಿ ತಂಡದ ದಾಖಲೆಯೊಂದನ್ನು ಸರಿಗಟ್ಟಿದೆ. ಹೌದು, ಐಪಿಎಲ್​ನಲ್ಲಿ ಅತೀ ಹೆಚ್ಚು ಬಾರಿ 200 ರನ್​ ಬಾರಿಸಿದ ದಾಖಲೆ ಆರ್​ಸಿಬಿ ಹೆಸರಿನಲ್ಲಿತ್ತು. ಇದೀಗ ಈ ದಾಖಲೆಯನ್ನು ಸಿಎಸ್​ಕೆ ತಂಡ ಸರಿಗಟ್ಟಿದೆ. ಆರ್​ಸಿಬಿ ತಂಡವು ಐಪಿಎಲ್​ನಲ್ಲಿ 21 ಬಾರಿ 200ಕ್ಕಿಂತ ಹೆಚ್ಚಿನ ರನ್ ಕಲೆಹಾಕಿದೆ. ಇದೀಗ ಸಿಎಸ್​ಕೆ ಕೂಡ 21 ಬಾರಿ 200 ಕ್ಕೂ ಅಧಿಕ ರನ್​ಗಳಿಸಿದೆ. ಈ ಮೂಲಕ ಆರ್​ಸಿಬಿ ತಂಡದ ವಿಶೇಷ ದಾಖಲೆಯನ್ನು ಸರಿಗಟ್ಟಿದ್ದಾರೆ.

ಒಂದು ವೇಳೆ ಆರ್​ಸಿಬಿ ತಂಡವು ಸಿಎಸ್​ಕೆ ವಿರುದ್ದ ಗೆದ್ದಿದ್ದರೆ ಈ ದಾಖಲೆ ಮತ್ತೆ ಆರ್​ಸಿಬಿ ಪಾಲಾಗುತ್ತಿತ್ತು. ಇದೀಗ ಐಪಿಎಲ್​ನಲ್ಲಿ ಅತೀ ಹೆಚ್ಚು ಬಾರಿ 200 ರನ್​ ಬಾರಿಸಿದ ದಾಖಲೆಯನ್ನು ಸಿಎಸ್​ಕೆ ಹಾಗೂ ಆರ್​ಸಿಬಿ ಹಂಚಿಕೊಂಡಿದೆ. ಹೀಗಾಗಿ ಈ ಬಾರಿ ಯಾವ ತಂಡ ಅತೀ ಹೆಚ್ಚು 200+ ರನ್​ಗಳಿಸಲಿದೆ ಆ ತಂಡದ ಹೆಸರಿಗೆ ಹೊಸ ದಾಖಲೆ ನಿರ್ಮಾಣವಾಗಲಿದೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್​ ಬೌಲಿಂಗ್ ಆಯ್ದುಕೊಂಡರು. ಆರಂಭದಲ್ಲಿ ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲರ್​ಗಳು ಬೌಲಿಂಗ್ ಮಾಡಿದ್ದರು. ಆದರೆ 10 ಓವರ್​ಗಳ ಬಳಿಕ ಎಲ್ಲವೂ ಬದಲಾಯಿತು. ಸಿಎಸ್​ಕೆ ತಂಡದ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಹಾಗೂ ಆಲ್​ರೌಂಡರ್ ಶಿವಂ ದುಬೆ ಅಬ್ಬರಿಸಲಾರಂಭಿಸಿದರು. ಇತ್ತ ನಾಯಕ ಫಾಫ್ ಡುಪ್ಲೆಸಿಸ್ ಬೌಲರ್​ಗಳನ್ನು ಬದಲಿಸಿದರೂ ಫಲಿತಾಂಶ ಮಾತ್ರ ಒಂದೇ ಆಗಿತ್ತು. ಪರಿಣಾಮ ಮೂರನೇ ವಿಕೆಟ್​ಗೆ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಜೋಡಿ 165 ರನ್​ಗಳ ಜೊತೆಯಾಟವಾಡಿದರು.

ಈ ವೇಳೆ 50 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 4 ಫೋರ್​ನೊಂದಿಗೆ 88 ರನ್​ ಬಾರಿಸಿದ್ದ ರಾಬಿನ್ ಉತ್ತಪ್ಪ ಔಟಾದರು. ಆದರೆ ದುಬೆಯ ಆರ್ಭಟ ಮಾತ್ರ ಮುಂದುವರೆದಿತ್ತು. ಕೊನೆಯ ಓವರ್​ವರೆಗೂ ಬ್ಯಾಟ್ ಬೀಸಿದ ದುಬೆ 8 ಸಿಕ್ಸ್​ ಹಾಗೂ 5 ಬೌಂಡರಿಯೊಂದಿಗೆ ಕೇವಲ 45 ಎಸೆತಗಳಲ್ಲಿ ಅಜೇಯ 95 ರನ್​ಗಳಿಸಿತ್ತು. ಅಲ್ಲಿಗೆ ಸಿಎಸ್​ಕೆ ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 216 ಕ್ಕೆ ಬಂದು ನಿಂತಿತು.

217 ರನ್​ಗಳ ಟಾರ್ಗೆಟ್ ನೀಡಿದ ಸಿಎಸ್​ಕೆ ಗೆಲುವಿನ ವಿಶ್ವಾಸದಲ್ಲೇ ಮೈದಾನಕ್ಕಿಳಿಯಿತು. ಮೂರನೇ ಓವರ್​ನಲ್ಲಿ ಫಾಫ್ ಡುಪ್ಲೆಸಿಸ್, 5ನೇ ಓವರ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ 6ನೇ ಓವರ್​ನಲ್ಲಿ ಅನೂಜ್ ರಾವತ್ ವಿಕೆಟ್ ಪಡೆಯುವ ಮೂಲಕ ಸಿಎಸ್​ಕೆ ಪವರ್​ಪ್ಲೇನಲ್ಲೇ ಆರ್​ಸಿಬಿಗೆ ಆಘಾತ ನೀಡಿದರು. ಅಷ್ಟೇ ಅಲ್ಲದೆ ಪವರ್​ಪ್ಲೇನಲ್ಲಿ ನೀಡಿದ್ದು ಕೇವಲ 42 ರನ್​ ಮಾತ್ರ. ಇನ್ನು 11 ಎಸೆತಗಳಲ್ಲಿ 26 ರನ್ ಬಾರಿಸಿ ಗ್ಲೆನ್ ಮ್ಯಾಕ್ಸ್​ವೆಲ್ ಕೂಡ ಔಟಾಗಿದ್ದರು. ಈ ಹಂತದಲ್ಲಿ ಜೊತೆಗೂಡಿದ ಶಹಬಾಜ್ ಅಹ್ಮದ್ ಹಾಗೂ ಸುಯಶ್ ಪ್ರಭುದೇಸಾಯಿ ಅರ್ಧಶತಕದ ಜೊತೆಯಾಟವಾಡಿದರು. ಅದರಲ್ಲೂ ಚೊಚ್ಚಲ ಪಂದ್ಯವಾಡಿದ ಸುಯಶ್ 18 ಎಸೆತಗಳಲ್ಲಿ 34 ರನ್ ಬಾರಿಸುವ ಮೂಲಕ ತಮ್ಮ ಪಾತ್ರ ನಿರ್ವಹಿಸಿದ್ದರು. ಮತ್ತೊಂದೆಡೆ 27 ಎಸೆತಗಳಲ್ಲಿ 41 ರನ್ ಬಾರಿಸಿ ಶಹಬಾಜ್ ಕೂಡ ಅಬ್ಬರಿಸಿದರು.

ಈ ಇಬ್ಬರ ವಿಕೆಟ್ ಬೀಳುತ್ತಿದ್ದಂತೆ ಸಿಎಸ್​ಕೆ ತಂಡವು ಮೇಲುಗೈ ಸಾಧಿಸಿತು. ಇದರ ಬೆನ್ನಲ್ಲೇ ವನಿಂದು ಹಸರಂಗ ಹಾಗೂ ಆಕಾಶ್ ದೀಪ್ ಬಂದ ವೇಗದಲ್ಲೇ ವಿಕೆಟ್ ಕೈಚೆಲ್ಲಿ ಹಿಂತಿರುಗಿದರು. ಈ ವೇಳೆ ಆರ್​ಸಿಬಿ ತಂಡದ ಸ್ಕೋರ್ 8 ವಿಕೆಟ್​ ನಷ್ಟಕ್ಕೆ 146 ರನ್​. ಈ ಹಂತದಲ್ಲಿ ದಿನೇಶ್ ಕಾರ್ತಿಕ್ ಅಬ್ಬರಿಸಿದರು. ಕೇವಲ 13 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 2 ಫೋರ್​ನೊಂದಿಗೆ 34 ರನ್ ಬಾರಿಸಿದರು. ಆದರೆ ಬ್ರಾವೊ ಅವರ ಮ್ಯಾಜಿಕ್ ಬಾಲ್​ಗೆ ಭರ್ಜರಿ ಉತ್ತರ ನೀಡಲು ಹೋದ ಡಿಕೆಗೆ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ಔಟಾದರು. ಅಂತಿಮವಾಗಿ ಆರ್​ಸಿಬಿ ತಂಡವು 9 ವಿಕೆಟ್ ನಷ್ಟಕ್ಕೆ 193 ರನ್​ಗಳಿಸಿ 23 ರನ್​ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ: Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್

ಇದನ್ನೂ ಓದಿ: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಯಾರು ಗೊತ್ತಾ?

ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ
ಹೆಚ್ಚುತ್ತಲೇ ಇದೆ ‘ಸು ಫ್ರಮ್ ಸೋ’ ಸಿನಿಮಾ ಶೋ ಸಂಖ್ಯೆ; ಕಲೆಕ್ಷನ್ ಹೇಗಿದೆ?
ಹೆಚ್ಚುತ್ತಲೇ ಇದೆ ‘ಸು ಫ್ರಮ್ ಸೋ’ ಸಿನಿಮಾ ಶೋ ಸಂಖ್ಯೆ; ಕಲೆಕ್ಷನ್ ಹೇಗಿದೆ?