Dwayne Smith: 7 ಭರ್ಜರಿ ಸಿಕ್ಸ್, 14 ಫೋರ್: ತೂಫಾನ್ ಸೆಂಚುರಿಸಿ ಸಿಡಿಸಿದ ಸ್ಮಿತ್
Dwayne Smith: ಶತಕದ ಬಳಿಕ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಸ್ಮಿತ್ 53 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 120 ರನ್ ಬಾರಿಸಿ ಪಂಕಜ್ ಸಿಂಗ್ಗೆ ವಿಕೆಟ್ ಒಪ್ಪಿಸಿದರು. ಇನ್ನು ಅಂತಿಮ ಹಂತದಲ್ಲಿ ಗುರಕೀರತ್ ಸಿಂಗ್ 39 ರನ್ಗಳ ಕೊಡುಗೆ ನೀಡಿದರು.
ಸೂರತ್ನ ಲಾಲ್ಭಾಯ್ ಮೈದಾನದಲ್ಲಿ ನಡೆದ ಲೆಜೆಂಡ್ಸ್ ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡ್ವೇನ್ ಸ್ಮಿತ್ (Dwayne Smith) ಸ್ಪೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಅರ್ಬನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮಣಿಪಾಲ್ ಟೈಗರ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಅರ್ಬನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಆರಂಭಿಕ ಆಟಗಾರ ಡ್ವೇನ್ ಸ್ಮಿತ್ ಸಿಡಿಲಬ್ಬರದ ಆರಂಭ ಒದಗಿಸಿದರು. ಮೊದಲ ಓವರ್ನಿಂದಲೇ ಅಬ್ಬರಿಸಲಾರಂಭಿಸಿದ ವಿಂಡೀಸ್ ಆಟಗಾರ ಮಣಿಪಾಲ್ ಟೈಗರ್ಸ್ ಬೌಲರ್ಗಳ ಬೆಂಡೆತ್ತಿದರು.
ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದ ಡ್ವೇನ್ ಸ್ಮಿತ್ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕವೇ 42 ಎಸೆತಗಳಲ್ಲಿ ಸೆಂಚುರಿ ಪೂರೈಸಿದರು. ಈ ಮೂಲಕ ಲೆಜೆಂಡ್ಸ್ ಲೀಗ್ನಲ್ಲಿ ಅತ್ಯಂತ ವೇಗವಾಗಿ ಶತಕ ಬಾರಿಸಿದ ಹೊಸ ದಾಖಲೆಯನ್ನು ಸ್ಮಿತ್ ತಮ್ಮದಾಗಿಸಿಕೊಂಡರು.
ಇನ್ನು ಶತಕದ ಬಳಿಕ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಸ್ಮಿತ್ 53 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 120 ರನ್ ಬಾರಿಸಿ ಪಂಕಜ್ ಸಿಂಗ್ಗೆ ವಿಕೆಟ್ ಒಪ್ಪಿಸಿದರು. ಇನ್ನು ಅಂತಿಮ ಹಂತದಲ್ಲಿ ಗುರಕೀರತ್ ಸಿಂಗ್ 39 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಅರ್ಬನ್ ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 253 ರನ್ ಕಲೆಹಾಕಿತು.
Harder, Faster, Stronger Smith!💪🏻
Dwayne clocked the fastest 💯 in #LLCT20 history!👀#LegendsLeagueCricket #LLCT20 #BossLogonKaGame pic.twitter.com/81ofOTRsgP
— Legends League Cricket (@llct20) December 5, 2023
254 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಮಣಿಪಾಲ್ ಟೈಗರ್ಸ್ ಪರ ಏಂಜೆಲೊ ಪೆರೇರಾ 30 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 73 ರನ್ ಬಾರಿಸಿದರು. ಆದರೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅಲ್ಲದೆ 16.3 ಓವರ್ಗಳಲ್ಲಿ 178 ರನ್ ಬಾರಿಸಿ ಆಲೌಟ್ ಆದರು. ಈ ಮೂಲಕ ಅರ್ಬನ್ ರೈಸರ್ಸ್ ಹೈದರಾಬಾದ್ ಈ ಪಂದ್ಯದಲ್ಲಿ 75 ರನ್ಗಳ ಭರ್ಜರಿ ಜಯ ಸಾಧಿಸಿ ಫೈನಲ್ಗೆ ಪ್ರವೇಶಿಸಿದೆ.
ಮಣಿಪಾಲ್ ಟೈಗರ್ಸ್ ಪ್ಲೇಯಿಂಗ್ ಇಲೆವೆನ್: ಚಾಡ್ವಿಕ್ ವಾಲ್ಟನ್ (ವಿಕೆಟ್ ಕೀಪರ್) , ಮೊಹಮ್ಮದ್ ಕೈಫ್ (ನಾಯಕ) , ಕಾಲಿನ್ ಡಿ ಗ್ರ್ಯಾಂಡ್‌ಹೋಮ್ , ಏಂಜೆಲೊ ಪೆರೆರಾ , ಅಸೆಲಾ ಗುಣರತ್ನೆ , ತಿಸಾರಾ ಪೆರೆರಾ , ಅಮಿತ್ ವರ್ಮಾ , ಇಮ್ರಾನ್ ಖಾನ್ , ಮಿಚೆಲ್ ಮೆಕ್‌ಕ್ಲೆನಾಘನ್ , ಪ್ರವೀಣ್ ಗುಪ್ತಾ , ಪಂಕಜ್ ಸಿಂಗ್ , ಕೈಲ್ ಕೋಟ್ಜರ್.
ಇದನ್ನೂ ಓದಿ: IPL 2024: ಈ ಆಟಗಾರರು ಹರಾಜಾಗುವುದು ಡೌಟ್..!
ಅರ್ಬನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್: ಮಾರ್ಟಿನ್ ಗಪ್ಟಿಲ್ , ಡ್ವೇನ್ ಸ್ಮಿತ್ , ರಿಕ್ಕಿ ಕ್ಲಾರ್ಕ್ , ಗುರುಕೀರತ್ ಸಿಂಗ್ ಮಾನ್ , ಸುರೇಶ್ ರೈನಾ (ನಾಯಕ) , ಪೀಟರ್ ಟ್ರೆಗೊ , ಸ್ಟುವರ್ಟ್ ಬಿನ್ನಿ , ಅಸ್ಗರ್ ಅಫ್ಘಾನ್ , ಅಮಿತ್ ಪೌನಿಕರ್ (ವಿಕೆಟ್ ಕೀಪರ್) , ಪವನ್ ಸುಯಲ್ , ಕ್ರಿಸ್ ಎಂಪೋಫು , ಜೆರೋಮ್ ಟೇಲರ್.
Published On - 11:18 pm, Tue, 5 December 23