AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jasprit Bumrah: ಬುಮ್ರಾ ಅವರು ಹರ್ಷಲ್ ಪಟೇಲ್ ರೀತಿಯಲ್ಲ: ಬಿಸಿಸಿಐ ನಿರ್ಧಾರವನ್ನು ಪ್ರಶ್ನಿಸಿದ ದನೀಶ್ ಕನೇರಿಯಾ

Danish Kaneria: ಜಸ್​ಪ್ರೀತ್ ಬುಮ್ರಾ ನೇರವಾಗಿ ಟಿ20 ವಿಶ್ವಕಪ್ ಮೂಲಕವೇ ಕಮ್​ಬ್ಯಾಕ್ ಮಾಡಬೇಕಿತ್ತು. ಈ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಅವರಿಗೆ ಅಗತ್ಯವಿರಲಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನ್ನರ್ ದನೀಶ್ ಕನೇರಿಯಾ ಹೇಳಿದ್ದಾರೆ.

Jasprit Bumrah: ಬುಮ್ರಾ ಅವರು ಹರ್ಷಲ್ ಪಟೇಲ್ ರೀತಿಯಲ್ಲ: ಬಿಸಿಸಿಐ ನಿರ್ಧಾರವನ್ನು ಪ್ರಶ್ನಿಸಿದ ದನೀಶ್ ಕನೇರಿಯಾ
Jasprit Bumrah
TV9 Web
| Updated By: Vinay Bhat|

Updated on:Sep 30, 2022 | 11:45 AM

Share

ಸ್ಟಾರ್ ವೇಗಿ ಜಸ್​ಪ್ರೀತ್ ಬುಮ್ರಾ (Jasprit Bumrah) ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್​ನಿಂದ ಹೊರಬಿದ್ದಿರುವುದು ಟೀಮ್ ಇಂಡಿಯಾಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಮೊದಲೇ ಬೌಲಿಂಗ್​ನಲ್ಲಿ ಕೊಂಚ ದುರ್ಬಲವಾಗಿರುವ ಭಾರತಕ್ಕೆ ಬುಮ್ರಾ ಅಲಭ್ಯತೆ ಮತ್ತಷ್ಟು ಪೆಟ್ಟುಬಿದ್ದಿದೆ. ಇಂಜುರಿಗೊಳಗಾಗಿರುವ ಬುಮ್ರಾಗೆ ಯಾವುದೇ ರೀತಿಯ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ. ಆದರೂ ಈಗಿರುವ ಗಾಯದಿಂದ ಚೇತರಿಸಿಕೊಳ್ಳಲು 4 ರಿಂದ 6 ತಿಂಗಳುಗಳು ಬೇಕಾಗುತ್ತದೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ಬುಮ್ರಾ ಟಿ20 ವಿಶ್ವಕಪ್‌ನಿಂದ (T20 World Cup) ಹೊರಗುಳಿದಿದ್ದಾರೆ. ಇದರ ನಡುವೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನ್ನರ್ ದನೀಶ್ ಕನೇರಿಯಾ (Danish Kaneria) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

ಜಸ್​ಪ್ರೀತ್ ಬುಮ್ರಾ ನೇರವಾಗಿ ಟಿ20 ವಿಶ್ವಕಪ್ ಮೂಲಕವೇ ಕಮ್​ಬ್ಯಾಕ್ ಮಾಡಬೇಕಿತ್ತು. ಈ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಅವರಿಗೆ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ. ”ಬುಮ್ರಾಗೆ ಲಯಕಂಡುಕೊಳ್ಳಲು ಅಭ್ಯಾಸ ಪಂದ್ಯ ಆಡಬಹುದಿತ್ತು. ಅವರು ಹರ್ಷಲ್ ಪಟೇಲ್ ರೀತಿ ಅಥವಾ ಇತರೆ ಬೌಲರ್​ಗಳ ಹಾಗಲ್ಲ. ಇತರೆ ಬೌಲರ್​ಗಳಿಗೆ ಆದರೆ ಲಯಕಂಡುಕೊಳ್ಳಲು ಕೆಲ ಪಂದ್ಯಗಳು ಬೇಕಾಗುತ್ತದೆ. ಆದರೆ, ಬುಮ್ರಾ ಹಾಗಲ್ಲ, ಅವರನ್ನು ನೇರವಾಗಿ ಟಿ20 ವಿಶ್ವಕಪ್​ನಲ್ಲೇ ಆಡಿಸಬಹುದಿತ್ತು,” ಎಂದು ಹೇಳಿದ್ದಾರೆ.

