Suryakumar Yadav: ಧೋನಿ, ಕೊಹ್ಲಿ, ರೋಹಿತ್​ರೊಂದಿಗೆ ವಿಶೇಷ ಸ್ಥಾನ ಹಂಚಿಕೊಳ್ಳಲು ತಯಾರಾದ ಸೂರ್ಯಕುಮಾರ್

India vs South Africa: ಅಕ್ಟೋಬರ್ 2 ರಂದು ಭಾನುವಾರ ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ- ಆಫ್ರಿಕಾ ನಡುವೆ ಎರಡನೇ ಟಿ20 ಪಂದ್ಯ ನಡೆಯಲಿದೆ. ಇದರಲ್ಲಿ ಸೂರ್ಯಕುಮಾರ್ ಹೊಸ ಮೈಲಿಗಲ್ಲು ತಲುಪುವ ಅವಕಾಶವಿದೆ.

Suryakumar Yadav: ಧೋನಿ, ಕೊಹ್ಲಿ, ರೋಹಿತ್​ರೊಂದಿಗೆ ವಿಶೇಷ ಸ್ಥಾನ ಹಂಚಿಕೊಳ್ಳಲು ತಯಾರಾದ ಸೂರ್ಯಕುಮಾರ್
Suryakumar Yadav
TV9kannada Web Team

| Edited By: Vinay Bhat

Sep 30, 2022 | 9:05 AM

ಭಾರತ ಕ್ರಿಕೆಟ್ ತಂಡ ಸದ್ಯ ದಕ್ಷಿಣ ಆಫ್ರಿಕಾ (India vs South Africa) ವಿರುದ್ಧ ಟಿ20 ಸರಣಿ ಆಡುತ್ತಿದೆ. ಮೊದಲ ಟಿ20 ಮುಕ್ತಾಯಗೊಂಡಿದ್ದು ತಿರುವನಂತಪುರಂನ ಗ್ರೀನ್​ಫೀಲ್ಡ್ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಬೌಲಿಂಗ್​ನಲ್ಲಿ ಅರ್ಶ್​ದೀಪ್ ಸಿಂಗ್ ಮಿಂಚಿದರೆ, ಬ್ಯಾಟಿಂಗ್​ನಲ್ಲಿ ಕೆಎಲ್ ರಾಹುಲ್ (KL Rahul) ಹಾಗೂ ಸೂರ್ಯಕುಮಾರ್ ಯಾದವ್ (Suryakumar Yadav) ಬೊಂಬಾಟ್ ಆಟವಾಡಿದರು. ಅದರಲ್ಲೂ ಸೂರ್ಯ ಕೇವಲ 33 ಎಸೆತಗಳಲ್ಲಿ 5 ಫೋರ್, 3 ಸಿಕ್ಸರ್ ಬಾರಿಸಿ ಅಜೇಯ 50 ರನ್ ಚಚ್ಚಿದರು. ಇದರ ಜೊತೆಗೆ ಕೆಲ ದಾಖಲೆಗಳನ್ನೂ ನಿರ್ಮಿಸಿದರು. ಇದೀಗ ಭಾರತ ದ್ವಿತೀಯ ಕದನಕ್ಕೆ ಸಜ್ಜಾಗುತ್ತಿದೆ. ಇಲ್ಲೂ ಸೂರ್ಯಕುಮಾರ್ ಯಾದವ್ ವಿಶೇಷ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ.

ಅಕ್ಟೋಬರ್ 2 ರಂದು ಭಾನುವಾರ ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ- ಆಫ್ರಿಕಾ ನಡುವೆ ಎರಡನೇ ಟಿ20 ಪಂದ್ಯ ನಡೆಯಲಿದೆ. ಇದರಲ್ಲಿ ಸೂರ್ಯಕುಮಾರ್ ಹೊಸ ಮೈಲಿಗಲ್ಲು ತಲುಪುವ ಅವಕಾಶವಿದೆ. ಇನ್ನೂ 24 ರನ್​ ಗಳಿಸಿದರೆ ವರ್ಷವೊಂದರಲ್ಲಿ 1000 ರನ್​ ಪೂರೈಸಿದ ದಾಖಲೆಗೆ ಪಾತ್ರರಾಗಲಿದ್ದಾರೆ. ಈ ಹಿಂದೆ 2018 ರಲ್ಲಿ ಭಾರತದ ಆರಂಭಿಕ ಆಟಗಾರ ಶಿಖರ್​ ಧವನ್​ 689 ರನ್​ ಬಾರಿಸಿ ಕ್ಯಾಲೆಂಡರ್​ ವರ್ಷದಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರ ಎಂಬ ಖ್ಯಾತಿ ಹೊಂದಿದ್ದರು. ಇದೀಗ ಸೂರ್ಯಕುಮಾರ್​ ಯಾದವ್​ ಆ ದಾಖಲೆ ಮೀರಿದ್ದು, 1 ಸಾವಿರ ರನ್​ ಸನಿಹದಲ್ಲಿದ್ದಾರೆ.

