AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಭಾರತದ ವಿರುದ್ಧ ವಿಶ್ವ ದಾಖಲೆಯ ಜೊತೆಯಾಟ ಕಟ್ಟಿದ ಡಕೆಟ್- ಕ್ರೌಲಿ

Duckett-Crawley's Record-Breaking Stand: ಭಾರತ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಬೆನ್ ಡಕೆಟ್ ಮತ್ತು ಜ್ಯಾಕ್ ಕ್ರೌಲಿ ಅವರು ಮೊದಲ ವಿಕೆಟ್‌ಗೆ 188 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ನಿರ್ಮಿಸಿದ್ದಾರೆ. ಇದು ಟೀಂ ಇಂಡಿಯಾ ವಿರುದ್ಧ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ದಾಖಲಾದ ಅತಿ ದೊಡ್ಡ ಆರಂಭಿಕ ಪಾಲುದಾರಿಕೆಯಾಗಿದೆ. ಈ ಜೊತೆಯಾಟದಿಂದ ಅನೇಕ ದಾಖಲೆಗಳು ನಿರ್ಮಾಣವಾಗಿವೆ.

IND vs ENG: ಭಾರತದ ವಿರುದ್ಧ ವಿಶ್ವ ದಾಖಲೆಯ ಜೊತೆಯಾಟ ಕಟ್ಟಿದ ಡಕೆಟ್- ಕ್ರೌಲಿ
Duckett, Crawley
ಪೃಥ್ವಿಶಂಕರ
|

Updated on:Jun 24, 2025 | 9:32 PM

Share

ಭಾರತ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ (England vs India) ಆರಂಭಿಕರಾದ ಬೆನ್ ಡಕೆಟ್ (Ben Duckett) ಮತ್ತು ಜ್ಯಾಕ್ ಕ್ರೌಲಿ (Zak Crawley) ಎರಡನೇ ಇನ್ನಿಂಗ್ಸ್​ನಲ್ಲಿ 188 ರನ್​ಗಳ ಜೊತೆಯಾಟವನ್ನಾಡುವ ಮೂಲಕ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಭಾರತೀಯ ಬೌಲರ್‌ಗಳು ವಿಕೆಟ್​ಗಾಗಿ ಪರದಾಡುವಂತೆ ಮಾಡಿದ ಇವರಿಬ್ಬರು ತಂಡವನ್ನು ಭದ್ರ ಸ್ಥಿತಿಗೆ ಕೊಂಡೊಯ್ದರು. ಜ್ಯಾಕ್ ಕ್ರೌಲಿ 65 ರನ್ ಬಾರಿಸಿ ಔಟಾಗುವುದರೊಂದಿಗೆ ಇವರಿಬ್ಬರ ಜೊತೆಯಾಟ ಮುರಿದು ಬಿತ್ತಾದಾರೂ, ಮೊದಲ ವಿಕೆಟ್‌ಗೆ ಇವರಿಬ್ಬರು ಸೇರಿಸಿದ 188 ರನ್‌ಗಳು ಹಲವು ದಾಖಲೆಗೆ ಕಾರಣವಾಗಿವೆ.

ಕ್ರೌಲಿ ಹಾಗೂ ಡಕೆಟ್ ಅವರ ಈ ಜೊತೆಯಾಟ ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ದಾಖಲಾದ ಅತಿದೊಡ್ಡ ಆರಂಭಿಕ ಪಾಲುದಾರಿಕೆಯಾಗಿದೆ. ಇದಕ್ಕೂ ಮೊದಲು ಈ ದಾಖಲೆ ವೆಸ್ಟ್ ಇಂಡೀಸ್ ದಂತಕಥೆಗಳಾದ ಅಲನ್ ರೇ ಮತ್ತು ಜೆಫ್ರಿ ಸ್ಟೋಲ್ಮೇಯರ್ ಹೆಸರಿನಲ್ಲಿತ್ತು. ಈ ಇಬ್ಬರು ಆಟಗಾರರು 1953 ರಲ್ಲಿ ಭಾರತ ವಿರುದ್ಧದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಮೊದಲ ವಿಕೆಟ್‌ಗೆ 142* ರನ್‌ಗಳನ್ನು ಸೇರಿಸಿದ್ದರು.

