ENG vs PAK: ಪಾಕ್ ವಿರುದ್ಧದ ಪಂದ್ಯಕ್ಕೆ ಎರಡು ದಿನ ಮೊದಲೇ ಪ್ಲೇಯಿಂಗ್ XI ಘೋಷಿಸಿದ ಇಂಗ್ಲೆಂಡ್

|

Updated on: Oct 05, 2024 | 5:54 PM

England vs Pakistan: ಇಂಗ್ಲೆಂಡ್ ಹಾಗೂ ಪಾಕಿಸ್ತಾನ್ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯು ಸೋಮವಾರದಿಂದ ಶುರುವಾಗಲಿದೆ. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸುತ್ತಿರುವ ಈ ಸರಣಿಯ ಮೊದಲೆರಡು ಪಂದ್ಯಗಳು ಮುಲ್ತಾನ್​ನಲ್ಲಿ ನಡೆಯಲಿದೆ. ಇನ್ನು ಮೂರನೇ ಪಂದ್ಯಕ್ಕೆ ರಾವಲ್ಪಿಂಡಿಯ ಇಂಟರ್​ನ್ಯಾಷನಲ್ ಸ್ಟೇಡಿಯಂ ಆತಿಥ್ಯವಹಿಸಲಿದೆ.

ENG vs PAK: ಪಾಕ್ ವಿರುದ್ಧದ ಪಂದ್ಯಕ್ಕೆ ಎರಡು ದಿನ ಮೊದಲೇ ಪ್ಲೇಯಿಂಗ್ XI ಘೋಷಿಸಿದ ಇಂಗ್ಲೆಂಡ್
England
Follow us on

ಪಾಕಿಸ್ತಾನ್ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯಕ್ಕೆ ಸರಣಿಗೆ ಸಿದ್ಧವಾಗಿದೆ. ಅಕ್ಟೋಬರ್ 7 ರಿಂದ ಈ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡವು ಆಡುವ ಬಳಗವನ್ನು ಹೆಸರಿಸಿದೆ. ಅಂದರೆ ಪಂದ್ಯಕ್ಕೂ ಎರಡು ದಿನ ಮುಂಚಿತವಾಗಿ ಪ್ಲೇಯಿಂಗ್ ಇಲೆವೆನ್ ಘೋಷಿಸಿ ಆಂಗ್ಲರು ಕುತೂಹಲ ಮೂಡಿಸಿದ್ದಾರೆ. ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಇಂಗ್ಲೆಂಡ್ ಹೆಸರಿಸಿರುವ ಈ ಪ್ಲೇಯಿಂಗ್ ಇಲೆವೆನ್​ನಲ್ಲಿ ನಾಯಕ ಬೆನ್ ಸ್ಟೋಕ್ಸ್ ಕಾಣಿಸಿಕೊಂಡಿಲ್ಲ. ಮಂಡಿರಜ್ಜು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಸ್ಟೋಕ್ಸ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ.

ಇನ್ನು ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದ ಆರಂಭಿಕ ಆಟಗಾರ ಝಾಕ್ ಕ್ರಾಲಿ ಈ ಪಂದ್ಯದ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಹಾಗೆಯೇ ಬೆನ್ ಸ್ಟೋಕ್ಸ್ ಅಲಭ್ಯತೆಯ ಕಾರಣ ಇಂಗ್ಲೆಂಡ್ ತಂಡವನ್ನು ಉಪನಾಯಕ ಒಲೀ ಪೋಪ್ ಮುನ್ನಡೆಸಲಿದ್ದಾರೆ.

