
ಭಾರತ ಹಾಗೂ ಇಂಗ್ಲೆಂಡ್ (India vs England) ನಡುವೆ ಪ್ರಸ್ತುತ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಈ ಸರಣಿ ಮುಗಿದ ಬೆನ್ನಲ್ಲೇ ಉಭಯ ತಂಡಗಳು 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿವೆ. ಜುಲೈ 14 ರಿಂದ ಆರಂಭವಾಗಲಿರುವ ಈ ಏಕದಿನ ಸರಣಿಗೆ ಬಿಸಿಸಿಐ ಈಗಾಗಲೇ ಶುಭ್ಮನ್ ಗಿಲ್ (Shubman Gill) ನಾಯಕತ್ವದಲ್ಲಿ 15 ಸದಸ್ಯರ ಬಲಿಷ್ಠ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ಇದೀಗ ಆತಿಥೇಯ ಇಂಗ್ಲೆಂಡ್ ಕೂಡ ಏಕದಿನ ಸರಣಿಗೆ ತನ್ನ ತಂಡವನ್ನು ಪ್ರಕಟಿಸಿದೆ.ಈ ಏಕದಿನ ತಂಡವನ್ನು ಹ್ಯಾರಿ ಬ್ರೂಕ್ (Harry Brook) ಮುನ್ನಡೆಸುತ್ತಿದ್ದು, ಈ ಸರಣಿಗೆ ಒಟ್ಟು 16 ಸದಸ್ಯರ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಆಯ್ಕೆ ಮಾಡಲಾಗಿದೆ.
ಇಂಗ್ಲೆಂಡ್ ಏಕದಿನ ತಂಡ ಯುವ ಹಾಗೂ ಅನುಭವಿ ಆಟಗಾರರ ಮಿಶ್ರಣದಿಂದ ಕೂಡಿದೆ. ಈ ತಂಡದಲ್ಲಿ ಜೋಫ್ರಾ ಆರ್ಚರ್, ಜಾಕೋಬ್ ಬೆಥೆಲ್, ಬೆನ್ ಡಕೆಟ್ ಮತ್ತು ವಿಲ್ ಜ್ಯಾಕ್ಸ್ ಅವರಂತಹ ಸ್ಟಾರ್ ಆಟಗಾರರ ಜೊತೆಗೆ ಯುವ ಆಲ್‌ರೌಂಡರ್ ಜೇಮ್ಸ್ ಕೋಲ್ಸ್ ಅವರಿಗೆ ಮೊದಲ ಬಾರಿಗೆ ಏಕದಿನ ತಂಡದಲ್ಲಿ ಅವಕಾಶ ನೀಡಲಾಗಿದೆ. ಹಾಗೆಯೇ ಟೆಸ್ಟ್ ತಂಡದಿಂದ ಹೊರಬಿದ್ದಿದ್ದ, ಜ್ಯಾಕ್ ಕ್ರೌಲಿ ಅವರನ್ನು ಏಕದಿನ ತಂಡದಿಂದಲೀ ಕೈಬಿಡಲಾಗಿದೆ. ಇದುವರೆಗೆ ಒಂಬತ್ತು ಏಕದಿನ ಪಂದ್ಯಗಳನ್ನಾಡಿದ್ದ ಕ್ರೌಲಿ 25.6 ಸರಾಸರಿಯಲ್ಲಿ ಕೇವಲ 205 ರನ್ ಗಳಿಸಿದ್ದು, ಇದರಲ್ಲಿ ಎರಡು ಅರ್ಧಶತಕಗಳು ಸೇರಿದ್ದವು. ಇತ್ತ ಟೆಸ್ಟ್ ಪಂದ್ಯಗಳಲ್ಲಿ ಅವರ ಪ್ರದರ್ಶನ ತುಂಬಾ ಕಳಪೆಯಾಗಿತ್ತು. ಆಡಿರುವ 64 ಟೆಸ್ಟ್‌ಗಳಲ್ಲಿ ಕ್ರೌಲಿ ಐದು ಶತಕಗಳು ಸೇರಿದಂತೆ 31.18 ಸರಾಸರಿಯಲ್ಲಿ 3586 ರನ್ ಗಳಿಸಿದ್ದಾರೆ. ಹೀಗಾಗಿ ಅವರನ್ನು ಎರಡೂ ಸ್ವರೂಪಗಳಿಂದ ಕೈಬಿಡಲಾಗಿದೆ.
ಏಕದಿನ ಸರಣಿಗೆ ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್, ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಜೇಮ್ಸ್ ಕೋಲ್ಸ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಸಕಿಬ್ ಮಹಮೂದ್, ಆದಿಲ್ ರಶೀದ್, ಜೋ ರೂಟ್ ಮತ್ತು ಜೋಶ್ ಟಂಗ್.
16 players for our 3-match ODI series with India!
Click below for the full squad 👇
— England Cricket (@englandcricket) July 3, 2026
IND vs ENG: ರಾತ್ರಿ 10 ಗಂಟೆಗೆ ಅಲ್ಲ; ಇನ್ನೂ ಬೇಗನೇ ಆರಂಭವಾಗಲಿದೆ 2ನೇ ಟಿ20 ಪಂದ್ಯ
ಭಾರತ ತಂಡ: ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ*, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್.
Published On - 6:29 pm, Fri, 3 July 26