ಸದ್ಯ ಸೂರ್ಯಕುಮಾರ್ 32 ಟಿ20 ಪಂದ್ಯಗಳಿಂದ 976 ರನ್ ಕಲೆಹಾಕಿದ್ದಾರೆ. 1000 ರನ್ ಪೂರೈಸಿದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಎಂಎಸ್ ಧೋನಿ ಜೊತೆ 1000 ರನ್​ಗಳ ಸರದಾರರ ಪಟ್ಟಿಗೆ ಸೇರಲಿದ್ದಾರೆ. ಇದಕ್ಕೆ 24 ರನ್​ಗಳು ಬೇಕಷ್ಟೆ. ಹೀಗಾದಲ್ಲಿ 1000 ರನ್​ಗಳ ಗಡಿ ಮುಟ್ಟಿದ ಭಾರತ 9ನೇ ಬ್ಯಾಟರ್ ಸೂರ್ಯ ಆಗಲಿದ್ದಾರೆ. ಈ ಸಾಲಿನಲ್ಲಿ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದು 140 ಪಂದ್ಯಗಳಿಂದ 3694 ರನ್ ಗಳಿಸಿದ್ದಾರೆ. ಕೊಹ್ಲಿ 108 ಪಂದ್ಯಗಳಿಂದ 3663 ರನ್ ಕಲೆಹಾಕಿದ್ದಾರೆ. ಮೂರನೇ ಸ್ಥಾನದಲ್ಲಿ ಕೆಎಲ್ ರಾಹುಲ್ ಅವರಿದ್ದು 2080 ರನ್ ಬಾರಿಸಿದ್ದಾರೆ.

ಇದನ್ನೂ ಓದಿ

2022 ರ ಸಾಲಿನಲ್ಲಿ ಭರ್ಜರಿ ಫಾರ್ಮ್​ನಲ್ಲಿರುವ ಸೂರ್ಯಕುಮಾರ್​ ಯಾದವ್ ರನ್ ಮಳೆ ಸುರಿಸುತ್ತಿದ್ದಾರೆ.​ ಅವರ ಸ್ಟ್ರೈಕ್​ರೇಟ್ 180.29 ಆಗಿದೆ. 32 ಟಿ20 ಪಂದ್ಯವಾಡಿರುವ ಸೂರ್ಯಕುಮಾರ್​ ಒಟ್ಟಾರೆ 173.35 ಬ್ಯಾಟಿಂಗ್​ ಸರಾಸರಿ ಹೊಂದಿದ್ದಾರೆ. ಸೂರ್ಯ ಬ್ಯಾಟ್​ನಿಂದ ಈವರೆಗೂ 57 ಸಿಕ್ಸರ್ ಮತ್ತು 88 ಬೌಂಡರಿಗಳು ಬಂದಿವೆ. ದಕ್ಷಿಣ ಆಫ್ರಿಕಾ ವಿರುದ್ಧ ಸತತ 2 ಸಿಕ್ಸ್​ ಸೇರಿದಂತೆ ಪಂದ್ಯದಲ್ಲಿ 3 ಸಿಕ್ಸರ್​ ಸಿಡಿಸುವ ಮೂಲಕ ಯಾವುದೇ ಕ್ಯಾಲೆಂಡರ್​ ವರ್ಷದಲ್ಲಿ ಅತಿಹೆಚ್ಚು ಸಿಕ್ಸರ್​ ಸಿಡಿಸಿದ ಆಟಗಾರ ಎಂಬ ದಾಖಲೆಗೂ ಪಾತ್ರರಾದರು. ಇದಕ್ಕೂ ಮೊದಲು ಪಾಕಿಸ್ತಾನದ ಮೊಹಮದ್​ ರಿಜ್ವಾನ್​ 2021 ರಲ್ಲಿ 42 ಸಿಕ್ಸರ್​ ಸಿಡಿಸಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada