Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ರಿಂಕು ಸಿಂಗ್ ಎದೆಯ ಮೇಲೆ ನಿಜಕ್ಕೂ ಬಾಬಾ ಸಾಹೇಬ್ ಅಂಬೇಡ್ಕರ್ ಟ್ಯಾಟೂ ಹಾಕಿಸಿಕೊಂಡಿದ್ದಾರಾ?

ರಿಂಕು ಸಿಂಗ್ ಅವರು ಎದೆಯ ಮೇಲೆ ಬಾಬಾ ಭೀಮರಾವ್ ಅಂಬೇಡ್ಕರ್ ಅವರ ಟ್ಯಾಟೂ ಹಾಕಿಸಿಕೊಂಡಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಫೋಟೋವನ್ನು ಗಮನಿಸಿದಾಗ ಇದು ಯಾವುದೊ ಕ್ರಿಕೆಟ್ ಗ್ರೌಂಡ್ನಲ್ಲಿ ನಿಂತಿರುವಂತೆ ಕಾಣುತ್ತದೆ. ರಿಂಕು ಸಿಂಗ್ ಅವರ ಈ ಚಿತ್ರವನ್ನು ಹಲವು ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Fact Check: ರಿಂಕು ಸಿಂಗ್ ಎದೆಯ ಮೇಲೆ ನಿಜಕ್ಕೂ ಬಾಬಾ ಸಾಹೇಬ್ ಅಂಬೇಡ್ಕರ್ ಟ್ಯಾಟೂ ಹಾಕಿಸಿಕೊಂಡಿದ್ದಾರಾ?
Rinku Singh Fact Check
Follow us
ಪ್ರೀತಿ ಭಟ್​, ಗುಣವಂತೆ
| Updated By: Vinay Bhat

Updated on: Jan 30, 2025 | 7:41 PM

ಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ಸ್ಟಾರ್ ಆಟಗಾರ ರಿಂಕು ಸಿಂಗ್ (Rinku Singh) ಅವರು ಕಳೆದ ಕೆಲವು ದಿನಗಳಿಂದ ತಮ್ಮ ವೃತ್ತಿಜೀವನಕ್ಕಿಂತ ತಮ್ಮ ಮದುವೆಯ ಬಗ್ಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಏತನ್ಮಧ್ಯೆ, ರಿಂಕು ಸಿಂಗ್ ಅವರು ಶರ್ಟ್ ಹಾಕದಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇವರ ಎದೆಯ ಮೇಲೆ ಬಾಬಾ ಭೀಮರಾವ್ ಅಂಬೇಡ್ಕರ್ ಅವರ ಟ್ಯಾಟೂ ಗೋಚರಿಸುತ್ತದೆ. ಫೋಟೋವನ್ನು ಗಮನಿಸಿದಾಗ ಇದು ಯಾವುದೊ ಕ್ರಿಕೆಟ್ ಗ್ರೌಂಡ್​ನಲ್ಲಿ ನಿಂತಿರುವಂತೆ ಕಾಣುತ್ತದೆ.

ರಿಂಕು ಸಿಂಗ್ ಅವರ ಈ ಚಿತ್ರವನ್ನು ಹಲವು ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ರಿಂಕು ನಿಜಕ್ಕೂ ಬಿಆರ್ ಅಂಬೇಡ್ಕರ್ ಅವರ ಟ್ಯೂಟೂ ಹಾಕಿಸಿಕೊಂಡಿದ್ದಾರಾ?, ಈ ವೈರಲ್ ಫೋಟೋದ ನಿಜಾಂಶ ಏನು? ನೋಡೋಣ.

Fact Check:

ಈ ಫೋಟೋದ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಇದು ಕೃತಕ ಬುದ್ದಿಮತ್ತೆಯಿಂದ (AI) ರಚಿತವಾದ ಫೋಟೋ ಎಂಬುದು ತಿಳಿದುಬಂದಿದೆ. ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ, ರಿಂಕು ಸಿಂಗ್ ಅವರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಸರ್ಚ್ ಮಾಡಿದ್ದೇವೆ. ಆದರೆ, ಇಲ್ಲಿ ಎಲ್ಲೂ ಈ ವೈರಲ್ ಚಿತ್ರ ಕಂಡುಬಂದಿಲ್ಲ. ಗೂಗಲ್​ನಲ್ಲಿ ಕೂಡ ಇದರ ಬಗ್ಗೆ ಹುಡುಕಿದ್ದೇವೆ. ಅಲ್ಲೂ ರಿಂಕು ಸಿಂಗ್ ಅಂಬೇಡ್ಕರ್ ಅವರ ಟ್ಯಾಟೂ ಹಾಕಿದ ಬಗ್ಗೆ ವಿಶ್ವಾಸರ್ಹ ವರದಿ ಕಂಡುಬಂದಿಲ್ಲ.