ಅನೇಕ ದಾಖಲೆಗಳು ಸೃಷ್ಟಿ

ಈ ಇಬ್ಬರೂ ಆಟಗಾರರು 2022 ರಿಂದ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕದ ಆರಂಭಿಕ ಪಾಲುದಾರಿಕೆಗಳನ್ನು ಮಾಡಿದ್ದು, ಇದು ಅವರ ನಾಲ್ಕನೇ ಶತಕದ ಜೊತೆಯಾಟವಾಗಿದೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ನಾಲ್ಕು ಜೋಡಿಗಳಿವೆ. ಪಾಕಿಸ್ತಾನದ ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್ ಉಲ್ ಹಕ್, ನ್ಯೂಜಿಲೆಂಡ್‌ನ ಡೆವೊನ್ ಕಾನ್ವೇ ಮತ್ತು ಟಾಮ್ ಲೇಥಮ್, ಭಾರತದ ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ ಮತ್ತು ಡೇವಿಡ್ ವಾರ್ನರ್ ಜೋಡಿಗಳಿವೆ. ಇವರೆಲ್ಲರೂ 2022 ರಿಂದ ಟೆಸ್ಟ್‌ನಲ್ಲಿ ತಲಾ ಮೂರು ಬಾರಿ ಶತಕದ ಆರಂಭಿಕ ಪಾಲುದಾರಿಕೆಗಳನ್ನು ಮಾಡಿದ್ದಾರೆ.

IND vs ENG: ಇಂಗ್ಲೆಂಡ್‌ ತಂಡದ ಆಪತ್ಭಾಂದವ ಜೈಸ್ವಾಲ್; ಡಕೆಟ್ ಕ್ಯಾಚ್ ಬಿಟ್ಟು ಶತಕ ಸಿಡಿಸಲು ನೆರವಾದ ಯಶಸ್ವಿ

ವೈಯಕ್ತಿಕವಾಗಿಯೂ ಬೆನ್ ಡಕೆಟ್ ಮತ್ತೊಂದು ಸಾಧನೆ ಮಾಡಿದ್ದು, ಡಿಸೆಂಬರ್ 2022 ರಿಂದ 18 ಬಾರಿ 50 ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಡಕೆಟ್ ಖಾತೆ ಸೇರಿದೆ. ಇಷ್ಟೇ ಅಲ್ಲ, ಬೆನ್ ಡಕೆಟ್ ಮತ್ತು ಜ್ಯಾಕ್ ಕ್ರೌಲಿ ಭಾರತದ ವಿರುದ್ಧ ಆರು ಬಾರಿ 50 ಕ್ಕೂ ಹೆಚ್ಚು ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಕಳೆದ 25 ವರ್ಷಗಳಲ್ಲಿ ಟೆಸ್ಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ರನ್ ಪಾಲುದಾರಿಕೆಯನ್ನು ಗಳಿಸಿದ ಆರಂಭಿಕ ಜೋಡಿ ಬೆನ್ ಡಕೆಟ್ ಮತ್ತು ಜ್ಯಾಕ್ ಕ್ರೌಲಿ. ಬೆನ್ ಡಕೆಟ್ ಮತ್ತು ಜ್ಯಾಕ್ ಕ್ರೌಲಿ ಈ ಮೂಲಕ ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರ 173* ರನ್ ಪಾಲುದಾರಿಕೆಯ ದಾಖಲೆಯನ್ನು ಹಿಂದಿಕ್ಕಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:29 pm, Tue, 24 June 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