ಇನ್ನುಳಿದಂತೆ ತಂಡದಲ್ಲಿ ಸ್ಟಾರ್ ಆಟಗಾರರಾಗಿ ಜೋ ರೂಟ್, ಬೆನ್ ಡಕೆಟ್, ಹ್ಯಾರಿ ಬ್ರೂಕ್ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಈ ಸರಣಿಗೂ ವಿಕೆಟ್ ಕೀಪರ್ ಬ್ಯಾಟರ್ ಜಾನಿ ಬೈರ್​ಸ್ಟೋವ್ ಆಯ್ಕೆಯಾಗಿಲ್ಲ. ಬದಲಾಗಿ ಯಂಗ್ ವಿಕೆಟ್ ಕೀಪರ್ ಬ್ಯಾಟರ್ ಜಾಮಿ ಸ್ಮಿತ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಗಾಯದ ಕಾರಣ ಈ ಸರಣಿಯಿಂದ ಪ್ರಮುಖ ವೇಗಿ ಮಾರ್ಕ್​ ವುಡ್ ಹೊರಗುಳಿದಿದ್ದು, ಅವರ ಬದಲಿಗೆ ತಂಡದಲ್ಲಿ ಬ್ರೈಡನ್ ಕಾರ್ಸೆ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಸ್ಪಿನ್ನರ್​ಗಳಾಗಿ ಜ್ಯಾಕ್ ಲೀಚ್ ಹಾಗೂ ಶೊಯೆಬ್ ಬಶೀರ್ ಸಹ ಆಯ್ಕೆಯಾಗಿದ್ದಾರೆ. ಅದರಂತೆ ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…

ಇಂಗ್ಲೆಂಡ್ ಪ್ಲೇಯಿಂಗ್ XI: ಝಾಕ್ ಕ್ರಾಲಿ, ಬೆನ್ ಡಕೆಟ್, ಒಲೀ ಪೋಪ್ (ನಾಯಕ), ಜೋ ರೂಟ್, ಹ್ಯಾರಿ ಬ್ರೂಕ್, ಜಾಮಿ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಬ್ರೈಡನ್ ಕಾರ್ಸೆ, ಜ್ಯಾಕ್ ಲೀಚ್, ಶೊಯೆಬ್ ಬಶೀರ್.

ಇದನ್ನೂ ಓದಿ: IPL 2025: ಐಪಿಎಲ್ ಫ್ರಾಂಚೈಸಿಗಳ ಚಿಂತೆ ಹೆಚ್ಚಿಸಿದ ಹೊಸ ರೂಲ್ಸ್

ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಗಸ್ ಅಟ್ಕಿನ್ಸನ್, ಶೊಯೆಬ್ ಬಶೀರ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಜೋರ್ಡಾನ್ ಕಾಕ್ಸ್ (ವಿಕೆಟ್ ಕೀಪರ್), ಝಾಕ್ ಕ್ರಾಲಿ, ಬೆನ್ ಡಕೆಟ್, ಜೋಶ್ ಹಲ್, ಜ್ಯಾಕ್ ಲೀಚ್, ಒಲೀ ಪೋಪ್, ಮ್ಯಾಥ್ಯೂ ಪಾಟ್ಸ್ , ಜೋ ರೂಟ್, ಜಾಮಿ ಸ್ಮಿತ್ (ವಿಕೆಟ್ ಕೀಪರ್), ಒಲೀ ಸ್ಟೋನ್, ಕ್ರಿಸ್ ವೋಕ್ಸ್.

ಇಂಗ್ಲೆಂಡ್-ಪಾಕಿಸ್ತಾನ್ ಟೆಸ್ಟ್ ಸರಣಿ ವೇಳಾಪಟ್ಟಿ:

  1. ಅಕ್ಟೋಬರ್ 7 ರಿಂದ 11, ಶುಕ್ರವಾರ: ಮೊದಲ ಟೆಸ್ಟ್ – ಮುಲ್ತಾನ್ – 11 AM IST
  2. ಅಕ್ಟೋಬರ್ 15 ರಿಂದ 19, ಶನಿವಾರ: ಎರಡನೇ ಟೆಸ್ಟ್ – ಮುಲ್ತಾನ್ – 11 AM IST
  3. ಅಕ್ಟೋಬರ್ 24 ರಿಂದ 28, ಸೋಮವಾರ: ಮೂರನೇ ಟೆಸ್ಟ್ – ರಾವಲ್ಪಿಂಡಿ – 11 AM IST