DC vs LSG Highlights, IPL 2024: ಲಕ್ನೋ ವಿರುದ್ಧ ಗೆದ್ದು ಬೀಗಿದ ಡೆಲ್ಲಿ

ಪೃಥ್ವಿಶಂಕರ
|

Updated on:May 14, 2024 | 11:48 PM

Delhi Capitals vs Lucknow Super Giants Highlights in Kannada: ಐಪಿಎಲ್ 2024 ರ 64 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 19 ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಡೆಲ್ಲಿ ತಂಡ ಇನ್ನೂ ಪ್ಲೇ ಆಫ್‌ ರೇಸ್‌ನಲ್ಲಿದೆ.

DC vs LSG Highlights, IPL 2024: ಲಕ್ನೋ ವಿರುದ್ಧ ಗೆದ್ದು ಬೀಗಿದ ಡೆಲ್ಲಿ

ಐಪಿಎಲ್ 2024 ರ 64 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 19 ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಡೆಲ್ಲಿ ತಂಡ ಇನ್ನೂ ಪ್ಲೇ ಆಫ್‌ ರೇಸ್‌ನಲ್ಲಿದೆ. ಅದೇ ವೇಳೆಗೆ ಡೆಲ್ಲಿ ಗೆಲುವಿನ ಲಾಭ ರಾಜಸ್ಥಾನ್ ರಾಯಲ್ಸ್ ಪಡೆದಿದ್ದು, ಪ್ಲೇಆಫ್​ಗೆ ಅರ್ಹತೆ ಪಡೆದುಕೊಂಡಿದೆ. ಇನ್ನು ಈ ಪಂದ್ಯದ ಬಗ್ಗೆ ಹೇಳುವುದಾದರೆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು 208 ರನ್ ಗಳಿಸಿತು. ತಂಡದ ಪರ ಅಭಿಷೇಕ್ ಪೊರೆಲ್ 33 ಎಸೆತಗಳಲ್ಲಿ 58 ರನ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ 25 ಎಸೆತಗಳಲ್ಲಿ 57 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. ಉತ್ತರವಾಗಿ ಲಕ್ನೋ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 189 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ನಿಕೋಲಸ್ ಪೂರನ್ 27 ಎಸೆತಗಳಲ್ಲಿ 61 ರನ್ ಗಳಿಸಿದರೆ ಅರ್ಷದ್ ಖಾನ್ 33 ಎಸೆತಗಳಲ್ಲಿ 58 ರನ್ ಗಳಿಸಿ ಅಜೇಯರಾಗಿ ಉಳಿದರು. ಡೆಲ್ಲಿ ಪರ ಇಶಾಂತ್ ಶರ್ಮಾ ಮೂರು ವಿಕೆಟ್ ಪಡೆದರು.

LIVE NEWS & UPDATES

The liveblog has ended.
  • 14 May 2024 11:31 PM (IST)

    ಡೆಲ್ಲಿಗೆ 19 ರನ್‌ಗಳ ಜಯ

    ಐಪಿಎಲ್ 2024 ರ 64 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 19 ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಡೆಲ್ಲಿ ತಂಡ ಇನ್ನೂ ಪ್ಲೇ ಆಫ್‌ ರೇಸ್‌ನಲ್ಲಿದೆ. ಅದೇ ವೇಳೆಗೆ ಡೆಲ್ಲಿ ಗೆಲುವಿನ ಲಾಭ ಪಡೆದ ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇಆಫ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.

  • 14 May 2024 11:25 PM (IST)

    ಅರ್ಷದ್ ಖಾನ್ ಅರ್ಧಶತಕ

    ಲಕ್ನೋ ಸೂಪರ್ ಜೈಂಟ್ಸ್ ಪರ ಅರ್ಷದ್ ಖಾನ್ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಪಂದ್ಯದಲ್ಲಿ ಅವರು ಅರ್ಧಶತಕ ಪೂರೈಸಿದ್ದಾರೆ. ಇದು ಐಪಿಎಲ್‌ನಲ್ಲಿ ಅರ್ಷದ್ ಖಾನ್ ಅವರ ಮೊದಲ ಶತಕವಾಗಿದೆ.

  • 14 May 2024 11:14 PM (IST)

    17 ಓವರ್‌ ಪೂರ್ಣ

    ಲಕ್ನೋ ಸೂಪರ್ ಜೈಂಟ್ಸ್ ತಂಡ 17 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿದೆ. ತಂಡದ ಪರ ಯುದ್ಧವೀರ್ ಸಿಂಗ್ 14 ರನ್ ಹಾಗೂ ಅರ್ಷದ್ ಖಾನ್ 40 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 14 May 2024 11:03 PM (IST)

    ಏಳನೇ ವಿಕೆಟ್

    ಲಕ್ನೋ ಏಳನೇ ವಿಕೆಟ್ ಕಳೆದುಕೊಂಡಿದೆ. ಕು್ಲದೀಪ್ ಯಾದವ್, ಕೃನಾಲ್ ಪಾಂಡ್ಯ ವಿಕೆಟ್ ಉರುಳಿಸಿದ್ದಾರೆ. ಲಕ್ನೋಗೆ 30 ಎಸೆತಗಳಲ್ಲಿ 74 ರನ್ ಅಗತ್ಯವಿದೆ.

