ಸತತ 5 ಸೋಲುಗಳ ನಂತರ ಗೆಲುವಿನ ಖಾತೆ ತೆರೆದ ರಾಹುಲ್ ದ್ರಾವಿಡ್ ತಂಡ

ಯುರೋಪಿಯನ್ T20 ಪ್ರೀಮಿಯರ್ ಲೀಗ್ 2026 ರಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ಒಡೆತನದ ಡಬ್ಲಿನ್ ಗಾರ್ಡಿಯನ್ಸ್ ತಂಡ ಅಂತಿಮವಾಗಿ ತಮ್ಮ ಮೊದಲ ಗೆಲುವನ್ನು ಸಾಧಿಸಿದೆ. ಸತತ 5 ಸೋಲುಗಳ ನಂತರ, ಬೆಲ್‌ಫಾಸ್ಟ್ ವುಲ್ವ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಕ್ರೇಗ್ ಯಂಗ್ 21 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಡೇವಿಡ್ ವಿಲ್ಲಿ ಮತ್ತು ಡ್ಯಾರಿಲ್ ಮಿಚೆಲ್ ಅವರ ಸ್ಫೋಟಕ ಬ್ಯಾಟಿಂಗ್ ಗೆಲುವಿಗೆ ನಿರ್ಣಾಯಕವಾಯಿತು.

ಸತತ 5 ಸೋಲುಗಳ ನಂತರ ಗೆಲುವಿನ ಖಾತೆ ತೆರೆದ ರಾಹುಲ್ ದ್ರಾವಿಡ್ ತಂಡ
Dublin Guardians

Updated on: Sep 09, 2026 | 10:50 PM

ಟೀಂ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ರಾಹುಲ್ ದ್ರಾವಿಡ್ ಒಡೆತನದ ಮತ್ತು ರವಿಚಂದ್ರನ್ ಅಶ್ವಿನ್ ನಾಯಕತ್ವದ ಡಬ್ಲಿನ್ ಗಾರ್ಡಿಯನ್ಸ್ ತಂಡ ಅಂತಿಮವಾಗಿ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ 2026 ರಲ್ಲಿ ತನ್ನ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಪಂದ್ಯಾವಳಿಯ ಮೊದಲ ಐದು ಪಂದ್ಯಗಳಲ್ಲಿ ಸತತ ಸೋಲುಗಳನ್ನು ಅನುಭವಿಸಿದ್ದ ಡಬ್ಲಿನ್ ಗಾರ್ಡಿಯನ್ಸ್, ಲೀಗ್​ನ 18 ನೇ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ನೇತೃತ್ವದ ಬೆಲ್‌ಫಾಸ್ಟ್ ವುಲ್ವ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಏಕಪಕ್ಷೀಯವಾಗಿ ಸೋಲಿಸಿತು.

21 ರನ್‌ಗಳಿಗೆ 5 ವಿಕೆಟ್

ಈ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಲ್‌ಫಾಸ್ಟ್ ವುಲ್ವ್ಸ್ ತಂಡವು ನಿರಾಶಾದಾಯಕ ಆರಂಭ ಪಡೆದುಕೊಂಡಿತು. ಆರಂಭಿಕ ಪಾಲ್ ಸ್ಟಿರ್ಲಿಂಗ್ 21 ರನ್​ಗಳ ಇನ್ನಿಂಗ್ಸ್ ಆಡಿದರೆ, ಹ್ಯಾರಿ ಮ್ಯಾನೆಂಟಿ ಅತ್ಯಧಿಕ 24 ರನ್​ಗಳ ಇನ್ನಿಂಗ್ಸ್ ಆಡಿದರು. ಇವರಿಬ್ಬರನ್ನು ಹೊರತುಪಡಿಸಿ ಉಳಿದವರಿಗೆ 20 ರನ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಇತ್ತ ಡಬ್ಲಿನ್ ಪರ ಬೌಲಿಂಗ್​ನಲ್ಲಿ ಮಿಂಚಿದ ಕ್ರೇಗ್ ಯಂಗ್ 4 ಓವರ್‌ಗಳಲ್ಲಿ ಕೇವಲ 21 ರನ್‌ ನೀಡಿ 5 ವಿಕೆಟ್‌ಗಳನ್ನು ಕಬಳಿಸಿದರು.

ಯಂಗ್ ಇನ್ನಿಂಗ್ಸ್‌ನ 10 ನೇ ಓವರ್‌ನಲ್ಲಿ ಸ್ಟಾರ್ ಫಿನಿಷರ್ ಡೇವಿಡ್ ಮಿಲ್ಲರ್ ಮತ್ತು ನಾಯಕ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವುದರ ಜೊತೆಗೆ 5 ವಿಕೆಟ್‌ಗಳನ್ನು ಕಬಳಿಸಿದರು. ಬೆಲ್‌ಫಾಸ್ಟ್‌ನ ಸ್ಕೋರ್ ಒಂದು ಹಂತದಲ್ಲಿ 3 ವಿಕೆಟ್‌ಗಳಿಗೆ 62 ರನ್‌ಗಳಾಗಿತ್ತು. ಆದಾಗ್ಯೂ, ಆ ಬಳಿಕ ಬಂದ ಯಾವುದೇ ಬ್ಯಾಟ್ಸ್‌ಮನ್‌ಗೆ ಕ್ರೀಸ್‌ನಲ್ಲಿ ಹೆಚ್ಚು ಒತ್ತು ನೆಲೆ ನಿಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಇಡೀ ತಂಡವು 19.4 ಓವರ್‌ಗಳಲ್ಲಿ ಕೇವಲ 107 ರನ್‌ಗಳಿಗೆ ಆಲೌಟ್ ಆಯಿತು.

4 ಪಂದ್ಯ ಮುಗಿದರೂ ಗೆಲುವಿನ ಖಾತೆ ತೆರೆಯದ ದ್ರಾವಿಡ್ ತಂಡ

ಡಬ್ಲಿನ್ ಸ್ಫೋಟಕ ಬ್ಯಾಟಿಂಗ್‌

108 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಡಬ್ಲಿನ್ ಗಾರ್ಡಿಯನ್ಸ್ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಬೌಲಿಂಗ್ ನಂತರ ಆಲ್‌ರೌಂಡರ್ ಡೇವಿಡ್ ವಿಲ್ಲಿ ಕೂಡ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಅವರು 25 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡಂತೆ 44 ರನ್‌ಗಳನ್ನು ಗಳಿಸಿದರು. ಡ್ಯಾರಿಲ್ ಮಿಚೆಲ್ 25 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್‌ಗಳನ್ನು ಒಳಗೊಂಡಂತೆ 35 ರನ್‌ಗಳನ್ನು ಗಳಿಸಿದರು. ಕೊನೆಯಲ್ಲಿ ಹ್ಯಾರಿ ಟೆಕ್ಟರ್ 14 ರನ್‌ ಬಾರಿಸಿ ಅಜೇಯರಾಗಿ ಉಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:47 pm, Wed, 9 September 26

Loading...
Unable to load recommendations.
Follow Us