Eileen Ash: ವಿಶ್ವದ ಅತಿ ಹಿರಿಯ ಟೆಸ್ಟ್ ಕ್ರಿಕೆಟ್ ಆಟಗಾರ್ತಿ ಎಲೀನ್ ಆಶ್ ನಿಧನ: ಇವರಿಗೆ ಆಗಿತ್ತು 110 ವರ್ಷ
ಎಲೀನ್ ಆಶ್ ಅವರು 1930 ಮತ್ತು 1940 ರ ದಶಕಗಳಲ್ಲಿ ಇಂಗ್ಲೆಂಡ್‌ಗಾಗಿ 7 ಟೆಸ್ಟ್ ಗಳನ್ನು ಆಡಿದ್ದು, ಬಲಗೈ ವೇಗದ ಬೌಲಿಂಗ್ ನೊಂದಿಗೆ 23 ರ ಸರಾಸರಿಯಲ್ಲಿ 10 ವಿಕೆಟ್ ಪಡೆದಿದ್ದಾರೆ. 1937ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು.
ವಿಶ್ವದ ಅತ್ಯಂತ ಹಳೆಯ ಜೀವಂತ ಟೆಸ್ಟ್ ಕ್ರಿಕೆಟರ್ (World’s Oldest Living Test Cricketer) ಖ್ಯಾತಿಯ ಎಲೀನ್ ಆಶ್ (Eileen Ash) ತಮ್ಮ 110ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಈ ಬಗ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಶನಿವಾರ ತಿಳಿಸಿದೆ. “ಆಶ್ – ತನ್ನ ಸಾವಿನ ಸಮಯದಲ್ಲಿ ಅತ್ಯಂತ ಹಳೆಯ ಟೆಸ್ಟ್ ಕ್ರಿಕೆಟಿಗರಾಗಿದ್ದರು. ಪಿಚ್‌ನಲ್ಲಿ ಮತ್ತು ಹೊರಗೆ ಸಹಜ ಉನ್ನತ ಸಾಧನೆಯನ್ನು ಹೊಂದಿದ್ದರು. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ತನ್ನ 110ನೇ ವಯಸ್ಸಿನಲ್ಲಿ ಐಲೀನ್ ಐಶ್ ಅವರ ಸಾವಿನ ಸುದ್ದಿ ತಿಳಿದು ತೀವ್ರ ದುಃಖಿತವಾಗಿದೆ. 1937ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ಗೆ ಪದಾರ್ಪಣೆ ಮಾಡಿದ ಇವರು ಅಸಾಧಾರಣ ಜೀವನವನ್ನ ನಡೆಸಿದ ಗಮನಾರ್ಹ ಮಹಿಳೆ” ಎಂದು ಸಂತಾಪ ಸೂಚಿಸಿದೆ.
ಎಲೀನ್ ಆಶ್ ಅವರು 1930 ಮತ್ತು 1940 ರ ದಶಕಗಳಲ್ಲಿ ಇಂಗ್ಲೆಂಡ್‌ಗಾಗಿ 7 ಟೆಸ್ಟ್ ಗಳನ್ನು ಆಡಿದ್ದು, ಬಲಗೈ ವೇಗದ ಬೌಲಿಂಗ್ ನೊಂದಿಗೆ 23 ರ ಸರಾಸರಿಯಲ್ಲಿ 10 ವಿಕೆಟ್ ಪಡೆದಿದ್ದಾರೆ. 1937ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು.
The thoughts of everyone at the ECB are with the family and loved ones of Eileen Ash, who has died aged 110.
— England Cricket (@englandcricket) December 4, 2021
ಎರಡನೇ ಜಾಗತಿಕ ಯುದ್ಧದ ಮೊದಲು ಹಾಗೂ ಬಳಿಕ ಇಂಗ್ಲೆಂಡ್ ದೇಶವನ್ನು ಏಳು ಬಾರಿ ಪ್ರತಿನಿಧಿಸಿದ್ದ ಅವರು 1949ರಲ್ಲಿ ನಿವೃತ್ತಿ ಪಡೆದಿದ್ದರು. ಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಗುಪ್ತಚರ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದ ಅವರು 98ನೇ ವಯಸ್ಸಿನವರೆಗೂ ಗಾಲ್ಫ್ ಆಡುತ್ತಿದ್ದರು ಎಂಬುದು ವಿಶೇಷ. 105ನೇ ವಯಸ್ಸಿನಲ್ಲಿ ಯೋಗಾಭ್ಯಾಸ ಕೂಡ ಆರಂಭಿಸಿದ್ದರು. 2017ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಜಯ ಗಳಿಸಿದ ಪಂದ್ಯದ ಅರಂಭದಲ್ಲಿ ಗಂಟೆ ಮೊಳಗಿಸುವ ಗೌರವವನ್ನು ಅವರು ಪಡೆದಿದ್ದರು.
(Eileen Ash world oldest test player England Eileen Ash has died aged 110)