  • 14 May 2024 10:51 PM (IST)

    ಪೂರನ್ ಔಟ್

    ಲಕ್ನೋ ತಂಡ 12ನೇ ಓವರ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ನಿಕೋಲಸ್ ಪೂರನ್ ವಿಕೆಟ್ ಕಳೆದುಕೊಂಡಿತು. ಪೂರನ್ 27 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 61 ರನ್ ಗಳಿಸಿ ಔಟಾದರು.

    ಲಕ್ನೋ ಗೆಲುವಿಹ 48 ಎಸೆತಗಳಲ್ಲಿ 104 ರನ್‌ಗಳ ಅಗತ್ಯವಿದೆ.

  • 14 May 2024 10:31 PM (IST)

    ಪೂರನ್ ಅರ್ಧಶತಕ

    ಒಂಬತ್ತು ಓವರ್‌ಗಳ ನಂತರ ಲಕ್ನೋ ಸ್ಕೋರ್ ಐದು ವಿಕೆಟ್‌ಗೆ 85 ರನ್ ಆಗಿದೆ. ಪ್ರಸ್ತುತ, ನಿಕೋಲಸ್ ಪೂರನ್ 22 ಎಸೆತಗಳಲ್ಲಿ 53 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಪೂರನ್ ತಮ್ಮ ಐಪಿಎಲ್ ವೃತ್ತಿಜೀವನದ ಎಂಟನೇ ಅರ್ಧಶತಕವನ್ನು 20 ಎಸೆತಗಳಲ್ಲಿ ದಾಖಲಿಸಿದರು. ಲಕ್ನೋಗೆ ಈಗ 66 ಎಸೆತಗಳಲ್ಲಿ 124 ರನ್ ಅಗತ್ಯವಿದೆ.

  • 14 May 2024 10:18 PM (IST)

    ಇಶಾಂತ್​ಗೆ 3 ವಿಕೆಟ್

    ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಇಶಾಂತ್ ಶರ್ಮಾ ಅದ್ಭುತ ಬೌಲಿಂಗ್ ಮಾಡುತ್ತಿದ್ದಾರೆ. ಅವರು ಈ ಪಂದ್ಯದಲ್ಲಿ ಮೂರನೇ ವಿಕೆಟ್ ಉರುಳಿಸಿದ್ದಾರೆ. ಇಶಾಂತ್ ಎಸೆತದಲ್ಲಿ ದೀಪಕ್ ಹೂಡಾ ಖಾತೆ ತೆರೆಯದೆ ಔಟಾದರು.

  • 14 May 2024 10:17 PM (IST)

    ಸ್ಟೊಯಿನಿಸ್ ಔಟ್

    ಮಾರ್ಕಸ್ ಸ್ಟೊಯಿನಿಸ್ ಕೇವಲ 5 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.

  • 14 May 2024 10:01 PM (IST)

    3 ಓವರ್‌ ಮುಕ್ತಾಯ

    ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ಕ್ವಿಂಟನ್ ಡಿ ಕಾಕ್ ಕೇವಲ 12 ರನ್ ಬಾರಿಸಿ ಔಟಾದರು.

    ಮೂರು ಓವರ್‌ಗಳಲ್ಲಿ ಎಲ್‌ಎಸ್‌ಜಿ 2 ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿದೆ.

  • 14 May 2024 09:53 PM (IST)

    ರಾಹುಲ್ ಔಟ್

    ಲಕ್ನೋ ಮೊದಲ ಓವರ್‌ನಲ್ಲಿ ನಾಯಕನ ವಿಕೆಟ್ ಕಳೆದುಕೊಂಡಿದೆ. ಇಶಾಂತ್ ಶರ್ಮಾ ಎಸೆತದಲ್ಲಿ ಕೆಎಲ್ ರಾಹುಲ್ ಕ್ಯಾಚ್ ನೀಡಿದರು. ಹಿಂದೆ ಓಡುತ್ತಲೇ ಮುಖೇಶ್ ಅದ್ಭುತ ಕ್ಯಾಚ್ ಪಡೆದರು. ಸದ್ಯ ಕ್ವಿಂಟನ್ ಡಿ ಕಾಕ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಕ್ರೀಸ್‌ನಲ್ಲಿದ್ದಾರೆ.

  • 14 May 2024 09:44 PM (IST)

    208 ರನ್ ಗುರಿ

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್ ಜೈಂಟ್ಸ್​ಗೆ 209 ರನ್​ಗಳ ಗುರಿ ನೀಡಿದೆ. ಡೆಲ್ಲಿ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 208 ರನ್ ಗಳಿಸಿತು.

  • 14 May 2024 09:08 PM (IST)

    ರಿಷಬ್ ಪಂತ್ ಔಟ್

    ಡೆಲ್ಲಿ ನಾಯಕ ರಿಷಬ್ ಪಂತ್ 23 ಎಸೆತಗಳಲ್ಲಿ 33 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ.

