ಬೆಂಗಳೂರು (ಮಾ, 23): ಇಂಡಿಯನ್ ಪ್ರೀಮಿಯರ್ ಲೀಗ್ 18ನೇ ಸೀಸನ್ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (KKR vs RCB) ತಂಡವನ್ನು ಹೀನಾಯವಾಗಿ ಸೋಲಿಸಿತು. ಈ ಬಾರಿಯ ಐಪಿಎಲ್ 2025 ವರ್ಣರಂಜಿತ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಿನಿಮಾ ತಾರೆಯರು ಮಿಂಚು ಹರಿಸಿದರು. ಶ್ರೇಯಾ ಘೋಷಾಲ್ ಮತ್ತು ಕರಣ್ ಔಜ್ಲಾ ಹಾಡಿನ ಮೂಲಕ ಅಭಿಮಾನಿಗಳನ್ನು ರಂಜಿಸಿದರೆ, ದಿಶಾ ಪಟಾನಿ ತಮ್ಮ ನೃತ್ಯದ ಮೂಲಕ ಅಭಿಮಾನಿಗಳ ಹೃದಯ ಗೆದ್ದರು.
ಐಪಿಎಲ್ 2025 ರ ಉದ್ಘಾಟನಾ ಸಮಾರಂಭದಲ್ಲಿ ದಿಶಾ ಪಟಾನಿ ಅದ್ಭುತ ಪ್ರದರ್ಶನ ನೀಡಿದರು. ಇವರ ಹಾಟ್ ನೃತ್ಯ ಕಂಡು ಫ್ಯಾನ್ಸ್ ಅಂತು ಹುಚ್ಚೆದ್ದು ಕುಣಿದರು. ದಿಶಾ ವೇದಿಕೆಗೆ ಬಂದ ತಕ್ಷಣ, ವಿವಿಧ ಹಾಡುಗಳಿಗೆ ನೃತ್ಯ ಮಾಡಿದರು. ಬಾಘಿ 3 ಹಾಡಿಗೆ ಮಾಡಿದ ನೃತ್ಯ ವೇದಿಕೆಯನ್ನು ಬೆಚ್ಚಿಬೀಳಿಸಿತು. ದಿಶಾ ಪಟಾನಿ ವೇದಿಕೆಗೆ ಬಂದ ತಕ್ಷಣ ಎಲ್ಲರ ಕಣ್ಣು ಕುಕ್ಕಿದ್ದು ಅವರ ಡ್ರೆಸ್. ಇದರಲ್ಲಿ ಅವರು ಬಿಳಿ ಬಣ್ಣದ ವೆಸ್ಟರ್ನ್ ಡ್ರೆಸ್ನಲ್ಲಿ ಕಂಗೊಳಿಸಿದರು. ಈ ಉಡುಪಿನಲ್ಲಿ ದಿಶಾ ತುಂಬಾ ಹಾಟ್ ಆಗಿ ಕಾಣುತ್ತಿದ್ದಳು. ಇವರ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ.
DISHA FULL HOT STAGE PERFORMANCE 🥵#DishaPatani #ipl2025openingceremony #KKRvRCB pic.twitter.com/r7yg5Nj973
— MANLY DESIRES (@fapwood) March 22, 2025
ಆದಾಗ್ಯೂ, ದಿಶಾ ಅವರು ನೃತ್ಯ ಮಾಡುತ್ತಿರುವಾಗ ಜಿಯೋ ಹಾಟ್‌ಸ್ಟಾರ್ ಮತ್ತು ಸ್ಟಾರ್ ಸ್ಪೋರ್ಟ್ಸ್‌ನ ನೇರ ಪ್ರಸಾರವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಇದರಿಂದಾಗಿ ಅಭಿಮಾನಿಗಳು ಕೋಪಗೊಂಡರು. ದಿಶಾ ಪಟಾನಿಯವರ ನೃತ್ಯ ಪ್ರದರ್ಶನದ ಮಧ್ಯದಲ್ಲಿ, ಕಾಮೆಂಟೇಟರ್ಗಳು ಪಂದ್ಯದ ಬಗ್ಗೆ ಚರ್ಚಿಸುತ್ತಿರುವುದನ್ನು ತೋರಿಸಲಾಯಿತು. ಡ್ಯಾನ್ಸ್ ಪ್ರದರ್ಶನವನ್ನು ಮಧ್ಯದಲ್ಲಿ ಹಠಾತ್ ಕಟ್ ಮಾಡಿದ್ದಕ್ಕೆ ಅಭಿಮಾನಿಗಳು ಸಾಕಷ್ಟು ನಿರಾಶೆಗೊಂಡಂತೆ ಕಂಡುಬಂತು.
Krunal Pandya: ಆರ್‌ಸಿಬಿ ಗೆದ್ದ ಕೂಡಲೇ ಇನ್ಸ್ಟಾದಲ್ಲಿ ಸ್ಟೇಟಸ್ ಹಾಕಿದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ
ದಿಶಾ ಪಟಾನಿ ಹೊರತುಪಡಿಸಿ, ಇತರ ಅನೇಕ ತಾರೆಯರು ಐಪಿಎಲ್ 2025 ರಲ್ಲಿ ಕಾಣಿಸಿಕೊಂಡರು. ದಿಶಾ ಮೊದಲು, ಪ್ರಸಿದ್ಧ ಗಾಯಕಿ ಶ್ರೇಯಾ ಘೋಷಾಲ್ ಹಾಡಿನ ಮೂಲಕ ರಂಜಿಸಿದರು. ಇದಲ್ಲದೆ, ಕರಣ್ ಔಜ್ಲಾ ಮತ್ತು ಶಾರುಖ್ ಖಾನ್ ಅವರಂತಹ ತಾರೆಯರು ಸಹ ಪ್ರದರ್ಶನ ನೀಡಿದರು.
ಕೃನಾಲ್ ಪಾಂಡ್ಯ ಮತ್ತು ಜೋಶ್ ಹ್ಯಾಜಲ್‌ವುಡ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನ, ವಿರಾಟ್ ಕೊಹ್ಲಿ (ಅಜೇಯ 59) ಮತ್ತು ಫಿಲ್ ಸಾಲ್ಟ್ (56) ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ನ 18 ನೇ ಋತುವಿನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 22 ಎಸೆತಗಳು ಬಾಕಿ ಇರುವಾಗಲೇ ಏಳು ವಿಕೆಟ್‌ಗಳ ಜಯ ಸಾಧಿಸಿತು. ಕೆಕೆಆರ್ ನಾಯಕ ಅಜಿಂಕ್ಯಾ ರಹಾನೆ 31 ಎಸೆತಗಳಲ್ಲಿ 56 ರನ್ ಗಳಿಸಿದರೂ, ಕೆಕೆಆರ್ ಎಂಟು ವಿಕೆಟ್ ನಷ್ಟಕ್ಕೆ 174 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್‌ಸಿಬಿ 16.2 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