Fact Check: ಮಹಾಕುಂಭ ಮೇಳಕ್ಕೆ ಜಾನ್ ಸೀನಾ ಬಂದು ಪವಿತ್ರ ಸ್ನಾನ ಮಾಡಿದ್ದು ನಿಜವೇ?

ಹೀಗಾಗಿ ಈ ಫೋಟೋ ಕೃತಕ ಬುದ್ದಿಮತ್ತೆಯಿಂದ ತಯಾರಿಸಿರಬಹುದು ಎಂಬ ಅನುಮಾನ ಮೂಡಿತು. ಇದಕ್ಕಾಗಿ ನಾವು ಎಐ ಫೋಟೋಗಳನ್ನು ಕಂಡುಹಿಡಿಯುವ decopy.ai ಉಪಕರಣದೊಂದಿಗೆ ವೈರಲ್ ಚಿತ್ರವನ್ನು ಪರಿಶೀಲಿಸಿದ್ದೇವೆ. ಇದರ ಫಲಿತಾಂಶದ ಪ್ರಕಾರ ರಿಂಕು ಸಿಂಗ್ ಅವರ ವೈರಲ್ ಚಿತ್ರವು 92.84 ಶೇಕಡಾ ನಕಲಿಯಾಗಿದೆ. ಈ ಮೂಲಕ ರಿಂಕು ಸಿಂಗ್ ಅವರು ತಮ್ಮ ಎದೆಯ ಮೇಲೆ ಅಂಬೇಡ್ಕರ್ ಅವರ ಟ್ಯಾಟೂ ಹಾಕಿಸಿಕೊಂಡಿಲ್ಲ ಬದಲಾಗಿ ಇದು ಕೃತಕ ಬುದ್ದಿಮತ್ತೆಯಿಂದ ರಚಿತವಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

ಕೆಲವು ದಿನಗಳ ಹಿಂದೆ, ರಿಂಕು ಸಿಂಗ್ ಅವರ ನಿಶ್ಚಿತಾರ್ಥದ ಅನೇಕ ಚಿತ್ರಗಳು ಕೂಡ ವೈರಲ್ ಆಗಿದ್ದವು. ರಿಂಕು ಅವರು ಎಸ್ಪಿ ಸಂಸದೆ ಪ್ರಿಯಾ ಸರೋಜ್ ಅವರಿಗೆ ನಿಶ್ಚಿತಾರ್ಥದ ಉಂಗುರವನ್ನು ಹಾಕುವ ಫೋಟೋ ಹರಿದಾಡಿತ್ತು. ಅನೇಕ ಬಳಕೆದಾರರು ಈ ಚಿತ್ರಗಳನ್ನು ನಿಜವೆಂದು ನಂಬಿದ್ದರು. ಆದರೆ, ಇದು ಕೂಡ ನಿಜವಲ್ಲ, ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಇದನ್ನು ರಚಿಸಲಾಗಿದೆ. ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಅನೇಕ ಸುದ್ದಿ ವರದಿಗಳು ಕೂಡ ಬಹಿರಂಗಪಡಿಸಿವೆ, ಆದರೆ ವೈರಲ್ ಚಿತ್ರಗಳು ನಿಜವಲ್ಲ. ಸಂಸದೆ ಪ್ರಿಯಾ ಸರೋಜ್ ಅವರ ತಂದೆ, ಮಾಜಿ ಎಸ್ಪಿ ಸಂಸದ ಮತ್ತು ಕೆರಕಟ್ ಶಾಸಕ ತೂಫಾನಿ ಸರೋಜ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಚಿತ್ರಗಳನ್ನು ನಕಲಿ ಎಂದು ಹೇಳಿದ್ದಾರೆ.

ಗಾಯಕ್ಕೆ ತುತ್ತಾದ ರಿಂಕು:

ಸದ್ಯ ಭಾರತ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡುತ್ತಿದೆ. ಆದರೆ, ರಿಂಕು ಸಿಂಗ್ ಗಾಯದ ಕಾರಣ ಎರಡು ಮತ್ತು ಮೂರನೇ ಪಂದ್ಯಗಳನ್ನು ಆಡಲಿಲ್ಲ .ಇದೀಗ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಆಡುವ ಹನ್ನೊಂದರಲ್ಲಿ ಬದಲಾವಣೆಯನ್ನು ಕಾಣಬಹುದು. ಯಾಕೆಂದರೆ ರಿಂಕು ನಾಲ್ಕನೇ ಟಿ20 ಮೊದಲು ಫಿಟ್ ಆಗಿದ್ದಾರೆ ಎನ್ನಲಾಗಿದೆ. ನಾಲ್ಕನೇ ಟಿ20 ಪಂದ್ಯದಿಂದ ಜುರೆಲ್ ಅವರನ್ನು ಕೈಬಿಟ್ಟು ರಿಂಕು ಸಿಂಗ್ ಆಡುವುದು ಖಚಿತವಾಗಿದೆ.

ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