  • 14 May 2024 09:01 PM (IST)

    ಕ್ರೀಸ್‌ನಲ್ಲಿ ಪಂತ್-ಸ್ಟಬ್ಸ್

    14 ಓವರ್‌ಗಳ ಅಂತ್ಯಕ್ಕೆ ಡೆಲ್ಲಿ ಮೂರು ವಿಕೆಟ್ ಕಳೆದುಕೊಂಡು 132 ರನ್ ಗಳಿಸಿದೆ. ಸದ್ಯ ಟ್ರಿಸ್ಟಾನ್ ಸ್ಟಬ್ಸ್ ಐದು ಹಾಗೂ ನಾಯಕ ರಿಷಬ್ ಪಂತ್ 24 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.

  • 14 May 2024 08:42 PM (IST)

    3ನೇ ವಿಕೆಟ್

    12ನೇ ಓವರ್‌ನಲ್ಲಿ ಡೆಲ್ಲಿ ಮೂರನೇ ವಿಕೆಟ್ ಕಳೆದುಕೊಂಡಿತು. ಅಭಿಷೇಕ್ ಪೊರೆಲ್ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 58 ರನ್ ಗಳಿಸಿ ಔಟಾದರು. ಸದ್ಯ ನಾಯಕ ರಿಷಬ್ ಪಂತ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಕ್ರೀಸ್‌ನಲ್ಲಿದ್ದಾರೆ.

  • 14 May 2024 08:42 PM (IST)

    ಶಾಯ್ ಹೋಪ್ ಔಟ್

    ಒಂಬತ್ತನೇ ಓವರ್‌ನಲ್ಲಿ ಡೆಲ್ಲಿ ಎರಡನೇ ವಿಕೆಟ್ ಕಳೆದುಕೊಂಡಿತು. ಶಾಯ್ ಹೋಪ್ 27 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 38 ರನ್ ಗಳಿಸಿ ಔಟಾದರು. ಅವರು ಅಭಿಷೇಕ್ ಪೊರೆಲ್ ಅವರೊಂದಿಗೆ ಎರಡನೇ ವಿಕೆಟ್‌ಗೆ 49 ಎಸೆತಗಳಲ್ಲಿ 92 ರನ್‌ಗಳ ಜೊತೆಯಾಟವನ್ನು ಮಾಡಿದರು.

  • 14 May 2024 08:15 PM (IST)

    ಪವರ್ ಪ್ಲೇ ಅಂತ್ಯ

    ಪವರ್‌ಪ್ಲೇ ಮುಗಿದಿದ್ದು, ಡೆಲ್ಲಿ ಆರು ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 73 ರನ್ ಗಳಿಸಿದೆ. ಶಾಯ್ ಹೋಪ್ 18 ಎಸೆತಗಳಲ್ಲಿ 25 ರನ್ ಹಾಗೂ ಅಭಿಷೇಕ್ ಪೊರೆಲ್ 16 ಎಸೆತಗಳಲ್ಲಿ 43 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

  • 14 May 2024 07:38 PM (IST)

    ಫ್ರೇಸರ್ ಮೆಕ್​ಗುರ್ಕ್ ಔಟ್

    ಮೊದಲ ಓವರ್‌ನಲ್ಲಿಯೇ ಡೆಲ್ಲಿಗೆ ಮೊದಲ ಹೊಡೆತ ಬಿದ್ದಿದೆ. ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಜೇಕ್ ಫ್ರೇಸರ್ ಮೆಕ್ ಗುರ್ಕ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು.

  • 14 May 2024 07:37 PM (IST)

    ಡೆಲ್ಲಿ ಕ್ಯಾಪಿಟಲ್ಸ್

    ಅಭಿಷೇಕ್ ಪೊರೆಲ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಶಾಯ್ ಹೋಪ್, ರಿಷಬ್ ಪಂತ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕ್ಸರ್ ಪಟೇಲ್, ಗುಲ್ಬದಿನ್ ನೈಬ್, ರಸಿಖ್ ದಾರ್ ಸಲಾಮ್, ಮುಖೇಶ್ ಕುಮಾರ್, ಕುಲ್ದೀಪ್ ಯಾದವ್, ಖಲೀಲ್ ಅಹ್ಮದ್.

  • 14 May 2024 07:37 PM (IST)

    ಲಕ್ನೋ ಸೂಪರ್ ಜೈಂಟ್ಸ್

    ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ, ಯುಧವೀರ್ ಸಿಂಗ್ ಚರಕ್, ಅರ್ಷದ್ ಖಾನ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಮೊಹ್ಸಿನ್ ಖಾನ್.

  • 14 May 2024 07:02 PM (IST)

    ಟಾಸ್ ಗೆದ್ದ ಲಕ್ನೋ

    ಟಾಸ್ ಗೆದ್ದ ಲಕ್ನೋ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  • Published On - May 14,2024 7:01 PM

    Follow us
    ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
    ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
    ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
    ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
    ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
    ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
    ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
    ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
    ‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
    ‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
    ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
    ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
    ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
    ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
    ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
    ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
    ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
    ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
    ‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
    ‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್