Sanju Samson: ಸಂಜು ಸ್ಯಾಮ್ಸನ್-ರಾಹುಲ್ ದ್ರಾವಿಡ್ ಮಧ್ಯೆ ಜಗಳ?: ರಾಜಸ್ಥಾನ್ ರಾಯಲ್ಸ್ ಟೀಮ್​ನಲ್ಲಿ ಬಿರುಕು

Rahul Dravid and Sanju Samson: ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಸೂಪರ್ ಓವರ್ ಪ್ರಾರಂಭವಾಗುವ ಮೊದಲು ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ರಾಹುಲ್ ದ್ರಾವಿಡ್ ತಮ್ಮ ತಂಡದ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತದೆ. ಈ ಸಂದರ್ಭ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಸಹ ಆಟಗಾರ ಕರೆದಿದ್ದಾರೆ. ಆಗ ಸ್ಯಾಮ್ಸನ್ ಏನು ಮಾಡಿದ್ರು ನೋಡಿ.

Sanju Samson: ಸಂಜು ಸ್ಯಾಮ್ಸನ್-ರಾಹುಲ್ ದ್ರಾವಿಡ್ ಮಧ್ಯೆ ಜಗಳ?: ರಾಜಸ್ಥಾನ್ ರಾಯಲ್ಸ್ ಟೀಮ್​ನಲ್ಲಿ ಬಿರುಕು
Sanju Samson And Rahul Dravid

Updated on: Apr 18, 2025 | 7:39 AM

ಬೆಂಗಳೂರು (ಏ. 17): ಬುಧವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ (Delhi Capitals vs Rajasthan Royals) ನಡುವೆ ರಣರೋಚಕ ಪಂದ್ಯ ನಡೆಯಿತು. ಈ ಪಂದ್ಯದ ಫಲಿತಾಂಶ ಸೂಪರ್ ಓವರ್‌ನಲ್ಲಿ ನಿರ್ಧರಿಸಲಾಯಿತು. ಈ ಮ್ಯಾಚ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಇದರ ಮಧ್ಯೆ ಒಂದು ವಿಡಿಯೋ ಎಕ್ಸ್​ನಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನಂತರ ಕ್ರಿಕೆಟ್ ಪ್ರಿಯರು ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ. ಆರ್ ಆರ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ಸಂಜು ಸ್ಯಾಮ್ಸನ್ ನಡುವೆ ಬಿರುಕು ಮೂಡಿದೆ ಎಂಬ ಮಾತು ಕೇಳಿಬಂದಿದೆ.

ದ್ರಾವಿಡ್ ಮತ್ತು ಸ್ಯಾಮ್ಸನ್ ನಡುವೆ ಬಿರುಕು?:

ವಿಡಿಯೋದಲ್ಲಿ, ಸೂಪರ್ ಓವರ್ ಪ್ರಾರಂಭವಾಗುವ ಮೊದಲು ರಾಹುಲ್ ದ್ರಾವಿಡ್ ತಮ್ಮ ತಂಡದ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತದೆ. ಮಿಚೆಲ್ ಸ್ಟಾರ್ಕ್ ಅವರನ್ನು ಎದುರಿಸಲು ಯಾವ ಬ್ಯಾಟ್ಸ್‌ಮನ್‌ಗಳನ್ನು ಕಳುಹಿಸಬೇಕು ಎಂಬ ಕುರಿತು ಚರ್ಚೆ ನಡೆಯುತ್ತಿರುವಂತೆ ಕಾಣುತ್ತದೆ. ಆದರೆ, ಸಂಜು ಈ ಚರ್ಚೆಯಲ್ಲಿ ಇರಲಿಲ್ಲ, ಡಗೌಟ್ ಬಳಿ ಓಡಾಡುತ್ತಿದ್ದರು. ಈ ಸಂದರ್ಭ ಒಬ್ಬ ಆಟಗಾರ ಸಂಜು ಸ್ಯಾಮ್ಸನ್‌ ಅವರನ್ನು ಈ ಮೀಟಿಂಗ್​ಗೆ ಬನ್ನಿ ಎಂದು ಸನ್ನೆ ಮಾಡುತ್ತಾನೆ.

ಇದನ್ನೂ ಓದಿ
ಹೈದರಾಬಾದ್ ವಿರುದ್ಧ ಗೆದ್ದ ಮುಂಬೈ ತಂಡದ ಪ್ಲೇ ಆಫ್ ಆಸೆ ಇನ್ನೂ ಜೀವಂತ
ಪಂಜಾಬ್ ವಿರುದ್ಧ ಹೇಗಿರಲಿದೆ ಆರ್​ಸಿಬಿ ಪ್ಲೇಯಿಂಗ್ 11?
ಬೆಂಗಳೂರಿನಲ್ಲಿ ಆರ್​ಸಿಬಿ- ಪಂಜಾಬ್ ಕಾಳಗ; ಪಂದ್ಯಕ್ಕೆ ಮಳೆಯಾತಂಕ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ

 

ಆದರೆ ಸಂಜು ಕೈ ಸನ್ನೆ ಮಾಡುವ ಮೂಲಕ ನಾನು ಬರುವುದಿಲ್ಲ ಎಂದು ನಿರಾಕರಿಸಿದ್ದಾರೆ. ಸಂಜು ಸ್ಯಾಮ್ಸನ್ ಅವರ ಈ ವರ್ತನೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಸಂಜು ಮತ್ತು ದ್ರಾವಿಡ್ ನಡುವೆ ಎಲ್ಲವೂ ಸರಿಯಿಲ್ಲ ಎಂದು ಹೇಳಲಾಗುತ್ತಿದೆ. ರಾಜಸ್ಥಾನ ರಾಯಲ್ಸ್ ತಂಡವು ಸಂಜು ಅವರನ್ನು ನಾಯಕತ್ವದಿಂದ ತೆಗೆದುಹಾಕಬಹುದು ಎಂದು ಕೂಡ ಕೆಲವರು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

IPL 2025: ಮುಂಬೈ ಬೌಲರ್​ಗಳ ಮ್ಯಾಜಿಕ್; ಹೈದರಾಬಾದ್​ಗೆ 5ನೇ ಸೋಲು

ಪಂದ್ಯದ ಬಗ್ಗೆ ಹೇಳುವುದಾದರೆ, ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಕೊನೆಯಲ್ಲಿ ನಾಯಕ ಅಕ್ಷರ್ ಪಟೇಲ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ವೇಗವಾಗಿ ರನ್ ಗಳಿಸಿದ ಪರಿಣಾಮ ತಂಡವು 189 ರನ್‌ಗಳ ಗುರಿಯನ್ನು ನಿಗದಿಪಡಿಸುವಲ್ಲಿ ಯಶಸ್ವಿಯಾಯಿತು. ಕೆಎಲ್ ರಾಹುಲ್ ಮತ್ತು ಅಭಿಷೇಕ್ ಪೊರೆಲ್ 57 ಎಸೆತಗಳಲ್ಲಿ 63 ರನ್‌ಗಳ ಜೊತೆಯಾಟ ನಡೆಸಿದರು. ಆದರೆ ನಿಧಾನಗತಿಯ ವಿಕೆಟ್‌ನಿಂದಾಗಿ ಅವರಿಗೆ ಬೇಗನೆ ರನ್ ಗಳಿಸಲು ಸಾಧ್ಯವಾಗಲಿಲ್ಲ. ಅಕ್ಷರ್ 14 ಎಸೆತಗಳಲ್ಲಿ 34 ರನ್ ಗಳಿಸಿದರು. ಸ್ಟಬ್ಸ್ 18 ರನ್ ಗಳಿಸಿ ಔಟಾದರು. ಕೊನೆಯ ಮೂರು ಓವರ್‌ಗಳಲ್ಲಿ ಡೆಲ್ಲಿ 42 ರನ್ ಗಳಿಸಿತು.

ಇದಕ್ಕೆ ಉತ್ತರವಾಗಿ ನಿತೀಶ್ ರಾಣಾ ಮತ್ತು ಯಶಸ್ವಿ ಜೈಸ್ವಾಲ್ ಅರ್ಧಶತಕ ಗಳಿಸಿದರು. ಇದರೊಂದಿಗೆ ರಾಜಸ್ಥಾನ ಗೆಲುವಿನ ಸನಿಹಕ್ಕೆ ಬಂದಿತು. ಆದರೆ ಕೊನೆಯ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಅದ್ಭುತವಾಗಿ ಬೌಲಿಂಗ್ ಮಾಡಿದರು. ಅವರು ಕೇವಲ 9 ರನ್ ಉಳಿಸಿಕೊಂಡು ಪಂದ್ಯವನ್ನು ಸಮಬಲಗೊಳಿಸಿದರು. ಸ್ಟಾರ್ಕ್ ಅವರ ಸೂಪರ್ ಓವರ್‌ನಲ್ಲಿ ರಾಜಸ್ಥಾನದ ಇಬ್ಬರು ಬ್ಯಾಟ್ಸ್‌ಮನ್‌ಗಳು ರನೌಟ್ ಆದರು. ರಾಜಸ್ಥಾನ ಕೇವಲ 11 ರನ್ ಗಳಿಸಲಷ್ಟೇ ಶಕ್ತವಾಯಿತು. ಸಂದೀಪ್ ಶರ್ಮಾ ಎಸೆದ ಮೊದಲ ನಾಲ್ಕು ಎಸೆತಗಳಲ್ಲಿ ಕೆಎಲ್ ರಾಹುಲ್ ಮತ್ತು ಸ್ಟಬ್ಸ್ 13 ರನ್ ಗಳಿಸಿದರು. ಇದರೊಂದಿಗೆ ಡೆಲ್ಲಿ ಆರು ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