ಇನ್ನು ಭಾರತದ ಮಾಜಿ ಕ್ರಿಕೆಟಿಗ ಸಬಾ ಕರೀಮ್ ಅವರು, ಬುಮ್ರಾ ಮುಂಬರುವ ಪಂದ್ಯಗಳಿಗೆ ಅಲಭ್ಯರಾಗಿರುವ ಕಾರಣ ದೀಪಕ್ ಚಹಾರ್ ಅವರನ್ನು ಐಸಿಸಿ ಟಿ 20 ವಿಶ್ವಕಪ್‌ನ ಮುಖ್ಯ ತಂಡಕ್ಕೆ ಭಾರತದ ಸ್ಟ್ಯಾಂಡ್‌ಬೈ ಪಟ್ಟಿಯಿಂದ ಅಪ್‌ಗ್ರೇಡ್ ಮಾಡಬೇಕು ಎಂದು ಹೇಳಿದ್ದಾರೆ. ”ಬುಮ್ರಾ ಫಿಟ್ ಆಗದಿದ್ದರೆ, ನೀವು ದೀಪಕ್ ಚಹಾರ್ ಅವರನ್ನು ತಂಡಕ್ಕೆ ಕರೆತರಬೇಕು ಏಕೆಂದರೆ ಅವರು ಸ್ಟ್ಯಾಂಡ್‌ಬೈ ಲಿಸ್ಟ್‌ನಲ್ಲಿದ್ದಾರೆ. ಬಹುರಾಷ್ಟ್ರೀಯ ಪಂದ್ಯಾವಳಿಯಲ್ಲಿ ಆಡುವ ಒತ್ತಡವನ್ನು ನಿಭಾಯಿಸುವ ಆಟಗಾರರ ಅಗತ್ಯವಿದೆ. ಹೀಗಾಗಿ, ನೀವು ಪೂರ್ಣ ತಂಡದ ಸದಸ್ಯರನ್ನು ಆಡುತ್ತಲೇ ಇರಬೇಕು. ಏಕೆಂದರೆ ಯಾರು ಗಾಯಗೊಂಡರು ಎಂದು ಹೇಳುವುದು ಕಷ್ಟ. ಆದ್ದರಿಂದ ಅರ್ಶ್‌ದೀಪ್ ಸಿಂಗ್ ಮತ್ತು ದೀಪಕ್ ಚಹಾರ್ ಅವರಿಗೆ ಅವಕಾಶಗಳು ಸಿಕ್ಕಿರುವುದು ಒಳ್ಳೆಯದು,” ಎಂದು ಹೇಳಿದರು.

ಇದನ್ನೂ ಓದಿ
Image
Jasprit Bumrah: ಜಸ್​ಪ್ರಿತ್ ಬುಮ್ರಾ ಜಾಗಕ್ಕೆ ಮತ್ತೊಬ್ಬ ಸ್ಟಾರ್ ವೇಗಿಯನ್ನು ಆಯ್ಕೆ ಮಾಡಿದ ಬಿಸಿಸಿಐ
Image
Suryakumar Yadav: ಆತ ಆರೆಂಜ್ ಕ್ಯಾಪ್, ಪಂದ್ಯಶ್ರೇಷ್ಠ ಗೆಲ್ಲದಿರಬಹುದು ಆದ್ರೆ ಪಂದ್ಯ ಗೆಲ್ಲಿಸಿಕೊಡುತ್ತಾನೆ ಎಂದ ಕೈಫ್
Image
Suryakumar Yadav: ಧೋನಿ, ಕೊಹ್ಲಿ, ರೋಹಿತ್​ರೊಂದಿಗೆ ವಿಶೇಷ ಸ್ಥಾನ ಹಂಚಿಕೊಳ್ಳಲು ತಯಾರಾದ ಸೂರ್ಯಕುಮಾರ್
Image
Mohammad Rizwan: ಕೊಹ್ಲಿ-ರಾಹುಲ್ ಸಾಧನೆ ಹಿಂದಿಕ್ಕಿ ಟಿ20 ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಮೊಹಮ್ಮದ್ ರಿಜ್ವಾನ್

ಬುಮ್ರಾ ಜಾಗಕ್ಕೆ ಸಿರಾಜ್:

ಸೌತ್ ಆಫ್ರಿಕಾ ವಿರುದ್ಧದ ಉಳಿದ ಎರಡು ಟಿ20 ಪಂದ್ಯಗಳಿಗೆ ಜಸ್​ಪ್ರೀತ್ ಬುಮ್ರಾ ಬದಲಿಗೆ ಮತ್ತೊಬ್ಬ ವೇಗಿ ಮೊಹಮ್ಮದ್ ಸಿರಾಜ್​ಗೆ ಬುಲಾವ್ ನೀಡಲಾಗಿದೆ. ಭಾರತ ಕ್ರಿಕೆಟ್ ತಂಡ ಹಿರಿಯ ಆಯ್ಕೆ ಸಮಿತಿಯು ಮೊಹಮ್ಮದ್ ಸಿರಾಜ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಉಳಿದ ಟಿ20 ಸರಣಿಗೆ ಗಾಯಾಳು ಜಸ್ಪ್ರೀತ್ ಬುಮ್ರಾಗೆ ಬದಲಿಯಾಗಿ ನೇಮಿಸಿದೆ ಎಂದು ಬಿಸಿಸಿಐ ತನ್ನ ಹೇಳಿಕಯಲ್ಲಿ ತಿಳಿಸಿದೆ. ಉಳಿದ 2 ಪಂದ್ಯಗಳಲ್ಲಿ ಸಿರಾಜ್ ಅವಕಾಶ ಪಡೆದು ಮಿಂಚಿದರೆ ಟಿ20 ವಿಶ್ವಕಪ್​ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತ ಎಂದೇ ಹೇಳಬಹುದು.

Published On - 11:45 am, Fri, 30 September 22

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