Duleep Trophy 2023 Final: ಚಾಂಪಿಯನ್ ಪಟ್ಟಕ್ಕಾಗಿ ಪಶ್ಚಿಮ- ದಕ್ಷಿಣ ವಲಯ ತಂಡಗಳ ನಡುವೆ ಫೈಟ್! ಫೈನಲ್ ಪಂದ್ಯ ಯಾವಾಗ?

Duleep Trophy 2023 Final: ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ 2023 ಟೂರ್ನಿ ಅಂತಿಮ ಘಟಕ್ಕೆ ಬಂದು ನಿಂತಿದೆ. ಪಶ್ಚಿಮ ವಲಯ ತಂಡ ತಂಡ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ತಂಡವನ್ನು ಎದುರಿಸಿದೆ.

Duleep Trophy 2023 Final: ಚಾಂಪಿಯನ್ ಪಟ್ಟಕ್ಕಾಗಿ ಪಶ್ಚಿಮ- ದಕ್ಷಿಣ ವಲಯ ತಂಡಗಳ ನಡುವೆ ಫೈಟ್! ಫೈನಲ್ ಪಂದ್ಯ ಯಾವಾಗ?
ದುಲೀಪ್ ಟ್ರೋಫಿ ಫೈನಲ್
Follow us
|

Updated on: Jul 09, 2023 | 9:05 AM

ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ 2023 (Duleep Trophy 2023) ಟೂರ್ನಿ ಅಂತಿಮ ಘಟಕ್ಕೆ ಬಂದು ನಿಂತಿದೆ. ಈ ಟೂರ್ನಿಯ ಫೈನಲ್‌ ಆಡುವ ಎರಡು ತಂಡಗಳು ಯಾವುವು ಎಂಬುದು ಖಚಿತವಾಗಿದ್ದು, ಪಶ್ಚಿಮ ವಲಯ ತಂಡ ತಂಡ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ (west zone vs south zone) ತಂಡವನ್ನು ಎದುರಿಸಿದೆ. ಇನ್ನು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕೇಂದ್ರ ವಲಯ ತಂಡವನ್ನು ಎದುರಿಸಿದ್ದ ಪಶ್ಚಿಮ ವಲಯ ತಂಡಕ್ಕೆ ವರುಣ ರಾಯ ವರವಾದ. ಮಳೆ ಪೀಡಿತ ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದು, ಮೊದಲ ಇನ್ನಿಂಗ್ಸ್​ನಲ್ಲಿ 92 ರನ್​ಗಳ ಮುನ್ನಡೆ ಸಾಧಿಸಿದ್ದ ಪಶ್ಚಿಮ ವಲಯ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ವಾಸ್ತವವಾಗಿ ನಿರ್ಣಾಯಕ ಪಂದ್ಯಗಳಲ್ಲಿ ಪಂದ್ರ ಡ್ರಾ ಆದರೆ, ಮೊದಲ ಇನ್ನಿಂಗ್ಸ್​ನಲ್ಲಿ ಯಾವ ತಂಡ ಮುನ್ನಡೆ ಸಾಧಿಸಿರುತ್ತದೋ ಆ ತಂಡಕ್ಕೆ ಗೆಲುವು ದಕ್ಕಲಿದೆ. ಹೀಗಾಗಿ ಮೊದಲ ಇನಿಂಗ್ಸ್ ಮುನ್ನಡೆಯ ಬಲದ ಮೇಲೆ ಪಶ್ಚಿಮ ವಲಯ ತಂಡ ದುಲೀಪ್ ಟ್ರೋಫಿ ಟೂರ್ನಿಯ ಅಂತಿಮ ಪಂದ್ಯಕ್ಕೆ ಅರ್ಹತೆ ಪಡೆಯಿತು.

ಇನ್ನು ಎರಡನೇ ಸೆಮಿಫೈನಲ್ ಪಂದ್ಯ ದಕ್ಷಿಣ ವಲಯ ಮತ್ತು ಉತ್ತರ ವಲಯ ನಡುವೆ ನಡೆಯಿತು. ಈ ಪಂದ್ಯದಲ್ಲಿ ದಕ್ಷಿಣ ವಲಯ ತಂಡವು ಉತ್ತರ ವಲಯ ತಂಡವನ್ನು ಎರಡು ವಿಕೆಟ್‌ಗಳಿಂದ ಮಣಿಸಿ ಫೈನಲ್ ತಲುಪಿದೆ.

IND vs WI: ಟೆಸ್ಟ್ ತಂಡದಿಂದ ಕೈಬಿಟ್ಟ ಬಳಿಕ ದುಲೀಪ್ ಟ್ರೋಫಿಯತ್ತ ಮುಖಮಾಡಿದ ಪೂಜಾರ

ಮೊದಲ ಸೆಮಿಫೈನಲ್ ಪಂದ್ಯ ವಿವರ

ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಪಶ್ಚಿಮ ವಲಯ ತಂಡ ಅಂತಿಮವಾಗಿ ಕೇಂದ್ರ ವಲಯ ತಂಡಕ್ಕೆ 390 ರನ್‌ಗಳ ಗೆಲುವಿಗೆ ಸವಾಲು ನೀಡಿತ್ತು. ಈ ಗುರಿ ಬೆನ್ನಟ್ಟಿದ ಕೇಂದ್ರ ವಲಯ 4 ವಿಕೆಟ್ ಕಳೆದುಕೊಂಡ 128 ರನ್ ಕಲೆಹಾಕಿತ್ತು. ಆದರೆ ಆ ಬಳಿಕ ಮಳೆ ಬಂದಿದ್ದರಿಂದ ಪಂದ್ಯವನ್ನು ಡ್ರಾಗೊಳಿಸಲಾಯಿತು. ಹೀಗಾಗಿ ಪಶ್ಚಿಮ ವಲಯ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದರಿಂದ ಫೈನಲ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಎರಡನೇ ಸೆಮಿಫೈನಲ್‌ ಪಂದ್ಯ ಹೀಗಿತ್ತು

