IPL 2022: RCBಗೆ ಡೇವಿಡ್ ವಾರ್ನರ್ ನಾಯಕರಾಗಲಿದ್ದಾರೆ ಎಂದ ಆಸ್ಟ್ರೇಲಿಯಾ ಕ್ರಿಕೆಟಿಗ
David Warner: ಒಟ್ಟಿನಲ್ಲಿ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ 7 ಪಂದ್ಯಗಳಿಂದ 289 ರನ್ ಬಾರಿಸಿರುವ ವಾರ್ನರ್ ಇದೀಗ ಐಪಿಎಲ್ ಫ್ರಾಂಚೈಸಿಗಳ ಪ್ರಮುಖ ಟಾರ್ಗೆಟ್ ಆಗಿದ್ದಾರೆ. ಅದರಲ್ಲೂ ನಾಯಕನ ಹುಡುಕಾಟದಲ್ಲಿರುವ ಅಹಮದಾಬಾದ್, ಲಕ್ನೋ ಹಾಗೂ ಆರ್ಸಿಬಿ ತಂಡವು ಡೇವಿಡ್ ವಾರ್ನರ್ ಅವರ ಖರೀದಿಗೆ ಹೆಚ್ಚಿನ ಆಸಕ್ತಿ ತೋರಲಿದ್ದಾರೆ.
ಡೇವಿಡ್ ವಾರ್ನರ್….ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ವಾರ್ನರ್ (David Warner) ಹೆಸರು ಮತ್ತೆ ಮುನ್ನಲೆಗೆ ಬಂದಿದೆ. ಐಪಿಎಲ್ ಸೀಸನ್ 14ನಲ್ಲಿ ಕಳಪೆ ಫಾರ್ಮ್ ಪ್ರದರ್ಶಿಸಿದ್ದ ವಾರ್ನರ್ ಅವರನ್ನು ಎಸ್ಆರ್ಹೆಚ್ (SRH) ತಂಡವು 6 ಪಂದ್ಯಗಳಿಂದ ಹೊರಗಿಟ್ಟಿತ್ತು. ಇದರ ಬೆನ್ನಲ್ಲೇ ಮುಂದಿನ ಸೀಸನ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ವಾರ್ನರ್ ಆಡುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಟಿ20 ವಿಶ್ವಕಪ್ ಮೂಲಕ ಡೇವಿಡ್ ವಾರ್ನರ್ ಫಾರ್ಮ್ ಟೆಂಪ್ರವರಿ…ಕ್ಲಾಸ್ ಪರ್ಮನೆಂಟ್ ಎಂಬುದನ್ನು ಸಾರಿದ್ದಾರೆ. ಅಷ್ಟೇ ಅಲ್ಲದೆ ಟಿ20 ವಿಶ್ವಕಪ್ನ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ಇದರ ಬೆನ್ನಲ್ಲೇ ವಾರ್ನರ್ ಮುಂದಿನ ಸೀಸನ್ನಲ್ಲಿ ಯಾವ ತಂಡದ ಪರ ಆಡಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಏಕೆಂದರೆ ಎಸ್ಆರ್ಹೆಚ್ ಪರ ಆಡುವುದು ಅನುಮಾನ. ಹೀಗಾಗಿಯೇ ಡೇವಿಡ್ ವಾರ್ನರ್ ಆರ್ಸಿಬಿ ತಂಡದ ನಾಯಕರಾಗಲಿದ್ದಾರೆ ಎಂದು ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಹೇಳಿದ್ದಾರೆ.
ನನ್ನ ಪ್ರಕಾರ ವಿರಾಟ್ ಕೊಹ್ಲಿ ಅವರ ಸ್ಥಾನಕ್ಕೆ ಸೂಕ್ತ ಆಯ್ಕೆ ಡೇವಿಡ್ ವಾರ್ನರ್. ಏಕೆಂದರೆ ವಾರ್ನರ್ ಒಬ್ಬ ಆಟಗಾರನಾಗಿ ಹಾಗೂ ನಾಯಕನಾಗಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಆರ್ಸಿಬಿ ಅವರನ್ನು ಖರೀದಿಸುವ ಸಾಧ್ಯತೆ ಹೆಚ್ಚಿದೆ ಎಂದು ಬ್ರಾಡ್ ಹಾಗ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ವಾರ್ನರ್ ಕೂಡ ನಾಯಕತ್ವವನ್ನು ಎದುರು ನೋಡುತ್ತಿದ್ದಾರೆ, ಜೊತೆಗೆ ಅವರಿಗೆ ಬೆಂಗಳೂರಿನ ಪಿಚ್ ಕೂಡ ಅವರಿಗೆ ಸರಿಹೊಂದುತ್ತದೆ. ಹಾಗಾಗಿ ಆರ್ಸಿಬಿ ತಂಡಕ್ಕೂ ವಾರ್ನರ್ ಸೂಕ್ತ ಆಯ್ಕೆಯಾಗಲಿದ್ದಾರೆ ಎಂದರು.
ಇದೇ ವೇಳೆ ಡೇವಿಡ್ ವಾರ್ನರ್ ಎಸ್ಆರ್ಹೆಚ್ ಪರ ಆಡುವುದಿಲ್ಲ ಎಂದಿರುವ ಬ್ರಾಡ್ ಹಾಗ್, ಡೇವಿಡ್ ವಾರ್ನರ್ ಅವರ ನಾಯಕತ್ವದ ಗುಣಗಳ ಕಾರಣದಿಂದಲೇ ಆರ್ಸಿಬಿ ಅವರ ಖರೀದಿಗೆ ಮುಂದಾಗುವ ಸಾಧ್ಯತೆಯಿದೆ ಎಂದರು. ಏಕೆಂದರೆ 2016 ರಲ್ಲಿ ಎಸ್ಆರ್ಹೆಚ್ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟ ನಾಯಕ ಎಂಬ ಹೆಗ್ಗಳಿಕೆ ವಾರ್ನರ್ ಹೆಸರಿನಲ್ಲಿದೆ. ಅಷ್ಟೇ ಅಲ್ಲದೆ ಒಂದು ತಂಡವನ್ನು ಬಲಿಷ್ಠವಾಗಿ ಮುನ್ನಡೆಸಿದ ಕೀರ್ತಿ ಕೂಡ ಡೇವಿಡ್ ವಾರ್ನರ್ಗೆ ಸಲ್ಲುತ್ತದೆ. ಹೀಗಾಗಿಯೇ ಆರ್ಸಿಬಿಯಂತಹ ದೊಡ್ಡ ಫ್ರಾಂಚೈಸಿಗೆ ವಾರ್ನರ್ ಸೂಕ್ತ ಆಯ್ಕೆ ಎಂದಿದ್ದಾರೆ ಬ್ರಾಡ್ ಹಾಗ್.
ಒಟ್ಟಿನಲ್ಲಿ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ 7 ಪಂದ್ಯಗಳಿಂದ 289 ರನ್ ಬಾರಿಸಿರುವ ವಾರ್ನರ್ ಇದೀಗ ಐಪಿಎಲ್ ಫ್ರಾಂಚೈಸಿಗಳ ಪ್ರಮುಖ ಟಾರ್ಗೆಟ್ ಆಗಿದ್ದಾರೆ. ಅದರಲ್ಲೂ ನಾಯಕನ ಹುಡುಕಾಟದಲ್ಲಿರುವ ಅಹಮದಾಬಾದ್, ಲಕ್ನೋ ಹಾಗೂ ಆರ್ಸಿಬಿ ತಂಡವು ಡೇವಿಡ್ ವಾರ್ನರ್ ಅವರ ಖರೀದಿಗೆ ಹೆಚ್ಚಿನ ಆಸಕ್ತಿ ತೋರಲಿದ್ದಾರೆ.
ಇದನ್ನೂ ಓದಿ: T20 World Cup 2021: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಗೆ ಸಿಕ್ಕ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?
ಇದನ್ನೂ ಓದಿ: T20 World Cup Winners: 7 ಟಿ20 ವಿಶ್ವಕಪ್: ಚಾಂಪಿಯನ್ ಪಟ್ಟಕ್ಕೇರಿದ 6 ತಂಡಗಳು
ಇದನ್ನೂ ಓದಿ: Sourav Ganguly: ದ್ರಾವಿಡ್ ಅವರ ಮಗ ಕರೆ ಮಾಡಿ ಅಪ್ಪ ತುಂಬಾ ಕಟ್ಟುನಿಟ್ಟು, ನೀವು ಅವರನ್ನು ಕರ್ಕೊಂಡು ಹೋಗಿ ಎಂದರು..!
(David Warner can replace Virat Kohli? Ex-Aus spinner explains)