BBL 2021: ಕೇವಲ 44 ಎಸೆತಗಳಲ್ಲಿ 98 ರನ್​: RCB ಮಾಜಿ ಆಟಗಾರನ ಸ್ಪೋಟಕ ಬ್ಯಾಟಿಂಗ್

| Updated By: ಝಾಹಿರ್ ಯೂಸುಫ್

Updated on: Jan 08, 2022 | 8:15 PM

Daniel sams: 210 ರನ್​ಗಳ ಗುರಿ ಪಡೆದ ಮೆಲ್ಬೋರ್ನ್​ ರೆನೆಗೇಡ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಸಿಡ್ನಿ ಥಂಡರ್ ಬೌಲರುಗಳು ಯಶಸ್ವಿಯಾದರು.

BBL 2021: ಕೇವಲ 44 ಎಸೆತಗಳಲ್ಲಿ 98 ರನ್​: RCB ಮಾಜಿ ಆಟಗಾರನ ಸ್ಪೋಟಕ ಬ್ಯಾಟಿಂಗ್
Daniel sams
Follow us on

ಬಿಗ್​ ಬ್ಯಾಷ್​ ಲೀಗ್​ನ 40ನೇ ಪಂದ್ಯದಲ್ಲಿ ಮೆಲ್ಬೋರ್ನ್​ ರೆನೆಗೇಡ್ಸ್​ ವಿರುದ್ದ ಸಿಡ್ನಿ ಥಂಡರ್ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದ ಮೆಲ್ಬೋರ್ನ್​ ತಂಡದ ನಾಯಕ ನಿಕ್ ಮೆಡಿನ್ಸನ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಸಿಡ್ನಿ ಥಂಡರ್ ಉತ್ತಮ ಆರಂಭ ಪಡೆದಿರಲಿಲ್ಲ. 12 ರನ್​ಗೆ ಮೊದಲ ವಿಕೆಟ್ ಕಳೆದುಕೊಂಡ ಸಿಡ್ನಿ ತಂಡಕ್ಕೆ ಅಲೆಕ್ಸ್ ಹೇಲ್ಸ್ ಹಾಗೂ ಜೇಸನ್ ಸಂಘಾ ಆಸರೆಯಾದರು. 28 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್​​ನೊಂದಿಗೆ 63 ರನ್ ಬಾರಿಸುವ ಮೂಲಕ ಹೇಲ್ಸ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಇನ್ನು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಲ್​ರೌಂಡರ್ ಡೇನಿಯಲ್ ಸ್ಯಾಮ್ಸ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಮೆಲ್ಬೋರ್ನ್​ ಬೌಲರುಗಳನ್ನು ಹಿಗ್ಗಾಮುಗ್ಗ ದಂಡಿಸಿದ ಸ್ಯಾಮ್ಸ್​ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಪರಿಣಾಮ ಕೇವಲ 44 ಎಸೆತಗಳಲ್ಲಿ ಸ್ಯಾಮ್ಸ್​ ಬ್ಯಾಟ್​ನಿಂದ 8 ಸಿಕ್ಸ್ ಹಾಗೂ 7 ಬೌಂಡರಿ ಮೂಡಿಬಂತು. ಅಷ್ಟೇ ಅಲ್ಲದೆ ಅಜೇಯ 98 ರನ್​ ಬಾರಿಸುವ ಮೂಲಕ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ ತಂಡದ ಮೊತ್ತವನ್ನು 209 ಕ್ಕೆ ತಂದು ನಿಲ್ಲಿಸಿದರು.

210 ರನ್​ಗಳ ಗುರಿ ಪಡೆದ ಮೆಲ್ಬೋರ್ನ್​ ರೆನೆಗೇಡ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಸಿಡ್ನಿ ಥಂಡರ್ ಬೌಲರುಗಳು ಯಶಸ್ವಿಯಾದರು. ಇತ್ತ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡ ರೆನೆಗೇಡ್ಸ್ ಕೇವಲ 80 ರನ್​ಗೆ ಆಲೌಟ್ ಆಯಿತು. ಇದರೊಂದಿಗೆ ಸಿಡ್ನಿ ಥಂಡರ್ ತಂಡವು 129 ರನ್​ಗಳ ಭರ್ಜರಿ ಜಯ ಸಾಧಿಸಿತು. ಸಿಡ್ನಿ ಪರ ಮೊಹಮ್ಮದ್ ಹಸ್ನೈನ್ 3 ವಿಕೆಟ್ ಕಬಳಿಸಿದರೆ, ಗುರಿಂದರ್ ಸಂಧು, ತನ್ವೀರ್ ಸಂಘಾ ತಲಾ 2 ವಿಕೆಟ್ ಪಡೆದು ಮಿಂಚಿದರು. ಇನ್ನು ಡೇನಿಯಲ್ ಸ್ಯಾಮ್ಸ್ ಕೂಡ 1 ವಿಕೆಟ್ ಕಬಳಿಸಿದರು. ಬ್ಯಾಟಿಂಗ್ ಮತ್ತು ಬೌಲಿಂಗ್​ನೊಂದಿಗೆ ಆಲ್​ರೌಂಡರ್ ಪ್ರದರ್ಶನ ನೀಡಿದ ಡೇನಿಯಲ್ ಸ್ಯಾಮ್ಸ್​ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: Steve Smith: 11 ಶತಕ, 11 ಅರ್ಧಶತಕ: ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Daniel sams played an excellent innings in bbl as sydney thunder beat Melbourne renegedes)