ದಕ್ಷಿಣ ಮತ್ತು ಉತ್ತರ ವಲಯ ತಂಡಗಳ ನಡುವೆ ನಡೆದ ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಉತ್ತರ ವಲಯ ತಂಡ 198 ರನ್ ಕಲೆಹಾಕಿತು. ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ವಲಯ 195 ರನ್ ಗಳಿಸಲಷ್ಟೇ ಶಕ್ತವಾಯಿತು. ನಂತರ ಉತ್ತರ ವಲಯ ಎರಡನೇ ಇನ್ನಿಂಗ್ಸ್‌ನಲ್ಲಿ 211 ರನ್ ಗಳಿಸಿತು. ಹೀಗಾಗಿ ದಕ್ಷಿಣ ವಲಯ ಗೆಲುವಿಗೆ 215 ರನ್‌ಗಳ ಸವಾಲು ಪಡೆಯಿತು. ಅಂತಿಮವಾಗಿ ದಕ್ಷಿಣ ವಲಯ 8 ವಿಕೆಟ್‌ ಕಳೆದುಕೊಂಡು ಈ ಗೆಲುವಿನ ಸವಾಲನ್ನು ಪೂರ್ಣಗೊಳಿಸಿತು.

ಫೈನಲ್ ಪಂದ್ಯ ಯಾವಾಗ ನಡೆಯಲ್ಲಿದೆ?

ಇದೀಗ ಬುಧವಾರ 12 ರಿಂದ ಜುಲೈ 16 ರ ಭಾನುವಾರದವರೆಗೆ ದುಲೀಪ್ ಟ್ರೋಫಿ ಫೈನಲ್ ಪಂದ್ಯ, ಪಶ್ಚಿಮ ವಲಯ ಮತ್ತು ದಕ್ಷಿಣ ವಲಯ ತಂಡಗಳ ನಡುವೆ ನಡೆಯಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜಿಸಲಾಗಿದೆ. ಪಶ್ಚಿಮ ವಲಯ ತಂಡವನ್ನು ಪ್ರಿಯಾಂಕ್ ಪಾಂಚಾಲ್ ಮುನ್ನಡೆಸಲಿದ್ದಾರ. ಹನುಮ ವಿಹಾರಿ ದಕ್ಷಿಣ ವಲಯದ ನಾಯಕತ್ವ ವಹಿಸಲಿದ್ದಾರೆ. ಹೀಗಾಗಿ ಈ ಟ್ರೋಫಿಯನ್ನು ಯಾರು ಎತ್ತಿ ಹಿಡಿಯುತ್ತಾರೆ ಎಂಬುದು ಭಾನುವಾರದ ಅಂತ್ಯಕ್ಕೆ ತಿಳಿಯಲಿದೆ.

ಪಶ್ಚಿಮ ವಲಯ: ಪ್ರಿಯಾಂಕ್ ಪಾಂಚಾಲ್ (ನಾಯಕ), ಚೇತೇಶ್ವರ್ ಪೂಜಾರ, ಸೂರ್ಯಕುಮಾರ್ ಯಾದವ್, ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್), ಪೃಥ್ವಿ ಶಾ, ಹೆಟ್ ಪಟೇಲ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಅರ್ಪಿತ್ ವಾಸವಾಡ, ಅತಿತ್ ಸೇಠ್, ಶಮ್ಸ್ ಮುಲಾನಿ, ಯುವರಾಜ್ ದೋಡಿಯಾ,ಧರ್ಮೇಂದ್ರಸಿನ್ಹ್ ಜಡೇಜಾ, ಚೇತನ್ ಸಕರಿಯಾ, ಚಿಂತನ್ ಗಜ, ಅರ್ಜನ್ ನಾಗವಾಸ್ವಾಲ್ಲಾ.

ದಕ್ಷಿಣ ವಲಯ: ಹನುಮ ವಿಹಾರಿ (ನಾಯಕ), ಮಯಾಂಕ್ ಅಗರ್ವಾಲ್ (ಉಪನಾಯಕ), ಸಾಯಿ ಸುದರ್ಶನ್, ರಿಕಿ ಭುಯಿ (ವಿಕೆಟ್ ಕೀಪರ್), ಆರ್ ಸಮರ್ಥ್, ವಾಷಿಂಗ್ಟನ್ ಸುಂದರ್, ಸಚಿನ್ ಬೇಬಿ, ಪ್ರದೋಶ್ ರಂಜನ್ ಪಾಲ್, ಸಾಯಿ ಕಿಶೋರ್, ವಿ ಕಾವೇರಪ್ಪ, ವಿ ವೈಶಾಕ್, ಕೆವಿ ಶಶಿಕಾಂತ್ , ದರ್ಶನ್ ಮಿಸಾಲ್, ತಿಲಕ್ ವರ್ಮ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು